ಭಾರತ್ ಬ್ಯಾಂಕ್, ನೂತನ ಕಾರ್ಯಾಧ್ಯಕ್ಷರಾಗಿ ಉಪ್ಪೂರು ಶಿವಾಜಿ ಪೂಜಾರಿ ಆಯ್ಕೆ

Monday, August 17th, 2020
shivaji-Poojary

ಮುಂಬಯಿ : ಮಹಾನಗರದ ಬಿಲ್ಲವರ ಅಸೋಷಿಯೇಶನ್ ಪ್ರಾಯೋಜಕತ್ವದ ಪ್ರತಿಷ್ಟಿತ ಭಾರತ್ ಕೋ ಅಪರೇಟಿವ್ ಬ್ಯಾಂಕಿನ ನೂತನ ಕಾರ್ಯಧ್ಯಕ್ಷರಾಗಿ ಉಪ್ಪೂರು ಶಿವಾಜಿ ಪೂಜಾರಿ ಅವರು ಆಯ್ಕೆಯಾಗಿದ್ದಾರೆ. ಬ್ಯಾಂಕಿಗ್ ಕ್ಷೇತ್ರದಲ್ಲಿ ಅಪಾರ ಅನುಭವವಿರುವ ಇವರು ಭಾರತ್ ಬ್ಯಾಂಕಿನ ನಿರ್ದೇಶಕರಾಗಿ ಧೀರ್ಘಕಾಲ ಸೇವೆ ಸಲ್ಲಿಸಿರುವರು. ಬ್ಯಾಂಕಿನ ಕಾಯ್ಯಾಧ್ಯಕ್ಷರಾದ ಜಯ ಸಿ ಸುವರ್ಣ ಇವರ ಉಪಸ್ಥಿತಿಯಲ್ಲಿ ಆಗಸ್ಟ್ 16ರಂದು ಬ್ಯಾಂಕಿನ ಕೇಂದ್ರ ಕಾರ್ಯಾಲಯದಲ್ಲಿ ಜರಗಿದ ಆಡಳಿತ ಮಂಡಳಿಯ ಸಭೆಯಲ್ಲಿ ಉಪ್ಪೂರು ಶಿವಾಜಿ ಪೂಜಾರಿ ಯವರನ್ನು ಆಯ್ಕೆಮಾಡಲಾಯಿತು. ಬ್ಯಾಂಕಿನ ಕಾರ್ಯಧ್ಯಕ್ಷರಾಗಿ ಸುದೀರ್ಘಕಾಲ ಅಧಿಕಾರ ವಹಿಸಿಕೊಂಡಿದ್ದು […]

ಭಾಸ್ಕರ್ ಎಂ ಸಾಲ್ಯಾನ್ ರಿಗೆ ಮಾತೃ ವಿಯೋಗ

Friday, July 31st, 2020
Kamala

ಮುಂಬಯಿ : ಭಾರತ್ ಬ್ಯಾಂಕಿನ ನಿರ್ದೇಶಕ ಭಾಸ್ಕರ್ ಎಂ ಸಾಲ್ಯಾನ್ ಅವರ ತಾಯಿ ಕಮಲಾ ಎಂ ಸಾಲ್ಯಾನ್ (82) ಜು. 30ರಂದು ಮೂಲ್ಕಿಯ ಸ್ವಗೃಹ ಕಮಲ ಸದನದಲ್ಲಿ ನಿಧನ ಹೊಂದಿದರು. ಮೃತರು ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷರೂ, ಬಿಲ್ಲವ ಸಮಾಜದ ಮುಖಂಡರಾದ ಜಯ ಸಿ. ಸುವರ್ಣರ ಹಿರಿಯ ಸಹೋದರಿ. ಸಮಾಜ ಸೇವಕ ದಿ. ಮುದ್ದು ಸಾಲ್ಯಾನ್ ಅವರ ಧರ್ಮಪತ್ನಿ. ಕಮಲಾ ಎಂ ಸಾಲ್ಯಾನ್ ಇವರು ಮಕ್ಕಳಾದ ತಾರಾ ಡಾ. ಜಗನ್ನಾಥ್, ಶಶೀಂದ್ರ ಎಂ ಸಾಲ್ಯಾನ್, ರವಿ. ಎಂ ಸಾಲ್ಯಾನ್, […]

ಭಾರತ್ ಬ್ಯಾಂಕ್ – ಜಯಂತ್ ಎನ್ ಪೂಜಾರಿ ಸೇವಾ ನಿವೃತ್ತಿ

Tuesday, February 4th, 2020
bharat-bank

ಮುಂಬಯಿ : ಕಳೆದ 33ವರ್ಷಗಳಿಂದ ಭಾರತ್ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸುತ್ತಿದ್ದು ಇದೀಗ ಬ್ಯಾಂಕ್ ನ ಬಾಂಡುಪು ವಿಲೇಜ್ ಶಾಖೆಯಲ್ಲಿ ಹಿರಿಯ ಪ್ರಭಂದಕರಾಗಿ ಸೇವೆ ಸಲ್ಲಿಸುತ್ತಿದ್ದ ಸೆವಾನಿವೃತ್ತರಾಗಿದ್ದು ಜ. 31ರಂದು ಇವರನ್ನು ಗೌರವಿಸಿ ವಿದಾಯವನ್ನು ನೀಡುವ ಕಾರ್ಯಕ್ರಮವು ಬ್ಯಾಂಕಿನ ಗೋರೆಗಾಂವ್ ಕೇಂದ್ರ ಕಚೇರಿಯಲ್ಲಿ ಜರಗಿತು. ಈ ಸಮಾರಂಭದಲ್ಲಿ ಭಾರತ್ ಬ್ಯಾಂಕ್ ನ ಆಡಳಿತ ನಿರ್ದೇಶಕ ಸಿ. ಆರ್. ಮೂಲ್ಕಿ, ಮುಖ್ಯ ಮಹಾ ಪ್ರಭಂದಕ ವಿದ್ಯಾನಂದ ಎಸ್ ಕರ್ಕೇರ, ಇತರ ಉನ್ನತಾಧಿಕಾರಿಗಳಾದ ದಿನೇಶ್ ಬಿ. ಸಾಲ್ಯಾನ್, ನಿತ್ಯಾನಂದ ಎಸ್. […]

ಮೂಲ್ಕಿಯ ಭಾರತ್ ಬ್ಯಾಂಕ್ ಮ್ಯಾನೇಜರ್ ತೀವ್ರ ಜ್ವರದಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವು

Monday, February 13th, 2017
Lakshminarayana-C-Saliyan

ಮಂಗಳೂರು:ತೀವ್ರ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಮೂಲ್ಕಿಯಲ್ಲಿ ನಡೆದಿದ್ದು, ಹೆಚ್1ಎನ್1 ಸೋಂಕಿನಿಂದ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಮೂಲ್ಕಿಯ ಭಾರತ್ ಬ್ಯಾಂಕ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಉಡುಪಿ ಹೆಜಮಾಡಿಯ ಲಕ್ಷ್ಮೀನಾರಾಯಣ ಎಂಬುವರೆ ಹೆ ಚ್1ಎನ್1ಗೆ ಬಲಿಯಾದವರು. ಇವರು ಕಳೆದ 15 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಪ್ರಾರಂಭದಲ್ಲಿ ಮೂಲ್ಕಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಜ್ವರ ಉಲ್ಬಣಿಸಿದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲಕ್ಷ್ಮೀನಾರಾಯಣ ಹೆಚ್1ಎನ್1ನಿಂದ ಬಳಲುತ್ತಿರುವ ಶಂಕೆಯಿದ್ದು, ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ನಿರೀಕ್ಷಿಸಲಾಗುತ್ತಿದೆ.