ಲಢಾಕ್ ನಲ್ಲಿ ಸಿಂಧೂ ನದಿ ಪೂಜೆ ನೆರವೇರಿಸಿದ ಯೂಥ್ ಆಫ್ ಜಿ ಎಸ್ ಬಿ.

Wednesday, September 29th, 2021
Ladak

ಮಂಗಳೂರು  :  ಗೌಡ ಸಾರಸ್ವತ ಬ್ರಾಹ್ಮಣರ ದೊಡ್ಡ ಸಂಖ್ಯೆಯ ಪ್ರವಾಸಿಗರ ಗುಂಪು ಯೂಥ್ ಆಫ್ ಜಿ ಎಸ್ ಬಿ ನೇತೃತ್ವದಿಂದ ಇದೇ ಪ್ರಪ್ರಥಮ ಬಾರಿಗೆ ಲಢಾಕ್ ಪ್ರಾಂತ್ಯದ ಸಪ್ತ ಪವಿತ್ರ ನದಿಗಳಲ್ಲಿ ಒಂದಾಗಿರುವ ಸಿಂಧೂ ಮಾತೆಯ ಪೂಜೆ ನೆರವೇರಿಸಿತು. ಕೆಲ ಸಮಯ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಲಢಾಕ್ ನ ಸಿಂಧೂ ನದಿ ಪೂಜೆ ನೆರವೇರಿಸಿದ್ದು ಈ ಮೂಲಕ ಲಡಾಕ್ ಗೆ ಆಗಮಿಸುವ ಪ್ರವಾಸಿಗರು ಕೂಡ ಸಿಂಧೂ ದರ್ಶನ ಮಾಡಬೇಕೆಂಬ ಉದ್ದೇಶ ಹೊಂದಿದ್ದರು. ಇದರಿಂದ ಪ್ರೇರಣೆ ಗೊಂಡ ಯೂಥ್ […]

ಮಹಾಮಾರಿ ಕೊರೊನಾ ಓಡಿಸಲು ಮಾರಮ್ಮ ದೇವಿ ಮೊರೆ ಹೋದ ಗ್ರಾಮಸ್ಥರು

Saturday, June 12th, 2021
maramma devi

ತುಮಕೂರು : ಜಿಲ್ಲೆಯ ಎರಡು ಗ್ರಾಮಗಳಲ್ಲಿ ಮಹಾಮಾರಿ ಕೊರೊನಾ ಓಡಿಸಲು ಜನರು ದೇವರ ಮೊರೆ ಹೋಗಿದ್ದಾರೆ. ಮರದಲ್ಲಿ ರಾಗಿ ಮುದ್ದೆ, ಬೇವಿನ ಸೊಪ್ಪು ಇಟ್ಟು, ಮಾರಮ್ಮನ ದೇವಾಲಯದ ಪ್ರದಕ್ಷಿಣೆ ಹಾಕಿ ಪೂಜೆ ಮಾಡಿದ್ದಾರೆ.  ಪರಿಣಾಮ ಈಗ 20 ಜನ ಗುಣಮುಖರಾಗಿ ವಾಪಸ್ಸಾಗಿದ್ದಾರೆ ಎಂಬುವುದು ಗ್ರಾಮಸ್ಥರ ನಂಬಿಕೆ. ಪಕ್ಕದ ಗ್ರಾಮ ತಿಪ್ಪಗಾನಹಳ್ಳಿಯಲ್ಲಿ ಇದೇ ರೀತಿ ಆಚರಿಸಿದ್ದಾರೆಂದು  ಪಾವಗಡ ತಾಲೂಕಿನ ಬಲ್ಲೇನಹಳ್ಳಿಯಲ್ಲಿ ಮಾರಮ್ಮ ದೇವಿ ಹಾಗೂ ರಕ್ಷಾ ಕಲ್ಲಿಗೆ ಪೂಜೆ ಸಲ್ಲಿಸಿ ಜನರು ಕೊರೊನಾ ದೂರ ಮಾಡುವಂತೆ ಪ್ರಾರ್ಥನೆ ಮಾಡಿದ್ದಾರೆ. ಪುರುಷರು ಮಾತ್ರ […]

‘ಕೊರೋನಾ ದಂತಹ ಆಪತ್ಕಾಲದಲ್ಲಿ ‘ಶ್ರೀಕೃಷ್ಣ ಜನ್ಮಾಷ್ಟಮಿಯ ಪೂಜೆಯನ್ನು ರಾತ್ರಿ 12 ಗಂಟೆಗೆ ಹೇಗೆ ಮಾಡಬೇಕು ?

Tuesday, August 11th, 2020
krishnanshtami

ಪ್ರತಿವರ್ಷ ಭಾರತದಲ್ಲಿ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ಉತ್ಸವವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಉತ್ಸವವನ್ನು ಆಚರಿಸುವಾಗ ಪ್ರಾಂತಗಳಿಗನುಸಾರ ಉತ್ಸವವನ್ನು ಆಚರಿಸುವ ಪದ್ಧತಿಯಲ್ಲಿ ಭಿನ್ನತೆ ಇರುತ್ತದೆ. ಉತ್ಸವದ ನಿಮಿತ್ತ ಬಹಳಷ್ಟು ಜನರು ಒಟ್ಟು ಸೇರಿ ಭಕ್ತಿಭಾವದಿಂದ ಈ ಉತ್ಸವವನ್ನು ಆಚರಿಸುತ್ತಾರೆ. ಈ ವರ್ಷ ಕೊರೋನಾ ವಿಷಾಣುಗಳ ಸಂಕಟದಿಂದಾಗಿ ಸಂಚಾರ ಸಾರಿಗೆ ನಿರ್ಬಂಧವಿದ್ದುದರಿಂದ ಮನೆಯಿಂದ ಹೊರಗೆ ಬರಲು ಅನೇಕ ಬಂಧನಗಳಿವೆ. ಕೊರೋನಾದಂತಹ ಆಪತ್ಕಾಲದ ಹಿನ್ನೆಲೆಯಲ್ಲಿ ಎಲ್ಲರೂ ಸೇರಿ ಈ ಉತ್ಸವವನ್ನು ಆಚರಿಸುವಲ್ಲಿ ಮಿತಿ ಬಂದಿದೆ. ಕೊರೋನಾ ವೈರಾಣುಗಳ ಹರಡುವಿಕೆಯಿಂದಾಗಿ […]

ಉಣಕಲ್ಲ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಣೆ

Thursday, August 6th, 2020
bagina

ಹುಬ್ಬಳ್ಳಿ  : ಉಣಕಲ್ಲ ಗ್ರಾಮದ ಕೆರೆ ತುಂಬಿ ಕೋಡಿ ಹರಿಯುತ್ತಿರುವುದರಿಂದ ಇಂದು ಉಣಕಲ್ಲ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶ್ರೀ ರಾಜಣ್ಣ ಕೊರವಿ , ಶ್ರೀ ಉಮೇಶಗೌಡ ಕೌಜಗೇರಿ ಗಂಗಾಧರ ದೊಡ್ಡವಾಡ ಗುರುರಾಜ್ ಸೂರ್ಯವಂಶಿ ಅಧ್ಯಕ್ಷರು ಸಹಕಾರಿ ಸಂಘ ಶಿವಾನಂದ ಶಿರಗುಪ್ಪಿ ವಿಠ್ಠಲ ಸಿಂಗ್ ಹಜೇರಿ ಅಡಿವಪ್ಪ ಮೆಣಸಿಕಾಯಿ ವಿರೂಪಾಕ್ಷಿ ಕಳ್ಳಿಮನಿ ರಂಗನಗೌಡ ಚಿಕ್ಕನಗೌಡ್ರ ಶಂಕರ್ ಧಾರವಾಡ ಶಿವಾನಂದ ರೆಡ್ಡಿ ಹಾಗೂ ಗ್ರಾಮದ ಉಪಸ್ಥಿತರಿದ್ದರು. ವರದಿ : ಶಂಭು ಮೆಗಾಮೀಡಿಯಾ […]

ಆಟಿ ಅಮಾವಾಸ್ಯೆ ದೇವಸ್ಥಾನಗಳಲ್ಲಿ ತೀರ್ಥಸ್ನಾನ ಇಲ್ಲ, ಕೊರೊನಾ ಸೋಂಕಿನ ಹಿನ್ನೆಲೆ ಪಾಲೆ ಕಷಾಯಕ್ಕೆ ಬೇಡಿಕೆ

Monday, July 20th, 2020
palekashaya

ಬಂಟ್ವಾಳ: ಆಟಿ ಅಮಾವಾಸ್ಯೆಯ ದಿನ ಪಾಲೆ (ಹಾಲೆ) ಮರದಲ್ಲಿ ವಿಶೇಷ ರೋಗ ನಿರೋಧಕ ಶಕ್ತಿ ಇದೆ ಎಂಬ ನಂಬಿಕೆ ತಲತಲಾಂತರ ದಿಂದ ಬಂದಿದೆ. ಸೂರ್ಯೋದಯದ ಮೊದಲು ಅಂದರೆ ನಸುಕಿನಲ್ಲೇ ಕಲ್ಲಿನಿಂದ ಜಜ್ಜಿ ತಂದು ಕಷಾಯ ಮಾಡಿ ಸೇವಿಸುವುದು ರೂಢಿ. ಆಷಾಢ ತಿಂಗಳಲ್ಲಿ ಭಾರಿ ಮಳೆ. ಕ್ರಿಮಿ- ಕೀಟಬಾಧೆಯಿಂದ ಆರೋಗ್ಯದ ರಕ್ಷಣೆ, ರೋಗ ನಿರೋಧಕತೆಗಾಗಿ ಪಾಲೆ (ಹಾಲೆ) ಮರದ ತೊಗಟೆಯ ಕಷಾಯ ಮಾಡಿ ಕುಡಿದರೆ ಒಳ್ಳೆಯದಂತೆ. ಔಷಧೀಯವಾಗಿ ಈ ಕಷಾಯಕ್ಕೆ ಬಹಳಷ್ಟು ಮಹತ್ವವಿರುವುದರಿಂದ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಬೇಡಿಕೆ ವ್ಯಕ್ತವಾಯಿತು. ಈ ಬಾರಿ ಲಾಕ್ ಡೌನ್ […]

ಬಸವ ಜಯಂತಿಯಂದು ಎತ್ತುಗಳಿಗೆ ಪೂಜೆ ಸಲ್ಲಿಸಿದ ಎಸ್ಸೆಸ್ಸೆಗೆ ನೋಟೀಸ್‌

Saturday, May 30th, 2020
Yettu

ಕಲಬುರ್ಗಿ : ಕಳೆದ ಏಪ್ರಿಲ್‌ 26 ರಂದು ಎಲ್ಲೆಡೆ ಸರಕಾರದ ರಜೆಯಿದ್ದ ಬಸವ ಜಯಂತಿಯಂದು ಎಲ್ಲರೂ ಸಂಭ್ರಮವಾಗಿ ಬಸವೇಶ್ವರರ ಭಾವಚಿತ್ರ ವನ್ನಿಟ್ಟು ಪೂಜೆ ಸಲ್ಲಿಸಿದ್ದರು. ಆದರೆ, ಅಂದು ಎತ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ಶಾಮನೂರು ಶಿವಶಂಕ್ರಪ್ಪ ಬಸವೇಶ್ವರರಿಗೆ ಅವಮಾನಿಸಿದ್ದಾರೆ ಎಂದು ನೋಟೀಸ್‌ ನೀಡಲಾಗಿದೆ. ಅಖಿಲ ಭಾರತ ವೀರಶೈವ ಮಹಾಸಭಾದ ಕೇಂದ್ರ ಸಮಿತಿಯ ಅಧ್ಯಕ್ಷರಾಗಿರುವ ಶಾಮನೂರು ಅವರು, 12 ನೇ ಶತಮಾನದಲ್ಲಿ ಸಾಮಾಜಿಕ ಪರಿವರ್ತನೆ ಮತ್ತು ಕ್ರಾಂತಿಕಾರಿ ವಿಚಾರಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಬಸವೇಶ್ವರರ ಅನುಯಾಯಿಗಳು ಮತ್ತು ಅವರ ತತ್ವಗಳನ್ನು […]

ವಿಶ್ವದಾದ್ಯಂತ ಆತಂಕ ಮೂಡಿಸಿರುವ ಕೊರೋನಾ, ಪರಿಹಾರಕ್ಕೆ ದೈವ ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ : ವಿಶ್ವಹಿಂದೂ ಪರಿಷತ್

Saturday, March 14th, 2020
pooje

ಮಂಗಳೂರು : ಪ್ರಸ್ತುತ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್ ಪರಿಹರಿಸುವ ನಿಟ್ಟಿನಲ್ಲಿ ಇಂದು ವಿಶ್ವಹಿಂದೂ ಪರಿಷತ್ ವತಿಯಿಂದ ಶ್ರೀ ಸೋಮನಾಥ ದೇವಾಲಯ ಉಳ್ಳಾಲ, ಶ್ರೀಕೃಷ್ಣ ಮುಖ್ಯಪ್ರಾಣ ದೇವಸ್ಥಾನ ಕುಂಪಲ, ಶ್ರೀ ವೈದ್ಯನಾಥ ದೈವಸ್ಥಾನ ಉಳ್ಳಾಲ ಬೈಲ್, ಕೊರಗಜ್ಜ ಆದಿ ದೈವಸ್ಥಾನ ಕುತ್ತಾರ್ ಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷರು ಹಾಗು ಜಿಲ್ಲಾ ಧಾರ್ಮಿಕ ಪರಿಷತ್ತಿನ ಸಧಸ್ಯರಾದ ಗೋಪಾಲ್ ಕುತ್ತಾರ್, ಹಿಂದೂ ಸಮಾಜೋತ್ಸವ ಸಮಿತಿ ಉಳ್ಳಾಲ ಇದರ ಅಧ್ಯಕ್ಷರಾದ ಸುಧರ್ಶನ್ ಶೆಟ್ಟಿ […]

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅನಧಿಕೃತ ಪೂಜೆ ವಿರೋದಿಸಿ ಬೈಕ್ ರ‍್ಯಾಲಿ, ಕರಪತ್ರ ಹಂಚಿಕೆ

Saturday, June 16th, 2018
Kukke Subrahmanya

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ನಾಗದೋಷ ಪರಿಹಾರಕ್ಕೆ ಹೆಸರುವಾಸಿಯಾಗಿರುವ ಕ್ಷೇತ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ಕುಕ್ಕೆ ಕ್ಷೇತ್ರದಲ್ಲಿ ನಡೆಸಲಾಗುವ ಪೂಜೆಗಳನ್ನು ಸಂಪುಟ ನರಸಿಂಹ ಮಠದಲ್ಲೂ ಹಾಗೂ ಅನ್ಯಕಡೆಗಳಲ್ಲಿ ನಡೆಸಲಾಗುತ್ತಿದೆ. ಕ್ಷೇತ್ರದ ಹೆಸರಿನಲ್ಲಿ ಮಠವು ಅಕ್ರಮವಾಗಿ ಸರ್ಪಸಂಸ್ಕಾರ ಪೂಜೆಗಳನ್ನು ನಡೆಸುತ್ತಿದೆ ಎನ್ನುವ ಆರೋಪದ ನಡುವೆ ಇದೀಗ ಸುಬ್ರಹ್ಮಣ್ಯ ಕ್ಷೇತ್ರದ ಭಕ್ತರ ಹಿತರಕ್ಷಣಾ ವೇದಿಕೆ ಈ ಬಗ್ಗೆ ಜನತೆಗೆ ತಿಳುವಳಿಕೆ ನೀಡುವ ಕುರಿತಾಗಿ ಕ್ಷೇತ್ರದ ಸುತ್ತಮುತ್ತ ಪ್ರದೇಶಗಳಲ್ಲಿ ಬೈಕ್ ರ‍್ಯಾಲಿ ಹಾಗೂ ಕರಪತ್ರಹಂಚುವ ಕಾರ್ಯ ಹಮ್ಮಿಕೊಂಡಿದೆ ಎಂದು ವೇದಿಕೆಯ ಕಾನೂನು ಸಲಹೆಗಾರ […]

ಹಿರಿಯ ಮಗನಿಗೆ ಸಮಾಧಿ ಸ್ಥಳದಲ್ಲಿ ಪೂಜೆ ಸಲ್ಲಿಸಲು ತಡೆಯೊಡ್ಡಿದ ಮಧು ಬೆಂಬಲಿಗರು

Wednesday, December 28th, 2011
Madhu Kumara Bangarappa

ಸೊರಬ : ಮಾಜಿ ಸಿಎಂ ಎಸ್ ಬಂಗಾರಪ್ಪ ಅವರ ಸಮಾಧಿ ಸ್ಥಳಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ ಹಿರಿಯ ಮಗ ಕುಮಾರ್ ಬಂಗಾರಪ್ಪಗೆ ಸಹೋದರ ಮಧು ಬಂಗಾರಪ್ಪ ಬೆಂಬಲಿಗರು ವಿರೋಧ ವ್ಯಕ್ತ ಪಡಿಸಿದ ಘಟನೆ  ಇಂದು ನಡೆದಿದೆ. ಪಟ್ಟಣದ ಸರಕಾರಿ ಕಾಲೇಜಿನ ಪಕ್ಕದಲ್ಲಿರುವ ಮಧು ಬಂಗಾರಪ್ಪ ಒಡೆತನದ ಜಾಗದಲ್ಲಿ ಬಂಗಾರಪ್ಪ ಸಮಾಧಿಗೆ ಕುಮಾರ್ ತನ್ನ ಪತ್ನಿ, ಮಕ್ಕಳ ಸಮೇತ ಆಗಮಿಸಿ ಪೂಜೆ ನಡೆಸುವವರಿದ್ದರು. ಇದನ್ನು ಕಂಡ ಮಧು ಬಂಗಾರಪ್ಪ ಬೆಂಬಲಿಗರು ಅವರನ್ನು ಮಧ್ಯದಲ್ಲೇ ತಡೆಯೂಡ್ಡಿದರು. ಈ ವಿಷಯದಲ್ಲಿ ಕುಮಾರ್ […]