ಒಂದು ಕೋಟಿ ರೂ.ಗಳಷ್ಟು ನಷ್ಟ, ಬೈಕಂಪಾಡಿಯ ಕ್ಯಾಶು ಪ್ಯಾಕ್ಟರಿ ಮಾಲಕ ನಾಪತ್ತೆ

Sunday, August 1st, 2021
Ramanjaneya

ಮಂಗಳೂರು : ಬೈಕ್‌ನಲ್ಲಿ ಮನೆ ನೋಡಿಕೊಂಡು ಬರುವುದಾಗಿ ಹೇಳಿ ಹೋದ ಬೈಕಂಪಾಡಿಯ ಗೇರುಬೀಜ ಕಾರ್ಖಾನೆಯೊಂದರ ಮಾಲಕ ಹಿಂತಿರುಗದೆ ನಾಪತ್ತೆಯಾದ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕಂಪಾಡಿಯ ಜೈ ಶ್ರೀ ರಾಮ ಲಕ್ಷ್ಮೀ ಕ್ಯಾಶುಸ್’ ಹೆಸರಿನ ಗೇರುಬೀಜ ಕಾರ್ಖಾನೆಯ ಮಾಲಕ ರಾಮಾಂಜನೇಯ ಡಿ. (41) ನಾಪತ್ತೆಯಾದವರು. ಇತ್ತೀಚೆಗೆ ಕಾರ್ಖಾನೆಯು ಸುಮಾರು ಒಂದು ಕೋಟಿ ರೂ.ಗಳಷ್ಟು ನಷ್ಟ ಹೊಂದಿದ್ದರಿಂದ ಬೇಸರ ಗೊಂಡಿದ್ದರು ಎನ್ನಲಾಗಿದೆ. ಜು.29ರಂದು ಅಪರಾಹ್ನ ಬೇರೊಂದು ಮನೆ ನೋಡಿಕೊಂಡು ಬರುವುದಾಗಿ ಹೇಳಿ ಬೈಕ್‌ನಲ್ಲಿ ಹೋದವರು ನಾಪತ್ತೆ ಯಾಗಿದ್ದಾರೆ ಎಂದು ಅವರ […]

ಅಪಘಾತಕ್ಕೊಳಗಾದ ವ್ಯಕ್ತಿಗೆ ಉಪಚರಿಸಿದ ಯುವಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು

Sunday, July 11th, 2021
Tejas

ಮಂಗಳೂರು: ಬೈಕನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲು ಮುಂದಾಗಿದ್ದ ಯುವಕನಿಗೆ ಲಾರಿ ಡಿಕ್ಕಿ ಹೊಡೆದ  ಪರಿಣಾಮ ಯುವಕ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ಬೈಕಂಪಾಡಿಯಲ್ಲಿ ನಡೆದಿದೆ. ಮೃತ ಯುವಕ ತೇಜಸ್‌ (28) ಸುಳ್ಯ ತಾಲೂಕಿನ ಮರ್ಕಜೆಯ ದೊಡ್ಡತೋಟ ನಿವಾಸಿಯಾಗಿದ್ದು, ಮಂಗಳೂರಿನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಶನಿವಾರ ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ದ್ವಿಚಕ್ರ ವಾಹವೊಂದು ಅಪಘಾತಕ್ಕೀಡಾಗಿತ್ತು. ಇದನ್ನು ಗಮನಿಸಿದ ತೇಜಸ್, ಗಾಯಾಳುವನ್ನು ಉಪಚರಿಸಿ ಆತನ ಬೈಕ್ನನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲು ದೂಡಿಕೊಂಡು ಹೋಗುತ್ತಿದ್ದನು. ಅದೇ […]

ಎಪಿಎಂಸಿ ಅಧ್ಯಕ್ಷರಾಗಿ ಕೃಷ್ಣರಾಜ ಹೆಗ್ಡೆ, ಉಪಾಧ್ಯಕ್ಷರಾಗಿ ರಜನಿ ದುಗ್ಗಣ್ಣ ಆಯ್ಕೆ

Wednesday, July 15th, 2020
APMc

ಮಂಗಳೂರು : ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಹಿರಿಯ ಸದಸ್ಯ ಮೂಡಬಿದ್ರೆಯ ಕೃಷ್ಣರಾಜ ಹೆಗ್ಡೆ ಅವರು ಆಯ್ಕೆಯಾಗಿದ್ದಾರೆ. ಈ ಹಿಂದೆ ಕಾರ್ಕಳ ತಾಲೂಕು ಪಂಚಾಯತ್‌ ಸದಸ್ಯರಾಗಿ,ಮಂಡಲ ಪ್ರಧಾನರಾಗಿ, ಮೂಡಬಿದ್ರೆ ಪುರಸಭೆಯ ಸದಸ್ಯರಾಗಿ, ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ, ಕೆಎಸ್‌ಆರ್‌ಟಿಸಿ ಸಲಹಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಉಪಾಧ್ಯಕ್ಷರಾಗಿ ಮಾಜಿ ಮೇಯರ್‌ ರಜನಿ ದುಗ್ಗಣ್ಣ ಆಯ್ಕೆಯಾಗಿದ್ದು, ಅವರು  ಮಂಗಳೂರು ಮಹಾನಗರ ಪಾಲಿಕೆಯ ಮೇಯರ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು.

ಬೈಕಂಪಾಡಿ ಎಪಿಎಂಸಿ ವರ್ತಕರು ಶೀಘ್ರದಲ್ಲೇ ವಾಪಾಸ್ ; ನಾಲ್ಕು ತಿಂಗಳಲ್ಲಿ ಟೌನ್ ಹಾಲ್ ಬಳಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ

Tuesday, April 28th, 2020
MCC market

ಮಂಗಳೂರು: ಬೈಕಂಪಾಡಿಯಲ್ಲಿರುವ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಿದ ಕೇಂದ್ರ ಮಾರುಕಟ್ಟೆಯ ಮಾರಾಟಗಾರರಿಗೆ ಸ್ಥಳಾವಕಾಶ ಕಲ್ಪಿಸಲು 5.25 ಕೋಟಿ ರೂ.ಗಳ ವೆಚ್ಚದಲ್ಲಿ ಟೌನ್ ಹಾಲ್ ಬಳಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಿಸಲಾಗುವುದು. 115 ಕೋಟಿ ರೂ.ಗಳ ವೆಚ್ಚದಲ್ಲಿ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿದ ನಂತರ ಹೊಸ ಕೇಂದ್ರ ಮಾರುಕಟ್ಟೆ ನಿರ್ಮಾಣ ಗೊಳ್ಳಲಿದೆ. ಮಾರುಕಟ್ಟೆಯ ಪುನರ್ ನಿರ್ಮಾಣವು  ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಂಎಸ್ಸಿಎಲ್) ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ನಡೆಯಲಿದೆ. ಇದಕ್ಕಾಗಿ ಎಂಎಸ್‌ಸಿಎಲ್ ಶೀಘ್ರದಲ್ಲೇ ಟೆಂಡರ್ ಕರೆಯಲಿದೆ. ತಾತ್ಕಾಲಿಕ ಮಾರುಕಟ್ಟೆ ರಚನೆಯು 150 ಕ್ಕೂ ಹೆಚ್ಚು […]

ಬೈಕಂಪಾಡಿಗೆ ಸ್ಥಳಾಂತರಗೊಂಡ ಕೇಂದ್ರ ಮಾರುಕಟ್ಟೆಯನ್ನು ನಗರದ ಹ್ರದಯ ಭಾಗದಲ್ಲೇ ಪುನರಾರಂಭಿಸಲು ಒತ್ತಾಯ

Monday, April 20th, 2020
cpim

ಮಂಗಳೂರು  :  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಪ್ಪಿಸಲು ದ.ಕ.ಜಿಲ್ಲೆಯ ಆರ್ಥಿಕತೆಯ ಜೀವನಾಡಿ ನಗರದ ಹ್ರದಯ ಭಾಗದಲ್ಲಿರುವ ಕೇಂದ್ರ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಬೈಕಂಪಾಡಿಯ APMC ಯಾರ್ಡ್ ಗೆ ಸ್ಥಳಾಂತರಿಸಿದ್ದು,ಅಲ್ಲಿ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ವ್ಯಾಪಾರಸ್ಥರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು,ಕೂಡಲೇ ಕೇಂದ್ರ ಮಾರುಕಟ್ಟೆಯನ್ನು ನಗರದ ಹ್ರದಯ ಭಾಗದಲ್ಲಿ ಹಿಂದೆ ಇದ್ದ ಕಟ್ಟಡದಲ್ಲೇ ಪುನರಾರಂಭಿಸಬೇಕೆಂದು ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘ(ರಿ)ವು ದ.ಕ.ಜಿಲ್ಲಾಡಳಿತವನ್ನು ಒತ್ತಾಯಿಸಿದೆ. ಈ ಬಗ್ಗೆ ಸಂಘದ ಉನ್ನತ ಮಟ್ಟದ ನಿಯೋಗವೊಂದು ದ.ಕ.ಜಿಲ್ಲಾಧಿಕಾರಿಗಳನ್ನು ಹಾಗೂ ಮನಪಾ ಆಯುಕ್ತರನ್ನು ಭೇಟಿಯಾಗಿ […]

ಸೆಂಟ್ರಲ್‌ ಮಾರ್ಕೆಟ್‌ನ ತರಕಾರಿ ಮತ್ತು ಹಣ್ಣು ಹಂಪಲುಗಳ ವ್ಯಾಪಾರ ಬೈಕಂಪಾಡಿ ಯಲ್ಲಿಯೇ ಫಿಕ್ಸ್

Friday, April 17th, 2020
apmc

ಮಂಗಳೂರು: ಸೆಂಟ್ರಲ್‌ ಮಾರ್ಕೆಟ್‌ನ ತರಕಾರಿ ಮತ್ತು ಹಣ್ಣು ಹಂಪಲುಗಳ ಸಗಟು ವ್ಯಾಪಾರವನ್ನು ಬೈಕಂಪಾಡಿ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಲಾಗಿದ್ದು, 3 ತಿಂಗಳ ಕಾಲ ಯಾವುದೇ ಬಾಡಿಗೆ ಅಥವಾ ತೆರಿಗೆಯನ್ನು ವಸೂಲು ಮಾಡುವುದಿಲ್ಲ. ಆದರೆ ಇಲ್ಲಿ ವಹಿವಾಟು ನಡೆಸಲು ಆಸಕ್ತಿ ಇರುವ ಎಲ್ಲರೂ ಲೈಸನ್ಸ್‌ ಪಡೆಯುವ ಬಗ್ಗೆ ಈಗಿಂದೀಗಲೇ ಅರ್ಜಿ ಸಲ್ಲಿಕೆ ಮತ್ತಿತರ ಪ್ರಕ್ರಿಯೆಗಳನ್ನು ಆರಂಭಿಸಬೇಕು. 3 ತಿಂಗಳ ಬಳಿಕ ಅಧಿಕೃತವಾಗಿ ಲೈಸನ್ಸ್‌ ಪಡೆದು ವ್ಯವಹಾರ ನಡೆಸಬಹುದು ಎಂದು ಸ್ಥಳೀಯ ಶಾಸಕ ಡಾ| ವೈ. ಭರತ್‌ ಶೆಟ್ಟಿ ತಿಳಿಸಿದ್ದಾರೆ. ಆದರೆ  ಇಲ್ಲಿ  ರಿಟೇಲ್‌ […]

ಬೈಕಂಪಾಡಿ ಮೆಟಲ್ ರಿಪೈನರೀಸ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ

Monday, April 13th, 2020
Mookambike

ಮಂಗಳೂರು: ಬೈಕಂಪಾಡಿಯ ಕೈಗಾರಿಕಾ ಪ್ರದೇಶದಲ್ಲಿನ ಮೂಗಾಂಬಿಕೈ ಕಾರ್ಖಾನೆಯ ಕಚ್ಛಾ ವಸ್ತುಗಳ ಸಂಗ್ರಹ ಘಟಕದಲ್ಲಿದಲ್ಲಿ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿದೆ. ಇದರಿಂದಾಗಿ ಅಪಾರ ಪ್ರಮಾಣದ ಕಚ್ಛಾ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಇದು ಮೆಟಲ್ ರಿಪೈನರೀಸ್ ಕಾರ್ಖಾನೆಯಾಗಿತ್ತು. ಬೆಂಕಿಯ ತೀವ್ರತೆ ಅಕ್ಕ ಪಕ್ಕದ ಕಂಪೆನಿಗಳ ಮಾಲಕರನ್ನೂ ಸಹ ಆತಂಕಕ್ಕೀಡುಮಾಡಿದೆ. ಕಾರ್ಖಾನೆ ಹರಿಸೂದನಾ ಎಂಬವರಿಗೆ ಸಂಬಂಧಿಸಿದ ಲಾಕ್ ಡೌನ್ ಹಿನ್ನಲೆಯಲ್ಲಿ ಕಾರ್ಖಾನೆಗೆ ರಜೆ ಘೋಷಣೆ ಮಾಡಲಾಗಿತ್ತು. ಹಾಗಾಗಿ ಕಾರ್ಮಿಕರು ಯಾರೂ ಕಂಪೆನಿಯಲ್ಲಿ ಇರಲಿಲ್ಲ. ಅದಿಲ್ಲವಾದರೆ ಬೆಂಕಿ ಅನಾಹುತಕ್ಕೆ ಪ್ರಾಣಹಾನಿ ಸಂಭವಿಸುವ ಅಪಾಯಗಳಿದ್ದವು. ಘಟನಾ ಸ್ಥಳಕ್ಕೆ […]

ಶಾಲೆಯ ಕಂಪೌಂಡ್ ಮೇಲೆ ಉರುಳಿ ಬಿದ್ದ ಲಾರಿ ‌ಕಂಟೈನರ್ ಬಾಕ್ಸ್..!

Tuesday, November 20th, 2018
building

ಮಂಗಳೂರು: ಖಾಸಗಿ ಸಂಸ್ಥೆಗೆ ಸೇರಿದ ಬೃಹತ್ ಗಾತ್ರದ ಲಾರಿ ಕಂಟೈನರ್ ಬಾಕ್ಸ್ಗಳು ಶಾಲೆಯೊಂದರ ಮೇಲೆ ಉರುಳಿಬಿದ್ದ ಘಟನೆ ಬೈಕಂಪಾಡಿ ಅಂಗರಗುಂಡಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಬೈಕಂಪಾಡಿ ಕೈಗಾರಿಕಾ ಪ್ರದೇಶದ ಅಂಗರಗುಂಡಿ ಸ.ಹಿ.ಪ್ರಾ. ಶಾಲೆಯ ಪಕ್ಕದ ಜಮೀನಿನಲ್ಲಿ ಎನ್ಎಂಪಿಟಿಯಿಂದ ತಂದ ಬೃಹತ್ ಗಾತ್ರದ ಕಂಟೈನರ್ಗಳನ್ನು ಸಂಗ್ರಹಿಸಿಟ್ಟು ಖಾಸಗಿ ಸಂಸ್ಥೆಯೊಂದು ವ್ಯವಹಾರ ನಡೆಸುತ್ತಿತ್ತು. ಇಂದು ಬೆಳಗ್ಗೆ ಶಾಲೆ ತೆರೆದ ಸಂದರ್ಭ ಶಾಲೆಯ ಒಂದು ಬದಿ ಕುಸಿದುಬಿದ್ದಿದೆ. ಪರಿಶೀಲಿಸಿದಾಗ, ಪಕ್ಕದ ಜಮೀನಿನಲ್ಲಿದ್ದ ಒಂದರ ಮೇಲೊಂದು ಇರಿಸಿದ್ದ ಲಾರಿ ಕಂಟೈನರ್ಗಳು ಶಾಲೆಯ ಮೇಲೆಯೇ […]

ಮಂಗಳೂರಿನಲ್ಲಿ ಬಸ್​​ ಪಲ್ಟಿ: 35ಕ್ಕೂ ಅಧಿಕ ಮಂದಿಗೆ ಗಾಯ

Tuesday, September 11th, 2018
accident-2

ಮಂಗಳೂರು: ಇಲ್ಲಿನ ಜೋಕಟ್ಟೆ ಬಳಿ ಖಾಸಗಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ 35ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಮಂಗಳೂರಿನ ಶಾಲಾ-ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಗಳೂ ಸೇರಿ 35ಕ್ಕೂ ಅಧಿಕ ಮಂದಿಗೆ ಗಾಯಾಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರಿನ ಕಾಟಿಪಳ್ಳದಿಂದ ಮಂಗಳೂರಿಗೆ ಬರುತ್ತಿದ್ದ ಬಸ್, ಬೈಕಂಪಾಡಿ ಬಳಿಯ ಜೋಕಟ್ಟೆಯಲ್ಲಿ ಎದುರು ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆ ಬದಿಗೆ ಬಿದ್ದಿದೆ. ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವನ್ನೇ ಹಾರ ಮಾಡಿಕೊಳ್ಳೋ ಪೋರ… ಕಡಲ ತಡಿಯಲ್ಲಿ ಸರ್ಪಗಳ ಜೊತೆ ಬಾಲಕನ ಆಟ

Monday, June 4th, 2018
small-boy

ಮಂಗಳೂರು: ಹಾವು ಅಂದ ಕೂಡಲೇ ಹೌಹಾರುವವರೇ ಜಾಸ್ತಿ. ಇನ್ನು ಕಂಡರಂತೂ ದೂರಾನೇ ಓಡಿ ಹೋಗ್ತಾರೆ. ಆದರೆ ಇಲ್ಲೊಬ್ಬ ಪುಟ್ಟ ಪೋರ ಹಾವಿನ ಜೊತೆಗೇ ಆಟವಾಡ್ತಾನೆ. ಹಾವನ್ನೇ ಹೂವಿನ ರೀತಿ ಕುತ್ತಿಗೆಗೆ ಹಾರ ಹಾಕ್ಕೊಳ್ತಾನೆ! ಹೌದು, ಈ ಬಾಲಕನ ಹೆಸರು ಮಹಮ್ಮದ್ ಶಾಕೀರ್. ಇನ್ನೂ ಮೂರು ವರ್ಷ ತುಂಬಿಲ್ಲ. ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಬಾಲ ಚೇಷ್ಟೆಯನ್ನಾಡುವ ವಯಸ್ಸಲ್ಲಿ ಹಾವಿನ ಜೊತೆ ಸ್ನೇಹ ಮಾಡುತ್ತಾನೆ. ಹಾವಿನ ಬಾಲವನ್ನು ಹಿಡ್ಕೊಂಡು ಕೊಂಚವೂ ಭಯವಿಲ್ಲದೆ ವಿನೋದ ತೋರಿಸುತ್ತಾನೆ. ಈ ಬಾಲಕನ ಕೈಚಳಕ […]