ಪಿಲಿಕುಳ ನಿಸರ್ಗ ಧಾಮದಲ್ಲಿ ‘ಬಿಸು ಪರ್ಬ’ ಆಚರಣೆ

Saturday, April 14th, 2018
Pilikula

ಮಂಗಳೂರು: ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗ ಧಾಮದ ಗುತ್ತು ಮನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ‘ಬಿಸು ಪರ್ಬ’ ಆಚರಿಸಲಾಯಿತು. ದಕ್ಷಿಣ ಕನ್ನಡ ಉಡುಪಿ, ಕಾಸರಗೋಡು ಜಿಲ್ಲೆಯಲ್ಲಿ ತುಳುವರು ಹೊಸ ವರ್ಷದ ಮೊದಲ ದಿನವನ್ನಾಗಿ ‘ಬಿಸು ಪರ್ಬ’ ಆಚರಿಸುತ್ತಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಈ ಕೃಷಿ ಪ್ರೇರಿತ ಹೊಸ ವರ್ಷಾಚರಣೆಯನ್ನು ವಿವಿಧ ರೀತಿಗಳಲ್ಲಿ ಆಚರಿಸಲಾಗುತ್ತದೆ. ತುಳುನಾಡಿನ ಬಿಸು ಪರ್ಬ ಆಚರಣೆಯಲ್ಲಿ ಇಲ್ಲಿ ಬೆಳೆಯಲಾಗುವ ಎಲ್ಲಾ ರೀತಿಯ ತರಕಾರಿ, ಫಲ ವಸ್ತುಗಳನ್ನು ಇಟ್ಟು ಪೂಜೆ ಮಾಡಿಕೊಂಡು ಮಧ್ಯಾಹ್ನ […]

ದೆಹಲಿಯಲ್ಲಿ ಬಿಸು ಪರ್ಬ, ತುಳುವಿಗೆ ಸಂವಿಧಾನದ ಮಾನ್ಯತೆಗಾಗಿ ಹೋರಾಟ

Thursday, May 1st, 2014
Delhi Tulu Siri

ನವದೆಹಲಿ: ದೆಹಲಿ ಸುತ್ತಲಿನ ಪ್ರದೇಶಗಳಲ್ಲಿ ನೆಲೆಸಿರುವ ತುಳುವರು ಭಾನುವಾರ ದೆಹಲಿಯ ನೆಹರು ಪಾಕರ್್ನಲ್ಲಿ ಸೇರಿ ತುಳು ಭಾಷೆಯನ್ನು ಸಂವಿಧಾನದ ಎಂಟನೆ ಪರಿಚ್ಚೇದಕ್ಕೆ ಸೇರಿಸುವ ತಮ್ಮ ಹೋರಾಟಕ್ಕೆ ಮರುಜೀವ ನೀಡುವ ಬಗ್ಗೆತೀರ್ಮಾನಿಸಿದ್ದಾರೆ. ದೆಹಲಿ ತುಳು ಸಿರಿ ಆಯೋಜಿಸಿದ್ದ ‘ಬಿಸು ಪರ್ಬ’ ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಮಿಕ್ಕ ತುಳುವರು ಭಾಗವಹಿಸಿದ್ದರು. ದೆಹಲಿಯಲ್ಲಿ ವಿವಿಧ ವೃತ್ತಿಯಲ್ಲಿರುವ ರಾಜ್ಯದ ಕರಾವಳಿ ಭಾಗಕ್ಕೆ ಸೇರಿದ ಉತ್ಸಾಹಿಗಳು ದೆಹಲಿಯ ಬಿಸಿಲ ಧಗೆಗೆ ಸಡ್ಡು ಹೊಡೆದು `ಪರ್ಬ’ದ ಸಡಗರವನ್ನು ಅನುಭವಿಸಿದರು. ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು, ಯುವಕರು […]