ಸ್ವಾಮಿ ವಿವೇಕಾನಂದರು ಭವ್ಯ ವ್ಯಕ್ತಿತ್ವದ ಮಾದರಿ : ಸ್ವಾಮಿ ವಿವೇಕಚೈತನ್ಯಾನಂದಜಿ

Wednesday, October 16th, 2024
Viveka Chaitanya

ಮಂಗಳೂರು : “ಸ್ವಾಮಿ ವಿವೇಕಾನಂದರು ಭವ್ಯ ವ್ಯಕ್ತಿತ್ವದ ಮಾದರಿ. ಅವರ ವ್ಯಕ್ತಿತ್ವವು ಅಸಾಧಾರಣ ಧೈರ್ಯ, ಜ್ಞಾನ ಮತ್ತು ಸಹಾನುಭೂತಿ ಮಿಶ್ರಿತವಾಗಿತ್ತು. ಅವರು ತಮ್ಮ ಜೀವನವನ್ನು ಮಾನವೀಯತೆ ಮತ್ತು ಸಾಮಾಜಿಕ ಉನ್ನತಿಗೆ ಸಮರ್ಪಿಸಿದರು. 1893 ರ ಚಿಕಾಗೋ ಧರ್ಮಸಮ್ಮೇಳನದಲ್ಲಿ ಅವರು ಮಾಡಿದ ಪ್ರಭಾವಶಾಲಿ ಭಾಷಣವು ಅವರ ಬುದ್ಧಿವಂತಿಕೆಯ ಮತ್ತು ಆತ್ಮಶಕ್ತಿಯ ಸಮ್ಮಿಲನವನ್ನು ಸಿದ್ಧಪಡಿಸಿತು. ವಿವೇಕಾನಂದರು ಯುವಕರಲ್ಲಿ ಶ್ರದ್ಧೆ, ಆತ್ಮವಿಶ್ವಾಸ ಮತ್ತು ಶಕ್ತಿ ತುಂಬಿದವರು. ಅವರ ಪ್ರಸಿದ್ಧ ಪಥೋಪದೇಶ, ‘ಉತ್ತಿಷ್ಠತ, ಜಾಗೃತಃ’, ಯುವಕರಿಗೆ ಶ್ರೇಷ್ಠತೆಯ ಮಾರ್ಗದರ್ಶನ ನೀಡಿದವು. ಅವರ ದಿವ್ಯ […]

ಕನಕದಾಸ ಸಾಹಿತ್ಯದ ವೈಚಾರಿಕತೆಯ ಚರ್ಚೆ ನಡೆಯಲಿ: ಎ.ವಿ ನಾವಡ

Tuesday, November 23rd, 2021
kanaka-Jayanthi

ಮಂಗಳೂರು: ಕನಕ ಸಾಹಿತ್ಯವನ್ನು ಕನ್ನಡ ಸಾಹಿತ್ಯದ ಸೊತ್ತು ಎಂದು ಮಾತ್ರ ಭಾವಿಸದೆ ವೈಚಾರಿಕ ಮಾದರಿ ಎಂದು ಭಾವಿಸಿ, ಚರಿತ್ರೆ ಅಧ್ಯಯನ ಸೇರಿದಂತೆ ಇತರ ಅಧ್ಯಯನ ಶಿಸ್ತುಗಳ ಮೂಲಕ ಕನಕ ಸಾಹಿತ್ಯವನ್ನು ಜಗತ್ತಿನುದ್ದಕ್ಕೂ ವಿಸ್ತರಿಸುವ ಕಾರ್ಯ ಆಗಬೇಕು ಎಂದು ವಿದ್ವಾಂಸ ಪ್ರೊ.ಎ.ವಿ ನಾವಡ ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಅಧ್ಯಯನ ಪೀಠ ಹಾಗೂ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕನಕ ಜಯಂತಿ ಪ್ರಯುಕ್ತ ವಿಶೇಷ ಉಪನ್ಯಾಸ ಮತ್ತು […]

ಆಧುನಿಕ ಜಗತ್ತಿನ ಸವಾಲಿಗೆ ವೇದಾಂತ ಚಿಂತನೆ ಪರಿಹಾರ : ಡಾ. ವಿವೇಕ್ ಮೋದಿ

Thursday, June 17th, 2021
vivek-modi

ಮಂಗಳೂರು : “ಜಗತ್ತು ಎಷ್ಟೇ ಮುಂದುವರಿದರೂ ಭಾರತದ ಚಿಂತನೆಗಳು ಸಾರ್ವಕಾಲಿಕ. ಭಾರತೀಯ ವೇದಾಂತ ಚಿಂತನೆಗಳಲ್ಲಿ ಆಧುನಿಕ ಜಗತ್ತಿನ ಪ್ರತಿಯೊಂದು ಸವಾಲಿಗೂ ಪರಿಹಾರವಿದೆ, ಆತ್ಮಶ್ರದ್ಧೆಯೊಂದಿದ್ದರೆ ಯಾವುದೂ ಇಲ್ಲಿ ಅಬೇಧ್ಯವಲ್ಲ ಎಂಬ ಸಂದೇಶವನ್ನು ಸ್ವಾಮಿ ವಿವೇಕಾನಂದರು ನೀಡಿದ್ದಾರೆ” ಎಂದು, ಹೈದರಾಬಾದ್ನ ನಾಯಕತ್ವ ತರಬೇತುದಾರ ಡಾ. ವಿವೇಕ್ ಮೋದಿ ಹೇಳಿದರು. ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ‘ವಿವೇಕ ವಾಣಿʼ ಆನ್‌ಲೈನ್‌ ಸರಣಿ ಉಪನ್ಯಾಸ ಕಾರ್ಯಕ್ರಮದ ಐದನೇ ಉಪನ್ಯಾಸದಲ್ಲಿ “ಪ್ರಸ್ತುತ ಸವಾಲುಗಳನ್ನು ಎದುರಿಸಲು ಸ್ವಾಮಿ ವಿವೇಕಾನಂದರ ಚಿಂತನೆ” […]

ಕಡಬದ ಸೌಮ್ಯ ಪ್ರಸಾದ್​ಗೆ ಮಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ

Saturday, November 2nd, 2019
Sowmya-Prasad

 ಕಡಬ : ಮಂಗಳೂರಿನ ಕೆಎಂಎಫ್ ಡೈರಿಯ ಗುಣ ನಿಯಂತ್ರಣ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಡಬದ ಸೌಮ್ಯ ಪ್ರಸಾದ್ರವರು ಮಂಗಳೂರು ವಿ.ವಿಯ ಪ್ರೊ. ಭೋಜಪೂಜಾರಿ ಅವರ ಮಾರ್ಗದರ್ಶನದಲ್ಲಿ ‘ಸಿಂಥೆಟಿಕ್ ಆ್ಯಂಡ್ ಬಯಾಲಾಜಿಕಲ್ ಸ್ಟಡೀಸ್ ಆನ್ ಸಮ್ ನೈಟ್ರೋಜನ್ ಹೆಟಿರೋಸೈಕ್ಲಿಕ್ ಕಂಪೌಂಡ್ಸ್’ ಎಂಬ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ. ಕಡಬದ ಕೋಡಿಂಬಾಳದ ಪಡೆಜ್ಜಾರಿನ ಶಾಲಾ ನಿವೃತ್ತ ಶಿಕ್ಷಕ ವಸಂತ ಗೌಡ ಪಡೆಜ್ಜಾರು ಮತ್ತು ಲಲಿತಾ ದಂಪತಿಯ ಪುತ್ರಿಯಾಗಿರುವ ಸೌಮ್ಯ ರವರು ಮಂಗಳೂರಿನ ಮಾಲಾಡಿ ನಿವಾಸಿ […]

ಮಂಗಳೂರು ವಿವಿ ಸಮಸ್ಯೆ ಬಗೆಹರಿಸಲು ಎಬಿವಿಪಿ ಪ್ರತಿಭಟನೆ

Sunday, February 12th, 2017
abvp protest

ಮಂಗಳೂರು: ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಮಂಗಳೂರು ನೇತೃತ್ವದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಸಮಸ್ಯೆ ಬಗೆಹರಿಸಲು ಮತ್ತು ಸಮಸ್ಯೆಗೆ ಸಂಬಂಧಪಟ್ಟವರ ರಾಜೀನಾಮೆಗೆ ಆಗ್ರಹಿಸಿ ಶನಿವಾರ ನಗರದ ಪಿವಿಎಸ್‌ ವೃತ್ತದ ಬಳಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನಕಾರರನ್ನು ಉದ್ದೇಶಿಸಿ ಶೀತಲ್‌ ಕುಮಾರ್‌ ಮಾತನಾಡಿ, ವಿವಿಯ ಪ್ರಾಥಮಿಕ ಕಾರ್ಯಗಳಾದ ಶಿಕ್ಷಣ, ಪರೀಕ್ಷೆ ಮತ್ತು ಫಲಿತಾಂಶ, ಅಂಕಪಟ್ಟಿ ನೀಡುವುದು ಪ್ರಮುಖವಾಗಿದೆ. ಆದರೆ ವಿಶ್ವವಿದ್ಯಾಲಯ ಪ್ರಮುಖವಾದ ಕೆಲಸಗಳನ್ನೇ ಮರೆತು ಅವ್ಯವಹಾರದ ಹಾದಿಗೆ ಸಾಗಿದೆ ಎಂದು ಆರೋಪಿಸಿದರು. ಕಾರ್ಯಕರ್ತರಾದ ಕೀರ್ತನ ಮಾತನಾಡಿ, ವಿಶ್ವವಿದ್ಯಾಲಯವು ಸಮಾಜದಲ್ಲಿ ಸಮಸ್ಯೆಗಳು […]

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಯೋಗ ಶಿಕ್ಷಕರ ತರಬೇತಿ ಕಾರ್ಯಕ್ರಮ

Friday, February 3rd, 2017
yoga-training-centre

ಮಂಗಳೂರು: ಯೋಗದಿಂದ ಜನರು ನೆಮ್ಮದಿಯುತ ಆರೋಗ್ಯಕರ ಜೀವನವನ್ನು ಕಂಡುಕೊಳ್ಳಲು ಸಾಧ್ಯವಾಗಿದ್ದು, ಯೋಗದ ಮಹತ್ವವನ್ನು ಇಂದು ಇಡೀ ವಿಶ್ವವೇ ಅರಿತುಕೊಂಡಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾಲಯದ ಮಾನವಪ್ರಜ್ಞೆ ಮತ್ತು ಯೋಗವಿಜ್ಞಾನ ವಿಭಾಗ ಹಾಗೂ ಧರ್ಮನಿಧಿ ಯೋಗಪೀಠ ಆಶ್ರಯದಲ್ಲಿ ಸೌತ್ ಕೋರಿಯಾದ ವಾಂಕ್ವಾಂಗ್ ಡಿಜಿಟಲ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಂಗಳೂರು ವಿವಿಯಲ್ಲಿ ಐದು ದಿನಗಳ ಕಾಲ ಆಯೋಜಿಸಿರುವ ‘ಅಂತಾರಾಷ್ಟ್ರೀಯ ಯೋಗ ಶಿಕ್ಷಕರ ತರಬೇತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ […]

ಮಂಗಳೂರು ವಿಶ್ವವಿದ್ಯಾಲಯಕ್ಕೆ ಛಿಮಾರಿ ಹಾಕಿದ ಹೈಕೋರ್ಟ್

Monday, March 16th, 2015
high Court

ಮಂಗಳೂರು : ಮಿಫ಼್ಟ್ (MIFT) ಕಾಲೇಜಿನ ಪ್ರಥಮ ವರ್ಷದ ದ್ವಿತೀಯ ಸೆಮಿಸ್ಟರ್ ಫ಼್ಯಾಶನ್ ಡಿಸೈನಿಂಗ್ ವಿದ್ಯಾರ್ಥಿನಿ ಕು. ದಿವ್ಯಶ್ರೀ ಎಸ್.ಎಲ್ ಗೆ ಮಂಗಳೂರು ವಿಶ್ವವಿದ್ಯಾಲಯವು ಪ್ರಥಮ ಸೆಮಿಸ್ಟರ್ ಫ಼್ಯಾಶನ್ ಡಿಸೈನಿಂಗ್ ಪರೀಕ್ಷಾ ಫ಼ಲಿತಾಂಶವನ್ನು ತಡೆಹಿಡಿದಿರುವ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ದಾಖಲಿಸಿರುತ್ತಾರೆ. ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಬಿ.ವಿ.ನಾಗರತ್ನರು ಮಂಗಳೂರು ವಿಶ್ವವಿದ್ಯಾಲಯವನ್ನು ತರಾಟೆ ತೆಗೆದುಕೊಂಡಿರುತ್ತಾರೆ. ವಿದ್ಯಾರ್ಥಿನಿಯು ಮುಕ್ತ ವಿಶ್ವವಿದ್ಯಾಲಯ ಮೈಸೂರಿನಲ್ಲಿ ದ್ವೀತೀಯ ಪಿ.ಯು.ಸಿ ತತ್ಸಮಾನದಲ್ಲಿ ತೇರ್ಗಡೆಯಾಗಿದ್ದು. ಎಲ್ಲಾ ವಿಶ್ವವಿದ್ಯಾಲಯಗಳು ತತ್ಸಮಾನ (Equalent)ಪಿ.ಯು.ಸಿ.ಯಲ್ಲಿ ತೇರ್ಗಡೆಯಾದವರನ್ನು […]