ಮಧು ಬಂಗಾರಪ್ಪ ಸೇರಿ ಜೆಡಿಎಸ್​ನ ಹಲವು ಮುಖಂಡರು ಕಾಂಗ್ರೆಸ್ ಗೆ ಸೇರ್ಪಡೆ

Friday, July 30th, 2021
Madhu Bangarappa

ಹುಬ್ಬಳ್ಳಿ:  ಹುಬ್ಬಳ್ಳಿಯ ಗೋಕುಲ ಗಾರ್ಡನ್ನಲ್ಲಿ ಶುಕ್ರವಾರ ಮಾಜಿ ಶಾಸಕ ಮಧು ಬಂಗಾರಪ್ಪ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಮಧು ಬಂಗಾರಪ್ಪಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಪಕ್ಷದ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡಿರು. ಈ ವೇಳೆ ಮಾತನಾಡಿದ ಡಿಕೆಶಿ, ನಾನು ಬಂಗಾರಪ್ಪನವರ ಗರಡಿಯಲ್ಲೇ ಬೆಳೆದಿದ್ದು. ಸುಮಾರು ಹತ್ತು ವರ್ಷಗಳಿಂದ ಗಾಳ ಹಾಕಿದ್ದೆ. ಬಹಳ ದಿನದ ನಂತರ ಬಲೆಗೆ ಮಧು ಬಂಗಾರಪ್ಪ ಬಿದ್ದಿದ್ದಾರೆ. ಮೊದಲೇ ಬಂದಿದ್ರೆ ಈಗಾಗಲೇ ಮಧು ಮಾಜಿ ಸಚಿವರಾಗ್ತಿದ್ರು. ನನ್ನ ರಾಜಕೀಯ […]

ಜಿಲ್ಲೆಯಲ್ಲಿ ಈ ಬಾರಿ ಮೋದಿ ಅಲೆ ವರ್ಕೌಟ್ ಆಗಲ್ಲ: ಮಧು ಬಂಗಾರಪ್ಪ

Saturday, April 6th, 2019
Madhu Bangarappa

ಮಂಗಳೂರು :  ಬಿಜೆಪಿ ಜಿಲ್ಲೆಯಲ್ಲಿ ಮಾತ್ರವಲ್ಲದೇ, ರಾಜ್ಯದಲ್ಲಿ ನಿರ್ಮೂಲನೆಯಾಗಲಿದೆ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮೋದಿ ಅಲೆ ವರ್ಕೌಟ್ ಆಗಲ್ಲ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಮಂಗಳೂರಿನಲ್ಲಿ ಪತ್ರಕರ್ತ  ರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪಗೆ ಸಿಎಂ ಸ್ಥಾನ ದೊರಕಿದಾಗ ತಮ್ಮ ಸ್ಥಾನ ಉಳಿಸಿಕೊಳ್ಳಲಾಗಿರಲಿಲ್ಲ. ಅವರು ಇದೀಗ ಕುಮಾರಸ್ವಾಮಿಯವರಿಗೆ ಮುಹೂರ್ತ ಇಡಲು ಮುಂದಾಗಿದ್ದಾರೆ. ಅವರ ಮುಹೂರ್ತರಿಂದ ಕರಾವಳಿಯಲ್ಲಿ ಬಿಜೆಪಿ ನಿರ್ನಾಮಗೊಳ್ಳಲಿದೆ. ಕರಾವಳಿಯಲ್ಲಿ ಬಿಜೆಪಿ ನಿರ್ಮೂಲನೆಯಾಗಬೇಕಿದೆ ಎಂದರು. ಇನ್ನು ಶಿವಮೊಗ್ಗದಿಂದ ಮಧುಬಂಗಾರಪ್ಪ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಈ […]

ಮಧು ಬಂಗಾರಪ್ಪ ಡಮ್ಮಿ ಅಲ್ಲ..ಬಿಜೆಪಿಯ ರಾಘವೇಂದ್ರ ಅವರೇ ಡಮ್ಮಿ ಕ್ಯಾಂಡಿಟೇಟ್: ಸಿದ್ದರಾಮಯ್ಯ

Friday, October 26th, 2018
congress

ಶಿವಮೊಗ್ಗ: ಲೋಕಸಭಾ ಉಪ ಚುನಾವಣೆಯಲ್ಲಿ ಮಧು ಬಂಗಾರಪ್ಪ ಡಮ್ಮಿ ಕ್ಯಾಂಡಿಟೇಟ್ ಅಲ್ಲ, ಬಿಜೆಪಿಯ ರಾಘವೇಂದ್ರ ಅವರೇ ಡಮ್ಮಿ ಕ್ಯಾಂಡಿಟೇಟ್ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗ ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ಈಶ್ವರಪ್ಪ ಹಾವು ಮುಂಗೂಸಿಯಂತೆ ಇದ್ರು. ಈಗ ಒಂದಾಗಿದ್ದಾರಷ್ಟೆ ಎಂದು ನಿನ್ನೆ ಬಿಎಸ್ವೈ ಮೈತ್ರಿ ಬಗ್ಗೆ ಯಂಕ ನಾಣಿ, ಸೀನ ಒಂದಾಗಿದ್ದಾರೆ ಎಂದು ತಿರುಗೇಟು ನೀಡಿದರು. ಈ ಬಾರಿ ಶಿವಮೊಗ್ಗ ಲೊಕಸಭಾ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಟ್ಟಿದ್ದೇವೆ. […]

ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಡಮ್ಮಿ ಕ್ಯಾಂಡಿಡೇಟ್: ಕುಮಾರ್ ಬಂಗಾರಪ್ಪ

Tuesday, October 23rd, 2018
kumar-bangarappa

ಶಿವಮೊಗ್ಗ: ಮೈತ್ರಿ ಪಕ್ಷದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಡಮ್ಮಿ ಕ್ಯಾಂಡಿಡೇಟ್ ಎಂದು ಕುಮಾರ್ ಬಂಗಾರಪ್ಪ ಸಹೋದರನ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಈಗಾಗಲೇ ಪಕ್ಷದ ಕಟ್ಟಕಡೆಯ ಕಾರ್ಯಕರ್ತರನ್ನು ಮುಟ್ಟುವ ಕೆಲಸವನ್ನು ಎರಡು ಬಾರಿ ಮಾಡಿದೆ. ಸಮ್ಮಿಶ್ರ ಸರ್ಕಾರ ಮಧು ಬಂಗಾರಪ್ಪರನ್ನು ಅಭ್ಯರ್ಥಿಯನ್ನಾಗಿ ಮ‌ಾಡಲು ಕಾಗೋಡು ತಿಮ್ಮಪ್ಪ ಹಾಗೂ ಡಿ.ಕೆ.ಶಿವಕುಮಾರ್ ಕಾರಣ ಎಂದು ಹೇಳುವ ಮೂಲಕ ಆಂತರಿಕವಾಗಿ ಪಕ್ಷದ ತೀರ್ಮಾನವಲ್ಲ ಎಂದು ಮಧು ಅವರೇ ಹೇಳಿದ್ದಾರೆ ಎಂದರು. ಕಳೆದ ಬಾರಿಯ […]

ರಾಮನಗರ ಕ್ಷೇತ್ರದಿಂದ ಮಧು ಬಂಗಾರಪ್ಪ ಕಣಕ್ಕೆ..?

Saturday, June 2nd, 2018
madhu-bangarappa

ರಾಮನಗರ: ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ಹೊಂದಾಣಿಕೆಯಾಗಿ ಏಕೈಕ ಅಭ್ಯರ್ಥಿ ನಿಲ್ಲಿಸುವ ಇಂಗಿತ ವ್ಯಕ್ತಪಡಿಸಿವೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿಯಾಗಿ ಸೊರಬ ಕ್ಷೇತ್ರದ ಮಾಜಿ ಶಾಸಕ ಮಧುಬಂಗಾರಪ್ಪ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಮಧುಬಂಗಾರಪ್ಪ ಅಭ್ಯರ್ಥಿಯಾಗುವ ಬಗ್ಗೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಕುಮಾರಸ್ವಾಮಿ ಜೊತೆ ಚರ್ಚೆ ಮಾಡಿದ್ದು, ಇಬ್ಬರೂ ಮುಖಂಡರು ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ. ರಾಮನಗರ ಹಾಗೂ ಚನ್ನಪಟ್ಟಣ ಎರಡು ಕ್ಷೇತ್ರದಿಂದ ಸಿಎಂ‌ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಮಾಡಿ ಗೆದ್ದಿದ್ದರು. […]

ಬಂಗಾರಪ್ಪ ಬಗ್ಗೆ ಬರೆದಿದ್ದೆಲ್ಲ ಸತ್ಯ: ಪೂಜಾರಿ ಮತ್ತೆ ತಡವಿಕೊಂಡರು!

Wednesday, February 14th, 2018
bangarappa

ಮಂಗಳೂರು: “ನನ್ನ ಆತ್ಮಚರಿತ್ರೆಯಲ್ಲಿ ಏನು ಬರೆದಿದ್ದೇನೋ ಅವೆಲ್ಲವೂ ಸತ್ಯ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಂತೆ ಸತ್ಯವನ್ನೇ ಹೇಳಿರುವುದು” ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ತಮ್ಮ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಮಂಗಳೂರಿನಲ್ಲಿ ಮರುಮುದ್ರಿತ ‘ಸಾಲ ಮೇಳದ ಸಂಗ್ರಾಮ’ ಬಿಡುಗಡೆಗೊಳಿಸಿ ಅವರು ಮಾತನಾಡಿ, ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿರುವುದೆಲ್ಲ ಸುಳ್ಳು ಎಂದು ಹೇಳಿಕೆ ನೀಡಿದ್ದ ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಅವರಿಗೆ ವೇದಿಕೆಯಿಂದಲೇ ಉತ್ತರಿಸಿದರು. ಪೂಜಾರಿ ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳಿ ಎಂದ […]

ದ.ಕ, ಉಡುಪಿ ಜಿಲ್ಲೆ ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧೆ

Saturday, February 10th, 2018
madhu-bangarappa

ಮಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷದ ವರಿಷ್ಠ ನಾಯಕರಾದ ಎಚ್‌.ಡಿ. ದೇವೇಗೌಡರು ಹಾಗೂ ಎಚ್‌.ಡಿ. ಕುಮಾರ ಸ್ವಾಮಿ ನಿರ್ಧರಿಸಿದ್ದಾರೆ ಎಂದು ರಾಜ್ಯ ಯುವಜನತಾದಳ ಅಧ್ಯಕ್ಷ, ಶಾಸಕ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಜೆಡಿಎಸ್‌ ಈಗಾಗಲೇ ರಾಜ್ಯದಲ್ಲಿ ಬಿಎಸ್‌ಪಿಯೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡಿದೆ. ಇದಲ್ಲದೆ ಸಿಪಿಎಂ ಮತ್ತು ಸಿಪಿಐ ಪಕ್ಷಗಳ ಜತೆಗೂ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಒಲವು ವ್ಯಕ್ತವಾಗುತ್ತಿದೆ. ಕಾಂಗ್ರೆಸ್‌ ಹಾಗೂ […]

ಜನಾರ್ದನ ಪೂಜಾರಿ ಓರ್ವ ನೈಜ ಆರೆಸ್ಸೆಸ್ಸಿಗ: ಮಧು ಬಂಗಾರಪ್ಪ ಆರೋಪ

Friday, February 9th, 2018
bangarappa

ಮಂಗಳೂರು: ಕರಾವಳಿಯಲ್ಲಿ ಗಲಾಟೆಗಳಾಗಲು, ಬಿಲ್ಲವ ಯುವಕರು ದಾರಿ ತಪ್ಪಲು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿಯವರೇ ಕಾರಣ. ಕಾರಣಗಳಿಲ್ಲದೆ ಪ್ರಾಣ ಕಳೆದುಕೊಳ್ಳುತ್ತಿರುವ ಬಿಲ್ಲವ ಯುವಕರ ಬಗ್ಗೆ ಅವರಿಗೆ ಕಿಂಚಿತ್ತೂ ಕನಿಕರ ಇಲ್ಲ. ನಾನು ತಿಳಿದಮಟ್ಟಿಗೆ ಜನಾರ್ದನ ಪೂಜಾರಿ ಓರ್ವ ನೈಜ ಆರೆಸ್ಸಿಸ್ಸಿಗ ಎಂದು ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ಮಧು ಬಂಗಾರಪ್ಪ ಆರೋಪಿಸಿದ್ದಾರೆ. ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಪೂಜಾರಿ ಆತ್ಮಚರಿತ್ರೆ ಎನ್ನಲಾದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಪಕ್ಕದಲ್ಲಿಟ್ಟುಕೊಂಡೇ […]

ಹಿರಿಯ ಮಗನಿಗೆ ಸಮಾಧಿ ಸ್ಥಳದಲ್ಲಿ ಪೂಜೆ ಸಲ್ಲಿಸಲು ತಡೆಯೊಡ್ಡಿದ ಮಧು ಬೆಂಬಲಿಗರು

Wednesday, December 28th, 2011
Madhu Kumara Bangarappa

ಸೊರಬ : ಮಾಜಿ ಸಿಎಂ ಎಸ್ ಬಂಗಾರಪ್ಪ ಅವರ ಸಮಾಧಿ ಸ್ಥಳಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ ಹಿರಿಯ ಮಗ ಕುಮಾರ್ ಬಂಗಾರಪ್ಪಗೆ ಸಹೋದರ ಮಧು ಬಂಗಾರಪ್ಪ ಬೆಂಬಲಿಗರು ವಿರೋಧ ವ್ಯಕ್ತ ಪಡಿಸಿದ ಘಟನೆ  ಇಂದು ನಡೆದಿದೆ. ಪಟ್ಟಣದ ಸರಕಾರಿ ಕಾಲೇಜಿನ ಪಕ್ಕದಲ್ಲಿರುವ ಮಧು ಬಂಗಾರಪ್ಪ ಒಡೆತನದ ಜಾಗದಲ್ಲಿ ಬಂಗಾರಪ್ಪ ಸಮಾಧಿಗೆ ಕುಮಾರ್ ತನ್ನ ಪತ್ನಿ, ಮಕ್ಕಳ ಸಮೇತ ಆಗಮಿಸಿ ಪೂಜೆ ನಡೆಸುವವರಿದ್ದರು. ಇದನ್ನು ಕಂಡ ಮಧು ಬಂಗಾರಪ್ಪ ಬೆಂಬಲಿಗರು ಅವರನ್ನು ಮಧ್ಯದಲ್ಲೇ ತಡೆಯೂಡ್ಡಿದರು. ಈ ವಿಷಯದಲ್ಲಿ ಕುಮಾರ್ […]