ಭಾರತ ತಂಡದಲ್ಲಿ ಮಲೇಶ್ಯಾದಲ್ಲಿ ಮಿಂಚಿದ ಮುಳ್ಳೇರಿಯಾದ ಪ್ರತಿಭೆ

Thursday, December 29th, 2016
throw ball

ಮುಳ್ಳೇರಿಯ : ಮಲೇಶ್ಯಾದ ಸೆಲಂಗಾರ್ ಬಿದಾರಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಅಂತರಾಷ್ಟ್ರೀಯ ಮಟ್ಟದ ವನಿತಾ ಜೂನಿಯರ್ ಏಷ್ಯನ್ ತ್ರೋಬಾಲ್ ಚಾಂಪಿಯನ್ಶಿಪ್ ಪೈನಲ್ ಪಂದ್ಯಾಟದಲ್ಲಿ ಭಾರತ ತಂಡವು ಪಾಕಿಸ್ತಾನ ತಂಡವನ್ನು 2-0 ನೇರ ಸೆಟ್ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿದೆ. ಬುಧವಾರದಂದು ನಡೆದ ಲೀಗ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ತನ್ನ ಮೊದಲ ಸುತ್ತಿನಲ್ಲಿ 25-8 ಹಾಗೂ ದ್ವಿತೀಯ ಸುತ್ತಿನಲ್ಲಿ 25-9 ಅಂಕಗಳನ್ನು ಗಳಿಸಿ ಪಾಕಿಸ್ತಾನವನ್ನು ಸೋಲಿಸಿದ್ದರು. ಇದರ ಆತ್ಮವಿಶ್ವಾಸದಲ್ಲಿ ಮತ್ತೆ ಪೈನಲ್ ಪಂದ್ಯದಲ್ಲಿ ಕಣಕಿಳಿದ ಭಾರತೀಯ ವನಿತೆಯರು […]

ರಿಯೋ ಒಲಿಂಪಿಕ್ಸ್‌ಗೆ ಆಳ್ವಾಸ್ ಕಾಲೇಜಿನ ಕ್ರೀಡಾಪಟು ಧರುಣ್ ಅಯ್ಯ ಸ್ವಾಮಿ ಆಯ್ಕೆ

Wednesday, July 27th, 2016
Alwas Student

ಮಂಗಳೂರು: ಆಗಸ್ಟ್ 5ರಿಂದ ಆರಂಭಗೊಳ್ಳಲಿರುವ ರಿಯೋ ಒಲಿಂಪಿಕ್ಸ್‌ಗೆ ಆಳ್ವಾಸ್ ಕಾಲೇಜಿನ ಕ್ರೀಡಾಪಟು ಧರುಣ್ ಅಯ್ಯ ಸ್ವಾಮಿ ಅರ್ಹತೆ ಪಡೆದಿದ್ದಾರೆ. 4X400 ಮೀಟರ್ ರಿಲೇಯಲ್ಲಿ ಸ್ಪರ್ಧಿಸಲು ಭಾರತ ತಂಡವನ್ನು ಪ್ರತಿನಿಧಿಸಲಿರುವ 6 ಆಟಗಾರರ ಪೈಕಿ ಧರುಣ್ ಕೂಡಾ ಒಬ್ಬ. ಕಳೆದ ವರ್ಷದ ಅಖಿಲ ಭಾರತ ಅಥ್ಲೆಟಿಕ್ಸ್‌‌‌‌‌‌‌‌‌‌‌‌‌ 400 ಮೀಟರ್ ಓಟದಲ್ಲಿ ಚಿನ್ನ, ಹರ್ಡಲ್ಸ್‌‌‌‌‌‌‌‌‌‌‌‌‌‌‌‌‌‌‌‌‌ನಲ್ಲಿ ಕೂಟ ದಾಖಲೆ ಮತ್ತು ಚಿನ್ನ ಗೆದ್ದು ದಾಖಲೆ ನಿರ್ಮಿಸಿದ್ದಾರೆ. 400 ಮೀಟರ್ ಓಟವನ್ನು 46.31 ಸೆಕೆಂಡ್‌‌ನಲ್ಲಿ ಗುರಿ ಮುಟ್ಟಿರುವುದು ಧರುಣ್ ಸಾಧನೆಯಾಗಿದೆ. ಮೂಲತ: ತಮಿಳುನಾಡಿನವರಾದ […]

ಅನಂತಪದ್ಮನಾಭ ಉಪಾಧ್ಯಾಯ ಸಂಸ್ಮರಣಾ ಸಮಾರಂಭ

Friday, February 5th, 2016
Kollangana

ಬದಿಯಡ್ಕ: ಬ್ರಹ್ಮಶ್ರೀ ತಂತ್ರ ವಿದ್ಯಾತಿಲಕ ತಂತ್ರಿ ಅನಂತಪದ್ಮನಾಭ ಉಪಾಧ್ಯಾಯ ಕೊಲ್ಲಂಗಾನ ಅವರ ೧೨ನೇ ಸಂಸ್ಮರಣಾ ಸಮಾರಂಭವು ಮಂಗಳವಾರ ರಾತ್ರಿ ನೀರ್ಚಾಲು ಬಳಿಯ ಕೊಲ್ಲಂಗಾನ ಶ್ರೀನಿಲಯದಲ್ಲಿ ಜರಗಿತು. ಯಕ್ಷಗಾನ ಕಲಾವಿದ ರವಿ ಅಲೆವೂರಾಯ ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಂತ್ರಿವರ್ಯ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಸಹಿತ ಹಲವಾರು ಮಂದಿ ಪ್ರಮುಖರು ಭಾಗವಹಿಸಿದ್ದರು. ಇದೇ ವೇಳೆ ಬ್ರಹ್ಮಶ್ರೀ ವೇದಮೂರ್ತಿ ಚಂದ್ರಶೇಖರ ಭಟ್ ಕುರೋಮೂಲೆ ಕರೋಪಾಡಿ ಅವರನ್ನು ಗೌರವಿಸಲಾಯಿತು.