ಮಂಗಳೂರು ಹನಿಟ್ಯ್ರಾಪ್‌ : 8 ಮಂದಿಯ ಆರೋಪ ಸಾಬೀತು

Thursday, March 12th, 2020
Honey trap

ಮಂಗಳೂರು :  ನಗರದ ಬಳ್ಳಾಲ್‌ಬಾಗ್‌ನ ಪ್ಲ್ಯಾಟ್‌ ಒಂದರಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಒಬ್ಬರನ್ನು ಹನಿಟ್ಯ್ರಾಪ್‌ ಮೂಲಕ ಬ್ಲ್ಯಾಕ್‌ ಮೇಲ್‌ ಮಾಡಿ ಹಣ ದೋಚಲು ಯತ್ನಿಸಿದ ಪ್ರಕರಣದಲ್ಲಿ ಇಬ್ಬರು ಯುವತಿಯರು ಸಹಿತ 8 ಮಂದಿಯ ಮೇಲಿದ್ದ ಆರೋಪವು ಮಂಗಳೂರಿನ ನಾಲ್ಕನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆರೋಪಿಗಳಿಗೆ ಮೂರು ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 6,000 ರೂಪಾಯಿ ದಂಡ ವಿಧಿಸಲಾಗಿದೆ. ಕೊಣಾಜೆಯ ಶಿಲ್ಪಾ (27), ಎಲ್ಯಾರ್‌ಪದವಿನ ಅವಿನಾಶ್‌ (25), ಕುತ್ತರಾ‌ ಪದವಿನ ರಂಜಿತ್‌(23) ಹಾಗೂ ಯತೀಶ್‌ […]

ಮೇಲಾಧಿಕಾರಿಗಳ ಕಿರುಕುಳಕ್ಕೆ ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆಗೆ ಶರಣು

Saturday, October 19th, 2019
anil

ಶಿವಮೊಗ್ಗ : ಮೇಲಾಧಿಕಾರಿಗಳ ಕಿರುಕುಳದಿಂದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಮ್ಯಾನೇಜರ್ ಒಬ್ಬರು ಆತ್ಮಹತ್ಯೆ ಶರಣಾಗಿದ್ದಾರೆ. ಜೋಗಫಾಲ್ಸ್ ಎಸ್‍ಬಿಐ ಶಾಖೆಯ ಅನಿಲ್ ಕುಮಾರ್ (35) ಆತ್ಮಹತ್ಯೆ ಮಾಡಿಕೊಂಡ ಮ್ಯಾನೇಜರ್. ಮೃತ ಅನಿಲ್ ಕುಮಾರ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅನಿಲ್ ಕುಮಾರ್ ಕೆಲಸದ ಒತ್ತಡದಿಂದ ಮಾನಸಿಕವಾಗಿ ಕುಂದಿದ್ದರು. ಕಳೆದ ಎರಡು ದಿನಗಳಿಂದ ರಜೆಯಲ್ಲಿದ್ದ ಅವರು ಇಂದು ಬ್ಯಾಂಕ್‍ಗೆ ಹೋಗಿ ಬಾಗಿಲು ತೆರೆದಿದ್ದರು. ಆದರೆ ಸ್ವಲ್ಪ ಸಮಯದ ಬಳಿಕ ಮನೆಗೆ ವಾಪಸ್ ಆಗಿದ್ದರು. ಬಳಿಕ ಪತ್ನಿಯನ್ನು ಮನೆಯಿಂದ […]

ಮೂಲ್ಕಿಯ ಭಾರತ್ ಬ್ಯಾಂಕ್ ಮ್ಯಾನೇಜರ್ ತೀವ್ರ ಜ್ವರದಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವು

Monday, February 13th, 2017
Lakshminarayana-C-Saliyan

ಮಂಗಳೂರು:ತೀವ್ರ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಮೂಲ್ಕಿಯಲ್ಲಿ ನಡೆದಿದ್ದು, ಹೆಚ್1ಎನ್1 ಸೋಂಕಿನಿಂದ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಮೂಲ್ಕಿಯ ಭಾರತ್ ಬ್ಯಾಂಕ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಉಡುಪಿ ಹೆಜಮಾಡಿಯ ಲಕ್ಷ್ಮೀನಾರಾಯಣ ಎಂಬುವರೆ ಹೆ ಚ್1ಎನ್1ಗೆ ಬಲಿಯಾದವರು. ಇವರು ಕಳೆದ 15 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಪ್ರಾರಂಭದಲ್ಲಿ ಮೂಲ್ಕಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಜ್ವರ ಉಲ್ಬಣಿಸಿದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲಕ್ಷ್ಮೀನಾರಾಯಣ ಹೆಚ್1ಎನ್1ನಿಂದ ಬಳಲುತ್ತಿರುವ ಶಂಕೆಯಿದ್ದು, ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ನಿರೀಕ್ಷಿಸಲಾಗುತ್ತಿದೆ.

ಉಸಿರುಗಟ್ಟಿಸಿ ಬ್ಯಾಂಕ್ ಮ್ಯಾನೇಜರ್ ಕೊಲೆ

Monday, September 26th, 2011
BANK MANAGER

ಬೆಂಗಳೂರು : ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಅವರು ವಾಸವಾಗಿರುವ ಮನೆಯಲ್ಲೇ ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಘಟನೆ ಶನಿವಾರ ರಾತ್ರಿ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಓರಿಯೆಂಟಲ್ ಬ್ಯಾಂಕ್ ನಲ್ಲಿ ಚೀಫ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪಡುಕೋಣೆ ಮೂಲದ ಶಂಕರ್ ಪೂಜಾರಿ (55) ಅವರ ಕೊಲೆ ನಡೆದಿರುವುದು ಬೆಳಕಿಗೆ ಬಂದಿದ್ದು, ಭಾನುವಾರ ರಾತ್ರಿ ವೇಳೆಗೆ ಕೊಲೆ ನಡೆದಿರಬಹುದು ಎಂದು ಡೆಪ್ಯುಟಿ ಕಮಿಷನರ್ ಸೋನಿಯಾ ನಾರಂಗ್ ತಿಳಿಸಿದ್ದಾರೆ. ಕೊಲೆಯನ್ನು ಪೂಜಾರಿಗೆ ಬಲ್ಲವರೇ ಮಾಡಿರಬಹುದೆಂದು ಶಂಕಿಸಲಾಗಿದ್ದು. ಹೊರಬಾಗಿಲಿಗೆ ಒಳಗಿನಿಂದ […]