ಅಂತ್ಯಕ್ರಿಯೆಯನ್ನು ನಡೆಸಲು ಒಂದು ಲಕ್ಷ ರೂ. ಇಟ್ಟು ಆತ್ಮಹತ್ಯೆ ಮಾಡಿಕೊಂಡ ದಂಪತಿ

Tuesday, August 17th, 2021
chitrapura-suicide

ಮಂಗಳೂರು  :  ದಂಪತಿಗಳಿಬ್ಬರು ಡೆತ್ ನೋಟ್ ಬರೆದಿಟ್ಟು, ಮಂಗಳೂರು ಪೊಲೀಸ್ ಕಮಿಷನರ್ ಗೆ ಫೋನ್ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಕುಳಾಯಿ ಚಿತ್ರಾಪುರಯಲ್ಲಿ ರೆಹಜಾ ಅಪಾರ್ಟ್ ಮೆಂಟ್ ನಲ್ಲಿ ಮಂಗಳವಾರ ಬೆಳಗ್ಗೆ  ನಡೆದಿದೆ. ಮೃತರನ್ನು ರಮೇಶ್ ಸುವರ್ಣ ಮತ್ತು ಗುಣವತಿ ಸುವರ್ಣ ಎಂದು ಗುರುತಿಸಲಾಗಿದೆ. ಕೋವಿಡ್-19 ಸೋಂಕು ಮತ್ತು ಬ್ಲ್ಯಾಕ್ ಫಂಗಸ್ ಗೆ ಹೆದರಿ ಮೊದಲು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು ಬಳಿಕ ಪತಿಯೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮೊದಲು ಪತಿ ರಮೇಶ್ ಸುವರ್ಣ ಮಂಗಳೂರು ಪೊಲೀಸ್ ಆಯುಕ್ತ […]

ದ.ಕ. ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್‌ಗೆ ಬಲಿಯಾದವರ ಸಂಖ್ಯೆ 20ಕ್ಕೇರಿಕೆ

Thursday, July 1st, 2021
black fungus

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್‌ಗೆ ಬಲಿಯಾದ ಸಂಖ್ಯೆ 20ಕ್ಕೇರಿದೆ. ಇದರಲ್ಲಿ ದ.ಕ.ಜಿಲ್ಲೆಯ 5 ಮತ್ತು ಹೊರಜಿಲ್ಲೆಯ 15 ಮಂದಿ ಸೇರಿದ್ದಾರೆ. ಬುಧವಾರ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್‌ ಗೆ ಓರ್ವ ಬಲಿಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 26 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 7 ದ.ಕ. ಜಿಲ್ಲೆಗೆ ಮತ್ತು 19 ಮಂದಿ ಹೊರಜಿಲ್ಲೆಗೆ ಸೇರಿದವರಾಗಿದ್ದಾರೆ. ಈವರೆಗೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡವರ ಸಂಖ್ಯೆ 36ಕ್ಕೇರಿದೆ.

ದ.ಕ. ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಸಕ್ರಿಯ ಪ್ರಕರಣಗಳ ಸಂಖ್ಯೆ 45 ಕ್ಕೆ ಏರಿಕೆ, ಇಬ್ಬರು ಬಲಿ

Saturday, June 12th, 2021
Black Fungus

ಮಂಗಳೂರು : ದ.ಕ. ಜಿಲ್ಲೆಯಲ್ಲಿ  ಬ್ಲ್ಯಾಕ್ ಫಂಗಸ್ ಸಕ್ರಿಯ ಪ್ರಕರಣಗಳ ಸಂಖ್ಯೆ  45 ಕ್ಕೆ ಏರಿದೆ.  ಶನಿವಾರ ಹೊಸತಾಗಿ 2 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ. ಇಬ್ಬರು ಬಲಿಯಾಗಿದ್ದಾರೆ. ಪತ್ತೆಯಾದ ಎರಡು ಹೊಸ ಪ್ರಕರಣವು ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದ್ದಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಬ್ಲ್ಯಾಕ್ ಫಂಗಸ್ ಗೆ ಇಬ್ಬರು ಬಲಿಯಾಗಿದ್ದು  ಒಬ್ಬರು ಚಿಕ್ಕಮಗಳೂರಿನವರು ಮತ್ತು ಇನ್ನೊಬ್ಬರು ಹಾಸನ ಜಿಲ್ಲೆಗೆ ಸೇರಿದವರಾಗಿದ್ದಾರೆ.  ದ.ಕ.ಜಿಲ್ಲೆಯ ಇಬ್ಬರು ಮತ್ತು ಹೊರ ಜಿಲ್ಲೆಯ 12 ಮಂದಿಯ ಸಹಿತ ಬ್ಲ್ಯಾಕ್ […]

ಲಂಡನ್ ನಿಂದ ಔಷಧ ತರಿಸಿ ಬ್ಲ್ಯಾಕ್ ಫಂಗಸ್ ರೋಗಿಗಳ ಪ್ರಾಣ ಉಳಿಸಿದ ಶಾಸಕ ಡಾ.ಭರತ್ ಶೆಟ್ಟಿ ವೈ

Tuesday, June 8th, 2021
bharath shetty

ಸುರತ್ಕಲ್ : ಉಳ್ಳವರು ಲಸಿಕೆಯನ್ನು ಮಿತವ್ಯಯ ದರ ನೀಡಿ ಹಾಕಿಕೊಂಡರೆ ಬಡವರಿಗೆ ಲಸಿಕೆ ಸಿಗಲು ಸಾಧ್ಯವಿದ್ದು,ಈ ನಿಟ್ಟಿನಲ್ಲಿ ಲಾರ್ಡ್ ಕೃಷ್ಣ ಎಸ್ಟೇಟ್ ನಿವಾಸಿಗಳು ಮಾಡಿರುವ ಲಸಿಕೆ ಅಭಿಯಾನ ಮಾದರಿಯಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು. ಇಲ್ಲಿನ ವೆಲ್ಫೇರ್ ಎಸೋಸಿಯೇಷನ್ ಆಯೋಜಿಸಿದ ಲಸಿಕೆ ಅಭಿಯಾನದಲ್ಲಿ ಮಾತನಾಡಿದ ಅವರು ಲಸಿಕೆ ಪಡೆದುಕೊಂಡರೂ ಕೋವಿಡ್ ಬರುವ ಸಾಧ್ಯತೆಯಿದ್ದರೂ ಜೀವಕ್ಕೆ ಹಾನಿಯಾದ ಪ್ರಕರಣಗಳು ವರದಿ ಆಗಿಲ್ಲ. ಹೀಗಾಗಿ ಲಸಿಕೆ ಪಡೆದುಕೊಳ್ಳುವುದು ಅಗತ್ಯ ಎಂದು ನುಡಿದರು. . ಆರ್ ಎಸ್ ಎಸ್ ಮುಖಂಡರಾದ ಪ್ರಕಾಶ್ […]

ದ.ಕ. ಜಿಲ್ಲೆಯಲ್ಲಿ4 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆ

Saturday, June 5th, 2021
black fungus

ಮಂಗಳೂರು : ಕೊರೋನಾ ಸೋಂಕು ಸಕ್ರಿಯವಾಗಿರುವಾಗಲೇ ಮತ್ತೊಂದು ಅಪಾಯಕಾರಿ ರೋಗ ಬ್ಲ್ಯಾಕ್ ಫಂಗಸ್ ಜನರನ್ನು ಕಾಡುತ್ತಿದೆ.  ಗುರುವಾರ ದ.ಕ. ಜಿಲ್ಲೆಯಲ್ಲಿ4 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ. ದ.ಕ. ಜಿಲ್ಲೆಯ ಒಬ್ಬರು, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆ ಹಾಗೂ ಕೇರಳದ ತಲಾ ಒಬ್ಬರಿಗೆ ಈ ರೋಗ ತಗುಲಿದೆ. ಪ್ರಸ್ತುತ ದ.ಕ.ಜಿಲ್ಲೆಯಲ್ಲಿ ಸದ್ಯ 43 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಇದೆ. ಇದರಲ್ಲಿ 9 ದ.ಕ.ಜಿಲ್ಲೆಗೆ ಮತ್ತು 34 ಪ್ರಕರಣಗಳು ಹೊರಜಿಲ್ಲೆಗೆ ಸಂಬಂಧಿಸಿ ದ್ದಾಗಿದೆ. ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಒಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. […]

ಪ್ರತೀ ಜಿಲ್ಲೆಯಲ್ಲಿಯೂ ಬ್ಲ್ಯಾಕ್ ಫಂಗಸ್‍ಗೆ ಉಚಿತ ಚಿಕಿತ್ಸೆಗೆ ಕ್ರಮ : ಕೋಟ ಶ್ರೀನಿವಾಸ ಪೂಜಾರಿ

Wednesday, May 26th, 2021
srinivas Poojary

ಬೈಂದೂರು :   ಪ್ರತೀ ಜಿಲ್ಲೆಯಲ್ಲಿಯೂ ಬ್ಲ್ಯಾಕ್ ಫಂಗಸ್‍ಗೆ ಆಸ್ಪತ್ರೆ ವ್ಯವಸ್ಥೆಗೊಳಿಸಿ ಅಲ್ಲಿ ಉಚಿತ ಚಿಕಿತ್ಸೆಗೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶ ಮಾಡಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಬುಧವಾರ ಅವರು ಬೈಂದೂರು ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣ ಕಾರ್ಯಪಡೆಯ ಕಾರ್ಯನಿರ್ವಹಣೆಯ ಬಗ್ಗೆ ಪ್ರವಾಸ ಕೈಗೊಂಡು ಉಪ್ಪುಂದದಲ್ಲಿ ಸಭೆಯ ಬಳಿಕ ಮಾತನಾಡಿದರು. ಕೊರೊನಾ ನಿಯಂತ್ರಣದಲ್ಲಿ ಗ್ರಾಮ ಪಂಚಾಯತ್‍ಗಳಿಗೂ ಜವಾಬ್ದಾರಿ ನೀಡಿದೆ. ಕೊರೊನಾ ಸೋಂಕಿತರನ್ನು ಕರೆತರಲು ವಾಹನ ಖರೀದಿಸಲು ಪಂಚಾಯತ್‍ಗಳಿಗೂ ಅವಕಾಶ ನೀಡಿದೆ ಎಂದರು. ಪಂಚಾಯತ್ ಸದಸ್ಯರು ಟಾಸ್ಕ್‌‌ಫೋರ್ಸ್‌ ಸಮಿತಿ ಸದಸ್ಯರಾಗಿರುತ್ತಾರೆ. […]

ಬ್ಲ್ಯಾಕ್ ಫಂಗಸ್ ಗೆ ಚಿಕಿತ್ಸೆ ನೀಡಲು ಬೌರಿಂಗ್ ಆಸ್ಪತ್ರೆಯಲ್ಲಿ 100 ಹಾಸಿಗೆ ಮೀಸಲು

Monday, May 24th, 2021
R Ashoka

ಬೆಂಗಳೂರು : ಬ್ಲ್ಯಾಕ್ ಫಂಗಸ್ ಗೆ ತುತ್ತಾದವರಿಗೆ ಚಿಕಿತ್ಸೆ ನೀಡಲು ಬೌರಿಂಗ್ ಆಸ್ಪತ್ರೆಯಲ್ಲಿ ನೂರು ಹಾಸಿಗೆಗಳನ್ನ ಮೀಸಲಿಡಲಾಗುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ ತಿಳಿಸಿದರು. ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದರ ಜೊತೆಗೆ ಬ್ಲ್ಯಾಕ್ ಫಂಗಸ್‍ಗೆ ತುತ್ತಾದವರ ಜೊತೆ ವೀಡಿಯೋ ಸಂವಾದದ ಮೂಲಕ ಅವರ ಆರೊಗ್ಯ ವಿಚಾರಿಸಿದರು. ಆ ನಂತರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು,” ಮ್ಯೂಕೋರ್ ಮೈಕೊಸಿಸ್ ಕಾಯಿಲೆಗೆ ತುತ್ತಾದವರಿಗೆ ಚಿಕಿತ್ಸೆ ನೀಡಲು ಒಟ್ಟು 200 ಹಾಸಿಗೆಗಳನ್ನ ಮೀಸಲಿಡಲಾಗಿದೆ. ಅದರಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 100 ಹಾಸಿಗೆಗಳನ್ನ […]

ಬ್ಲ್ಯಾಕ್ ಫಂಗಸ್ ಹರಡುವಿಕೆಯನ್ನು ನಿಯಂತ್ರಿಸಲು ಕೇಂದ್ರದಿಂದ ಮಾರ್ಗಸೂಚಿ

Friday, May 21st, 2021
Black fungus

ನವದೆಹಲಿ : ಮ್ಯೂಕೋರ್ಮೈಕೋಸಿಸ್ – ಬ್ಲ್ಯಾಕ್ ಫಂಗಸ್ ಹರಡುವಿಕೆಯನ್ನು ನಿಯಂತ್ರಿಸಲು ಕೇಂದ್ರವು ಆಸ್ಪತ್ರೆಗಳಲ್ಲಿ ನೈರ್ಮಲ್ಯದ ಸಿದ್ಧತೆಯನ್ನು ಪರಿಶೀಲಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಬ್ಲ್ಯಾಕ್ ಫಂಗಸ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆಯ ಹೆಚ್ಚಳ ಕಂಡಿದೆ. ಕೋವಿಡ್ -19 ಆಸ್ಪತ್ರೆಗಳು ಮತ್ತು ಇತರ ಆರೋಗ್ಯ ಸೌಲಭ್ಯಗಳಲ್ಲಿ ಸೋಂಕು ನಿವಾರಣೆ ಮತ್ತು ನಿಯಂತ್ರಣ ಪದ್ಧತಿ ರೂಡಿಕೊಳ್ಳಲು ಹೇಳಿದೆ. ಆರೋಗ್ಯ ಸೌಲಭ್ಯಗಳಲ್ಲಿ ಸೋಂಕು ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಮಾರ್ಗಸೂಚಿಗಳಲ್ಲಿ ನೀಡಿರುವ ಮಾರ್ಗದರ್ಶನದಂತೆ ಆಸ್ಪತ್ರೆ / ಆರೋಗ್ಯ ಸೌಲಭ್ಯಗಳಲ್ಲಿ ಸೋಂಕು ತಡೆಗಟ್ಟುವಿಕೆ ನಿಯಂತ್ರಣ […]