ವಿಜಿಲೆಂನ್ಸ್ ಕಾರ್ಯಾಚರಣೆ-ಲಂಚ ಸ್ವೀಕರಿಸುತ್ತಿದ್ದ ಗ್ರಾಮಾಧಿಕಾರಿಯ ಬಂಧನ

Monday, November 7th, 2016
paivalike-grama-panchayath

ಉಪ್ಪಳ: ನಿವೇಶನದ ನಕ್ಷೆ ನೀಡಲು ಗ್ರಾಹಕರೋರ್ವರಿಂದ ಲಂಚ ಸ್ವೀಕರಿಸುತ್ತಿದ್ದ ಗ್ರಾಮಾಧಿಕಾರಿಯನ್ನು ವಿಜಿಲೆಂನ್ಸ್ ಅಧಿಕೃತರು ಕೈಯಾರೆ ಸೆರೆಹಿಡಿದ ಘಟನೆ ಶನಿವಾರ ಬಾಯಾರು ಗ್ರಾಮಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದಿದ್ದು,ಸಂಚಲನಕ್ಕೆ ಕಾರಣವಾಗಿದೆ. ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಡಿ ಗ್ರಾಮ ಬಾಯಾರು ಗ್ರಾಮಾಧಿಕಾರಿ ಆಲಪ್ಪುಳ ಮಾವೇಲಿಕ್ಕರ ನಿವಾಸಿ ಇ.ರವಿ ಎಂಬವರ ಪುತ್ರ ಸುಧಾಕರನ್(51)ಲಂಚ ಸ್ವೀಕರಿಸುತ್ತಿದ್ದಾಗ ವಿಜಿಲೆಂನ್ಸ್ ಅಧಿಕಾರಿಗಳ ಬಲೆಗೆ ಬಿದ್ದ ಆರೋಪಿಯಾಗಿದ್ದಾನೆ. ಸ್ಥಳೀಯ ರಬ್ಬರ್ ಸಹಿತ ವಿವಿಧ ಕೃಷಿಕರಾದ ವ್ಯಕ್ತಿಯೋರ್ವರು(ಹೆಸರು ಫಾತಿಮಾ ಖಾಲಿದ್)ತಮ್ಮ ನಿವೇಶನದ ನಕ್ಷೆ(ಐ ಸ್ಕೆಚ್)ಪಡೆಯಲು ಕಳೆದ ಕೆಲವು ತಿಂಗಳುಗಳಿಂದ ಪ್ರಯತ್ನಿಸುತ್ತಿದ್ದು,ಸುಧಾಕರನ್ […]

ದಸರಾ ನಾಡಹಬ್ಬ ಮಕ್ಕಳಲ್ಲಿ ಸಾಂಸ್ಕೃತಿಕ ಅರಿವು,ಒಗ್ಗಟ್ಟು ಕ್ರೀಯಾಶೀಲತೆಯನ್ನು ಬೆಳೆಸುವಲ್ಲಿ ಸಹಾಯಕವಾಗಿದೆ: ಭಾರತೀ ಜೆ.ಶೆಟ್ಟಿ

Tuesday, October 11th, 2016
Paivalike Dasara

ಉಪ್ಪಳ: ಮಕ್ಕಳಲ್ಲಿ ಸಾಂಸ್ಕೃತಿಕ ಅರಿವು,ಒಗ್ಗಟ್ಟು ಬೆಳೆಸುವಲ್ಲಿ ದಸರಾ ನಾಡಹಬ್ಬಗಳಂತಹ ಚಟುಟವಟಿಕೆಗಳು ಪೂರಕವಾಗಿದ್ದು,ಮಕ್ಕಳ ಕ್ರೀಯಾಶೀಲತೆಯನ್ನು ಬೆಳೆಸುವಲ್ಲಿ ಸಹಾಯಕವಾಗಿದೆಯೆಂದು ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತೀ ಜೆ.ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಪೈವಳಿಕೆಯ ಗಡಿನಾಡ ಕಲಾಸಂಘ ಕಳೆದ 28 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ದಸರಾ ನಾಡಹಬ್ಬ ಮಹೋತ್ಸವದ ಅಂಗವಾಗಿ ಶನಿವಾರ ಪೈವಳಿಕೆನಗರ ಪ್ರೌಢಶಾಲೆಯಲ್ಲಿ ನಡೆದ ಪ್ರಸ್ತುತ ವರ್ಷದ ನಾಡಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಆಡಳಿತಾತ್ಮಕವಾಗಿ ಕೇರಳದಲ್ಲಿದ್ದರೂ ಕಾಸರಗೋಡು,ಇಲ್ಲಿಯ ಜನಮನಸ್ಸುಗಳು ಇನ್ನೂ ಕನ್ನಡಕ್ಕಾಗಿ ಮಿಡಿಯುವಂತದ್ದಾಗಿದೆ.ಆದರೆ ಹೊಸ ತಲೆ ಮಾರು ಹಿರಿಯರ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅರಿಯುವಲ್ಲಿ […]