ಮಂಗಳೂರಿನಲ್ಲಿ ವಿಶ್ವದರ್ಜೆಯ ಸ್ಟ್ರೀಟ್ ಫುಟ್ಬಾಲ್ ಕ್ರೀಡಾಂಗಣ

Tuesday, July 17th, 2018
football-satdium

ಮಂಗಳೂರು: ಕಳೆದ ಒಂದು ತಿಂಗಳಲ್ಲಿ ಫುಟ್ಬಾಲ್ ಕ್ರೀಡೆಯ ಕ್ರೇಝ್ ಹೆಚ್ಚಿದೆ. ಫಿಫಾ ವಿಶ್ವಕಪ್ ಮುಗಿದಿದ್ದರೂ ದೇಶ-ವಿದೇಶಗಳಲ್ಲಿ ಈಗ ಫುಟ್ಬಾಲ್ನದ್ದೇ ಮಾತು ಕೇಳಿಬರ್ತಿದೆ. ಅದರಲ್ಲೂ ಸ್ಟ್ರೀಟ್ ಫುಟ್ಬಾಲ್ ಅಂತೂ ಅತ್ಯಂತ ಜನಪ್ರಿಯತೆ ಗಳಿಸಿದೆ. ವಿಶ್ವದ ವಿವಿಧ ದೇಶಗಳಲ್ಲಿ ಜನಪ್ರಿಯವಾಗಿರುವ ಸ್ಟ್ರೀಟ್ ಫುಟ್ಬಾಲ್ ಈಗ ಮಂಗಳೂರಿಗೂ ಕಾಲಿರಿಸಿದೆ. ಹೌದು.. ಮಂಗಳೂರಿನ ಅಳಕೆ ಪ್ರದೇಶದಲ್ಲಿ ಸ್ಟ್ರೀಟ್ ಫುಟ್ಬಾಲ್ ಕ್ರೀಡಾಂಗಣವೊಂದು ಸದ್ದಿಲ್ಲದಂತೆ ನಿರ್ಮಾಣಗೊಂಡಿದೆ. ಅಂದಹಾಗೆ ಸ್ಟ್ರೀಟ್ ಫುಟ್ಬಾಲ್ ಎನ್ನುವುದು ಫುಟ್ಬಾಲ್ ನದ್ದೇ ತದ್ರೂಪ. ರಸ್ತೆ ಬದಿ ಆಡುತ್ತಿದ್ದ ಫುಟ್ಬಾಲ್ ಕ್ರಮೇಣ ಸ್ಟ್ರೀಟ್ ಫುಟ್ಬಾಲ್ […]

ನಾಳೆ ಫಿಫಾ ವಿಶ್ವಕಪ್ ಫೈನಲ್..ಫ್ರಾನ್ಸ್-ಕ್ರೋವೇಷಿಯಾ ಮುಖಾಮುಖಿ!

Saturday, July 14th, 2018
football-cup

ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ 21ನೇ ಫಿಫಾ ವಿಶ್ವಕಪ್ 2018 ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಭಾನುವಾರ ಕಾಲ್ಚೆಂಡಿನ ಬಿಗ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್-ಕ್ರೋವೇಷಿಯಾ ತಂಡಗಳು ಮುಖಾಮುಖಿಯಾಗಲಿವೆ. ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ತಂಡವನ್ನು 1-0 ಗೋಲುಗಳ ಅಂತರದಲ್ಲಿ ಬಗ್ಗುಬಡಿದು ಫ್ರಾನ್ಸ್ ಉಪಾಂತ್ಯಕ್ಕೆ ತಲುಪಿದೆ. ಇತ್ತ ಮಗದೊಂದು ಜಿದ್ದಾಜಿದ್ದಿನ ಸೆಮೀಸ್ ಮುಖಾಮುಖಿಯಲ್ಲಿ ಇಂಗ್ಲೆಂಡ್ ವಿರುದ್ದ ಕ್ರೊಯೇಷ್ಯಾ 2-1ರ ಗೋಲುಗಳ ಅಂತರದ ಗೆಲುವು ದಾಖಲಿಸಿತ್ತು. ಫ್ರಾನ್ಸ್ ಎರಡನೇ ಬಾರಿಗೆ ಕಿರೀಟ ಎದುರು ನೋಡುತ್ತಿದ್ದರೆ ಕ್ರೊಯೇಷ್ಯಾ ಇತಿಹಾಸ ರಚಿಸುವ ತವಕದಲ್ಲಿದೆ. ‘ಸಿ’ ಗುಂಪಿನಲ್ಲಿ […]

ಫಿಫಾ ವಿಶ್ವಕಪ್​ 2ನೇ ಸೆಮೀಸ್..ಇಂಗ್ಲೆಂಡ್ ಮತ್ತು ಕ್ರೊವೇಷಿಯಾ ನಡುವೆ ಹಣಾಹಣಿ!

Wednesday, July 11th, 2018
england

ಮಾಸ್ಕೋ: ಒಂದು ತಂಡ 28 ವರ್ಷಗಳ ಬಳಿಕ ಮತ್ತೊಂದು ತಂಡ ಅರ್ಧಶತಕ ವರ್ಷಗಳ ಬಳಿಕ ಫೈನಲ್ಗೇರುವ ಕನಸು ಕಾಣುತ್ತಿವೆ. ಅವು ಬೇರಾರು ಅಲ್ಲ ಇಂಗ್ಲೆಂಡ್ ಮತ್ತು ಕ್ರೊವೇಷಿಯಾ ತಂಡಗಳು. ಅದರಲ್ಲೂ 21 ನೇ ವಿಶ್ವಕಪ್ ಪಂದ್ಯಾವಳಿಯಲ್ಲಂತೂ ಅತಿರಥ ಮಹಾರಥರೇ ಮಣ್ಣುಮುಕ್ಕಿದ್ದಾರೆ. ಅಂದುಕೊಂಡ ಎಲ್ಲ ತಂಡಗಳು ಮನೆಗೆ ಹೋಗಿವೆ. ಅಂತಹದ್ದರಲ್ಲಿ ಇವತ್ತಿನ ಮತ್ತೊಂದು ಸೆಮಿಫೈನಲ್ ಹಣಾಹಣಿ ತೀವ್ರ ಕುತೂಹಲಕ್ಕೆ ಕಾರಣವಾಗಿವೆ. 1966ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಇಂಗ್ಲೆಂಡ್ ಆ ಬಳಿಕ ಪ್ರಶಸ್ತಿಯ ಸನಿಹಕ್ಕೂ ಸುಳಿದಿಲ್ಲ. ಈ ವಿಶ್ವಕಪ್ನಲ್ಲಿ ಗೆದ್ದು […]

ಫಿಫಾ ವಿಶ್ವಕಪ್ ಸೆಮಿಫೈನಲ್..ಫ್ರಾನ್ಸ್​​ ಹಾಗೂ ಬೆಲ್ಜಿಯಂ ತಂಡಗಳ ನಡುವೆ ಜಿದ್ದಾ ಜಿದ್ದಿನ ಹೋರಾಟ!

Tuesday, July 10th, 2018
belgium

ಫ್ರಾನ್ಸ್: 21ನೇ ಫಿಫಾ ವಿಶ್ವಕಪ್ ಫುಟ್ಬಾಲ್ ಕಿರೀಟ ಮುಡಿಗೇರಿಸಿಕೊಳ್ಳಲು ಜಿದ್ದಾ ಜಿದ್ದಿನ ಹೋರಾಟಗಳು ನಡೆಯುತ್ತಿದ್ದು, ಫೈನಲ್ ಪ್ರವೇಶ ಪಡೆದುಕೊಳ್ಳಲು ನಾಲ್ಕು ತಂಡಗಳು ಕಸರತ್ತು ನಡೆಸಿವೆ. ಮೊದಲ ಸೆಮೀಸ್ನಲ್ಲಿ ಇಂದು ಫ್ರಾನ್ಸ್ ಹಾಗೂ ಬೆಲ್ಜಿಯಂ ತಂಡಗಳು ಕಾದಾಡಲಿವೆ. ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ಕೆಲವೊಂದು ಆಶ್ಚರ್ಯಕರ ಸಂಗತಿಗಳು ನಡೆದಿದ್ದು, ಯಾರೂ ಊಹೆ ಮಾಡದ ರೀತಿಯಲ್ಲಿ ಬಲಿಷ್ಠ ತಂಡಗಳು ಟೂರ್ನಿಯಿಂದ ಹೊರ ಬಿದ್ದಿವೆ. ಇದರ ಮಧ್ಯೆ ಇಂದಿನ ಪಂದ್ಯದಲ್ಲಿ ಫ್ರಾನ್ಸ್ ಮತ್ತು ಬೆಲ್ಜಿಯಂ ತಂಡಗಳು ಸೆಣೆಸಲಿವೆ. ಟೂರ್ನಿಯಲ್ಲಿ ಬೆಲ್ಜಿಯಂ ಇಲ್ಲಿಯವರೆಗೆ 14 […]

ಫಿಫಾ ವಿಶ್ವಕಪ್…ಬ್ರೆಜಿಲ್​ ತಂಡವನ್ನು 2-1ರ ಅಂತರದಲ್ಲಿ ಸೋಲಿಸಿದ ಬೆಲ್ಜಿಯಂ ಸೆಮೀಸ್​ಗೆ ಲಗ್ಗೆ!

Saturday, July 7th, 2018
belgium

ಮಾಸ್ಕೋ: ಫಿಫಾ ವಿಶ್ವಕಪ್ ಫುಟ್ಬಾಲ್ 2018 ರ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯ ರೋಚಕವಾಗಿ ಅಂತ್ಯವಾಗಿದೆ. ಬ್ರೆಜಿಲ್ ತಂಡವನ್ನು 2-1ರ ಅಂತರದಲ್ಲಿ ಸೋಲಿಸಿದ ಬೆಲ್ಜಿಯಂ ಸೆಮೀಸ್ಗೆ ಲಗ್ಗೆ ಇಟ್ಟಿದೆ. ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ಎರಡನೇ ಕ್ವರ್ಟರ್ ಫೈನಲ್ ಪಂದ್ಯದಲ್ಲಿ ಆರಂಭದಿಂದಲೇ ಬೆಲ್ಜಿಯಂ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಬೆಲ್ಜಿಯಂ ಪರ ಫೆರ್ನಾಂಡಿನ್ಹೋ 13ನೇ ನಿಮಿಷದಲ್ಲಿ ಗೋಲ್ ಗಳಿಸುವುದರ ಮೂಲಕ ಪಂದ್ಯದಲ್ಲಿ ತಂಡ ಮೇಲುಗೈ ಸಾಧಿಸುವಂತೆ ಮಾಡಿದರು. ಅನಂತರದಲ್ಲಿ ಅಂದರೆ 31 ನೇ ನಿಮಿಷದಲ್ಲಿ ಬೆಲ್ಜಿಯಂನ ಮತ್ತೊಬ್ಬ ಆಟಗಾರ […]