Blog Archive

ಪುತ್ತೂರು: ಚಲನಚಿತ್ರ ಸಪ್ತಾಹಕ್ಕೆ ಚಾಲನೆ

Friday, November 17th, 2017
putturu film

ಮ೦ಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಜ್ಯ ಮತ್ತು ರಾಷ್ಟ್ರ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರಗಳ ಪ್ರದರ್ಶನದ ಅಂಗವಾಗಿ ಚಲನಚಿತ್ರ ಸಪ್ತಾಹಕ್ಕೆ ಪುತ್ತೂರಿನಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು. ಪುತ್ತೂರಿನ ಅರುಣ ಚಿತ್ರಮಂದಿರದಲ್ಲಿ ನಡೆಯುತ್ತಿರುವ ಚಲನಚಿತ್ರ ಸಪ್ತಾಹವನ್ನು ಪುತ್ತೂರು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ಹಾಗೂ ಉತ್ತಮ ಸದಭಿರುಚಿಯುಳ್ಳ ಚಲನಚಿತ್ರಗಳು ಮೂಡಿಬರುವುದು ಇಂದಿನ ಅಗತ್ಯವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಇಂತಹ ಚಿತ್ರಗಳಿಗೆ ಅವಕಾಶ ಸಿಗದೆ, […]

ಪುತ್ತೂರು: ಕಿಲ್ಲೆ ಮೈದಾನದಲ್ಲಿ ಪರಿವರ್ತನಾ ಯಾತ್ರೆ ಕಾರ್ಯಕ್ರಮ

Saturday, November 11th, 2017
parivarthana yathre

ಮಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್‌‌‌ರನ್ನು ತಕ್ಷಣ ಬಂಧಿಸಿ ಜೈಲಿಗೆ ಅಟ್ಟಬೇಕು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾನ, ಮರ್ಯಾದೆ ಇದ್ದರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆಗ್ರಹಿಸಿದರು. ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಸಂಜೆ ನಡೆದ ಪರಿವರ್ತನಾ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅತ್ಯಾಚಾರ ಪ್ರಕರಣದ ಆರೋಪಿ ವೇಣುಗೋಪಾಲ್ ಅವರನ್ನು ಲೋಕಸಭಾ ಸದಸ್ಯರಾಗಿ ಮತ್ತು ಕರ್ನಾಟಕ ರಾಜ್ಯದ ಉಸ್ತುವಾರಿಯಾಗಿ ಮುಂದುವರಿಸುತ್ತೀರಾ ಎಂಬ ನಮ್ಮ ಪ್ರಶ್ನೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ […]

ಪುತ್ತೂರು: ಕೊಂಕಣಿ ಮಾನ್ಯತಾ ರಜತ ಮಹೋತ್ಸವದ ಸರಣಿ ಕಾರ್ಯಕ್ರಮ

Tuesday, October 31st, 2017
konkani sambram

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಯ ಕೊಂಕಣಿ ಮಾನ್ಯತಾ ರಜತ ಮಹೋತ್ಸವದ ಸರಣಿ ಕಾರ್ಯಕ್ರಮದ 7 ನೇ ಕಾರ್ಯಕ್ರಮ ಕೊಂಕಣಿ ಸಂಭ್ರಮ್ ದಿನಾಂಕ 29-10-2017 ರಂದು ಪುತ್ತೂರಿನ ಶ್ರೀ ಭುವನೇಂದ್ರ ಕಲಾಭವನದಲ್ಲಿ ನಡೆಸಲಾಯಿತು. ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಕುಂತಲಾ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿ ಅಧ್ಯಕ್ಷರಾದ ಶ್ರೀ ಆರ್. ಪಿ ನಾಯಕ್ ಮಾತನಾಡಿ ಕೊಂಕಣಿ ಸಾಹಿತ್ಯ ಭಾಷೆ ಸಂಸ್ಕೃತಿಯ ಅಭಿವೃದ್ದಿಯಲ್ಲಿ ಕೊಂಕಣಿಗರು ಎಲ್ಲರೂ ಒಂದಾಗಬೇಕೆಂದು ಕರೆ ನೀಡಿದರು. ಅಕಾಡೆಮಿಯ ರಿಜಿಸ್ಟ್ರಾರ್ […]

ಪುತ್ತೂರು: ಅಮ್ಚಿನಡ್ಕದಲ್ಲಿ ಸೇತುವೆಗೆ ಗುದ್ದಿದ ಕಾರು, ಸಹಾಯಕ ಮೃತ್ಯು

Tuesday, October 24th, 2017
car accident

ಮಂಗಳೂರು: ಪುತ್ತೂರು ಅಮ್ಚಿನಡ್ಕದಲ್ಲಿ  ಕಾರು ಸೇತುವೆಗೆ ಗುದ್ದಿದ ಪರಿಣಾಮವಾಗಿ ಸುಳ್ಯದ ಮೋಹನ್ ಜ್ಯುವೆಲ್ಲರಿ ಮಾರ್ಟ್ ಮಾಲಕ ಧೀರಜ್‌ರವರ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ ಶಿರಸಿಯ ಯುವಕ ಸ್ಥಳದಲ್ಲೇ ಮೃತಪಟ್ಟ ಹಾಗೂ ಧೀರಜ್ ಗಂಭೀರವಾಗಿ ಗಾಯಗೊಂಡ ಘಟನೆ ಅ.22ರಂದು ರಾತ್ರಿ ನಡೆದಿದೆ. ಸುಳ್ಯ ಖಾಸಗಿ ಬಸ್ ನಿಲ್ದಾಣ ದಲ್ಲಿರುವ ಮೋಹನ್ ಜ್ಯುವೆಲ್ಲರಿ ಮಾರ್ಟ್ ಸಂಸ್ಥೆಯ ಮಾಲಕ ದಿವಾಕರ ರಾವ್ ಇತ್ತೀಚೆಗೆ ಅಸೌಖ್ಯದಿಂದ ನಿಧನರಾಗಿದ್ದ ಬಳಿಕ ಅವರ ಏಕೈಕ ಪುತ್ರ ಧೀರಜ್ ಅಂಗಡಿ ವ್ಯವಹಾರ ನೋಡಿ ಕೊಳ್ಳುತ್ತಿದ್ದರು. ಅ.21ರಂದು ಧೀರಜ್‌ರವರು ತಮ್ಮ […]

ಮೂರು ತಿಂಗಳ ಹಿಂದಿನ ಮನೆ ಕಳವು ಪ್ರಕರಣ, ಆರೋಪಿಗಳ ಬಂಧನ

Thursday, October 12th, 2017
parladka

ಮಂಗಳೂರು: ಪುತ್ತೂರು ನಗರದ ಹೊರವಲಯದ ಪರ್ಲಡ್ಕ ಬೈಪಾಸ್ ರಸ್ತೆಯಲ್ಲಿನ ಮನೆಯೊಂದರಿಂದ ಕಳೆದ ಮೂರು ತಿಂಗಳ ಹಿಂದೆ ಮನೆ ಕಳವು ಪ್ರಕರಣವನ್ನು ಪತ್ತೆಹಚ್ಚಿದ ಪುತ್ತೂರು ನಗರ ಪೊಲೀಸರು ಮೂವರು ಆರೋಪಿಗಳಿಂದ 8 ಲಕ್ಷ ರೂ. ಮೌಲ್ಯದ 245 ಗ್ರಾಂ ಚಿನ್ನಾಭರಣ ಮತ್ತು ರೂ.60 ಸಾವಿರ ಮೌಲ್ಯದ ಕೈಗಡಿಯಾರವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ತಾಲ್ಲೂಕಿನ ಜಾಲ್ಸೂರು ಗ್ರಾಮದ ಸೋಣಂಗೇರಿ ನಿವಾಸಿ ಮಹಮ್ಮದ್ ಆಶೀಕ್(26) ಈ ಹಿಂದೆಯೇ ಬಂಧನ ಕ್ಕೊಳಗಾಗಿದ್ದು, ಇದೀಗ ಪೊಲೀಸರು ಮಂಜೇಶ್ವರ ಉಪ್ಪಳದ ಹಿರೋಗಲ್ಲಿ ನಿವಾಸಿ ಜಂಷೀದ್ (22ವ) ಮತ್ತು ಬಾಯಾರುಪದವು […]

ಗಾಂಜಾ ಸಾಗಿಸುತ್ತಿದ್ದ ಆರೋಪಿ ಬೈಕ್ ಸಮೇತ ಪೊಲೀಸರ ವಶಕ್ಕೆ

Saturday, December 17th, 2016
Ganja

ಪುತ್ತೂರು: ವಿಟ್ಲದಿಂದ ಪುತ್ತೂರು ಕಡೆಗೆ ಬರುತ್ತಿದ್ದ ಬೈಕ್‍ನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಬೈಕ್ ಸಮೇತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಬ್ಬಾಸ್ ಅಲಿಯಾಸ್ ಖಾಲಿದ್ ಬಂಧಿತ. ಸುಮಾರು 500 ಗ್ರಾಂ ಅಕ್ರಮ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬೈಕ್‌ನಲ್ಲಿ ಪುತ್ತೂರಿಗೆ ಗಾಂಜಾ ಸಾಗಿಸುತ್ತಿದ್ದ ಎನ್ನಲಾಗಿದೆ.

ಪುತ್ತೂರು ಧರ್ಮ ಜಾಗೃತಿ ಸಮಿತಿಯ ಆಶ್ರಯದಲ್ಲಿ ನಾಳೆ ಗೋವು-ಸಂತ ಸಂಗಮ

Wednesday, July 6th, 2016
Go-Santha

ಪುತ್ತೂರು: ‘ಭಾರತೀಯ ಸನಾತನ ಸಂಸ್ಕೃತಿಯು ಸಂತರನ್ನು ಮತ್ತು ಗೋ ಮಾತೆಯನ್ನು ಜೀವನದ ಅವಿಭಾಜ್ಯ ಅಂಗಗಳೆಂದು ಪರಿಗಣಿಸಿದ್ದು, ಈ ಸಂಪ್ರ ದಾಯವನ್ನು ಉಳಿಸಿ ಬೆಳೆಸುವ ಕಲ್ಪನೆ ಯೊಂದಿಗೆ ಪುತ್ತೂರಿನ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಇದೇ 7ರಂದು `ಗೋವು-ಸಂತ ಸಂಗಮ’ ಎಂಬ ರಾಜ್ಯಕ್ಕೆ ಮತ್ತು ದೇಶಕ್ಕೆ ಉತ್ತಮ ಸಂದೇಶ ಸಾರುವ ವಿನೂತನ ಸಮಾರಂಭ ನಡೆಯಲಿದೆ’ ಎಂದು ಗೋವು-ಸಂತ ಸಂಗಮ ಸ್ವಾಗತ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರು ತಿಳಿಸಿದರು. ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, […]

ಸಮಗ್ರ ಅಧ್ಯಯನ ನಡೆಸದೆ ‘ಎತ್ತಿನಹೊಳೆ’ ಅನುಷ್ಠಾನ ಸರಿಯಲ್ಲ: ಯಡಿಯೂರಪ್ಪ

Wednesday, March 5th, 2014
Yeddyurappa

ಪುತ್ತೂರು: ಎತ್ತಿನಹೊಳೆ ಯೋಜನೆ ಸಾಧಕ- ಬಾಧಕಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸದೆ ಯೋಜನೆ ಅನುಷ್ಠಾನಗೊಳಿಸುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ಅವರು ಮಂಗಳವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಎತ್ತಿನಹೊಳೆ ಯೋಜನೆಯನ್ನು ಸಮಗ್ರ ರಾಜ್ಯವನ್ನು ಕಣ್ಮುಂದೆ ಇಟ್ಟುಕೊಂಡು ರೂಪಿಸಬೇಕಾಗಿದೆ. ಅನುಷ್ಠಾನದ ಬಗ್ಗೆ ಕರಾವಳಿ ಹಾಗೂ ಬಯಲುಸೀಮೆ ಜಿಲ್ಲೆಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ಚಿಂತನೆ ನಡೆಸುವುದು ಅಗತ್ಯವಾಗಿದೆ ಎಂದ ಅವರು ಬೆಂಗಳೂರು, ಚಿಕ್ಕಬಳ್ಳಾಪುರ, […]

ದೂರು ಸ್ವೀಕರಿಸದ ಪೊಲೀಸರು: ಆರೋಪ

Saturday, February 8th, 2014
Police-accused

ಪುತ್ತೂರು: ಖಾಸಗಿ ಬಡ್ಡಿ ಲೇವಾದೇವಿಯೊಬ್ಬರಿಂದ ಸಾಲ ಪಡೆದು ದುಪ್ಪಟ್ಟು ಹಣ ಪಾವತಿಸಿದರೂ ಹಣ ನೀಡುವಂತೆ ಪೀಡಿಸುತ್ತಿದ್ದ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ದಾಖಲಿಸದೆ ಅನ್ಯಾಯ ಎಸಗಿದ್ದಾರೆ ಎಂದು ಪುತ್ತೂರು ತಾಲೂಕಿನ ಕೊಡಿಪ್ಪಾಡಿ ನಿವಾಸಿ ಅಟೋ ಚಾಲಕ ಚಂದ್ರಶೇಖರ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಅನಿವಾರ್ಯ ಕಾರಣಕ್ಕಾಗಿ ಲೇವಾದೇವಿದಾರರೊಬ್ಬರಿಂದ ರು. 20 ಸಾವಿರ ಸಾಲ ಪಡೆದಿದ್ದೆ. ಇದಕ್ಕೆ ತಲಾ ರು. 2 ಸಾವಿರದಂತೆ 20 ಮಾಸಿಕ ಕಂತುಗಳಲ್ಲಿ ಪಾವತಿಸಿ ಸಂದಾಯ ಮಾಡಿದ್ದೆ. ಆದರೆ ಆ ಬಳಿಕವೂ ಆತ […]

ಪುತ್ತೂರು : ಬಸ್ ಜೀಪ್ ನಡುವೆ ಭೀಕರ ಅಪಘಾತ, ನಾಲ್ವರ ದುರ್ಮರಣ

Monday, June 3rd, 2013
puttur Accident

ಪುತ್ತೂರು : ರವಿವಾರ ಸಂಜೆ ಪುತ್ತೂರು ಸುಳ್ಯ ಹೆದ್ದಾರಿಯ ಸಂಟ್ಯಾರು ಎಂಬಲ್ಲಿ ಕೆ ಎಸ್ ಆರ್ ಟಿಸಿ ಮತ್ತು ಜೀಪ್ ನಡುವೆ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಂಟುಂಬದ ನಾಲ್ವರು ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಪುತ್ತೂರಿನ ಬೈಪಾಸ್ ತೆಂಕಿಲ ನಿವಾಸಿ ಹಾಗೂ ಪುರಸಭಾ ಸದಸ್ಯೆ ಲೀನಾ ಮಸ್ಕರೇನ್ಜಸ್(46), ಆಕೆಯ ಪತಿ ಪುತ್ತೂರಿನ ಸಂತ ಫಿಲೋಮಿನಾ ಪ್ರೌಢಶಾಲೆಯ ಸಿಬ್ಬಂಧಿ ಪೀಟರ್ ಮಸ್ಕರೇನ್ಜಸ್(50), ಪುತ್ರ ಪ್ರಿತೇಶ್ ಮಸ್ಕರೇನ್ಜಸ್ (13) ಮತ್ತು ಪೀಟರ್ ಮಸ್ಕರೇನ್ಜಸ್ ರ ಸಹೋದರ […]