ಜ್ಯುವೆಲ್ಲರಿ ನೌಕರನಿಗೆ ಹಲ್ಲೆ ಇಬ್ಬರ ವಿರುದ್ಧ ದೂರು

Tuesday, October 11th, 2016
rajesh-k-k

ಮಂಜೇಶ್ವರ: ಜ್ಯುವೆಲ್ಲರಿ ನೌಕರನೋರ್ವರಿಗೆ ಹಲ್ಲೆ ನಡೆಸಿದ ಸಂಬಂಧ ಇಬ್ಬರ ವಿರುದ್ಧ ಮಂಜೇಶ್ವರ ಪೊಲೀಸರು ದೂರು ದಾಖಲಿಸಿದ್ದಾರೆ. ವಯನಾಡ್ ನಿವಾಸಿ ಉಪ್ಪಳದಲ್ಲಿ ಜ್ಯುವೆಲ್ಲರಿಯೊಂದರಲ್ಲಿ ನೌಕರನಾಗಿರುವ ರಾಜೇಶ್ ಕೆ.ಕೆ. (38)ರವರ ದೂರಿನಂತೆ ಉಪ್ಪಳ ನಿವಾಸಿಗಳಾದ ಸಲೀಂ, ಸಕರಿಯಾ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ. ಸೆಪ್ಟಂಬರ್ 19ರಂದು ಸಂಜೆ ಉಪ್ಪಳದಲ್ಲಿ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಜ್ಯುವೆಲ್ಲರಿ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಕಾರನ್ನು ಬದಿಗೆ ನಿಲ್ಲಿಸಲು ಹೇಳಿದ ವಿರೋಧದಿಂದ ಹಲ್ಲೆ ನಡೆಸಿರುವುದಾಗಿ ರಾಜೇಶ್ ದೂರಿದ್ದಾರೆ.

ವ್ಯಾಪಕ ಮರಳು ಸಾಗಾಟ: 7 ವಾಹನ ವಶ

Wednesday, September 28th, 2016
sand-mafia

ಮಂಜೇಶ್ವರ: ಅನಧಿಕೃತ ಮರಳು ಸಾಗಾಟ ವ್ಯಾಪಕಗೊಂಡ ಹಿನ್ನೆಲೆಯಲ್ಲಿ ಮಂಜೇಶ್ವರ ಪೊಲೀಸರು ಸೋಮವಾರ ರಾತ್ರಿ ಹಾಗೂ ಮಂಗಳವಾರ ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ 2 ಲಾರಿ ಹಾಗೂ 1 ಪಿಕ್‌ಅಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ 7 ಮಂದಿಯನ್ನು ಸೆರೆಹಿಡಿಯಲಾಗಿದೆ. ತಲಪಾಡಿ ಭಾಗದಿಂದ ಕಾಸರಗೋಡು ಕಡೆಗೆ ಸಾಗಿಸುತ್ತಿದ್ದ ಮರಳು ತುಂಬಿದ ಪಿಕ್‌ಅಪ್‌ನ್ನು ಸೋಮವಾರ ವಶಪಡಿಸಿದ್ದು ಚಾಲಕ ಕಡಂಬಾರ್ ನಿವಾಸಿ ಜಯರಾಜ್ (28) ಎಂಬಾತನನ್ನು ಬಂಧಿಸಲಾಗಿದೆ. ಪಿಕ್‌ಅಪ್‌ನಲ್ಲಿ ಸುಮಾರು 30 ಚೀಲ ಮರಳು ತುಂಬಿಸಿಡಲಾಗಿತ್ತು. ಇದೇವೇಳೆ ಇನ್ನೊಂದು ಮರಳು ಲಾರಿಯನ್ನು ವಶಪಡಿಸಿ ಚಾಲಕ ಮಂಗಳೂರು ನಿವಾಸಿ ಅಬ್ದುಲ್ […]

ಬೀಗ ಹಾಕಿದ ಮನೆಗೆ ನುಗ್ಗಿ 52,000 ರೂ. ಕಳ್ಳತನ

Wednesday, September 7th, 2016
Theft-manjeshwara

ಮಂಜೇಶ್ವರ: ಬೀಗ ಹಾಕಿದ ಮನೆಯೊಂದರ ಹಿಂಬಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಪಾಟಿನೊಳಗಿರಿಸಿದ್ದ ನಗದನ್ನು ಕಳವು ಗೈದು ಬಳಿಕ ಮನೆಯೊಳಗೆ ಕೆಂಪು ಮೆಣಸನ್ನು ಹಾಕಿ ಪರಾರಿಯಾದ ಘಟನೆ ಉದ್ಯಾವರ ಜುಮಾ ಮಸೀದಿ ಪರಿಸರದಲ್ಲಿ ನಡೆದಿದೆ. ಉದ್ಯಾವರ ಜುಮಾ ಮಸೀದಿ ಸಮೀಪವಾಸಿ ಗಲ್ಫ್ ಉದ್ಯೋಗಿ ಇಬ್ರಾಹಿಂ ಎಂಬವರ ಮನೆಗೆ ನುಗ್ಗಿದ ಕಳ್ಳರು ಮಕ್ಕಳ ಶಾಲಾ ಕಾಲೇಜಿನ ಶುಲ್ಕ ಪಾವತಿಸಲು ಕಪಾಟಿನಲ್ಲಿ ಇಟ್ಟಿದ್ದ 52 ಸಾವಿರ ರೂ. ವನ್ನು ಕಳವುಗೈದಿದ್ದಾರೆ. ಇಬ್ರಾಹಿಂ ರ ಪತ್ನಿ ಹಾಗೂ ಮಕ್ಕಳು ಶಾಲೆಗೆ ಹಾಗೂ […]

ತಲೆಮರೆಸಿಕೊಂಡ ಗಾಂಜಾ ಪ್ರಕರಣದ ಆರೋಪಿ ಬಂಧನ

Saturday, July 30th, 2016
Ambachu

ಮಂಜೇಶ್ವರ: ಪೊಲೀಸರ ಕಾರ್ಯಾಚರಣೆಯ ಸಂದಭದಲ್ಲಿ ಗಾಂಜಾ ಹಾಗೂ ಆಟೋ ರಿಕ್ಷಾ ಉಪೇಕ್ಷಿಸಿ ಪರಾರಿಯಾಗಿದ್ದ ಆರೋಪಿ ಮಳ್ಳಂಗೈ ನಿವಾಸಿ ಅಬ್ಬಾಸ್ ಯಾನೆ ಅಂಬಾಚು(42) ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಜೂನ್ 4 ರಂದು ಉಪ್ಪಳ ಬಳಿಯ ಪತ್ವಾಡಿಯಲ್ಲಿ ಅಬ್ಬಾಸ್ ಯಾನೆ ಅಂಬಾಚು ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಿಸುತ್ತಿದ್ದ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಸಂದಭದಲ್ಲಿ ಗಾಂಜಾ ಹಾಗು ಆಟೋ ರಿಕ್ಷಾ ಉಪೇಕ್ಷಿಸಿ ಪರಾರಿಯಾಗಿದ್ದ. ರಿಕ್ಷಾದಿಂದ 200 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು.

ಮುಜುಂಗಾವು ವಿದ್ಯಾಪೀಠದ ವರ್ಧಂತ್ಯುತ್ಸವ ಸಂಪನ್ನ

Thursday, February 11th, 2016
mujungavu Bharati Vidya pita

ಕುಂಬಳೆ: ಮಕ್ಕಳೆಂದರೆ ಪ್ರಕೃತಿಯ ಕೊಡುಗೆ, ಅವರಲ್ಲಿ ಪುಟಿದೇಳುವ ಉತ್ಸಾಹ ಎಲ್ಲರಿಗೂ ಸ್ಫೂರ್ತಿಯನ್ನು ನೀಡುತ್ತದೆ. ಶ್ರೀರಾಮಚಂದ್ರಾಪುರ ಮಠದ ಶಾಲೆಗಳಲ್ಲಿ ಅಂತಹ ಉತ್ಸಾಹವನ್ನು ಬೆಳೆಸುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಶ್ರೀರಾಮಚಂದ್ರಾಪುರ ಮಠದ ವಿದ್ಯಾ ವಿಭಾಗದ ಕಾರ್ಯದರ್ಶಿ ಡಾ.ಶಾರದಾ ಜಯಗೋವಿಂದ ಅಭಿಪ್ರಾಯಪಟ್ಟರು. ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆದ ವರ್ಧಂತ್ಯುತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ವೇದ ಗಣಿತಕ್ಕೂ ಈ ವಿದ್ಯಾಸಂಸ್ಥೆಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಮಕ್ಕಳ ಕನಸುಗಳಿಗೆ ವಿದ್ಯಾಸಂಸ್ಥೆಗಳಲ್ಲಿ ರೂಪಕಲ್ಪನೆಯನ್ನು ನೀಡಲು ಪ್ರಯತ್ನಿಸಲಾಗುತ್ತಿದೆ. ಮಕ್ಕಳು ಬಾಣದಂತೆ, ಹೂಡುವವನಿಗೆ ಗುರಿಯನ್ನು ತಲಪಿಸುವ ಜವಾಬ್ದಾರಿಯೂ […]