ಸೆಂಟ್ರಿಂಗ್ ಶೀಟ್, ಜಾಕ್ ಮತ್ತು ಪೈಪ್‌ಗಳನ್ನು ಕದ್ದ ವ್ಯಕ್ತಿಯ ಬಂಧನ

Thursday, September 14th, 2023
padubidre-police

ಮೂಡಬಿದ್ರೆ : ಕಬ್ಬಿಣದ ಸೆಂಟ್ರಿಂಗ್ ಶೀಟ್ ಹಾಗೂ ಕಬ್ಬಿಣದ ಜಾಕ್ ಮತ್ತು ಪೈಪ್‌ಗಳನ್ನು ಮೂಡಬಿದ್ರೆ ಠಾಣಾ ವ್ಯಾಪ್ತಿಯ ಬೆಳುವಾಯಿ ಹಾಗೂ ಕೆಸರುಗದ್ದೆ ಎಂಬಲ್ಲಿ ಕಳವು ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ. ತೋಡಾರು ಗ್ರಾಮ ಇದಾಯತ್ ನಗರ ನಿವಾಸಿ ಮಹಮ್ಮದ್ ಸಾಹಿಲ್ (21) ಬಂಧಿತ ಆರೋಪಿ ಬಂಧಿತ ಆರೋಪಿಯಿಂದ ಸುಮಾರು 2,50,000 ರೂ ಮೌಲ್ಯದ ಕಬ್ಬಿಣದ ಸೆಂಟ್ರಿಂಗ್ ಶೀಟ್ ಹಾಗೂ ಕಬ್ಬಿಣದ ಜಾಕ್ ಮತ್ತು ಕಬ್ಬಿಣದ ಪೈಪನ್ನು ಸ್ವಾಧೀನ ಪಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಮೂಡಬಿದ್ರೆ ಪೊಲೀಸ್ ಠಾಣೆಯ ಪೊಲೀಸ್ […]

ಮಠದಕೆರೆಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋದ ಯುವಕ ಮೃತ್ಯು

Monday, November 9th, 2020
Matadakere

ಮಂಗಳೂರು : ಬೆಳುವಾಯಿ ಗ್ರಾಪಂ ವ್ಯಾಪ್ತಿಯ ಮಠದಕೆರೆಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋದ ಯುವಕನೊಬ್ಬ ಮುಳುಗಿ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ. ಸುರತ್ಕಲ್ ಸಮೀಪದ ಕಾಟಿಪಳ್ಳ ನಿವಾಸಿ ನಿಹಾಲ್ ಶಾ ( 20 ) ಮೃತಪಟ್ಟ ಯುವಕ. ನಿಹಾಲ್ ಶಾ ತನ್ನ ಏಳು ಮಂದಿ ಸ್ನೇಹಿತರೊಡನೆ ಭಾನುವಾರ ಸಾಯಂಕಾಲ ಮಠದಕೆರೆಗೆ ಈಜಲು ಬಂದಿದ್ದ. ಈಜುವಾಗ ಏಕಾಏಕಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಬೆಳುವಾಯಿಯ ಅಂಥೋಣಿ ಎಂಬುವರು ನಿಹಾಲ್ ಶಾ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಈ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ […]

ಬೆಳುವಾಯಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗ್ರಾಹಕ ಮಾಹಿತಿಕಾರ‍್ಯಕ್ರಮ

Monday, December 16th, 2019
belvai

ಮೂಡುಬಿದಿರೆ : ಮೂಡುಬಿದಿರೆ ತಾಲ್ಲೂಕಿನ ಬೆಳುವಾಯಿ ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಗ್ರಾಹಕ ಮಾಹಿತಿಕಾರ‍್ಯಕ್ರಮದಶಂಬರ್ 14,2019ರಂದು ನಡೆಯಿತು.ಮೂಡುಬಿದಿರೆಯ ಗ್ರಾಹಕ ಸಂಘಟನೆಯ ಅಧ್ಯಕ್ಷ, ರಾಜ್ಯ ಸಂಪನ್ಮೂಲ ವ್ಯಕ್ತಿ, ದ.ಕ.ಜಿಲ್ಲಾಗ್ರಾಹಕ ಸಂಘಟನೆ ಒಕ್ಕೂಟದಜತೆ ಕಾರ‍್ಯದರ್ಶಿ ರಾಯೀ ರಾಜಕುಮಾರರುತಮ್ಮ 351 ನೇ ಕಾರ‍್ಯಕ್ರಮವನ್ನು ನಡೆಸಿಕೊಟ್ಟರು.ಅವರು ತಮ್ಮ ಮಾಹಿತಿಕಾರ‍್ಯಕ್ರಮದಲ್ಲಿಪ್ರತಿಯೊಂದೂ ವಸ್ತುವಿನ ಗುಣಮಟ್ಟ, ದಾಖಲೆಇತ್ಯಾದಿ ಇಟ್ಟುಕೊಳ್ಳುವ ಅಗತ್ಯವನ್ನು ತಿಳಿಸಿಕೊಟ್ಟರು.ಗ್ರಾಹಕ ಹಕ್ಕು ಹಾಗೂ ಕರ್ತವ್ಯಗಳ ಸಂಪೂರ್ಣ ಮಾಹಿತಿಯನ್ನು ನೀಡಿ ಸಮಗ್ರ ಮಾರ್ಗದರ್ಶನಇತ್ತರು. ಗ್ರಾಹಕಯಾವ್ಯಾವ ಅಂಶಗಳ ಕುರಿತು ಮಾಹಿತಿ ಹೊಂದಿರಬೇಕೆಂಬುದನ್ನು ಮನವರಿಕೆ ಮಾಡಿಕೊಟ್ಟರು. ವೇದಿಕೆಯಲ್ಲಿ […]

ಬೆಳುವಾಯಿಯಲ್ಲಿ ಕಾರು ಡಿಕ್ಕಿ ನಾಲ್ವರಿಗೆ ಗಾಯ ವಿದ್ಯಾರ್ಥಿನಿ ಗಂಭೀರ

Tuesday, August 13th, 2019
belvai

ಮೂಡುಬಿದಿರೆ : ಬೆಳುವಾಯಿಯಲ್ಲಿ ಇನ್ನೋವಾ ಕಾರೊಂದು ಕಾಲೇಜು ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ವಿದ್ಯಾರ್ಥಿನಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳುವಾಯಿ ಮುಡಾಯಿ ಕಾಡು ನಿವಾಸಿ ಜಗನ್ನಾಥ ಮಡಿವಾಳರ ಪುತ್ರಿ , ಉಡುಪಿ ಹಿರಿಯಡ್ಕ ಸರಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿ ಶುಭಲಕ್ಷ್ಮಿ ಗಂಭೀರ ಗಾಯಗೊಂಡಿರುವ ವಿದ್ಯಾರ್ಥಿನಿ. ಬೆಳಿಗ್ಗೆ ನಾಲ್ವರು ವಿದ್ಯಾರ್ಥಿಗಳು ಕಾರ್ಕಳ ಕಡೆಗೆ ಹೋಗುವ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದು ಈ ಸಂದರ್ಭದಲ್ಲಿ ಮೂಡುಬಿದಿರೆ ಕಡೆಯಿಂದ ಅತೀ ವೇಗದಿಂದ ಬಂದ ಇನ್ನೋವಾ ಕಾರು ಶುಭಲಕ್ಷ್ಮಿಗೆ ಢಿಕ್ಕಿ ಹೊಡೆದಿದ್ದು […]