ಶ್ರೀ ದುರ್ಗಾಪರಮೇಶ್ವರಿ ಕಟೀಲಿನಲ್ಲಿ ಪವಿತ್ರ ಬ್ರಹ್ಮಕಲಶಾಭಿಷೇಕದ ವೈಭವ

Friday, January 31st, 2020
kateel

ಮಂಗಳೂರು : ಭಕ್ತರ ಇಷ್ಟಾರ್ಥ ಗಳನ್ನು ಕರುಣಿಸುವ ಮಹಾಮಾತೆ, ನಂದಿನಿ ನದಿಯ ಮಡಿಲಲ್ಲಿ ಪವಡಿಸಿದ ಸಾವಿರ ಸೀಮೆಯ ಆದಿಮಾಯೆ, ಭ್ರಾಮರಿ ಅವತಾರಿಣಿ ಶ್ರೀ ದುರ್ಗಾಪರಮೇಶ್ವರಿಗೆ ಗುರುವಾರ ಪರಮ ಪವಿತ್ರ ಬ್ರಹ್ಮ ಕಲಶೋತ್ಸವ ವೈಭವದಿಂದ ನೆರವೇರಿತು. ಈ ಪುಣ್ಯ ಸಂಭ್ರಮವನ್ನು ಸಹಸ್ರಾರು ಭಕ್ತರು ಕಣ್ತುಂಬಿ ಕೊಂಡು ಭಕ್ತಿಭಾವದಿಂದ ಪುನೀತರಾದರು. ಸೂರ್ಯೋದಯಕ್ಕೆ ಮುನ್ನವೇ ವೈದಿಕ ವಿಧಿ ವಿಧಾನಗಳು ಆರಂಭವಾದವು. ಹಲವು ಭಕ್ತರು ನೇರವಾಗಿ ವೀಕ್ಷಿಸಿದರೆ, ಲಕ್ಷಾಂತರ ಮಂದಿ ಕ್ಷೇತ್ರದ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಎಲ್‌ಇಡಿ ಪರದೆ ಮತ್ತು ಸ್ಥಳೀಯ ವಾಹಿನಿಗಳ ನೇರಪ್ರಸಾರದ […]

ಜನವರಿ 16 ರಂದು ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರ ನಾಣ್ಯ ದಲ್ಲಿ ಶ್ರೀ ಅಷ್ಟ ಪವಿತ್ರ ನಾಗ ಮಂಡಲ ಪುಣ್ಯೋತ್ಸವ ಹಾಗೂ ಬ್ರಹ್ಮಕಲಶಾಭಿಷೇಕ

Tuesday, January 14th, 2020
nanya

ಮಂಗಳೂರು : ಶ್ರೀ ಅಷ್ಟ ಪವಿತ್ರ ನಾಗ ಮಂಡಲ ಪುಣ್ಯೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರ ನಾಣ್ಯ ಇಲ್ಲಿ ಜನವರಿ 16 ರಂದು ಬೆಳಿಗ್ಗೆ 6  ರಿಂದ ವೇದಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಸಾನಿಧ್ಯ ವೃದ್ಧಿ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವ ನಡೆಯಲಿದೆ. ರಾತ್ರಿ 9.30 ನಾಗಬನದಲ್ಲಿ ಹಾಲಿಟ್ಟು ಬಳಿಕ ರಾತ್ರಿ 11.30 ರಿಂದ ನಾಗಪಾತ್ರಿಗಳಾದ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗ ಮತ್ತು ಮುದ್ದೂರು ಶ್ರೀ ಕೃಷ್ಣಪ್ರಸಾದ್ ವೈದ್ಯ ಮತ್ತು ಬಳಗದವರಿಂದ ಅಷ್ಟ ಪವಿತ್ರ ನಾಗಮಂಡಲ ಪುಣ್ಯೋತ್ಸವ ನಡೆಯಲಿದೆ. ಜನವರಿ 17 ರಂದು ಸಂಜೆ 7 […]

ಕದ್ರಿ ಶ್ರೀ ಮಂಜುನಾಥ ದೇವರಿಗೆ ಸಂಭ್ರಮದ ಬ್ರಹ್ಮಕಲಶಾಭಿಷೇಕ

Saturday, May 11th, 2019
Kadri Manjunatha

ಮಹಾನಗರ: ಕದ್ರಿ ಮಠಾಧೀಶ ಶ್ರೀ ರಾಜಾ ನಿರ್ಮಲ ನಾಥ್‌ ಜೀ ಅವರ ಉಪಸ್ಥಿತಿ ಯಲ್ಲಿ ದೇರೆ ಬೈಲ್‌ ಬ್ರಹ್ಮಶ್ರೀ ವಿಟಲದಾಸ್‌ ತಂತ್ರಿಯವರ ನೇತೃತ್ವದಲ್ಲಿ ಕದ್ರಿ ಶ್ರೀ ಮಂಜುನಾಥ ದೇವರಿಗೆ  ಬೆಳಗ್ಗೆ 7 ಗಂಟೆಯಿಂದಲೇ ಕಲಶಾಭಿಷೇಕ ಪ್ರಾರಂಭವಾಗಿ, 9.35ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ಗುರುವಾರ ನಡೆಯಿತು. ಬಳಿಕ ಪ್ರಾಚೀನ ಮೂರ್ತಿಗಳಿಗೆ ವಿಶೇಷ ಕಲಶಾಭಿಷೇಕ, ಅವಸ್ರುತ ಬಲಿ ಜರಗಿ ಶ್ರೀ ದೇವರಿಗೆ ಮಹಾ ಪೂಜೆ ನಡೆ ಯಿತು. ಸಹಸ್ರಾರು ಭಕ್ತರು ಬ್ರಹ್ಮಕಲ ಶಾಭಿಷೇಕವನ್ನು ಕಣ್ತುಂಬಿಕೊಂಡು ಶ್ರೀ ದೇವರ ದರ್ಶನ ಪಡೆದರು. […]

ಕುಡುಪು ಶ್ರೀ ಅನಂತ ಪದ್ಮನಾಭ ದೇವರಿಗೆ ಶತಮಾನದ ವೈಭವದ ಬ್ರಹ್ಮಕಲಶಾಭಿಷೇಕ

Sunday, February 25th, 2018
kudupu

ಮಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧಾನಾ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನವು ಸಮಗ್ರವಾಗಿ ೯ ಕೋಟಿ ರುಪಾಯಿ ವೆಚ್ಛದಲ್ಲಿ ಜೀರ್ಣೋದ್ಧಾರಗೊಂಡಿದ್ದು, ಈ ಶತಮಾನದಲ್ಲಿ ಕಂಡರಿಯದ ವಿಶೇಷವಾದ ಬ್ರಹ್ಮಕಲಶಾಭಿಷೇಕವು ಶ್ರೀ ಅನಂತಪದ್ಮನಾಭ ದೇವರಿಗೆ ಪೂರ್ವಾಹ್ನ 6.45 ರಿಂದ 7.45 ರ ಸಮಯ ಒದಗುವ ಕುಂಭ ಲಗ್ನ ಸುಮೂಹೂರ್ತದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ಸಂಪನ್ನಗೊಂಡಿತ್ತು. ಮುಂಜಾನೆ ನಾಲ್ಕು ಗಂಟೆಯಿಂದ ಶ್ರೀ ದೇವರಿಗೆ ಕಲಶಾಭಿಷೇಕ ಪ್ರಾರಂಭಗೊಂಡು ಬ್ರಹ್ಮಕಲಶಾಭಿಷೇಕ ಪ್ರಕ್ರಿಯೆಯ ಕೊನೆಯ ಭಾಗವಾದ ಪ್ರಧಾನ ಚಿನ್ನದ ಕಲಶದಲ್ಲಿರುವ […]