ವ್ಯಕ್ತಿಯ ಕನಸಲ್ಲಿ ಬಂದ ಗೋಪಾಲಕೃಷ್ಣ ದೇವರು, ಬೆಳ್ತಂಗಡಿಯ ಬಳಿ ಸುಮಾರು 700 ವರ್ಷಗಳ ಹಿಂದಿನ ದೇವಸ್ಥಾನದ ಕುರುಹು ಪತ್ತೆ

Tuesday, November 7th, 2023
Gopalakrishna Temple

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ತೆಕ್ಕಾರು ಬಟ್ರಬೈಲು ಎಂಬಲ್ಲಿ 700 ವರ್ಷಗಳ ಹಿಂದಿನ ದೇವಸ್ಥಾನದ ಕುರುಹು ಪತ್ತೆಯಾಗಿದೆ. ಮುಸ್ಲಿಮರ ವಶದಲ್ಲಿದ್ದ ಜಮೀನನ್ನು ಶಾಸಕರ ಮುತುವರ್ಜಿಯಿಂದ ಮತ್ತೆ ಪಡೆದುಕೊಂಡು, ಉತ್ಖನನ ನಡೆಸಿದಾಗ 12ನೇ ಶತಮಾನದ ಎನ್ನಲಾದ ಗೋಪಾಲಕೃಷ್ಣ ದೇವರ ಕಲ್ಲಿನ ವಿಗ್ರಹ ಪತ್ತೆಯಾಗಿದೆ. ಈ ಹಿನ್ನೆಲೆ ಊರವರು ಇಲ್ಲಿ ಭವ್ಯ ದೇವಸ್ಥಾನ ನಿರ್ಮಿಸುವ ಪಣ ತೊಟ್ಟಿದ್ದಾರೆ. ಬೆಂಗಳೂರು ಮೂಲದ ಲಕ್ಷ್ಮಣ್ ಎಂಬವರು ತೆಕ್ಕಾರಿನಲ್ಲಿ ಜಮೀನು ಖರೀದಿಸಿದ್ದರು. ಇವರಿಗೆ ಬಿದ್ದ ಕನಸಿನಲ್ಲಿ ತಾನು ಖರೀದಿಸಿದ ಜಮೀನಿನ ಪಕ್ಕದಲ್ಲಿರುವ ಮುಸ್ಲಿಂ […]

ಕನ್ನಡ ರಾಜ್ಯೋತ್ಸವದ ದಿನ ಬೆಳ್ತಂಗಡಿಯ ಕೆಲವೆಡೆ ತುಳುನಾಡಿನ ಧ್ವಜ ಹಾರಾಟ

Friday, November 1st, 2019
Tulu flag

ಬೆಳ್ತಂಗಡಿ : ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಎರಡು ಕಡೆ ಪ್ರತ್ಯೇಕ ಧ್ವಜ ಕಾಣಿಸಿಕೊಂಡಿದೆ. ಇದು ತುಳುನಾಡಿನ ಧ್ವಜವೆಂದು ಎಂದು ಹೇಳಲಾಗಿದೆ. ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯ ಗೇಟಿನ ಮೇಲೂ ಇದೇ ಧ್ವಜ ಹಾರಾಡುತ್ತಿತ್ತು. ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿರುವ ಧ್ವಜಸ್ತಂಭದಲ್ಲಿದ್ದ ಕನ್ನಡ ಧ್ಜವನ್ನು ಕೆಳಗಿಳಿಸಿ ಈ ‘ತುಳು’ ಬೆಂಬಲಿತ ಧ್ವಜವನ್ನು ಹಾಕಲಾಗಿದೆ. ಈ ಕೃತ್ಯದ ವಿರುದ್ಧ ಸರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಪ್ರತ್ಯೇಕ ಧ್ವಜ ಹಾರಾಟ ಕೃತ್ಯವು ಕಳೆದ ರಾತ್ರಿ ನಡೆದಿದೆ. ಇದೀಗ ಮಾಹಿತಿ ತಿಳಿದ ಕನ್ನಡ ಸಂಘಟನೆಗಳು […]