ಆಸ್ಪತ್ರೆಗೆ ಸಾಗಿಸುತ್ತಿದ್ದ ಅಸ್ವಸ್ಥ ಮಹಿಳೆ ಸಾವು… ಪತಿ ಮೇಲೆ ಗುಮಾನಿ
Tuesday, December 12th, 2017ಮಂಗಳೂರು: ವಾಂತಿ ಮಾಡತೊಡಗಿದ್ದ ಮಹಿಳೆಯೋರ್ವಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಆಕೆ ದಾರಿ ಮಧ್ಯೆ ಮೃತಪಟ್ಟಿರುವ ಘಟನೆ ಪುತ್ತೂರು ತಾಲೂಕಿನ ಕರ್ನೂರು ಹಿತ್ಲುಮೂಲೆ ಎಂಬಲ್ಲಿ ನಡೆದಿದೆ. ಕೆದಂಬಾಡಿ ಗ್ರಾಮದ ಕುರಿಕ್ಕಾರ ನಿವಾಸಿ ಶೇಖರ್ ರೈ ಎಂಬುವರ ಪತ್ನಿ ಮನೋರಮಾ ರೈ (40) ಮೃತ ಮಹಿಳೆ. ಆಕೆಯ ಪತಿ ಹಿಂಸೆ ನೀಡಿ, ಇಲ್ಲವೇ ಬೇರಾವುದೋ ರೀತಿಯಲ್ಲಿ ಈ ಸಾವು ಸಂಭವಿಸಿದೆ ಎಂಬ ಅನುಮಾನ ವ್ಯಕ್ತಪಡಿಸಲಾಗಿದೆ. ಈ ಅನುಮಾನಾಸ್ಪದ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಮೃತರ ಸಹೋದರ ಸಂಪ್ಯ […]