ಮಂಗಳೂರು ವ್ಯಾಪ್ತಿಯ ಎಂಟು ಪೊಲೀಸರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ

Friday, November 20th, 2020
Police Medal

ಮಂಗಳೂರು : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಮತ್ತು ಎಸ್ಪಿ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ಸಲ್ಲಿಸಿದ ಎಂಟು ಮಂದಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಶುಕ್ರವಾರ ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು. ಪಶ್ಚಿಮ ವಲಯದ ಬೆರಳಚ್ಚು ವಿಭಾಗದ ಡಿವೈಎಸ್ಪಿ ಗೌರೀಶ್ ಎ.ಸಿ., ಪಣಂಬೂರು ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದು, ಪ್ರಸ್ತುತ ಬೆಂಗಳೂರು ವಿವೇಕ ನಗರ ಇನ್‌ಸ್ಪೆಕ್ಟರ್ ಆಗಿರುವ ರಫೀಕ್ ಕೆ.ಎಂ., ಸಿಸಿಬಿ ಎಎಸ್‌ಐ ಆಗಿರುವ ಹರೀಶ್ ಪದವಿನಂಗಡಿ, ಎನ್‌ಸಿಪಿಎಸ್‌ನ ಚಂದ್ರಶೇಖರ್, ಡಿಸಿಐಬಿನ ಉದಯ ರೈ ಮಂದಾರ, ಸಿಎಆರ್ ಹೆಡ್ ಕಾನ್‌ಸ್ಟೇಬಲ್ […]

ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ

Saturday, November 14th, 2020
MESCOM

ಮಂಗಳೂರು : ಕೇರಳ ಮೂಲದ ಉದ್ಯಮಿಯನ್ನು ಮನೆಯಲ್ಲೇ ಕೊಲೆಗೈದ ದುಷ್ಕರ್ಮಿಗಳು

Tuesday, November 3rd, 2020
Murder

ಮಂಗಳೂರು : ಕೇರಳ ಮೂಲದ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಚೂರಿಯಿಂದ ಹಾಡಹಗಲೇ ಇರಿದು ಹತ್ಯೆ ಮಾಡಿದ ಘಟನೆ ನಗರದ ಕಾವೂರಿನಲ್ಲಿ ಮಂಗಳವಾರ ನಡೆದಿದೆ. ಕಾವೂರು ಮಲ್ಲಿ ಲೇಔಟ್ ನಿವಾಸಿ ಸುರೇಂದ್ರನ್ (60) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಮೂಲತಃ ಕೇರಳದವರಾದ ಸುರೇಂದ್ರನ್ ಅವರು ಹಲವು ವರ್ಷಗಳಿಂದ ಕಾವೂರು ಮಲ್ಲಿ ಲೇಔಟ್‌ನಲ್ಲೇ ಸ್ವಂತ ಮನೆ ಮಾಡಿ ತನ್ನ ಪತ್ನಿ ಜತೆ ವಾಸಿಸುತ್ತಿದ್ದರು. ಮಂಗಳವಾರ ಸುರೇಂದ್ರನ್ ನಗರಕ್ಕೆ ಹೋಗಿದ್ದರೆ, ಅವರ ಪತ್ನಿ ಫಾರ್ಮ್ ಉದ್ಯಮ ವ್ಯವಹಾರ ನೋಡಿಕೊಳ್ಳಲು ತೆರಳಿದ್ದರು. ಮಧ್ಯಾಹ್ನ 1 […]

ಮಂಗಳೂರು ತಾಪಂ ಮಾಜಿ ಸದಸ್ಯನ ಮೇಲೆ ಕುಲಶೇಖರ ಬಳಿ ತಲವಾರು ದಾಳಿ

Tuesday, October 13th, 2020
Yusuf

ಮಂಗಳೂರು : ದುಷ್ಕರ್ಮಿಗಳ ತಂಡವೊಂದು ಉಳಾಯಿಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಮಂಗಳೂರು ತಾಪಂ ಮಾಜಿ ಸದಸ್ಯ ಯೂಸುಫ್ ಅವರ ಮೇಲೆ ತಲವಾರು ದಾಳಿ ನಡೆಸಿದ ಘಟನೆ ಕುಲಶೇಖರ ಬಳಿ ಸೋಮವಾರ ಸಂಜೆ ನಡೆದಿದೆ. ಗಾಯಗೊಂಡ ಯೂಸುಫ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತನ್ನ ಕಾರಿನಲ್ಲಿ ಮಂಗಳೂರಿನಿಂದ ಉಳಾಯಿಬೆಟ್ಡುವಿಗೆ ಯೂಸುಫ್ ಅವರು ತೆರಳುತ್ತಿದ್ದಾಗ ಕುಲಶೇಖರ ಬಳಿ ಬೈಕೊಂದು ಯೂಸುಫ್‌ರ ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ತಕ್ಷಣ ಯೂಸುಫ್‌ ತನ್ನ ಕಾರನ್ನು ನಿಲ್ಲಿಸಿ ಪ್ರಶ್ನಿಸಿದಾಗ ಬೈಕ್ ಸವಾರ […]

ಕಾಸರಗೋಡು – ಮಂಗಳೂರು ಕೆ.ಎಸ್.ಆರ್.ಟಿ.ಸಿ ಅಂತರ್ ರಾಜ್ಯ ಬಸ್ ಸರ್ವಿಸ್ ಶೀಘ್ರ ಪ್ರಸ್ತಾಪಿಸುವಂತೆ ಆಗ್ರಹಿಸಿ ಮನವಿ

Saturday, September 26th, 2020
Manjeshwara Bjp

ಮಂಜೇಶ್ವರ:- ಕಾಸರಗೋಡು – ಮಂಗಳೂರು ಕೆ.ಎಸ್.ಆರ್.ಟಿ.ಸಿ ಅಂತರ್ ರಾಜ್ಯ ಬಸ್ ಸರ್ವಿಸ್ ಶೀಘ್ರ ಪುನಃ ಸ್ಥಾಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕೆ.ಎಸ್.ಆರ್.ಟಿ.ಸಿ ಮೆನೇಜಿಂಗ್ ಡೈರೆಕ್ಟರ್ ರವರಿಗೆ ಬಿಜೆಪಿ ಮಂಜೇಶ್ವರದ ನಿಯೋಗದವರು ಭೇಟಿಯಾಗಿ ಮನವಿ ಸಲ್ಲಿಸಿದರು. ಓಬಿಸಿ ಮೋರ್ಚಾ ಕೇರಳ ರಾಜ್ಯ ಕೋಶಾಧಿಕಾರಿ ನ್ಯಾಯವಾದಿ ನವೀನ್ ರಾಜ್ ಕೆ.ಜೆ ಯವರು ಮನವಿ ಸಲ್ಲಿಸಿದರು. ಈ ವೇಳೆ ಬಿಜೆಪಿ ಮಂಜೇಶ್ವರ ಮಂಡಲ ಉಪಾಧ್ಯಕ್ಷ ಪದ್ಮನಾಭ ಕಡಪ್ಪರ, ಪ್ರಧಾನ ಕಾರ್ಯದರ್ಶಿ ಆದರ್ಶ್ ಬಿ.ಎಂ, ಓಬಿಸಿ ಮೋರ್ಚಾ ಮಂಜೇಶ್ವರ ಪಂಚಾಯತ್ ಸಮಿತಿ ಪ್ರಧಾನ […]

ಡ್ರಗ್ಸ್‌ ಪ್ರಕರಣ ನಿರೂಪಕಿ ಅನುಶ್ರೀಗೆ ಮಂಗಳೂರು ಸಿಸಿಬಿ ಪೊಲೀಸರ ನೋಟಿಸ್‌

Thursday, September 24th, 2020
Anushree

ಮಂಗಳೂರು : ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ  ಡ್ಯಾನ್ಸರ್‌ ಕಿಶೋರ್ ಶೆಟ್ಟಿಯನ್ನು  ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ನಿರೂಪಕಿ, ನಟಿ ಅನುಶ್ರೀ ಅವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಡ್ರಗ್ಸ್ ವಿಚಾರದಲ್ಲಿ ತನಿಖೆಗಾಗಿ ಮಂಗಳೂರು 4- 5 ಸಿಸಿಬಿ ಪೊಲೀಸರ ತಂಡ ಗುರುವಾರ ಬೆಂಗಳೂರಿಗೆ ತೆರಳಿತ್ತು. ವಿಚಾರಣೆಯ ಸಂದರ್ಭ ಕಿಶೋರ್‌ ಅಮನ್‌ ಶೆಟ್ಟಿ ಅವರ ಆಪ್ತ ಸ್ನೇಹಿತ ತರುಣ್‌ ಅನುಶ್ರೀ ಅವರೊಂದಿಗೆ ಪಾರ್ಟಿ ಮಾಡಿದ್ದ ಎನ್ನುವ ವಿಚಾರವನ್ನು ತಿಳಿಸಿದ್ದು, ಅನುಶ್ರೀ ಅವರಿಗೆ ಸಿಸಿಬಿ ನೋಟಿಸ್‌ ಜಾರಿ ಮಾಡಿದೆ ಎನ್ನಲಾಗಿದೆ. “ಪ್ರತೀಕ್ ಶೆಟ್ಟಿ, ಕಿಶೋರ್ […]

ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ನಟ ಮತ್ತು ಸಹಚರನನ್ನು ಬಂಧಿಸಿದ ಮಂಗಳೂರು ಸಿಸಿಬಿ ಪೊಲೀಸರು

Saturday, September 19th, 2020
kishor Shetty

ಮಂಗಳೂರು: ಖ್ಯಾತ ಡ್ಯಾನ್ಸರ್, ಬಾಲಿವುಡ್ ಚಿತ್ರದಲ್ಲಿ ನಟಿಸಿದ್ದ ಮಂಗಳೂರಿನ ಕಿಶೋರ್ ಶೆಟ್ಟಿಯನ್ನು ಡ್ರಗ್ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್,  ಮಂಗಳೂರು ಸಿಸಿಬಿ ಪೊಲೀಸರಿಂದ ಶನಿವಾರ ಬೆಳಿಗ್ಗೆ ಡ್ರಗ್ಸ್ ಸಾಗಿಸುತ್ತಿದ್ದ ಡ್ಯಾನ್ಸರ್ ಕಿಶೋರ್ ಶೆಟ್ಟಿಯನ್ನು ಬಂಧಿಸಿದ್ದಾರೆ ಎಂದು ಮಾಹಿತಿ  ನೀಡಿದರು. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಕಿಶೋರ್ ಶೆಟ್ಟಿ, ನಂತರ ಹಿಂದಿ ಭಾಷೆಯ ಎಬಿಸಿಡಿ ಚಿತ್ರದಲ್ಲಿ ನಟಿಸಿದ್ದ. ಪ್ರಕರಣದಲ್ಲಿ ಮತ್ತೋರ್ವನನ್ನು ಬಂಧಿಸಲಾಗಿದ್ದು, ಅಕೀಲ್ ನೌಶೀಲ್ ಎಂದು […]

ಮಂಗಳೂರು: ಹಣವಿಲ್ಲದೆ ಆಸ್ಪತ್ರೆಗೆ ಸೇರಿದ ಆ ವ್ಯಕ್ತಿಗೆ ಹಣಕಾಸಿನ ನೆರವು ಬಂದರೂ ಆತನನ್ನು ಉಳಿಸಲಾಗಲಿಲ್ಲ

Thursday, September 17th, 2020
geetha

ಮಂಗಳೂರು: ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯನ್ನು ಹಣಕಾಸಿನ ನೆರವು  ಬಂದರೂ ಉಳಿಸಿಕೊಳ್ಳಲಾಗಲಿಲ್ಲ ಎಂದು  ಪತ್ನಿ ಕಣ್ಣೀರಿಟ್ಟಿದ್ದಾರೆ. ಹಣವಿಲ್ಲದೆ ನಗರದ ಯೆನೆಪೋಯ ಆಸ್ಪತ್ರೆಗೆ ಸೇರಿದ ಆ ವ್ಯಕ್ತಿಯನ್ನು ಮೊದಲು ಹಣವಿಲ್ಲದ ಕಾರಣ ಚಿಕಿತ್ಸೆ ನೀಡಲು ಒಪ್ಪಲಿಲ್ಲ ಬಳಿಕ,  ತಮ್ಮ ಪತಿಯನ್ನು ಉಳಿಸಲು ಹಣಕಾಸಿನ ನೆರವು ನೀಡಿ ಎಂದು ಮಹಿಳೆಯೋರ್ವರು ವೀಡಿಯೋ ಮೂಲಕ ಮಾಡಿದ ಮನವಿಗೆ ಒಂದೇ ದಿನ 14 ಲಕ್ಷ ರೂ. ನೆರವು ಹರಿದು ಬಂದಿದೆ. ಆದರೆ ಕೊನೆಯ ಕ್ಷಣದವರೆಗೆ ಹೋರಾಡಿದರೂ ಪತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗದ […]

ಕೆ.ಪಿ.ಸಿ.ಸಿ ನೂತನ ಅಧ್ಯಕ್ಷರಾಗಿ ಮೊದಲ ಬಾರಿಗೆ ಮಂಗಳೂರಿಗೆ ಬಂದ ಡಿ.ಕೆ ಶಿವಕುಮಾರ್

Friday, July 31st, 2020
dk shivakumar

ಮಂಗಳೂರು : ಕೆ.ಪಿ.ಸಿ.ಸಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ ಮುಖಂಡ ಡಿ.ಕೆ ಶಿವಕುಮಾರ್ ಅವರು ಜು.31ರ ಶುಕ್ರವಾರ ಜಿಲ್ಲೆಗೆ ಆಗಮಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೆಪಿಸಿಸಿ ಅಧ್ಯಕ್ಷರನ್ನು, ಮಾಜಿ ಸಚಿವ ಯು.ಟಿ ಖಾದರ್, ಮಾಜಿ ಶಾಸಕ ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಹರೀಶ್, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಮತ್ತಿತರು ಬರಮಾಡಿಕೊಂಡರು . ಆ ಬಳಿಕ ಮಾಜಿ ಸಚಿವ […]

ಮಂಗಳೂರು ಕ್ಲಾಕ್ ಟವರ್ ಬಳಿ ನಿಲ್ಲಿಸಿದ್ದ ಕಾರಿನಿಂದ 2 ಲಕ್ಷ ಕದ್ದವ ಅದೇ ದಿನ ಉಡುಪಿಯಲ್ಲಿ ಸಿಕ್ಕಿ ಬಿದ್ದ

Thursday, July 30th, 2020
guruprasad

ಉಡುಪಿ : ಮಂಗಳೂರಿನಲ್ಲಿ ಬೆಳಗಿನ ಜಾವ ಕಾರಿನಲ್ಲಿದ್ದ ನಗದು ಕಳವು ಮಾಡಿದ ಆರೋಪಿಯೊಬ್ಬನನ್ನು ಮಧ್ಯಾಹ್ನ ವೇಳೆ ಉಡುಪಿಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂಡಬಿದ್ರೆಯ ಕಾಪಿಕಾಡು ಬಾಡೊಟ್ಟು ನಿವಾಸಿ ಗುರುಪ್ರಸಾದ್(32) ಬಂಧಿತ ಆರೋಪಿ. ಮಂಗಳೂರು ಕ್ಲಾಕ್ ಟವರ್ ಬಳಿ ನಿಲ್ಲಿಸಿದ್ದ ಕ್ರೇಟಾ ಕಾರಿನಿಂದ ಜು.29ರಂದು ಹಣವನ್ನು ಕಳವು ಮಾಡಿ ಉಡುಪಿಗೆ ಪರಾರಿಯಾಗಿದ್ದ ಗುರುಪ್ರಸಾದ್‌ನನ್ನು ಉಡುಪಿ ಡಿಸಿಐಬಿ ಪೊಲೀಸರು ಖಚಿತ ಮಾಹಿತಿಯಂತೆ ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಬಂಧಿಸಿದ್ದಾರೆ. ಈತನಿಂದ ಕಾರಿನಿಂದ ಕಳವು ಮಾಡಿರುವ 2,03,700ರೂ. ನಗದು ಹಾಗೂ […]