ತುಳು ಬಾಷೆಯೊಂದಿಗೆ ಲಿಪಿಯನ್ನು ತಳಕುಹಾಕಿ ಗೊಂದಲ: ಎಸ್ ಕಾರ್ತಿಕ್

Sunday, September 19th, 2021
Karthik

ಮಂಗಳೂರು: ಬಾಷೆ ಮತ್ತು ಲಿಪಿ ಬೇರೆಬೇರೆ. ತುಳು ಬಾಷೆ ಮತ್ತು ಲಿಪಿ ಇವುಗಳನ್ನು ಒಂದನ್ನೊಂದು ತಳಕುಹಾಕುವ ಮೂಲಕ ಒಬ್ಬರೊನ್ನೊಬ್ಬರು ದ್ವೇಷಿಸುವ ಕೆಲಸ ಮಾಡುತ್ತಿದ್ದೇವೆ, ಎಂದು ಸ್ವತಂತ್ರ ಸಂಶೋಧಕ ಎಸ್ ಕಾರ್ತಿಕ್ ವಿಷಾಧಿಸಿದರು. ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗ ಮತ್ತು ʼಮಾನುಷʼ ಆಯೋಜಿಸುತ್ತಿರುವ ವೆಬಿನಾರ್ ಸರಣಿಯ 5 ನೇ ಭಾಗವಾಗಿ ಶನಿವಾರ ʼತುಳುನಾಡಿನ ಇತಿಹಾಸಕ್ಕೆ ಕೆ ವಿ ರಮೇಶ್ ಅವರ ಕೊಡುಗೆʼ ಎಂಬ ಕುರಿತು ಮಾತನಾಡಿದ ಅವರು, ಒಂದು ಬಾಷೆಗೆ ಲಿಪಿ ಇರಬೇಕೆಂಬ ನಿಯಮವಿಲ್ಲ. […]

ಕಲಾತ್ಮಕ ಉಮಾಮಹೇಶ್ವರ ಶಿಲ್ಪ ಪತ್ತೆ

Saturday, September 11th, 2021
Uma Maheshwara

ಉಡುಪಿ : ಜಿಲ್ಲೆಯ  ಬೈಂದೂರು ತಾಲೂಕಿನ ಮಾರಣಕಟ್ಟೆಯ ಸಂನ್ಯಾಸಿಬೆಟ್ಟಿನಲ್ಲಿ ಅತ್ಯಂತ ಕಲಾತ್ಮಕವಾದ ಉಮಾಮಹೇಶ್ವರ ಶಿಲ್ಪ ಪತ್ತೆಯಾಗಿದೆಯೆಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿಯವರು  ತಿಳಿಸಿದ್ದಾರೆ. ಕೇವಲ 9 ಸೆ.ಮೀ ಎತ್ತರ, 9 ಸೆ.ಮೀ. ಉದ್ದ ಮತ್ತು 4 ಸೆ.ಮೀ. ಅಗಲವಾಗಿರುವ ಈ ಕಿರು ಶಿಲ್ಪ , ತನ್ನ ಕಲಾತ್ಮಕತೆಯಿಂದ ನೋಡುಗರ ಕಣ್ಮನ ಸೆಳೆಯುತ್ತದೆ. ಉಮಯಾ ಸಹ ದೇವೇಶ ನಂದಿವಾಹನ ಮೇವಚ ಎಂಬ ಉಕ್ತಿಯಂತೆ, ಉಮೆಯ […]

‘ತುಳು ಇತಿಹಾಸದಲ್ಲಿ ಹವ್ಯಾಸಿಗಳ ಕೊಡುಗೆ ಅನನ್ಯʼ : ಡಾ. ಪುಂಡಿಕಾಯ್‌ ಗಣಪಯ್ಯ ಭಟ್‌ ಅಭಿಮತ

Sunday, July 11th, 2021
Ganapathi Bhat

ಮಂಗಳೂರು: ಪ್ರಾಚೀನ ತುಳು ಇತಿಹಾಸವನ್ನು ಯಾರೂ ದಾಖಲಿಸಿಲ್ಲ ಎಂಬುದು ಆಧುನಿಕ ದೃಷ್ಟಿಕೋನವಷ್ಟೇ. ನಮ್ಮ ಹಿರಿಯರು ಮಿತಿಯೊಳಗೆ, ಅಸಂಪ್ರದಾಯಿಕ ರೀತಿಯಲ್ಲಿ ಇತಿಹಾಸ ದಾಖಲಿಸಿದ್ದಾರೆ, ಎಂದು ಮೂಡಬಿದ್ರಿ ಶ್ರೀ ದವಳಾ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಪುಂಡಿಕಾಯ್‌ ಗಣಪಯ್ಯ ಭಟ್‌ ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗ, ಮಾನುಷ (ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕರ ಸಂಘ) ದ ಸಹಯೋಗದೊಂದಿಗೆ ಆರಂಭಿಸಿರುವ ತುಳುನಾಡು, ಕೊಡಗುಗಳ ಇತಿಹಾಸ […]