ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನ

Tuesday, September 1st, 2020
mukharji

ಹೊಸ ದಿಲ್ಲಿ: ಭಾರತರತ್ನ ಪ್ರಶಸ್ತಿ ಪುರಸ್ಕೃತ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೊರೊನಾ ವೈರಸ್ ಸೋಂಕಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೋಮಾಗೆ ಜಾರಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 84 ವರ್ಷ ವಯಸ್ಸಿನ ಪ್ರಣಬ್ ಮುಖರ್ಜಿ, ಭಾರತದ 13ನೇ ರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಿದ್ದರು. 25 ಜುಲೈ 2012ರಿಂದ 25 ಜುಲೈ 2017ರವರೆಗೆ ಪ್ರಣಬ್ ಭಾರತದ ರಾಷ್ಟ್ರಪತಿಗಳಾಗಿದ್ದರು. ಪತ್ನಿ ಹಾಗೂ ಮೂವರು ಮಕ್ಕಳನ್ನು ಪ್ರಣಬ್ ಅಗಲಿದ್ದಾರೆ. ಶ್ರೀಯುತರಿಗೆ 2019ರಲ್ಲಿ ಭಾರತ ರತ್ನ ಹಾಗೂ 2008ರಲ್ಲಿ ಪದ್ಮ ವಿಭೂಷಣ ಪುರಸ್ಕಾರ ನೀಡಿ […]

ತೆಲಂಗಾಣ ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಕಿತ

Saturday, March 1st, 2014
Pranab-Mukherjee

ನವದೆಹಲಿ: ಆಂಧ್ರ ಪ್ರದೇಶವನ್ನು ವಿಭಜಿಸಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮಾಡುವ ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಶನಿವಾರ ಅಂಕಿತ ಹಾಕಿದ್ದಾರೆ. ಸಂಸತ್ತಿನ ಉಭಯ ಕಲಾಪಗಳಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದ್ದ ನೂತನ ತೆಲಂಗಾಣ ರಾಜ್ಯ ರಚನೆ ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಹಿ ಹಾಕಿದ್ದು, ಅಧಿಕೃತವಾಗಿ ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದೆ. ಫೆಬ್ರವರಿ 18ರಂದು ನಡೆದ ಲೋಕಸಭೆ ಕಲಾಪದಲ್ಲಿ ಅನುಮೋದನೆ ಪಡೆದಿದ್ದ ವಿಧೇಯಕಕ್ಕೆ ಕೊಂಚ ತಡವಾಗಿ ರಾಜ್ಯಸಭೆಯಲ್ಲಿ ಅಂಗೀಕಾರ ನೀಡಲಾಗಿತ್ತು. ಸೀಮಾಂಧ್ರ ಸಂಸದರ […]

ಪ್ರವೀಣನ ಕ್ಷಮಾದಾನ ಅರ್ಜಿ ತಿರಸ್ಕೃತ, ಗಲ್ಲು ಶಿಕ್ಷೆ ಖಾಯಂ

Friday, April 5th, 2013
Praveen vaamanjur

ಮಂಗಳೂರು : ಒಂದೇ ಕುಟುಂಬದ ನಾಲ್ವರನ್ನು ಸಾಮೂಹಿಕ ಹತ್ಯೆ ಮಾಡಿದ್ದ ವಾಮಂಜೂರು ಪ್ರವೀಣನ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿರಸ್ಕೃತಗೊಳಿಸಿದ್ದು ಈ ಮೂಲಕ ಸುಪ್ರೀಂಕೋರ್ಟ್ ವಿಧಿಸಿದ್ದ ಗಲ್ಲು ಶಿಕ್ಷೆ  ಖಾಯಂಗೊಂಡಿದೆ. ಆರೋಪಿ ಪ್ರವೀಣ 1993 ರ ಫೆಬ್ರವರಿ 23 ರಂದು ಹಣಕ್ಕಾಗಿ ತನ್ನ ಅತ್ತೆ ಅಪ್ಪಿ ಶೇರಿಗಾರ್ತಿ, ಆಕೆಯ ಮಗ ಗೋವಿಂದ, ಮಗಳು ಶಕುಂತಳಾ ಹಾಗೂ ಶಕುಂತಳಾರ ಪುತ್ರಿ ದೀಪಿಕಾಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಈತನಿಗೆ ಮಂಗಳೂರಿನ ಸೆಷನ್ಸ್‌ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ನಂತರ […]