ನಿರ್ಮಾಣಗೊಂಡು ಎರಡು ವರ್ಷವಾದರೂ ಉಪಯೋಗ ಶೂನ್ಯ ಆಸ್ಪತ್ರೆ

Tuesday, July 19th, 2016
Mulleria

ಮುಳ್ಳೇರಿಯಾ: ನಿರ್ಮಾಣ ಕಾಮಗಾರಿ ಪೂರ್ತಿಗೊಂಡು ವರ್ಷಗಳೆರಡು ಕಳೆದರೂ ಮುಳ್ಳೇರಿಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆಗೊಳ್ಳದೆ ಉಪಯೋಗ ಶೂನ್ಯವಾಗಿದ್ದು,ಲಕ್ಷಾಂತರ ರೂ.ವ್ಯಯಿಸಿ ನಿರ್ಮಿಸಲಾದ ಕಟ್ಟಡ ವ್ಯರ್ಥವಾಗುತ್ತಿದೆ. ಎಂಡೋಸಲ್ಫಾನ್ ಸಂತ್ರಸ್ಥರು ಅಧಿಕವಿರುವ ಪ್ರದೇಶವೆಂದು ಪರಿಗಣಿಸಿ ನಿರ್ಮಿಸಲಾದ ಈ ಆಸ್ಪತ್ರೆ ನಿತ್ಯ ಚಿಕಿತ್ಸೆಗಳಿಗೆ ಆಗಮಿಸುವ ನೂರಾರು ರೋಗಿಗಳಿಗೆ ಯಾವುದೇ ಪ್ರಯೋಜನಕ್ಕೆ ಬಾರದೆ ಉಪಯೋಗ ಶೂನ್ಯವಾಗಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.ಈ ನೂತನ ಕಟ್ಟಡ ನಿರ್ಮಾಣಕ್ಕೆ ಎಂಡೋಸಲ್ಫಾನ್ ಪ್ಯಾಕೇಜ್ ಹಾಗೂ ನಬಾರ್ಡ್ ಅನುದಾನದಿಂದ ಒಟ್ಟು 64ಲಕ್ಷ ರೂ.ಗಳನ್ನು ವ್ಯಯಿಸಿ 2003 ಮೇ ತಿಂಗಳಲ್ಲಿ ಕಾಮಗಾರಿ […]

ಕುಟುಂಬ ನಿಭಾಯಿಸುವ ಹೊಣೆ ಪತ್ರಕರ್ತನಿಗೂ ಇದೆ : ಕುಂಞಿರಾಮನ್

Saturday, January 30th, 2016
Journalist

ಮುಳ್ಳೇರಿಯಾ: ಸುದ್ದಿ ಮಾಧ್ಯಮಗಳ ಶೈಲಿಗಳು ಇಂದಿನ ಕಾಲಕ್ಕನುಸರಿಸಿ ಬದಲಾಗುತ್ತಿದೆ. ವರದಿಗಾರರೂ ಈ ನಿಟ್ಟಿನಲ್ಲಿ ಪ್ರಭಲ ಪೈಪೋಟಿಯೊಂದಿಗೆ ಒತ್ತಡವನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವರದಿಗಾರರು, ಪತ್ರಕರ್ತರು ಸಂದರ್ಭ ಸಿಕ್ಕಾಗ ಹೊಸ ಬದಲಾವಣೆಗಳತ್ತ ಮುಖಮಾಡಿ ಪರಸ್ಪರ ವೈಯುಕ್ತಿಕ ನೆಲೆಯ ವಿಚಾರ ವಿನಿಮಯಕ್ಕೆ ಆಸ್ಪದ ನೀಡುವ ಕುಟುಂಬ ಸಂಗಮವನ್ನು ಆಯೋಜಿಸುತ್ತಿರುವುದು ಅಗತ್ಯವೆಂದು ಉದುಮ ಶಾಸಕ ಕೆ.ಕುಂಞಿರಾಮನ್ ಅಭಿಪ್ರಾಯ ವ್ಯಕ್ತಪಡಿಸಿದರು. ಕಾಸರಗೋಡು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇತ್ತೀಚೆಗೆ ದೇಲಂಪಾಡಿ ಸಮೀಪದ ಪರಪ್ಪ ಕೇರಳ ಅರಣ್ಯ ಇಲಾಖೆಯ ಅತಿಥಿ ಗೃಹದಲ್ಲಿ ಆಯೋಜಿಸಿದ […]