ದೇಶಸೇವೆಯನ್ನೇ ಉಸಿರಾಗಿಸಿಕೊಂಡಿರುವ ಸಂಘಟನೆ ಆರ್ ಎಸ್‍ಎಸ್ : ಕಂದಾಯ ಸಚಿವ ಆರ್ ಅಶೋಕ

Wednesday, October 6th, 2021
R Ashoka

ಬೆಂಗಳೂರು  : “ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಆರ್ ಎಸ್ ಎಸ್ ಅನ್ನು ಟೀಕಿಸುವುದು ತಪ್ಪು. ಎಲ್ಲವನ್ನು ತಿಳಿದುಕೊಂಡು ಮಾತನಾಡಬೇಕು”, ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು “ಆರೆಸ್ಸೆಸ್ ಒಂದು ದೇಶಭಕ್ತ ಸಂಘಟನೆ. ಸೇವೆಯೆ ಅದರ ಮೂಲಮಂತ್ರ. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಬಂಧಿತರಾದವರು ಶೇಕಡ 80 ರಷ್ಟು ಜನ ಆರ್‍ಎಸ್‍ಎಸ್ ಗೆ ಸೇರಿದವರು. ತುರ್ತುಪರಿಸ್ಥಿತಿಯ ವಿರುದ್ಧ ಹೋರಾಡುವಲ್ಲಿ ಮತ್ತು ಪ್ರಜಾಪ್ರಭುತ್ವವನ್ನು […]

ಜನರ ಹಿತದೃಷ್ಟಿಯಿಂದ ಮಾಡಿದ ಸಾರ್ವಜನಿಕ ಆಸ್ತಿಯನ್ನು ಮೋದಿ ನೇತೃತ್ವದ ಬಿಜೆಪಿ ಸರಕಾರ ಮಾರಾಟಕ್ಕಿಟ್ಟಿದೆ : ಖರ್ಗೆ

Saturday, September 11th, 2021
Karghe

ಮಂಗಳೂರು : ಕಳೆದ ಏಳು ವರ್ಷಗಳಲ್ಲಿ ಪ್ರಧಾನಿ ಮೋದಿಯವರು 3.5 ಲಕ್ಷ ಕೋಟಿ ರೂ.ಗಳಿಗೆ ಅನೇಕ ಪಿಎಸ್‌ಯುಗಳನ್ನು ಮಾರಾಟ ಮಾಡಿದ್ದಾರೆ. ಬಿಜೆಪಿಯೊಂದಿಗೆ ನಿಕಟ ಸಂಪಂಧ ಹೊಂದಿರುವ ಕೆಲವು ಆಯ್ದ ಉದ್ಯಮಿಗಳಿಗೆ ಲಾಭ ಮಾಡುವ ಉದ್ದೇಶದಿಂದ ಸಾರ್ವಜನಿಕ ಆಸ್ತಿಯನ್ನು ಇಂದು ಮಾರಾಟ ಪ್ರಕ್ರಿಯೆ ನಡೆಯುತ್ತಿದೆ. ಇತ್ತೀಚೆಗೆ ನಾಲ್ಕು ವಿಮಾ ಕಂಪನಿಗಳನ್ನು ಹೂಡಿಕೆ ಹಿಂದೆಗೆದುಕೊಳ್ಳುವಿಕೆ ಯೋಜನೆಯಡಿ ತರುವ ತಿದ್ದುಪಡಿ ಮಸೂದಿಗೆ ಉಭಯ ಸದನಗಳಲ್ಲಿ ಅನುಮೋದನೆ ಪಡೆಯಲಾಗಿದೆ. ಈ ವಿಮಾ ಕಂಪೆನಿಗಳಲ್ಲಿ 1 ಲಕ್ಷ ಖಾಯಂ ಉದ್ಯೋಗಿಗಳು ಹಾಗೂ 12 ಲಕ್ಷ ಪಿಗ್ಮಿ […]

ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಮಾಡಲು ನಾನು ತಯಾರಿದ್ದೆ ಕಾಂಗ್ರೆಸ್ ತಯಾರಿರಲಿಲ್ಲ : ಮಾಜಿ ಪ್ರಧಾನಿ ದೇವೆಗೌಡ

Saturday, November 9th, 2019
devegowda

ಮಂಗಳೂರು : ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದಾಗ ಖರ್ಗೆಯವರನ್ನು ಸಿಎಂ ಮಾಡಲು ನಾನು ತಯಾರಿದ್ದರೂ ಕಾಂಗ್ರೆಸ್ ತಯಾರಿರಲಿಲ್ಲ ಎಂದು ಮಾಜಿ ಪ್ರಧಾನಿ ದೇವೇ ಗೌಡ ಹೊಸ ಬಾಂಬ್ ಸಿಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರಾದ ಗುಲಾಂ ನಬಿ ಆಜಾದ್ ಮತ್ತು ಗೆಹ್ಲೋಟ್ ಜೊತೆಗೆ ನಾನು ಮಾತುಕತೆ ನಡೆಸಿದಾಗ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಲಿ ಎಂದು ನಾನು ಆಫರ್ ಕೊಟ್ಟಿದ್ದೆ. ಆದರೆ, ಅವರು ಒಪ್ಪಲಿಲ್ಲ. ನಾನೇ ಹೈಕಮಾಂಡ್ ಜೊತೆಗೆ ಮಾತನಾಡುವೆ ಎಂದು ಪೋನ್ ಕೊಡಲು ಗುಲಾಂ […]

ರಾಜ್ಯದಲ್ಲಿ ದ್ವೇಷದ ರಾಜಕೀಯ ನಿರಂತರವಾಗಿ ನಡೆಯುತ್ತಿದೆ : ಮಲ್ಲಿಕಾರ್ಜುನ ಖರ್ಗೆ

Thursday, October 10th, 2019
Mallikarjuna-kharge

ಕಲಬುರಗಿ : ಚುನಾವಣೆ ಸಮಯದಲ್ಲಿ ಕಾರ್ಯಕರ್ತರ ಬಲ ಕುಗ್ಗಿಸುವ ದೃಷ್ಟಿಯಿಂದ ಐಟಿ ದಾಳಿ ಮಾಡಲಾಗುತ್ತಿದೆ ಎಂದು ಎಐಸಿಸಿಐ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ಕಾಂಗ್ರೆಸ್ ನಾಯಕರ ಮನೆ ಮೇಲೆ ಐಟಿ ರೇಡ್ ವಿಚಾರವಾಗಿ ಮಾತನಾಡಿದ ಅವರು, ದ್ವೇಷದ ರಾಜಕೀಯ ನಿರಂತರವಾಗಿ ನಡೆಯುತ್ತಿದೆ. ಸ್ವಾಯತ್ತ ಸಂಸ್ಥೆಗಳ ಮೇಲಿನ ನಂಬಿಕೆ ಕಡಿಮೆಯಾಗುತ್ತಿದೆ. ಕೆಲವು ಪಕ್ಷ ಮತ್ತು ಕೆಲವರನ್ನು ಟಾರ್ಗೆಟ್ ಮಾಡಿ ಐಟಿ ರೈಡ್ ಮಾಡಲಾಗುತ್ತಿದೆ. ರಾಜಕೀಯ ಪ್ರೇರಿತ ದಾಳಿ ನಿಲ್ಲಿಸಬೇಕು. ತಪ್ಪು […]

ಕಾಂಗ್ರೆಸ್​ನಲ್ಲಿ ಗುಂಪುಗಾರಿಕೆ ಇಲ್ಲ : ಮಲ್ಲಿಕಾರ್ಜುನ ಖರ್ಗೆ

Wednesday, October 9th, 2019
kharge

ಕಲಬುರಗಿ : ಕಾಂಗ್ರೆಸ್ ಸೇರಿದ ಮೇಲೆ ಎಲ್ಲರೂ ಕಾಂಗ್ರೆಸ್ಸಿಗರೆ ಹೊರತಾಗಿ ಮೂಲ, ವಲಸೆ ಕಾಂಗ್ರೆಸ್ಸಿಗರು ಅನ್ನೋ ಪ್ರಶ್ನೆಯೇ ಇಲ್ಲ. ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಇರಬಹುದು. ಆದರೆ, ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಇಲ್ಲ ಎಂದು ಎಐಸಿಸಿ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ದೊಡ್ಡ ಸಮುದ್ರ, ಇಲ್ಲಿ ಎಲ್ಲಾ ನದಿಗಳು ಬಂದು ಸೇರುತ್ತವೆ. ಹಾಗೆ ಪಕ್ಷಕ್ಕೆ ಬರುವವರು ಒಟ್ಟಾಗಿ ಇರ್ತಾರೆ. ಇಲ್ಲಿ ಗುಂಪುಗಾರಿಕೆಗೆ ಅವಕಾಶವಿಲ್ಲ. ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಇರುವುದು ಸಹಜ. ಇದನ್ನೇ ಮಾಧ್ಯಮದವರು ಮಸಾಲೆ ಹಚ್ಚಿ ವೈಭವೀಕರಿಸಿ […]

ಸಿದ್ದರಾಮಯ್ಯ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಡಾ. ಜಿ ಪರಮೇಶ್ವರ್

Friday, September 27th, 2019
G.-Parameshwar

ತುಮಕೂರು : ಸಿದ್ದರಾಮಯ್ಯ ಅವರಿಗಾಗಿ ಪಕ್ಷವಿಲ್ಲ, ಪಕ್ಷಕ್ಕಾಗಿ ನಾವಿದ್ದೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ನಡುವಿದ್ದ ಭಿನ್ನಾಭಿಪ್ರಾಯ ಈಗ ಹೊರಬೀಳುತ್ತಿದೆ. ಸಿದ್ದರಾಮಯ್ಯರಗೋಸ್ಕರ ನಾವೇನಿಲ್ಲ, ಸಿದ್ದರಾಮಯ್ಯರಗೋಸ್ಕರ ಕಾಂಗ್ರೆಸ್ ಪಕ್ಷವೂ ಇಲ್ಲ ಅಥವಾ ನನಗೋಸ್ಕರ ಕಾಂಗ್ರೆಸ್ ಪಕ್ಷ ಇಲ್ಲ, ಕಾಂಗ್ರೆಸ್ ಪಕ್ಷಕ್ಕಾಗಿ ನಾವಿದ್ದೇವೆ ಎಂದರು. ಉಪಚುನಾವಣೆ ಸಂಬಂಧ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಗೆ ಪರಮೇಶ್ವರ್ ಯಾಕೆ ಗೈರಾಗಿದ್ದರು ಎನ್ನುವುದಕ್ಕೆ ಸ್ಪಷ್ಟನೆ ನೀಡಿರುವ ಅವರುಸಭೆಯನ್ನು ಮೊದಲು 11:30ಕ್ಕೆ ನಿಗದಿ […]

ನನ್ನ ಮಾತು ನಡೆಯಲೇ ಇಲ್ಲ.. ಹೀಗಾಗಿ ನನಗೂ ನೋವಾಗಿದೆ: ಮಲ್ಲಿಕಾರ್ಜುನ ಖರ್ಗೆ

Tuesday, December 25th, 2018
malikarjun-kharge

ಕಲಬುರಗಿ: ‘ಸಂಪುಟ ವಿಸ್ತರಣೆ ವೇಳೆ ಕಲಬುರಗಿ ಜಿಲ್ಲೆಗೆ ಮತ್ತೂಂದು ಸಚಿವ ಸ್ಥಾನ ದೊರಕಿಸಬೇಕು ಎಂದು ನಾನು ಪ್ರಯತ್ನಿಸಿದ್ದೆ. ಆದರೆ ಕೊನೆ ಹಂತದಲ್ಲಿ ನನ್ನ ಪ್ರಯತ್ನ ಫಲ ನೀಡಲಿಲ್ಲ. ನನ್ನ ಮಾತು ನಡೆಯಲೇ ಇಲ್ಲ. ಹೀಗಾಗಿ ನನಗೂ ನೋವಾಗಿದೆ. ಆದರೆ, ಅದನ್ನು ಬಹಿರಂಗಪಡಿಸುವಂತಿಲ್ಲ’ ಎಂದು ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಿಂದ ಡಾ| ಅಜಯಸಿಂಗ್‌ ಹಾಗೂ ಡಾ| ಉಮೇಶ ಜಾಧವ ಅವರ ಹೆಸರನ್ನು ಸಚಿವ ಸ್ಥಾನಕ್ಕೆ ಶಿಫಾರಸು […]

ಬಿಜೆಪಿಯವರು ಸರ್ಕಾರ ರಚಿಸುವ ಹಗಲುಗನಸು ಕಾಣ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

Wednesday, September 12th, 2018
malikarjun-kharge

ಬೆಂಗಳೂರು: ಬಿಜೆಪಿಯವರು ಸರ್ಕಾರ ರಚಿಸುವ ಹಗಲುಗನಸು ಕಾಣ್ತಿದ್ದಾರೆ ಎಂದು ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವ ರಮೇಶ್ ಜಾರಕಿಹೊಳಿ ಅವರ ಜೊತೆ ನಾನು ಮಾತಾಡ್ತೀನಿ. ಯಾವ ಸಮಸ್ಯೆಯೂ ಕಂಡಿಲ್ಲ. ಸದ್ಯಕ್ಕೆ ಏನು ಗೊಂದಲಗಳಿವೆ ನನಗೂ ಇನ್ನೂ ಸರಿಯಾಗಿ ಗೊತ್ತಿಲ್ಲ. ಕೆಲವು ಮಾಧ್ಯಮಗಳಲ್ಲಿ ಈ ವಿಚಾರವನ್ನು ಅತಿಯಾಗಿ ವೈಭವೀಕರಿಸಿ ತೋರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಸರ್ಕಾರ ಸುಭದ್ರವಾಗಿದೆ. ಯಾವ ಆತಂಕವೂ ಇಲ್ಲ. ಸರಿಯಾಗಿ […]

ಖರ್ಗೆ ವಿರುದ್ಧ ಬಿಜೆಪಿ ದಲಿತ ಯುವ ಮೋರ್ಚಾ ಕಾರ್ಯಕರ್ತರು ಆಕ್ರೋಶ!

Friday, June 29th, 2018
dalith-yuva-morcha

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆದರೂ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸಂಸದ ಮಲ್ಲಿಕಾರ್ಜುನ ಖರ್ಗೆ ಚಕಾರ ಎತ್ತದಿರುವುದು ಖಂಡನೀಯ ಎಂದು ಬಿಜೆಪಿ ದಲಿತ ಯುವ ಮೋರ್ಚಾ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಘವೇಂದ್ರ ಚಿಂಚನಸೂರ ನೇತೃತ್ವದಲ್ಲಿ ಸರದಾರ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಖರ್ಗೆಯವರ ವಿರುದ್ಧ ಕಿಡಿಕಾರಿದರು. ಜಿಲ್ಲೆಯಲ್ಲಿ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯಗಳು ನಡೆದಿವೆ. ಇಲ್ಲಿವರೆಗೆ ಆಗಿರುವ ದೌರ್ಜನ್ಯದ ಬಗ್ಗೆ […]

ಕೋಮುವಾದಿ ಬಿಜೆಪಿಯನ್ನು ದೂರ ಇಡುವುದು ನಮ್ಮ ಗುರಿ: ಮಲ್ಲಿಕಾರ್ಜುನ ಖರ್ಗೆ

Wednesday, June 27th, 2018
malikarjun

ಬೆಂಗಳೂರು: ನಾಳೆ ಅಥವಾ ನಾಡಿದ್ದು ಸಿದ್ದರಾಮಯ್ಯರನ್ನು ಭೇಟಿಯಾಗಲಿದ್ದೇನೆ ಎಂದು ನವದೆಹಲಿಯಲ್ಲಿ ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಸಮ್ಮಿಶ್ರ ಸರ್ಕಾರದ ಭವಿಷ್ಯದ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸುತ್ತೇನೆ. ವಿಡಿಯೋ ಬಗ್ಗೆ ವಿಶೇಷ ಮಾಹಿತಿ ಇಲ್ಲ. ನಾನೂ ಟಿವಿಯಲ್ಲಿ ನೋಡಿದ್ದೇನೆ ಅಷ್ಟೇ. ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಅನ್ನೋದು ಗೊತ್ತಿಲ್ಲ ಎಂದಿದ್ದಾರೆ. ವೈರಲ್ ಆಗಿರುವ ವಿಡಿಯೋವನ್ನು ತಿರುಚಿರುವ ಸಾಧ್ಯತೆ ಇದೆ. ನಿಜವಾಗಿಯೂ ಸಿದ್ದರಾಮಯ್ಯ ಹೇಳಿದ್ದಾರೋ ಎಂಬ […]