ಧರ್ಮಸ್ಥಳ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಹಾವೀರ ಜಯಂತಿ ಆಚರಣೆ

Friday, March 30th, 2018
dharmastala

ಧರ್ಮಸ್ಥಳ: ದಿನಾಂಕ 29-03-18 ನೇ ಗುರುವಾರದಂದು ಧರ್ಮಸ್ಥಳ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಹಾವೀರ ಜಯಂತಿಯನ್ನು ಆಚರಿಸಲಾಯಿತು. ಸ್ವಾಮಿಗೆ ಜನ್ಮಾಭಿಷೇಕ, ಮಕ್ಕಳಿಂದ ಅಷ್ಟವಿಧಾರ್ಚನೆ ಪೂಜೆ, ನಾಮಕರಣ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು ಮತ್ತು ಕುಟುಂಬದವರ ಮಾರ್ಗದರ್ಶನದಲ್ಲಿ ಬಾಹುಬಲಿ ಮಹಿಳಾ ಸೇವಾ ಸಮಿತಿಯ ವತಿಯಿಂದ ಮಹಾವೀರ ಜಯಂತಿ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಊರ ಶ್ರಾವಕ ಶ್ರಾವಿಕಿಯರು ಪಾಲ್ಗೊಂಡು ಪುಣ್ಯಭಾಗಿಗಳಾದರು.

ಶ್ರದ್ಧಾ ಭಕ್ತಿಯಿಂದ ಮಹಾವೀರ ಜಯಂತಿ ಆಚರಣೆ

Friday, March 30th, 2018
mahaveer-jayanthi

ಮಂಗಳೂರು: ಭಗವಾನ್ ಮಹಾವೀರರ 2,617ನೇ ಜಯಂತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮಂಗಳೂರಿನ ಬಜಿಲಕೇರಿಯಲ್ಲಿರುವ ಏಕೈಕ ಜಿನಾಲಯ ಆಧಿಶ್ವರ ಸ್ವಾಮಿ ಜೈನ ಬಸದಿಯಲ್ಲಿ ನಡೆದ ಧಾರ್ಮಿಕ ವಿಧಿವಿಧಾನಗಳಲ್ಲಿ ಅಸಂಖ್ಯಾತ ಭಕ್ತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಭಗವಾನ್ ಮಹಾವೀರನಿಗೆ ಚಂದನಾಭಿಷೇಕ, ಕನಕಾಭಿಷೇಕ, ಪುಷ್ಪ ವೃಷ್ಠಿ, ಕಳಶಾಭಿಷೇಕ ಸೇರಿದಂತೆ ಅಷ್ಟ ದ್ರವ್ಯಗಳ ವಿಶೇಷ ಅಭಿಷೇಕ ನಡೆಯಿತು. ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಬಿ.ಪಿ. ಸಂಪತ್ ಕುಮಾರ್, ಭಗವಾನ್ ಮಹಾವೀರ ವಿಶ್ವಭಾತೃತ್ವ ಹಾಗೂ ಸಮಾನತೆಯನ್ನು ಪ್ರತಿಪಾದಿಸಿದವರು ಹಾಗೂ ಅದನ್ನು […]

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪುಟಾಣಿಗಳಿಂದ ಮಹಾವೀರ ಜಯಂತಿ ಆಚರಣೆ

Friday, April 3rd, 2015
Mahaveera Jayanti

ಧರ್ಮಸ್ಥಳ: ಧರ್ಮಸ್ಥಳ ಶ್ರೀ ಭಗವಾನ್ ಚಂದ್ರನಾಥಸ್ವಾಮಿ ಬಸದಿಯಲ್ಲಿ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಅವರ ಕುಟುಂಬದವರ ಮಾರ್ಗದರ್ಶನದಂತೆ, ಮಹಾವೀರ ಜನ್ಮಕಲ್ಯಾಣೋತ್ಸವವನ್ನು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು. ತೀರ್ಥಂಕರರ ಮೂರ್ತಿಯ ಮೆರವಣಿಗೆ ನಂತರ ಅಷ್ಟದ್ರವ್ಯಗಳಿಂದ ಅಭಿಷೇಕ, ಅಷ್ಟವಿಧಾರ್ಚನೆ ಪೂಜೆ ನಡೆದವು. ಸ್ಥಳೀಯ ಮಕ್ಕಳಿಂದ ವಿವಿಧ ಕಾರ‍್ಯಕ್ರಮಗಳು ನಡೆದವು ಕುಮಾರಿ ಲಾವಣ್ಯ, ವಜ್ರಶ್ರೀ, ಸಂಚಿತ ಹಾಡಿದ ಮಹಾವೀರ ಅಷ್ಟಕಕ್ಕೆ ಮಾ. ದರ್ಶನ್ ಹಾಗೂ ಕು. ಪ್ರಾಪ್ತಿ ಕನ್ನಡ ಅರ್ಥಾನುವಾದ ಹೇಳಿದರು, ಕುಮಾರಿ ಸೌಖ್ಯಳಿಂದ ಮಹಾವೀರರ ಬಾಲ್ಯ ಹಾಗೂ ಜೀವನ […]