ಕೋವಿಡ್-19 ರೋಗದಿಂದ ಮೃತಪಟ್ಟ ಮುಸ್ಲಿಂ ಸಮಾಜದವರನ್ನು ಗೌರವದಿಂದ ಅಂತ್ಯ ಸಂಸ್ಕಾರ ಮಾಡಿ

Sunday, July 19th, 2020
coronadeath

ಬೆಂಗಳೂರು: ಮಾರಕ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಬೆಂಗಳೂರು ನಗರ ಪ್ರದೇಶದಲ್ಲಿ ಇತ್ತೀಚಿಗೆ ಸಂಭವಿಸುವ ಮರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮೃತಪಟ್ಟ ಮುಸ್ಲಿಂ ಸಮುದಾಯದ ಶವಗಳನ್ನು ಸಭ್ಯವಾಗಿ ಸರ್ಕಾರದ ಮಾರ್ಗಸೂಚಿಗಳನ್ವಯ ಅಂತ್ಯಸಂಸ್ಕಾರ ಮಾಡಬೇಕೆಂದು ಬೆಂಗಳೂರು ನಗರ ಉತ್ತರ ಜಿಲ್ಲೆ ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ವಕ್ಫ್ ನೋಂದಾಯಿತ ಅಥವಾ ನೋಂದಾಯಿಸಲಾಗದೆ ಇರುವ ಖಬರಸ್ತಾನಗಳ ಆಡಳಿತ ಸಮಿತಿಗಳು/ಮುತವಲ್ಲಿಗಳು/ಆಡಳಿತಾಧಿಕಾರಿಗಳು ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಮುಸ್ಲಿಮರ ಶವಸಂಸ್ಕಾರ ಮಾಡುವುದನ್ನು ತಡೆಯಬಾರದು. ಸದರಿ ಕಾರ್ಯಕ್ಕಾಗಿ […]

ತಪ್ಪಿದ ಮೇಯರ್ ಸ್ಥಾನ: ಕಾಂಗ್ರೆಸ್‌ನ ಮುಸ್ಲಿಂ ನಾಯಕರ ಆಕ್ರೋಶ

Thursday, March 8th, 2018
muslims

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಅಲ್ಪ ಸಂಖ್ಯಾತ ನಾಯಕರ ಗುಂಪೊಂದು ಗುರುವಾರ ನಗರದ ಜಮೀಯ್ಯತುಲ್ ಫಲಾಹ್ ಹಾಲ್‌ನಲ್ಲಿ ಸಭೆ ನಡೆಸಿ ಪಕ್ಷದ ಜಿಲ್ಲಾ ಹೈಕಮಾಂಡ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ, ಶುಕ್ರವಾರ ಮತ್ತೊಂದು ಸುತ್ತಿನ ಸಭೆ ನಡೆಸಿ ಪಕ್ಷದ ವಿವಿಧ ಜವಾಬ್ದಾರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ. ಮಂಗಳೂರು ಮನಪಾಕ್ಕೆ ಒಂದು ಅವಧಿಯಲ್ಲಿ ಮುಸ್ಲಿಮ್ ಕಾರ್ಪೊರೇಟರ್‌ಗೆ ಮೇಯರ್ ಸ್ಥಾನ ಕೊಡಬೇಕು ಎಂದು ಕಳೆದ ವಾರ ಸಭೆ ಸೇರಿ ಆಗ್ರಹಿಸಿದ್ದ […]

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಮುಸ್ಲಿಂ ಧರ್ಮಗುರುಗಳಿಗೆ ಪತ್ರ

Thursday, February 1st, 2018
dakshina-kannada

ಮಂಗಳೂರು: ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ದತೆ ಆರಂಭವಾಗಿದೆ. ರಾಜಕೀಯ ಪಕ್ಷಗಳು ಒಂದೆಡೆ ಚುನಾವಣೆಯ ಅಖಾಡಕ್ಕಿಳಿಯಲು ಸಿದ್ದರಾಗುತ್ತಿದ್ದರೆ , ಇನ್ನೊಂಡೆದೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆಯ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಪ್ರಯತ್ನ ಆರಂಭಿಸಿದೆ. ಈ ಕುರಿತು ಮುಸ್ಲಿಂ ಧರ್ಮಗುರುಗಳಿಗೆ ಪತ್ರವನ್ನೂ ಬರೆದಿದೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಶಿಕ್ಷಣ ಮತ್ತು […]

ಕೊರಗಜ್ಜ ದೈವಸ್ಥಾನಕ್ಕೆ ಖಾದರ್, ಮುಸ್ಲಿಂ ಮೂಲಭೂತವಾದಿಗಳಿಂದ ಟೀಕೆ

Tuesday, January 30th, 2018
U-T-Kader

ಮಂಗಳೂರು: ತುಳುನಾಡು ದೇವ-ದೈವಗಳ ಬೀಡು. ಇಲ್ಲಿ ದೈವಾರಾಧನೆಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತದೆ. ತುಳುನಾಡಿನಲ್ಲಿ ದೈವಗಳನ್ನು ಧರ್ಮ ಭೇದ ಮರೆತು ಎಲ್ಲರೂ ಆರಾಧಿಸುತ್ತಾರೆ. ಆದರೆ ತುಳುನಾಡಿನ ಕಾರಣಿಕ ದೈವ ಸ್ವಾಮಿ ಕೊರಗಜ್ಜನ ದೈವಸ್ಥಾನಕ್ಕೆ ಆಹಾರ ಸಚಿವ ಯುಟಿಖಾದರ್ ಭೇಟಿ ನೀಡಿ ಪ್ರಸಾದ ಸ್ವೀಕರಿಸಿರೋದು ಇದೀಗ ಮುಸ್ಲಿಂ ಮೂಲಭೂತವಾದಿಗಳ ಕಣ್ಣು ಕೆಂಪಾಗಿಸಿದೆ.ಕಳೆದ ಕೆಲ ದಿನಗಳ ಹಿಂದೆ ಮಂಗಳೂರಿನ ಪ್ರಸಿದ್ದ ಕೊರಗಜ್ಜನ ಕ್ಷೇತ್ರದಲ್ಲಿ ಕೊರಗಜ್ಜನಿಗೆ ನರ್ತನ ಸೇವೆ ನಡೆದಿದ್ದು ಈ ಸಂಧರ್ಭದಲ್ಲಿ ಸಚಿವ ಯುಟಿಖಾದರ್ ಕೂಡಾ ಭೇಟಿ ನೀಡಿದ್ದರು. ಬಿಪಿಎಲ್ ಕಾರ್ಡ್ […]

ಯುಟಿ ಖಾದರ್ ರನ್ನು ಹಿಂದೂ ಧರ್ಮಕ್ಕೆ ಆಹ್ವಾನಿಸಿದ ಒಳ್ಳೆ ಹುಡುಗ ಪ್ರಥಮ್

Monday, January 15th, 2018
pratham

ಮಂಗಳೂರು: ಸಚಿವ ಯುಟಿ ಖಾದರ್ರ ಮುಸ್ಲಿಂರನ್ನು ಅನುಮಾನದಿಂದ ನೋಡುತ್ತಾರೆ ಹೇಳಿಕೆಗೆ ಸಾಮಾಜಿಕ ಜಾಲತಾಣ ಬಾರಿ ವಿರೋಧ ವ್ಯಕ್ತವಾಗುತ್ತಿದ್ದು ಇನ್ನು ಬಿಗ್ಬಾಸ್ ಖ್ಯಾತೀಯ ಪ್ರಥಮ್ ಕೂಡಾ ಖಾದರ್ ಗೆ ತಮ್ಮದೇ ಶೈಲಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಧಾರವಾಡದ ಕಲಾಭವನದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಖಾದರ್ ಎಂದು ಹೇಳಿದ ತಕ್ಷಣ ವಿಮಾನ ನಿಲ್ದಾಣದಲ್ಲಿ ಒಂದು ಸಾರಿ ಅಲ್ಲ, ಬದಲಾಗಿ ಎರಡು ಸಾರಿ ತಪಾಸಣೆ ಮಾಡಲಾಗುತ್ತದೆ. ಈ ರೀತಿಯಾದರೂ ನಾವು ಏನು ಮಾಡೊಕೆ ಆಗಲ್ಲ, […]