ಸುರತ್ಕಲ್ ಬಂಟರ ಸಂಘದಲ್ಲಿ ಸಸಿ ವಿತರಣೆ, ಸಾಧಕರಿಗೆ ಸನ್ಮಾನ

Sunday, July 21st, 2024
Surathkal Bunts

ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್, ರೋಟರಿ ಕ್ಲಬ್ ಬೈಕಂಪಾಡಿ ಹಾಗೂ ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಸುರತ್ಕಲ್ ಇದರ ಸಹಯೋಗದಲ್ಲಿ ಮೇಬೈಲು ಸದಾಶಿವ ಶೆಟ್ಟಿ ನೇತೃತ್ವದಲ್ಲಿ 15ನೇ ವರ್ಷದ ಸಸಿ ವಿತರಣಾ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವಾರ್ಪಣೆ ಕಾರ್ಯಕ್ರಮ ಆದಿತ್ಯವಾರ ಇಲ್ಲಿನ ಬಂಟರ ಭವನದಲ್ಲಿ ಜರುಗಿತು. ಉದ್ಘಾಟನೆಯನ್ನು ನೆರವೇರಿಸಿ ಮಾತಾಡಿದ ವಿ.ಕೆ ಸಮೂಹ ಸಂಸ್ಥೆ ಮುಂಬಯಿ ಇದರ ಸಿಎಂಡಿ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು ಅವರು, “ಸಸಿ ವಿತರಣೆ ಬರೀ […]

ಐಕಳ ಹರೀಶ್ ಶೆಟ್ಟಿ ಬಗ್ಗೆ ಅವಹೇಳನಕಾರಿ ಪೋಸ್ಟ್, ಆರೋಪಿಯ ಬಂಧನಕ್ಕೆ ಒತ್ತಾಯ

Tuesday, July 21st, 2020
ikala harish shetty

ಉಡುಪಿ : ಕೆಲವು ದಿನಗಳ ಹಿಂದೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಯವರ ಬಗ್ಗೆ ಅವರ ಘನತೆಗೆ ಧಕ್ಕೆ ಬರುವಂತೆ ಅವಹೇಳನಕಾರಿ ಸುದ್ದಿಯನ್ನು ವಾಟ್ಸಪ್ ಸೋಷಿಯಲ್ ಮೀಡಿಯಾ ಮುಖಾಂತರ ಯಾರೋ ವಿಕೃತ ಮನಸ್ಸಿನ ವ್ಯಕ್ತಿ ವೈರಲ್. ಈ ಬಗ್ಗೆ ವಿಶ್ವದಾದ್ಯಂತ ಇರುವ ಎಲ್ಲಾ ಬಂಟರ ಸಂಘದ ಅಧ್ಯಕ್ಷರುಗಳು, ಪದಾಧಿಕಾರಿಗಲು ಆಕೋಶ ವ್ಯಕ್ತಪಡಿಸಿ ಈ ಕೃತ್ಯವನ್ನು ಖಂಡಿಸಿದ್ದು ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕೈಗೊಳ್ಳಲು ಬೇಕು ಎಂದು ಒಕ್ಕೂಟಕ್ಕೆ ಮನವಿ ಮಾಡಿದ್ದಾರೆ ಈ ಎಲ್ಲಾ […]

ಬಂಟರ ಸಂಘ ವಸಾಯಿ-ಡಹಾಣು ಪ್ರಾದೀಶಿಕ ಸಮಿತಿಯ ವತಿಯಿಂದ ಶೈಕ್ಷಣಿಕ ನೆರವು ವಿತರಣೆ

Saturday, June 23rd, 2018
Vasai-Bunts

ಮುಂಬಯಿ : ಬಂಟರ ಸಂಘ ವಸಾಯಿ-ಡಹಾಣು ಪ್ರಾದೀಶಿಕ ಸಮಿತಿಯ ವತಿಯಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣಾ ಸಮಾರಂಭವು ಇತ್ತೀಚೆಗೆ ನಾಲಾಸೋಪಾರ ಪೂರ್ವದ ರೀಜೆನ್ಸಿ ಸಭಾಗೃಹದಲ್ಲಿ ಬಂಟರ ಸಂಘದ ಅಧ್ಯಕ್ಷರಾದ ಪದ್ಮನಾಭ ಎಸ್. ಪಯ್ಯಡೆಯವರ ಅಧ್ಯಕ್ಷತೆಯಲ್ಲಿ ಜರಗಿತು. ಬಂಟರ ಸಂಘದ ಟ್ರಷ್ಟಿ ಕರ್ನಿರೆ ವಿಶ್ವನಾಥ ಶೆಟ್ಟಿ, ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಉಪಕಾರ್ಯಾಧ್ಯಕ್ಷ ಸುಬ್ಬಯ್ಯ ಶೆಟ್ಟಿ, ಪ್ರಾದೇಶಿಕ ಸಮಿತಿಯ ಸಮನ್ವಯಕ ಡಾ. ಪ್ರಭಾಕರ ಶೆಟ್ಟಿ, ಶಿಕ್ಷಣ ಮತ್ತು […]

ವೈದ್ಯರು, ಇಂಜಿನಿಯರ್ ಮಾತ್ರ ದೇಶದ ಆಸ್ತಿಯಲ್ಲ : ಡಾ. ವಿನಯಕುಮಾರ್ ಹೆಗ್ಡೆ

Monday, September 18th, 2017
Bunts seminar

ಮಂಗಳೂರು : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯನ್ನು ಎದುರಿಸುವ ತರಬೇತಿ ಕೇಂದ್ರ ಮಂಗಳೂರಿನಲ್ಲಿಯೂ ಆರಂಭಗೊಳ್ಳಲಿದೆ. ನವದೆಹಲಿಯ ಚಾಣಕ್ಯ ಅಕಾಡೆಮಿ ಹಾಗೂ ಬಂಟರ ಯಾನೆ ನಾಡವರ ಸಂಘದ ಸಹಯೋಗದಲ್ಲಿ ಯುವಜನತೆಗೆ ಸುವರ್ಣವಕಾಶ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆಯ ಸ್ಥಾಪಕ ಎ.ಕೆ. ಮಿಶ್ರ ಅವರಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ‘ಯಶಸ್ಸಿನ ಕಲೆ’ ಕುರಿತ ವಿಚಾರಸಂಕಿರಣ ನಗರದ ಪುರಭವನದಲ್ಲಿ ನಡೆಯಿತು. ಅವಿಭಜಿತ ಜಿಲ್ಲೆಯ ಪದವೀಧರ ವಿದ್ಯಾರ್ಥಿಗಳಿಗೆ ಅ.8ರಂದು ಮಂಗಳೂರಿನಲ್ಲಿ ನಡೆಯುವ ಅರ್ಹತಾ ಪರೀಕ್ಷೆಯಲ್ಲಿ […]

ಕಾಸರಗೋಡು ವಲಯ ಬಂಟರ ಸಂಘ ನೂತನ ಅಧ್ಯಕ್ಷರಾಗಿ ಸುಬ್ಬಣ್ಣ ಆಳ್ವ ಆಯ್ಕೆ

Monday, March 7th, 2016
Subbanna Alva

ಕಾಸರಗೋಡು: ಕಾಸರಗೋಡು ವಲಯ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಶೆಟ್ಟಿ ಕಾಳ್ಯಂಗಾಡು, ಕೋಶಾಧಿಕಾರಿಯಾಗಿ ಎಸ್.ಎನ್.ರಾಮ ಶೆಟ್ಟಿ ಮಾಸ್ತರ್ ಅವರನ್ನು ಆರಿಸಲಾಗಿದೆ. ವಲಯ ಸಂಘದ ಅಧ್ಯಕ್ಷರಾಗಿದ್ದ ನ್ಯಾಯವಾದಿ ಸದಾನಂದ ರೈ ಅವರು ಜಿಲ್ಲಾ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡ ಹಿನ್ನೆಲೆ ತೆರವಾದ ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷತೆಗೆ ಹಾಗೂ ಅದರೊಂದಿಗೆ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸದಾನಂದ ರೈ ಅಧ್ಯಕ್ಷತೆ ವಹಿಸಿದ ಸಭೆಯಲ್ಲಿ ಜಿಲ್ಲಾ ಸಂಘದ ಪ್ರತಿನಿಧಿಗಳು, ಪಂಚಾಯತ್ […]

ಬ್ಯಾರಿ ಅಕಾಡಮಿಯಿಂದ ರಮಝಾನ್ ಸ್ನೇಹಕೂಟ

Sunday, July 12th, 2015
Ramzan iftar

ಮಂಗಳೂರು : ಕೇವಲ ಹಸಿವಿನಿಂದ ಇದ್ದರೆ ಅದು ಉಪವಾಸವಾಗುವುದಿಲ್ಲ. ಆರಾಧನೆಯೊಂದಿಗೆ ಉಪವಾಸಿಗನ ಹೃದಯ ಶುದ್ಧಿಯೂ ಇರಬೇಕಾಗಿದೆ. ಅಂತಹ ಉಪವಾಸ ಮಾತ್ರ ಅಲ್ಲಾಹನಿಗೆ ಸ್ವೀಕಾರ್ಹವಾಗಲಿದೆ ಎಂದು ನಗರದ ಪೌಝಿಯಾ ಜುಮಾ ಮಸ್ಜಿದ್ನ ಖತೀಬ್ ಅಬುಲ್ ವಫಾ ಖಾಸಿಂ ಮುಸ್ಲಿಯಾರ್ ಹೇಳಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಹಕಾರದೊಂದಿಗೆ ಶುಕ್ರವಾರ ಟಿಆರ್ಎಫ್ ಸಭಾಂಗಣದಲ್ಲಿ ಹಮ್ಮಿಕೊಂಡ `ರಮಝಾನ್ ಸ್ನೇಹಕೂಟ’ದಲ್ಲಿ `ಬ್ಯಾರಿ ಸಂಸ್ಕ್ಕೃತಿ ಮತ್ತು ರಮಝಾನ್ ವ್ರತ’ ವಿಷಯದಲ್ಲಿ ಮಾತನಾಡಿದರು. ಬ್ಯಾರಿ ಎಂಬುದು ಇಸ್ಲಾಮಿನಿಂದ ಪ್ರತ್ಯೇಕವಾದುದಲ್ಲ. ಇಸ್ಲಾಂ ಮಾತೃಭಾಷೆಯನ್ನು […]