ಮಂಗಳೂರು ವಿಮಾನ ನಿಲ್ದಾಣದಲ್ಲಿ ಹುಲಿ ಕುಣಿತದ ಚಿಹ್ನೆ ಹಾಕಲು ಮಿಥುನ್ ರೈ ಆಗ್ರಹ

Tuesday, November 17th, 2020
Mithun Rai

ಮಂಗಳೂರು : ವಿಮಾನ ನಿಲ್ದಾಣದಲ್ಲಿ ಅದಾನಿ ಕಂಪೆನಿಯ ಆನೆಯ ಚಿಹ್ನೆ ತೆರವು ಮಾಡಿ ಹಿಂದೆ ಇದ್ದ ಹುಲಿ ಕುಣಿತದ ಚಿಹ್ನೆಯನ್ನು ತಕ್ಷಣ ಅಳವಡಿಸಬೇಕು ಎಂದು ಮಿಥುನ್ ರೈ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಕಂಪೆನಿಗೆ ಗುತ್ತಿಗೆ ನೀಡಿರುವ ಮೋದಿ ನೇತೃತ್ವದ ಕೇಂದ್ರ ಸರಕಾರವು ಈ ನಿಲ್ದಾಣಕ್ಕೆ ಗೌತಮ್ ಅದಾನಿ ಹೆಸರಿಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಅವಮಾನ ಮಾಡಿದೆ ಅದಾನಿ ಬದಲಿಗೆ ತುಳುನಾಡಿನ ವೀರರಾದ ಕೋಟಿ-ಚೆನ್ನಯರ ಹೆಸರಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಬೆಂಗಳೂರಿನ ಕೆಂಪೇಗೌಡ […]

‘ಕೋಟಿ ಚೆನ್ನಯ್ಯ ವಿಮಾನ ನಿಲ್ದಾಣ’ ಎಂದು ಹೆಸರಿಡಬೇಕು ಎಂದು ಅದಾನಿ ಕಂಪೆನಿಗೆ ಮನವಿ

Sunday, November 1st, 2020
Mithun Rai

ಮಂಗಳೂರು : ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ ಚೆನ್ನಯ್ಯ ವಿಮಾನ ನಿಲ್ದಾಣ’ ಎಂದು ಹೆಸರಿಡಬೇಕು ಎಂಬುದಾಗಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅದಾನಿ ಸಂಸ್ಥೆಯ ಅಧ್ಯಕ್ಷ ಗೌತಮ್ ಅದಾನಿ ಅವರಿಗೆ ಆಗ್ರಹಿಸಿದ್ದಾರೆ. ಈ ಕುರಿತು ಮಿಥುನ್ ರೈ ಅವರು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ “ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆ ನಿಮ್ಮ ಕೈಗೆ ಬಂದಿರುವುದರಿಂದ ಅದಕ್ಕೆ ಅದಾನಿ ವಿಮಾನ ನಿಲ್ದಾಣ ಎಂದು ಹೆಸರು ಇಡುವುದಲ್ಲ, ಅದಕ್ಕೆ ಕೋಟಿ ಚೆನ್ನಯ್ಯ ವಿಮಾನ […]

ನಾಥ ಪಂಥದ ಗುರು ಹಾಗೂ ಹಿಂದೂ ಧರ್ಮದ ನಿಂದನೆ ಯುವ ಕಾಂಗ್ರೆಸ್​ ಅಧ್ಯಕ್ಷ ಮಿಥುನ್ ರೈ ವಿರುದ್ಧ ದೂರು

Saturday, October 10th, 2020
Mithun-Rai

ಪುತ್ತೂರು : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ವಿರುದ್ಧ ದೂರು ದಾಖಲಾಗಿದೆ. ಹಿಂದೂ ಜಾಗರಣ ವೇದಿಕೆಯ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪುರುಷರ ಕಟ್ಟೆ, ಮಿಥುನ್ ರೈ ವಿರುದ್ಧ ಕ್ರಮ ಕೈಗೊಳ್ಳುವಂತೆ  ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಿಥುನ್ ರೈ ಅವಹೇಳನಕಾರಿಯಾಗಿ ಮಾತನಾಡಿರುವುದು ಹಿಂದೂ ಧರ್ಮದ ಅನುಯಾಯಿಗಳ ಭಾವನೆಗೆ ಧಕ್ಕೆಯಾಗಿದೆ. ಯೋಗಿ ಆದಿತ್ಯನಾಥ್ ಹಿಂದೂ ಧರ್ಮದ ಹಾಗೂ ನಾಥ ಪಂಥದ […]

ನೀವು ಕೇರಳಕ್ಕೆ ಯಾವ ಮುಖವಿಟ್ಟು ಹೋಗುತ್ತೀರಿ ಮಿಥುನ್ ರೈಗೆ ಸಿಪಿಐ(ಎಂ) ಪ್ರಶ್ನೆ?

Monday, April 13th, 2020
mithun-rai

ಮಂಗಳೂರು  : ಕೇರಳದ ಕಾಸರಗೋಡಿನ ನಾಗರಿಕರಿಗೆ ಜಿಲ್ಲೆಗೆ ಪ್ರವೇಶಿಸುವುದನ್ನು ತಡೆಯಬೇಕೆಂಬ ಯುವ ಕಾಂಗ್ರೆಸ್ ಮುಂದಾಳು ಶ್ರೀ ಮಿಥುನ್ ರೈಯವರ ನಿಲುಮೆಯನ್ನು ಸಿಪಿಐ(ಎಂ) ಆಕ್ಷೇಪಿಸಿದೆ. ಕೋರೋನಾ ವೈರಸ್ ತಡೆಯುವ ಬಗ್ಗೆ ಲಾಕ್ ಡೌನ್‌ನ ಒಂದು ಹಂತದಲ್ಲಿ ಈ ರೀತಿಯ ತಡೆ ಸರಿ ಎಂದು ಕೊಂಡರೂ ಅವಶ್ಯಕ ವಸ್ತುಗಳ ಸಾಗಾಟ ,ತುರ್ತು ಆರೋಗ್ಯ ಚಿಕಿತ್ಸೆ, ತರಕಾರಿ ಹಣ್ಣು ಹಂಪಲು ಪೋಲೀಸರ ನಿಗಾದಲ್ಲಿ ಸಂಚರಿಸಲು ಅವಕಾಶ ನೀಡುವುದು ಅನಿವಾರ್ಯ. ನಾವು ಒಕ್ಕೂಟ ವ್ಯವಸ್ಥೆಯ ಸಂವಿಧಾನವನ್ನು ಪಡೆದವರು.ಒಂದು ರಾಜ್ಯ ಮತ್ತು ಇನ್ನೊಂದು ರಾಜ್ಯದೊಂದಿಗೆ […]

ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ನೇತೃತ್ವದಲ್ಲಿ ‘ಕಿಟ್’ ವಿತರಣೆ

Wednesday, April 1st, 2020
Mithun-Rai

ಮಂಗಳೂರು : ಕೊರೋನ ವೈರಸ್ ಹಾವಳಿಯಿಂದ ತತ್ತರಿಸಿರುವ ಜನತೆಯ ದೈನಂದಿನ ಜೀವನ ನಿರ್ವಹಣೆಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಪಿಲಿನಳಿಕೆ ಪ್ರತಿಷ್ಠಾನದ ಗೌರವ ಅಧ್ಯಕ್ಷ ಮತ್ತು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಯ ನೇತೃತ್ವದಲ್ಲಿ ಜಿಲ್ಲೆಯ 1 ಸಾವಿರ ಬಡ ಕುಟುಂಬಗಳಿಗೆ ನೆರವಾಗುವಂತೆ ಅಗತ್ಯ ಆಹಾರ ಸಾಮಗ್ರಿಗಳನ್ನು ಒಳಗೊಂಡ ‘ಕಿಟ್’ಅನ್ನು ಮೊದಲ ಹಂತದಲ್ಲಿ ಎ.2ರಿಂದ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಬಾಂಬ್ ತಯಾರಿಕೆಗೆ ಆರ್ಡಿಎಕ್ಸ್ ನೀಡಿದವರ ಸಮಗ್ರ ತನಿಖೆಯಾಗಬೇಕು : ಮಿಥುನ್ ರೈ

Saturday, January 25th, 2020
Mithun Rai

ಮಂಗಳೂರು : ಮಂಗಳೂರು ಕೋಮು ದೌರ್ಜನ್ಯದ ಪ್ರಯೋಗಾಲಯವಾಗುತ್ತಿದ್ದು, ಬಾಂಬ್ ತಯಾರಿಕೆಗೆ ಬೇಕಾದ ಆರ್ಡಿಎಕ್ಸ್ ಎಲ್ಲಿಂದ ಬಂತು ಹಾಗೂ ಅದನ್ನು ನೀಡಿದರು ಯಾರು ? ಹಾಗೂ ಪ್ರಕರಣ ಹಿಂದೆ ಯಾರು ಶಾಮೀಲಾಗಿದ್ದಾರೆ ಎನ್ನುವುದರ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ  ಪ್ರಶ್ನಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ  ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮಿಥುನ್ ರೈ  ಸಿಎಎ, ಏನ್ ಅರ್ ಸಿ ವಿರೋಧಿಸಿ ಮಂಗಳೂರಲ್ಲಿ ಅನೇಕ  ಪ್ರತಿಭಟನೆಗಳು ನಡೆದಿವೆ. ಮಂಗಳೂರು ಒಳ್ಳೆಯ ಸುದ್ದಿಗಳಿಂದ ಪ್ರಸಿದ್ಧವಾಗಬೇಕು ಹೊರತು ಕೆಟ್ಟ ಕಾರಣಗಳಿಗಾಗಿ ಅಲ್ಲಎಂದು ಹೇಳಿದರು. […]

ಮಂಗಳೂರು : ಡಿಕೆಶಿಗೆ ಇಡಿ ಸಮನ್ಸ್ ವಿರೋಧಿಸಿ ಮಂಗಳೂರಿನಲ್ಲಿ ಕಾಂಗ್ರೆಸಿಗರಿಂದ ಬೃಹತ್ ಪ್ರತಿಭಟನೆ

Friday, August 30th, 2019
pratibhatane

ಮಂಗಳೂರು : ಕಾಂಗ್ರೆಸ್ ಮುಖಂಡ ಡಿ.ಕೆ ಶಿವಕುಮಾರ್ಗೆ ಇಡಿ ಸಮನ್ಸ್ ನೀಡಿರುವ ಹಿನ್ನೆಲೆ ದ.ಕ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು. ನಗರದ ಮಲ್ಲಿಕಟ್ಟೆ ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಮಾತನಾಡಿ, ಡಿ.ಕೆ ಶಿವಕುಮಾರ್ ಅಥವಾ ಯಾವುದೇ ಕಾಂಗ್ರೆಸ್ ಮುಖಂಡರನ್ನು ಇಡಿ, ಐಟಿ ತನಿಖೆಯ ನೆಪದಲ್ಲಿ ಹಿಂಸೆ ನೀಡಿದರೆ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನಾಕಾರರು ರಸ್ತೆ ತಡೆ […]

ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ನೆರೆಪೀಡಿತ ಪ್ರದೇಶಕ್ಕೆ ಭೇಟಿ

Tuesday, August 13th, 2019
mithunRai

ಮಂಗಳೂರು  : ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಲೋಕಸಭಾ ಆಭ್ಯರ್ಥಿಯಾದ ಮಿಥುನ್ ರೈ ಮಂಗಳವಾರ ನೆರೆಯಿಂದ ಸಂಕಷ್ಟಕ್ಕೆ ಒಳಗಾದ ಬೆಳ್ತಂಗಡಿ ತಾಲೂಕಿನ ಲೈಲಾ, ಇಂದಬೆಟ್ಟು, ಕಿಲ್ಲೂರು ಶಾಲೆ , ಮಕ್ಕಿ ಹಾಗೂ ಗಂಜಿ ಕೇಂದ್ರಗಳಿಗೆ  ಭೇಟಿ ನೀಡಿ ಸಂತ್ರಸ್ತರನ್ನು ಸಂತೈಸಿದರು. ಜೊತೆಗೆ ತನ್ನ ಸ್ವಂತ ಖರ್ಚಿನಲ್ಲಿ ದಿನ ನೀತ್ಯ ಅಗತ್ಯ ವಸ್ತುಗಳನ್ನು ಎರಡು ದಿನಗಳಲ್ಲಿ ಪೂರೈಸುವುದಾಗಿ ಭರವಸೆಗಳನ್ನು ನೀಡಿ ಅಧಿಕಾರಿಗಳಿಂದ ಅಗತ್ಯವಸ್ತುಗಳ ಪಟ್ಟಿಯನ್ನು ಪಡೆದುಕೊಂಡರು.

ನಳಿನ್ ಕುಮಾರ್ ಕಟೀಲ್ ಗೆ ಮಿಥುನ್ ರೈ ಗಿಂತ1,16,000 ಮತಗಳ ಅಂತರದಿಂದ ಮುನ್ನಡೆಯಲ್ಲಿ

Thursday, May 23rd, 2019
KateelRai

ಮಂಗಳೂರು : ಬೆಳಗ್ಗೆ 11.00  ಕ್ಕೆ ಮೂರನೇ ಸುತ್ತಿನಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಅವರಿಗೆ 3,20,627  ಮತಗಳು ಲಭಿಸಿದೆ. ಎರಡು ಭಾರಿ ಜಯಗಳಿಸಿದ ನಳಿನ್ ಕುಮಾರ್ ಕಟೀಲ್ ಗೆ ಮಿಥುನ್ ರೈ  ಗಿಂತ 1,16.700 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದರೆ. ಮಿಥುನ್ ರೈ  1,85,832 ಮತಗಳು ಲಭಿಸಿದೆ.  

ಜಿಲ್ಲೆಯ ಸಾಮರಸ್ಯದ ಪರಂಪರೆಯ ಉಳಿವಿಗೆ ಮತದಾರರು ಬೆಂಬಲಿಸುತ್ತಾರೆ : ಮಿಥುನ್ ರೈ

Thursday, April 18th, 2019
Mithun-Rai

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಬಲ್ಮಠ ಮಹಿಳಾ ಕಾಲೇಜಿನಲ್ಲಿ ಮತ ಚಲಾಯಿಸಿದರು. ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಸಾಮರಸ್ಯದ ಪರಂಪರೆಯ ಉಳಿವಿಗೆ ಮತದಾರರು ಬೆಂಬಲಿಸುತ್ತಾರೆಂಬ  ಸಂಪೂರ್ಣ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಕೇಸರಿ ಎಂಬುದು ತ್ಯಾಗ, ಸೌಹಾರ್ದತೆಯ ಸಂಕೇತ. ದುರದೃಷ್ಟವೆಂದರೆ ಕೆಲ ದಿನಗಳಿಂದ ಕೇಸರಿ ಅಂದರೆ ಭೀತಿಯನ್ನು ಹುಟ್ಟಿಸುವ ಕೆಲಸ ನಡೆಯುತ್ತಿದೆ. ಈ ತಪ್ಪು ಅಭಿಪ್ರಾಯ ನಿವಾರಣೆಗೆ ಕೇಸರಿ ಶಾಲು ನಿರಂತರ ಬಳಸುತ್ತಿದ್ದೇನೆ ಎಂದು ಸಮರ್ಥನೆ ನೀಡಿದ್ದಾರೆ.