ಯಕ್ಷಗಾನದಲ್ಲಿ ‘ಇವನರ್ವ’ ಪದ ಬಳಕೆ ವಿವಾದ… ಕಲಾವಿದ ಹೇಳಿದ್ದೇನು?

Wednesday, April 4th, 2018
yakshagana

ಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಇತ್ತೀಚೆಗೆ ಬಸವಣ್ಣನವರ ವಚನವನ್ನು ತಪ್ಪಾಗಿ ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಅಲ್ಲದೆ, ಇದನ್ನು ಯಕ್ಷಗಾನದಲ್ಲಿ ಬಳಸಿದ್ದು ವಿವಾದಕ್ಕೆ ಕಾರಣವಾಗಿದೆ. ಇವನರ್ವ ಇವನರ್ವ ಎನ್ನುವ ಹೇಳಿಕೆಯನ್ನು ಯಕ್ಷಗಾನದಲ್ಲಿ ಬಳಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೂಡಬಿದ್ರೆ ಚುನಾವಣಾ ಆಯೋಗ ಮುಜರಾಯಿ ಇಲಾಖೆ ಮೂಲಕ ಕಟೀಲು ದುರ್ಗಾಪರಮೆಶ್ವರಿ ದೇವಸ್ಥಾನದ ಮಂಡಳಿಗೆ ಕಲಾವಿದ ಪೂರ್ಣೇಶರನ್ನು ಯಕ್ಷಗಾನದಲ್ಲಿ ಮುಂದುವರಿಸದಂತೆ ನೋಟೀಸ್ ಜಾರಿಗೊಳಿಸಿದೆ. ಹಾಸ್ಯಕ್ಕೀಡುಮಾಡಿದ ರಾಗಾ ವಚನ ಉವಾಚ…ಯಕ್ಷಗಾನದಲ್ಲೂ ಫುಲ್ ಹಿಟ್! ಈ ಕುರಿತು ಮಾತನಾಡಿರುವ ಕಲಾವಿದ ಪೂರ್ಣೇಶ್‌, […]

ಕರಾವಳಿಯಲ್ಲಿ ಮಳೆ: ಬೆಳ್ತಂಗಡಿಯಲ್ಲಿ ಸಿಡಿಲು ಬಡಿದು ಐವರಿಗೆ ಗಾಯ

Thursday, March 15th, 2018
mangaluru

ಮಂಗಳೂರು: ಬಿಸಿಲ ಬೇಗೆ ಮತ್ತು ಹೆಚ್ಚಿದ ಉಷ್ಣಾಂಶದಿಂದ ಕಾದು ಕೆಂಡವಾಗಿದ್ದ ಇಳೆಗೆ ನಿನ್ನೆ ಸಂಜೆ ಮಳೆರಾಯ ತಂಪೆರೆದಿದ್ದಾನೆ. ಕಳೆದ ಕೆಲವು ತಿಂಗಳಿನಿಂದ 35 ಡಿಗ್ರಿವರೆಗೂ ಏರಿದ ಉಷ್ಣಾಂಶದಿಂದಾಗಿ ಬೇಸತ್ತಿದ್ದ ಜನತೆಗೆ ಮಳೆಯ ಸಿಂಚನ ತಂಪಿನ ಸೋಪಾನವಾಯಿತು. ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿದ್ದು, ಮೂರು ಗಂಟೆಯ ಬಳಿಕ ಮಳೆ ಸುರಿಯಲಾರಂಭಿಸಿತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆ ಸುರಿಯಿತು. ಬಳಿಕ ಸಂಜೆಯವರೆಗೂ ಹನಿ ಮಳೆ ಮುಂದುವರಿದಿತ್ತು. ಶ್ರೀಲಂಕಾ ಸಮೀಪದಲ್ಲಿ ಆಳ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ […]