ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡುವುದಿಲ್ಲವೆಂದು ಎಂದು ಹೇಳಿ, ಸರಕಾರ ಈಗ ಮಾಡುತ್ತಿರುವುದೇನು ?

Friday, April 23rd, 2021
Market Bundh

ಮಂಗಳೂರು : ಕೊರೋನಾ ಮಾರ್ಗ ಸೂಚಿ ಪ್ರಕಾರ ಸರಕಾರ ಕ್ಷಣಕ್ಕೊಂದು ನಿರ್ಧಾರ ತಳೆದು ಜನರನ್ನು ಸಂಪೂರ್ಣ ಗೊಂದಲ ಹಾಗೂ ಭಯಭೀತ ಗೊಳಿಸಿದ್ದು, ಸರಕಾರ ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡುವುದಿಲ್ಲವೆಂದು ಹೇಳಿದ್ದು, ಇದೀಗ ಹಿಂಬಾಗಿಲ ಮೂಲಕ ಸಾರ್ವಜನಿಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿ, ವೀಕೆಂಡ್ ಕರ್ಫ್ಯೂ ಹೆಸರಲ್ಲಿ ಅಘೋಷಿತ ಸಂಪೂರ್ಣ ಲಾಕ್ ಡೌನ್ ಸ್ಥಿತಿಗೆ ತಂದಿದೆ. ಕೊರೋನಾ ನಿಯಂತ್ರಣ ಇರುವ ಪ್ರದೇಶದಲ್ಲಿ ಕೂಡ ವ್ಯವಹಾರ ಮಳಿಗೆಗಳನ್ನು ಏಕಾಏಕಿ ಬಲವಂತ ಮುಚ್ಚಲು ಆರಂಭಿಸಿದೆ. ಸರಕಾರದ ಈ ಕ್ರಮ ಮುಂದಿನ […]

ಅಕ್ರಮ ಜಾನುವಾರು ದಂಧೆ ಅಪರಾಧ ಅನಾಗರಿಕ- ಕೃತ್ಯ ವಿರೋಧಿಸಿ ಸಾಮೂಹಿಕ ಪ್ರತಿಭಟನೆ

Tuesday, June 11th, 2019
illigal cow

ಮಂಗಳೂರು  :  ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಮುಖ್ಯರಸ್ತೆಯಲ್ಲಿ ವಾಹನವೊಂದರಲ್ಲಿ ಜಾನುವಾರುಗಳನ್ನು ಸಾಗಾಟ ಮಾಡಲಾಗಿ, ಆ ಸಂದರ್ಭದಲ್ಲಿ ಸದ್ರಿ ವಾಹನಕ್ಕೆ ಅಪಘಾತವಾದ ವಾಹನದಲ್ಲಿ ಕಂಡು ಬಂದ ನಿರ್ಜೀವಗೊಂಡ ಮತ್ತು ಗಾಯಗೊಂಡ ಜಾನುವಾರುಗಳ ಬಗ್ಗೆ ಸುದ್ದಿ ಮತ್ತು ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಈ ಘಟನೆ ನಿರಂತರ ಪ್ರಚಾರವಾಗುತ್ತಿದ್ದು, ಈ ಕೃತ್ಯವು ನಾಗರಿಕ ಸಮಾಜಕ್ಕೆ ತೀವ್ರ ಮುಜುಗರವಾಗುತ್ತಿರುವುದಾಗಿದೆ. ಅಕ್ರಮ ಜಾನುವಾರು ಮಾರಾಟ, ಸಾಗಾಟ ಮತ್ತು ಖರೀದಿಯು ಸೇರಿದಂತೆ ಇಂತಹ ಜಾನುವಾರುಗಳನ್ನು ಆಹಾರಕ್ಕಾಗಿ ಉಪಯೋಗಿಸುತ್ತಿರುವುದನ್ನು ಧಾರ್ಮಿಕವಾಗಿ ನಿಷೇದಿಸಲಾಗಿದೆ. ಈ ಕೃತ್ಯಗಳು […]

ನಳಿನ್ ಕುಮಾರ್ ಕಟೀಲ್‌ ಗೆಲುವಿಗೆ ಮುಸ್ಲಿಮ್ ಒಕ್ಕೂಟ ಅಭಿನಂದನೆ

Friday, May 24th, 2019
Nalin

ಮಂಗಳೂರು : 2019ನೇ ಸಾರ್ವತ್ರಿಕ ಲೋಕಸಭೆಗೆ ದಕ್ಷಿಣ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸಿ ವಿಜಯಿಯಾದ ಶ್ರೀ ನಳಿನ್ ಕುಮಾರ್ ಕಟೀಲ್‌ರವರಿಗೆ ದ.ಕ ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಅಭಿನಂದನೆ ವ್ಯಕ್ತಪಡಿಸಿದೆ. ನಳಿನ್ ಕುಮಾರ್ ಕಟೀಲ್‌ರವರು ಅವರ ಸಂಸದೀಯ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಲಿ ಎಂದು ಹಾರೈಸಿದ್ದಾರೆ,

ಪ್ರವಾದಿ ನಿಂದನೆ: ಮುಸ್ಲಿಮ್ ಒಕ್ಕೂಟ ನಿಯೋಗದಿಂದ ಗೃಹ ಸಚಿವ ಎಂ.ಬಿ ಪಾಟಿಲ್ ರನ್ನು ಭೇಟಿ

Tuesday, January 8th, 2019
okkuta

ಮಂಗಳೂರು : ಇತ್ತೀಚೆಗೆ ಸುವರ್ಣ ವಾಹಿನಿಯ ನಿರೂಪಕ ಅಜಿತ್ ಹನಮಕ್ಕನವರ್ ರವರು ಟಿ.ವಿ ಸಂವಾದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಮ್ ಧರ್ಮದ ಮತ್ತು ಜಾಗತಿಕ ಪ್ರವಾದಿ ಮೊಹಮ್ಮದ್‌ರವರನ್ನು ಗುರಿಯಾಗಿಸಿ ನಿಂದನಾತ್ಮಕ ಹೇಳಿಕೆಯನ್ನು ನೀಡಿ, ವ್ಯಾಪಕ ಖಂಡನೆಗೆ ಗುರಿಯಾಗಿ, ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿದ್ದು, ಪ್ರಕರಣವೂ ಕೂಡಾ ದಾಖಲಾಗಿರುತ್ತದೆ. ಈ ಬೆಳವಣಿಗೆಗಳಿಂದಾಗಿ ಮುಸ್ಲಿಮ್ ಅಲ್ಪಸಂಖ್ಯಾತ ಸಮುದಾಯದ ಧಾರ್ಮಿಕ ಭಾವನೆ ಮತ್ತು ನಂಬಿಕೆಗಳಿಗೆ ಘಾಸಿಯಾಗಿದೆ. ಈ ಬಗ್ಗೆ ಸರಕಾರವು ಗಂಭೀರವಾಗಿ ಪರಿಗಣಿಸಿ ಮುಸ್ಲಿಮ್ ಅಲ್ಪಸಂಖ್ಯಾತ ಸಮುದಾಯದ ಧಾರ್ಮಿಕ ನಂಬಿಕೆಗೆ ನಿರಂತರ […]

ಪ್ರವಾದಿ ನಿಂದನೆ: ಮುಸ್ಲಿಮ್ ಒಕ್ಕೂಟ ನೇತೃತ್ವದ ನಿಯೋಗದಿಂದ ಪೊಲೀಸು ಆಯುಕ್ತರಿಗೆ ಮನವಿ

Tuesday, January 1st, 2019
Muslim Central

ಮಂಗಳೂರು  : ಬೆಂಗಳೂರಿನಿಂದ ಪ್ರಸಾರಿತ ಸುವರ್ಣ ನ್ಯೂಸ್ ಸುದ್ದಿ ವಾಹಿನಿ ಟಿ.ವಿ ಮಾಧ್ಯಮದ ನಿರೂಪಕ ಅಜಿತ್ ಹನುಮಕ್ಕನವರ್, ಇತ್ತೀಚೆಗೆ ಟಿ.ವಿ ಸಂವಾದ ಕಾರ್ಯಕ್ರಮವೊಂದರಲ್ಲಿ ಇತರ ವಿಷಯಗಳನ್ನು ಪ್ರಸ್ತಾವಿಸುವ ಸಂದರ್ಭದಲ್ಲಿ, ಮುಸ್ಲಿಮ್ ಜಗತ್ತಿನೊಂದಿಗೆ ಸಹ ಸಮುದಾಯದವರು ಗೌರವಿಸುವಂತ ಪ್ರವಾದಿ ಮೊಹಮ್ಮದ್‌ರವರನ್ನು ನಿಂದಿಸಿ, ಅವಹೇಳನ ಮಾಡುವಂತಹ ಪದಬಳಕೆಯ ಹೇಳಿಕೆ ನೀಡಿ ಒಂದು ನಿರ್ದಿಷ್ಟ ಸಮುದಾಯದ ಜನರ ಧಾರ್ಮಿಕ ಭಾವನೆ ಮತ್ತು ನಂಬಿಕೆಗಳಿಗೆ ಘಾಸಿ ಉಂಟು ಮಾಡಿದ ಪರಿಣಾಮವಾಗಿ ಜನರಿಂದ ವ್ಯಾಪಕ ಖಂಡನೆಗಳು, ಆಕ್ರೋಶಗಳು ಸೃಷ್ಟಿಯಾಗಿತ್ತು.ಈ ಬಗ್ಗೆ ವಿವಿಧ ಕಡೆಗಳಲ್ಲಿ ಪ್ರತಿಭಟನೆಗಳು […]

ನಿರೂಪಕ ಅಜಿತ್ ವಿರುದ್ದ ಪ್ರಕರಣ ದಾಖಲಿಸಲು ಮುಸ್ಲಿಮ್ ಒಕ್ಕೂಟ ಮನವಿ

Friday, December 28th, 2018
Ajith

ಮಂಗಳೂರು : ಇತ್ತೀಚೆಗೆ ಸುವರ್ಣ ನ್ಯೂಸ್ ಚಾನಲ್‌ನ ನಿರೂಪಕರಾದ ಅಜಿತ್ ರವರು ಪ್ರೊಫೆಸರ್ ಭಗವಾನ್ ರವರು ಈ ಹಿಂದೆ ಒಂದು ಸಮುದಾಯದ ಆದರ್ಶ ಪುರುಷರ ಬಗ್ಗೆ ಅವಹೇಳನಕಾರಿಯಾಗಿ ಪ್ರಸ್ತಾಪಿಸಿದನ್ನು ಟಿ.ವಿಯಲ್ಲಿ ವಿಶ್ಲೇಷಿಸುವಾಗ ಇಸ್ಲಾಮಿನ ಪ್ರವಾದಿಯವರ ಬಗ್ಗೆ ನಿಂದನಾತ್ಮಕವಾಗಿ ಪ್ರಸ್ತಾಪಿಸಿರುವುದನ್ನು ದ.ಕ ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ. ಪ್ರೊಫೆಸರ್ ಭಗವಾನ್ ರವರ ಹೇಳಿಕೆಯನ್ನು ವಿಶ್ಲೇಷಿಸುವ ಭರದಲ್ಲಿ ನಿರೂಪಕ ಅಜಿತ್‌ರವರು ಮುಸ್ಲಿಮ್ ಸಮುದಾಯದವರೊಂದಿಗೆ ಸರ್ವ ಧರ್ಮದವರು ಗೌರವಿಸುವ ಪ್ರವಾದಿ ಮಹಮ್ಮದ್‌ರ ಜೀವನ ಕ್ರಮದ ಅಸಹನೆಯ ಸಿದ್ಧಾಂತ ಭಯೋತ್ಪಾದಕ ಟಿಪ್ಪು […]

ಕೊಡಗು ಸಭೆಯಲ್ಲಿ ಪ್ರವಾದಿ ನಿಂದನೆ  ನವೆಂಬರ್ 16 ರಂದು ಮಂಗಳೂರಲ್ಲಿ ಪ್ರತಿಭಟನೆ

Saturday, November 10th, 2018
asraf k

ಮಂಗಳೂರು  : ಇತ್ತೀಚೆಗೆ ಕೊಡಗುವಿನ ಗೋಣಿ ಕೊಪ್ಪಲುವಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ವಿಚಾರ ಸಂಕಿರಣ ಕಾರ್ಯಕ್ರಮ ಒಂದರಲ್ಲಿ ಸಂತೋಷ ತಮ್ಮಯ್ಯ ಎಂಬ ಅಂಕಣಕಾರರೊಬ್ಬರು ಪ್ರವಾದಿ ಮಹಮ್ಮದ್ ರವರ ಜೀವನವನ್ನು ಪ್ರಸ್ತಾವಿಸಿ ಪ್ರವಾದಿವರ್ಯರು ಧಾರ್ಮಿಕ ಭಯೋತ್ಪಾದನೆಗೆ ಉತ್ತೇಜಿಸಿರುವುದಾಗಿ ಅವಹೇಳನಕಾರಿ ಹೇಳಿಕೆ ನೀಡಿ ಮತೀಯ ಉದ್ವಿಗ್ನತೆ ಸೃಷ್ಟಿಸಿ ಕೋಮುಗಲಭೆಯನ್ನುಂಟು ಮಾಡುವ ಹೀನ ಕೃತ್ಯವನ್ನು ಮುಸ್ಲಿಮ್ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಮತ್ತು ಕೃತ್ಯಕ್ಕೆ ಕಾರಣವಾದ ವ್ಯಕ್ತಿಯನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದ.ಕ ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟ, […]