ಪದ್ಮಶ್ರೀ ಪುರಸ್ಕೃತ ಡಾ. ಸೂಲಗಿತ್ತಿ ನರಸಮ್ಮ ನಿಧನ

Tuesday, December 25th, 2018
sulagitti-narasamma

ಬೆಂಗಳೂರು: ಉಸಿರಾಟದ ತೊಂದರೆ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪದ್ಮಶ್ರೀ ಪುರಸ್ಕೃತರಾದ ಡಾ. ಸೂಲಗಿತ್ತಿ ನರಸಮ್ಮ ನಿಧನರಾಗಿದ್ದಾರೆ. ಕಳೆದ 25 ದಿನಗಳಿಂದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ 98 ವರ್ಷದ ನರಸಮ್ಮ, ಇಂದು ಮಧ್ಯಾಹ್ನ 3 ಗಂಟೆಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಿನ್ನೆ ರಾತ್ರಿ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆ ಇಂದು ವೆಂಟಿಲೇಟರ್ನಲ್ಲಿ ಚಿಕಿತ್ಸೆ ಆರಂಭಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿಲ್ಲ. ಸಾರ್ವಜನಿಕರಿಗೆ ಅಂತಿಮ ದರ್ಶನ ಅವಕಾಶ ಕಲ್ಪಿಸಲು ನಿರ್ಧಾರ ಮಾಡಲಾಗಿದ್ದು, ಸಿದ್ಧತೆ ನಡೆಯುತ್ತಿದೆ.

ನಟಿ ರಶ್ಮಿ ಮನೆಯಲ್ಲಿ ಪೋಟೋಗ್ರಾಫರ್​ ಸಾವು ಪ್ರಕರಣ: ಚುರುಕುಗೊಂಡ ಪೊಲೀಸರ ತನಿಖೆ

Thursday, October 25th, 2018
rashmi

ಬೆಂಗಳೂರು: ನಟಿ ರಶ್ಮಿ ಮನೆಯಲ್ಲಿ ಫೋಟೋಗ್ರಾಫರ್ ಸಾವು ಪ್ರಕರಣದ ತನಿಖೆ ಚುರುಕುಗೊಂಡಿದೆ. ಕಳೆದ ಭಾನುವಾರ ರಶ್ಮಿ ಮನೆಯಲ್ಲಿ ಫೋಟೋಗ್ರಾಫರ್ ಪ್ರತೀಕ್, ರಾತ್ರಿ 11.30ರ ಸುಮಾರಿಗೆ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಆತ ಕುಡಿದ ಮತ್ತಿನಲ್ಲಿ ಕಾಲು ಜಾರಿ ಬಿದ್ದು ಸಾವಿಗೀಡಾಗಿದ್ದಾನೆ ಅನ್ನೋದು ರಶ್ಮಿ ಮಾತಾಗಿತ್ತು. ಈ ಕುರಿತು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಪ್ರತೀಕ್ ಹಾಗೂ ರಶ್ಮಿ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಇವರಿಬ್ಬರ ಮಧ್ಯೆ ಏನಾದ್ರು ಇತ್ತಾ ಅನ್ನೋ […]

ಆರೋಗ್ಯದಲ್ಲಿ ಚೇತರಿಕೆ… ಸಿದ್ದಗಂಗಾ ಶ್ರೀಗಳು ಡಿಸ್ಚಾರ್ಜ್‌

Saturday, January 27th, 2018
siddaganga-swamiji

ಬೆಂಗಳೂರು: ತುಮಕೂರಿನ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅವರನ್ನು ಮಠಕ್ಕೆ ಕಳುಹಿಸಿಕೊಡಲು ನಿರ್ಧರಿಸಲಾಗಿದೆ. ಮಠದಲ್ಲೇ ಶ್ರೀಗಳಿಗೆ ಚಿಕಿತ್ಸೆ ಮುಂದುವರೆಸಲಿದ್ದು, ಈಗಾಗಲೇ ಮಠದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬಿಜಿಎಸ್ ಆಸ್ಪತ್ರೆ ವೈದ್ಯ ಡಾ. ರವೀಂದ್ರ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಶ್ರೀಗಳ ಆರೋಗ್ಯದಲ್ಲಿ ಬಹಳ ಚೇತರಿಕೆ ಕಂಡುಬಂದಿದೆ. ನ್ಯುಮೋನಿಯಾ ಮತ್ತು ಸೋಂಕು ಇದೆ. ರಕ್ತದಲ್ಲಿ ಬ್ಯಾಕ್ಟೀರಿಯಾ ಇರೋದು ಗೊತ್ತಾಗಿದೆ. ಹಾಗಾಗಿ ಇಲ್ಲೇ ಚಿಕಿತ್ಸೆ ಸದ್ಯಕ್ಕೆ ಮುಂದುವರೆಸಿದ್ದೇವೆ. ಮಠಕ್ಕೆ ಹೋಗುತ್ತೇನೆ ಎಂದು ಶ್ರೀಗಳು ನಿನ್ನೆಯಿಂದಲೇ ಹಠ […]

110 ವಯಸ್ಸಿನ ಶ್ರೀಗಳಿಗೆ ಚಿಕಿತ್ಸೆ ನೀಡುವುದು ಕಷ್ಟದ ಕಾರ್ಯ: ಡಾ.ರವೀಂದ್ರ

Friday, January 26th, 2018
swamiji

ಬೆಂಗಳೂರು: ಸಿದ್ದಗಂಗಾ ಶಿವಕುಮಾರ ಸ್ವಾಮಿಗಳ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಕೃತಕ ಆಮ್ಲಜನಕ ಮತ್ತು ಡ್ರಿಪ್‌ ಹಾಕಲಾಗಿದೆ ಎಂದು ಅವರನ್ನು ಪರೀಕ್ಷಿಸಿದ ಡಾ.ರವೀಂದ್ರ ಅವರು ಹೇಳಿದ್ದಾರೆ. ಶ್ರೀಗಳ ದೇಹದಲ್ಲಿ ಆಮ್ಲಜನಕ ಕೊರತೆ ಇದೆ ಜೊತೆಗೆ ಬಿಪಿ ಸಹ ಕಡಿಮೆ ಇದೆ ಎಂದು ಡಾ.ರವೀಂದ್ರ ಹೇಳಿದ್ದು, ಶ್ರೀಗಳ ರಕ್ತ ಪರೀಕ್ಷೆ ಮಾಡಲಾಗುತ್ತಿದೆ ಎಂದಿದ್ದಾರೆ. ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಕೊಂಚ ಏರುಪೇರು ಶ್ರೀಗಳಿಗೆ ಲಿವರ್ ಸಮಸ್ಯೆ ಇದ್ದು, ಅವರ ದೇಹದಲ್ಲಿ ಈಗಾಗಲೇ 5 ಸ್ಟಂಟ್‌ಗಳಿವೆ […]