ಕೊರೋನ ನಿರ್ಬಂಧದ ನೆಪದಲ್ಲಿ ಖಾಸಗಿ ಬಸ್ ದರ ಹೆಚ್ಚಳ : ಡಿವೈಎಫ್ಐ ವಿರೋಧ

Monday, June 28th, 2021
Bus-service

ಮಂಗಳೂರು  : ಲಾಕ್ ಡೌನ್ ನಿಯಮಗಳು ಸಡಿಲಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸಂಚಾರ ಆರಂಭಿಸಲಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ‌ ಬಸ್ಸುಗಳ ಮಾಲಕರ ಒಕ್ಕೂಟಗಳು ಕೊರೋನ ನಿರ್ಬಂಧಗಳ ಪಾಲನೆಯ ನೆಪದಲ್ಲಿ “ಸೆಸ್ ಹಾಕಲು ತಮಗೆ ಸರಕಾರ ಅವಕಾಶ ನೀಡಿದೆ” ಎಂದು ಶೇಕಡಾ ಇಪ್ಪತ್ತೈದರಷ್ಟು ಪ್ರಯಾಣ ದರ ಏಕಪಕ್ಷೀಯವಾಗಿ ಏರಿಸಲು ತೀರ್ಮಾನಿಸಿರುವುದನ್ನು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರವಾಗಿ ವಿರೋಧಿಸಿದೆ. ಲಾಕ್ ಡೌನ್, ಕೊರೋನಾ ನಿರ್ಬಂಧಗಳನ್ನು ವಿಧಿಸಿರುವ ಸರಕಾರದೊಂದಿಗೆ ತೆರಿಗೆ ವಿನಾಯತಿ ಸಹಿತ ವಿವಿಧ ರಿಯಾಯತಿಗಳಿಗಾಗಿ ಒತ್ತಡ ಹಾಕುವ […]

ಬಸ್ ದರ ಏರಿಸುವ ಮೂಲಕ ಜನರಿಂದ ಮತ್ತೊಂದು ಸುಲಿಗೆ

Sunday, June 27th, 2021
Udupi City Bus

ಉಡುಪಿ : ಪೆಟ್ರೋಲ್ ಗ್ಯಾಸ್, ದಿನಸಿ ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರನ್ನು ಬಸ್ ದರ ಏರಿಸುವ ಮೂಲಕ ಸರಕಾರ ಸುಲಿಗೆ ಮಾಡುತ್ತಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಆರೋಪಿಸಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಬಸ್ ಮಾಲಕರಿಗೆ, ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಸರಕಾರ ಯಾವುದೇ ಆರ್ಥಿಕ ನೆರವು ನೀಡಲ್ಲ ಎಂದು  ಸಮಿತಿ ಹೇಳಿದೆ. ಖಾಸಗಿ ಬಸ್ ಟಿಕೇಟು ದರ 13ರೂ. ಇದ್ದದ್ದು ಮೊದಲ ಅಲೆ ನಂತರ ಶೇ.50 ಪ್ರಯಾಣಿಕರಿಗೆ ಅವಕಾಶ ನೀಡಿ ಕೊರೊನಾ ಮಾರ್ಗಸೂಚಿ ಅನುಸರಿಸಿ ಬಸ್ ಓಡಿಸಿದಾಗ 20 ರೂ. ಆಗಿತ್ತು. ಲಾಕ್‌ಡೌನ್ […]

ಕೆ.ಎಸ್.ಆರ್.ಟಿ.ಸಿ ವೋಲ್ವೊ ಬಸ್ ದರ-ಬೆಜ್ಜಿಬಿದ್ದ ಪ್ರಯಾಣಿಕರು

Wednesday, October 22nd, 2014
ksrtc

ಮುಂಬಯಿ : ಮಂಗಳೂರು-ಮುಂಬಯಿ ಅಥವಾ ಮುಂಬಯಿ-ಮಂಗಳೂರು ಪ್ರಯಾಣ ತುಳು ಕನ್ನಡಿಗರ ಪಾಲಿಗೆ ಕಂಠಕವಾಗುತ್ತಿದ್ದು, ಈ ಮಾರ್ಗವಾಗಿ ಸೇವೆಗೈಯುವ ಬಸ್ ಗಳಲ್ಲಿ ಯಾವುದೇ ಸುಸಮಯ ಬಂದಾಗ (ಸೀಝನ್) ಅತೀಯಾದ ದರ ಬೆಳೆಸಿ ಪ್ರಯಾಣಿಕರನ್ನು ಸಂಕಷ್ಟಕ್ಕೊಳ ಪಡಿಸುವ ಬಸ್ ಸಂಸ್ಥೆಗಳ ಉಪಟಲ ತೀರಾ ಖಂಡನೀಯ ಎಂದು ಪ್ರಯಾಣಿಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಈ ಬಾರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಸಂಸ್ಥೆಯ ವೋಲ್ವೊ ಬಸ್ ದರವೂ ಪ್ರಯಣಿಕರನ್ನು ಕೆರಳಿಸಿದೆ. ಮಂಗಳೂರು-ಮುಂಬಯಿ ಮತ್ತು ಬೆಂಗಳೂರು-ಮುಂಬಯಿ […]