ಬಿರುಕು ಬಿಟ್ಟ ಮರವೂರು ಸೇತುವೆ ದುರಸ್ತಿ ಜುಲೈಯಲ್ಲಿ ಪೂರ್ಣ

Friday, June 25th, 2021
Maravooru Bridge

ಮಂಗಳೂರು : ಇತ್ತೀಚೆಗೆ ಬಾರಿ ಮಳೆಯಿಂದ ಬಿರುಕು ಬಿಟ್ಟಿರುವ ಮರವೂರು ಸೇತುವೆಯ ದುರಸ್ತಿ ಕಾರ್ಯವನ್ನು ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ್‌ ಕೋಟ್ಯಾನ್‌‌ ಅವರು ಜೂನ್‌ 24ರ ಗುರುವಾರ ಪರಿಶೀಲಿಸಿದರು. ದುರಸ್ತಿ  ಕೆಲಸ ಭರದಿಂದ ನಡೆಯುತ್ತಿದ್ದು, ಗುತ್ತಿಗೆದಾರರು ಹಾಗೂ ಎಂಜಿನಿಯರ್‌‌ ಜುಲೈಯಲ್ಲಿ ಕೊನೆಯಲ್ಲಿ ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸೇತುವೆಯ ದುರಸ್ತಿಯಾದ ಕೂಡಲೇ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುವುದು. ಪಕ್ಕದಲ್ಲಿ ಹೊಸ ಸೇತುವೆಯ ಕಾಮಗಾರಿಯೂ ನಡೆಯುತ್ತಿದ್ದು, ಪೂರ್ಣವಾದ ಬಳಿಕ ವಾಹನ ಸಂಚಾರಕ್ಕೆ ಮುಕ್ತಗೊಳಿಸಿ, ಹಳೆಯ ಸೇತುವೆಯ ಸಂಪೂರ್ಣ ದುರಸ್ತಿ ಮಾಡುವ ಯೋಜನೆ ಇದೆ” ಎಂದು […]

ಮರವೂರು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಸ್ಥಳಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ

Tuesday, June 15th, 2021
Kota Srinivas

ಮಂಗಳೂರು : ಮಂಗಳೂರು ನಗರ ವ್ಯಾಪ್ತಿಯ ಮರವೂರು ಸೇತುವೆಯ ಬಿರುಕನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ, ಮುಖ್ಯ ಸಚೇತಕ ಸುಧೀರ್ ಶೆಟ್ಟಿ, ಸದಸ್ಯ ಲೋಹಿತ್ ಆಮೀನ್, ಲೋಕೋಪಯೋಗಿ ಇಲಾಖೆಯ ಅಭಿಯಂತರರು ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಅತ್ರಾಡಿ ರಾಷ್ಟ್ರೀಯ ಹೆದ್ದಾರಿ-67 ರಸ್ತೆಯಲ್ಲಿರುವ ಮರವೂರು ಸೇತುವೆಯ ಪಿಲ್ಲರ್ […]

ಈಜಲು ಹೋದ ಯುವಕರಿಬ್ಬರು ನೀರುಪಾಲು

Wednesday, July 6th, 2016
maravoor-child

ಮಂಗಳೂರು: ಈಜಲು ಹೋದ ಯುವಕರಿಬ್ಬರು ನೀರುಪಾಲಾದ ಘಟನೆ ಮರವೂರು ಸಮೀಪ ನದಿಯಲ್ಲಿ ನಡೆದಿದೆ. ಮೃತರನ್ನು ಅವಿನಾಶ್ (26) ಮತ್ತು ಜೇಸನ್ (24) ಎಂದು ಗುರುತಿಸಲಾಗಿದೆ. ಮರವೂರು ಸೇತುವೆಯ ಕಿಂಡಿ ಅಣೆಕಟ್ಟಿಗೆ ಈಜಲು ಇಳಿದ ಇವರಿಬ್ಬರು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಮೃತರ ಹೆಚ್ಚಿನ ವಿವರ ಲಭ್ಯವಾಗಿಲ್ಲ. ಮೃತದೇಹಕ್ಕಾಗಿ ಶೋಧ ನಡೆದಿದೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಿರಾಕರಿಸಿದ ಜಿಲ್ಲಾಧಿಕಾರಿ

Friday, January 22nd, 2016
DC Ibrahim

ಮಂಗಳೂರು : ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಅವಕಾಶ ನಿರಾಕರಿಸಿದ ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ, ಪ್ರತಿಭಟನೆ ಮಾಡಲೆಂದೇ ನಾಲ್ಕು ಸ್ಥಳಗಳನ್ನು ಗೊತ್ತುಮಾಡಿ ವಾರದೊಳಗೆ ಸೂಚನೆ ಹೊರಡಿಸುವುದಾಗಿ ಮಾಹಿತಿ ನೀಡಿದ್ದಾರೆ. ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿ ಸಂಘಟನೆಗಳು, ಸಾರ್ವಜನಿಕರು ಒಂದು ನಿರ್ದಿಷ್ಟ ಜಾಗದಲ್ಲಿ ಪ್ರತಿಭಟನೆ ನಡೆಸಲು ಸಹಕಾರಿಯಾಗುವಂತೆ ನಗರದ ಕೇಂದ್ರ ಸ್ಥಾನದಲ್ಲಿ ನಾಲ್ಕು ಪ್ರದೇಶಗಳನ್ನು ಪರಿಶೀಲಿಸಲಾಗಿದೆ ಎಂದು ತಿಳಿಸಿದರು. ನೆಹರೂ ಮೈದಾನದ ಕ್ರಿಕೆಟ್ ಪೆವಿಲಿಯನ್‌ ಬಳಿ ಸಣ್ಣದಾದ ಪ್ರದೇಶ, ನೆಹರೂ ಮೈದಾನದ (ಫುಟ್ಬಾಲ್‌) ಹಿಂಬದಿಯ ಟೆಂಪೋ ನಿಲುಗಡೆ ಸ್ಥಳ, […]