ಒಂದೇ ದಿನದ ಮಳೆಗೆ 16 ಮನೆಗಳು ಸಂಪೂರ್ಣ ನಾಶ, 41.38 ಲಕ್ಷ ರೂ.ನಷ್ಟ: ಮೇಯರ್ ಭಾಸ್ಕರ ಮೊಯ್ಲಿ

Friday, June 1st, 2018
bhaskar-moily

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಂಗಳವಾರ ಸುಮಾರು 4 ಗಂಟೆಗಳ 215 ಮಿ.ಮೀ. ಅನಿರೀಕ್ಷಿತ ಮಳೆಯಾಗಿದ್ದು, ಇದರಿಂದ 16 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಪಾಲಿಕೆಯಲ್ಲಿ ಮನೆಗಳ ಹಾನಿಯಿಂದ ಒಟ್ಟು ಅಂದಾಜು 41,38,000 ರೂ. ನಷ್ಟವಾಗಿದೆ ಎಂದು ಮೇಯರ್ ಭಾಸ್ಕರ ಮೊಯ್ಲಿ ತಿಳಿಸಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕೊಠಡಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಮಳೆಯಿಂದ ಆರು ಮನೆಗಳು ತೀವ್ರ ಹಾನಿಗೊಳಗಾಗಿದ್ದು, 18 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದರು. ಮಂಗಳವಾರ ಸುರಿದ ಮಳೆ ಕಳೆದ 12 […]

ದ.ಕ.ಜಿಲ್ಲೆಯ 8 ಕ್ಷೇತ್ರದಲ್ಲೂ ಕಾಂಗ್ರೆಸ್‌ಗೆ ಗೆಲುವು: ಜನಾರ್ದನ ಪೂಜಾರಿ

Wednesday, May 9th, 2018
j-r-lobo

ಮಂಗಳೂರು: ದ.ಕ. ಜಿಲ್ಲೆಯ 8 ಕ್ಷೇತ್ರದಲ್ಲೂ ಕೂಡ ಕಾಂಗ್ರೆಸ್ ಸ್ಪಷ್ಟ ಗೆಲುವು ಸಾಧಿಸಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಹೇಳಿದರು. ನಗರದ ಕದ್ರಿಯಲ್ಲಿರುವ ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ 7 ಸ್ಥಾನಗಳನ್ನು ಗೆದ್ದಿದ್ದರೆ ಈ ಬಾರಿ 8 ಸ್ಥಾನವನ್ನೂ ಗೆಲ್ಲಲಿದೆ. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಶಕ್ತಿಮೀರಿ ಶ್ರಮಿಸಲಿದ್ದಾರೆ ಎಂದರು. ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಜೆ.ಆರ್.ಲೋಬೊ ವಿರುದ್ಧ ತೀವ್ರ ಅಪಪ್ರಚಾರ ಮಾಡಲಾಗುತ್ತಿದೆ. ಇದು […]

ಭಾಸ್ಕರ ಮೊಯ್ಲಿ ಮಂಗಳೂರು ನೂತನ ಮೇಯರ್, ಮುಹಮ್ಮದ್ ಕುಂಜತ್ತಬೈಲ್ ಉಪ ಮೇಯರ್

Thursday, March 8th, 2018
upa-mayor

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಪ್ರಸಕ್ತ ಸಾಲಿನ ಕೊನೆಯ ಅವಧಿಯ ಮೇಯರ್ ಆಗಿ ಭಾಸ್ಕರ ಮೊಯ್ಲಿ ಹಾಗೂ ಉಪ ಮೇಯರ್ ಆಗಿ ಮುಹಮ್ಮದ್ ಕುಂಜತ್ತಬೈಲ್ ಆಯ್ಕೆಯಾಗಿದ್ದಾರೆ. ಇಂದು ಮಧ್ಯಾಹ್ನ ನಡೆದ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಭಾಸ್ಕರ ಕೆ. ಮೊಯ್ಲಿ 3 ಸೆಟ್‌ಗಳಲ್ಲಿ ಹಾಗೂ ಬಿಜೆಪಿಯಿಂದ ಸುರೇಂದ್ರ ನಾಮಪತ್ರ ಸಲ್ಲಿಸಿದ್ದರು. ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಮುಹಮ್ಮದ್ ಕುಂಜತ್ತಬೈಲ್ ಹಾಗೂ ಬಿಜೆಪಿಯಿಂದ ಮೀರಾ ಕರ್ಕೇರ ನಾಮಪತ್ರ ಸಲ್ಲಿಸಿದ್ದರು. ವಿಧಾನ ಪರಿಷತ್ ಸದಸ್ಯ, ಶಾಸಕರು ಸೇರಿದಂತೆ ಚುನಾವಣೆಯಲ್ಲಿ […]

ಮಂಗಳೂರು ಮೇಯರ್ ಅಭ್ಯರ್ಥಿ ಆಯ್ಕೆ ಬಿಕ್ಕಟ್ಟು ಅಂತ್ಯ: ಅಭ್ಯರ್ಥಿಯ ಹೆಸರು ಪ್ರಕಟ

Thursday, March 8th, 2018
bhasker-moily

ಮಂಗಳೂರು: ಮಹಾನಗರ ಪಾಲಿಕೆಯ ಮುಂದಿನ ಸಾಲಿನ ಮೇಯರ್ ಹುದ್ದೆಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಗೊಂದಲ ಕೊನೆಗೂ ಮುಕ್ತಾಯ ಕಂಡಿದ್ದು, ಹಿರಿಯ ಕಾರ್ಪೊರೇಟರ್ ಭಾಸ್ಕರ ಮೊಯ್ಲಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಉಪ ಮೇಯರ್ ಹುದ್ದೆಗೆ ಅಭ್ಯರ್ಥಿಯಾಗಿ ಮುಹಮ್ಮದ್ ಕುಂಜತ್ತಬೈಲ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕಾರ್ಪೊರೇಟರ್‌ಗಳನ್ನು ಹೊರಗಿಟ್ಟು ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಮೊಯ್ದಿನ್ ಬಾವ ಹಾಗೂ […]

ಯಾರಾಗಲಿದ್ದಾರೆ ಮಂಗಳೂರಿನ ನೂತನ ಮೇಯರ್?

Saturday, March 3rd, 2018
mayor

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ನಡುವೆ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ನಡೆಯಲಿರುವ ಚುನಾವಣೆ ಕುತೂಹಲ ಕೆರಳಿಸಿದೆ. ಮಾರ್ಚ್ 8ಕ್ಕೆ ಮೇಯರ್ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು ಕಾಂಗ್ರೆಸ್‌ ಹಿಡಿತದಲ್ಲಿರುವ ಪಾಲಿಕೆಯಲ್ಲಿ ಮಹಾಪೌರರ ಪಟ್ಟಕ್ಕೆ ಕೈ ಪಕ್ಷದಲ್ಲಿ ಲಾಬಿ ಜೋರಾಗಿದೆ. ಬಿಜೆಪಿಯ ‘ಮಂಗಳೂರು ಚಲೋ’ ಕರಪತ್ರದಲ್ಲಿ ಗೊಂದಲವೋ ಗೊಂದಲ ಮಂಗಳೂರು ಮಹಾನಗರ ಪಾಲಿಕೆಯ 60 ಸ್ಥಾನಗಳ ಪೈಕಿ 35 ಸ್ಥಾನಗಳು ಕಾಂಗ್ರೆಸ್ ಕೈಯಲ್ಲಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಅಂತಿಮಗೊಳಿಸುವ ಅಭ್ಯರ್ಥಿ ಮುಂದಿನ ಮೇಯರ್ ಆಗಲಿದ್ದಾರೆ. ಕಾಂಗ್ರೆಸ್ […]