ಮನಪಾ ಟಿಕೇಟಿಗೆ 10 ಲಕ್ಷ ರೂ. ಲಂಚ ಆರೋಪ, ಕಪಾಳಕ್ಕೆ ಹೊಡೆದದ್ದು ನಿಜ : ಮೊಯ್ದಿನ್ ಬಾವ

Friday, November 1st, 2019
Moideen Bava

ಮಂಗಳೂರು : ಮನಪಾ ಚುನಾವಣೆಗೆ 10 ಲಕ್ಷ ರೂ. ಲಂಚ ಪಡೆದು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟದ ದಿನ ರಾತ್ರಿ ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು ಇಲ್ಲದನ್ನು ಪ್ರಶ್ನಿಸಿ  ಮಾಜಿ ಶಾಸಕ ಮೊಯ್ದಿನ್ ಬಾವ ಕಪಾಳಕ್ಕೆ ಅವರ ನಿವಾಸದ್ಲಲಿಯೇ ಹೊಡೆದು ವಿಚಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೊಯ್ದಿನ್ ಬಾವ  ಉತ್ತರಿಸಿದ್ದಾರೆ. ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಿರೀಕ್ಷಿತವಾಗಿ ನನಗೆ ಅರಿವಿಲ್ಲದೆ ಟಿಕೇಟು ಆಕಾಂಕ್ಷಿ ಗುಲ್ಝಾರ್‌ ಬಾನು  ಮತ್ತು ಅವರ ಮಗ ಕಪಾಳಕ್ಕೆ  ಹೊಡೆದದ್ದು ನಿಜ ಎಂದಿದ್ದಾರೆ. ಈ ಹಿಂದೆ ಎಂದೂ ಇಂತಹ ಘಟನೆ ನಡೆದಿಲ್ಲ. ಈ ರೀತಿಯಲ್ಲಿ […]

ಮೊಯ್ದಿನ್ ಬಾವ ಮೇಲೆ ಹಲ್ಲೆ ಪ್ರಕರಣ : ಮಾಜಿ ಮೇಯರ್ ಪುತ್ರ ಬಂಧನ

Friday, November 1st, 2019
Mohiuddin-Bava

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಖಾಸಗಿ ಹೋಟೆಲ್ ಮುಂದೆ ಮಾಜಿ ಶಾಸಕ ಮೊಯ್ದಿನ್ ಬಾವ ಅವರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಪುತ್ರನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಗುಲ್ಜಾರ್ ಬಾನು ಅವರ ಪುತ್ರ ಅಜೀಂ ಬಂಧಿತ ಆರೋಪಿ. ಬುಧವಾರದಂದು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಳಿಕ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಗುಲ್ಜಾರ್ ಬಾನು ಅವರಿಗೆ ಟಿಕೆಟ್ ನಿರಾಕರಿಸಿರುವುದರಿಂದ ಗುಲ್ಜಾರ್ […]

ತಮ್ಮ ಸೋಲಿಗೆ ಇವಿಎಂ ಕಾರಣ…ದ.ಕ. ಜಿಲ್ಲೆಯ ನಾಲ್ವರು ಕಾಂಗ್ರೆಸ್ ಅಭ್ಯರ್ಥಿಗಳು ದೂರು!

Saturday, June 30th, 2018
jr-lobo

ಮಂಗಳೂರು: ವಿಧಾನ ಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಹಿನ್ನಡೆಗೆ ಇವಿಎಂ ದುರ್ಬಳಕೆಯೇ ಕಾರಣ ಎಂದು ಪರಾಜಿತರಾದ ದ.ಕ. ಜಿಲ್ಲೆಯ ನಾಲ್ವರು ಕಾಂಗ್ರೆಸ್ ಅಭ್ಯರ್ಥಿಗಳು ದೂರು ನೀಡಿದ್ದು, ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಜೆ ಆರ್ ಲೋಬೊ, ತಮ್ಮ ಸೋಲಿಗೆ ಇವಿಎಂ ಕಾರಣ ಎಂದು ಆರೋಪಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ನಂತರ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂ ಕೆ ಸೋಮಶೇಖರ್, ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಸೋತ ವಾಸು […]

ಕಾಂಗ್ರೆಸ್‌ ಜತೆ ಒಪ್ಪಂದ ಮಾಡಿಕೊಂಡಿದ್ರೆ ನನ್ನ ಸಾಲ ತೀರ್ತಿತ್ತು : ಸತ್ಯಜಿತ್‌ ಸುರತ್ಕಲ್

Wednesday, May 9th, 2018
satyajith

ಮಂಗಳೂರು: ಹಾಲಿ ಶಾಸಕ, ಕಾಂಗ್ರೆಸ್‌ ಅಭ್ಯರ್ಥಿ ಮೊಯ್ದಿನ್ ಬಾವ ಜತೆ ನಾನು ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದು ಬಿಜೆಪಿ ಟಿಕೆಟ್ ವಂಚಿತ ಸತ್ಯಜಿತ್‌ ಸುರತ್ಕಲ್ ಸ್ಪಷ್ಟಪಡಿಸಿದ್ದಾರೆ. ಇಂದು ನಗರದಲ್ಲಿ ಮಾತನಾಡಿದ ಅವರು, ನಮ್ಮ ಶಾಸಕ ಮೊಯ್ದಿನ್ ಬಾವ ಜತೆ ಯಾವುದೇ ಒಪ್ಪಂದವಿಲ್ಲ. ನಾನು‌‌ ಈಗಲೂ 85 ಲಕ್ಷ ಸಾಲದಲ್ಲಿದ್ದೇನೆ. ಒಂದು ವೇಳೆ ಒಪ್ಪಂದ ಮಾಡಿದ್ದರೆ ಈ ಸಾಲ ತೀರುತ್ತಿತ್ತು. ನನ್ನ ಬಗ್ಗೆ ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ರು. ಕೆಲವರು ನನ್ನನ್ನು ಮೂಲೆಗುಂಪು ಮಾಡಲು ವ್ಯವಸ್ಥಿತ ಸಂಚು […]

ಪೂಜಾರಿಯನ್ನು ಭೇಟಿಯಾದ ಶಾಸಕ ಮೊಯ್ದಿನ್ ಬಾವ, ಲೋಬೊ

Saturday, April 21st, 2018
mohauiddin-bava

ಮಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ ಬಿ.ಜನಾರ್ಧನ ಪೂಜಾರಿ ಅವರನ್ನು ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎ. ಮೊಯ್ದಿನ್ ಬಾವ ಮತ್ತು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಶಾಸಕದ್ವಯರ ಮಧ್ಯೆ ಕಿತ್ತಾಟ ತಂದಿಟ್ಟ ಹಾಸ್ಯ ಚಟಾಕಿ!

Friday, March 2nd, 2018
mohiuddin-bava

ಮಂಗಳೂರು: ತಾರಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕರು ಸಿಡಿಸಿದ ಹಾಸ್ಯ ಚಟಾಕಿಯೊಂದು ಗಂಭೀರ ರೂಪ ತಾಳಿ ಶಾಸಕದ್ವಯರಾದ ಅಭಯಚಂದ್ರ ಜೈನ್ ಹಾಗೂ ಮೊಯ್ದಿನ್ ಬಾವ ನಡುವೆ ತಳ್ಳಾಟ, ಚೀರಾಟ ನಡೆಯಿತು. ಪಿಲಿಕುಳದಲ್ಲಿ ತಾರಾಲಯ ವೀಕ್ಷಣೆಗೂ ಮುನ್ನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎಂ.ಆರ್. ಸೀತಾರಾಂ ಅವರನ್ನು ಮಾತಿಗೆಳೆದ ಶಾಸಕ ಮೊಯ್ದಿನ್ ಬಾವ, ಮೇಯರ್ ಕವಿತಾ ಅವರ ಅಧಿಕಾರವಧಿ ಮುಗಿಯುತ್ತಾ ಬಂತು ಎಂದರು. ಅದಕ್ಕೆ ಪ್ರತಿಯಾಗಿ ಸಚಿವರು, ಹಾಗಂತ ಅವರನ್ನು ಸುಮ್ಮನೆ ಇರಲು ಬಿಡಬೇಡಿ. ಏನಾದರೂ ಅವಕಾಶ ಕಲ್ಪಿಸಿಕೊಡಿ. ನಾವೆಲ್ಲಾ […]

ಚುನಾವಣೆ ಮುನ್ನವೇ ಮಹಿಳೆಯರಿಗೆ ಸೀರೆ ಹಂಚಿದ ಶಾಸಕ ಮೊಯ್ದಿನ್‌ ಬಾವ!?

Thursday, February 22nd, 2018
mohaiddin-bava

ಮಂಗಳೂರು: ಉತ್ತರ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಈ ಬಾರಿ ನಾರಿಮಣಿಯರನ್ನು ಓಲೈಸುವ ಯೋಜನೆ ಹಾಕಿಕೊಂಡಂತಿದೆ. ಹೌದು, ಶಾಸಕ ಮೊಯ್ದಿನ್ ಬಾವ ತಮ್ಮ ಕ್ಷೇತ್ರದಲ್ಲಿ ನಡೆಸುವ ಪ್ರಚಾರ ಕಾರ್ಯದಲ್ಲಿ ಅವಕಾಶ ಸಿಕ್ಕಾಗೆಲ್ಲಾ ಸೀರೆ ಹಂಚುವ ಮೂಲಕ ಮಹಿಳೆಯರ ಓಲೈಕೆಗೆ ಹೊರಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅವರು ಸೀರೆ ಹಂಚುವ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಟೀಕೆಗೆ ಗುರಿಯಾಗಿದೆ.

ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಬಿ.ಎ. ಮೊಹಿದಿನ್ ರನ್ನು ಭೇಟಿಯಾದ ಸಿಎಂ

Monday, January 8th, 2018
hospital

ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಬಿ.ಎ. ಮೊಹಿದಿನ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಬೆಳಗ್ಗೆ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರವಿವಾರ ರಾತ್ರಿ ಮಂಗಳೂರಿನಲ್ಲಿ ತಂಗಿದ್ದರು. ನಗರದ ಕೊಡಿಯಲ್ ಬೈಲ್ ನಲ್ಲಿರುವ ಯೆನೆಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಬಿ.ಎ. ಮೊಹಿದಿನ್ ಅವರನ್ನು ಮುಖ್ಯಮಂತ್ರಿ ಭೇಟಿಯಾಗಿ, ಆರೋಗ್ಯ ವಿಚಾರಿಸಿ ನಂತರ ವೈದ್ಯರ ಜೊತೆ ಸಮಾಲೋಚನೆ ನಡೆಸಿದರು. ಈ ಸಂದರ್ಭ […]

ಶಾಸಕರ ಪರಿಹಾರ ನಿಧಿ ಬೇಡ: ದೀಪಕ್‌ ತಾಯಿ ಪ್ರೇಮಾ

Friday, January 5th, 2018
deepak

ಮಂಗಳೂರು: ಮೃತ ದೀಪಕ್ ಕುಟುಂಬಕ್ಕೆ ಶಾಸಕ ಮೊಯ್ದಿನ್ ಬಾವ ಐದು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಆದರೆ ತಮಗೆ ಶಾಸಕರ ಪರಿಹಾರ ನಿಧಿ ಬೇಡ, ನನ್ನ ಮಗನಿಗಿಂತ ಅವರ ಪರಿಹಾರದ ಹಣ ದೊಡ್ಡದಲ್ಲ. ಸರ್ಕಾರದಿಂದ ಬರುವ ಪರಿಹಾರವೇ ಸಾಕು ಎಂದು ದೀಪಕ್ ತಾಯಿ ಪ್ರೇಮಾ ಹೇಳಿದ್ದಾರೆ. ಮಗನನ್ನು ಕಳೆದುಕೊಂಡ ದುಃಖವನ್ನು ಸಂಬಂಧಿಕರಲ್ಲಿ ತೋಡಿಕೊಂಡ ಪ್ರೇಮಾ, ಮಗ ದೀಪು ಮಧ್ಯಾಹ್ನ ಮನೆಗೆ ಊಟಕ್ಕೆ ಬರುತ್ತಿದ್ದ. ನಿನ್ನೆಯೂ ಎಂದಿನಂತೆ ಬರುವ ಸಮಯದಲ್ಲೇ ಅವನನ್ನು ಕೊಲೆ ಮಾಡಿದ್ದಾರೆ. ಆತನನ್ನು ಕೊಂದವರಿಗೆ ದೇವರು […]

ಬಿಜೆಪಿಯ ನಾಯಕರೂ ಮಕ್ಕಳಿಗೆ ಪುಸ್ತಕ, ಕೊಡೆ ನೀಡಲಿ – ಪ್ರತಿಭಾ ಕುಳಾಯಿ

Thursday, June 15th, 2017
Pratibha Kulai

ಮಂಗಳೂರು:  ಶಾಸಕ ಮೊಯ್ದಿನ್ ಬಾವ ಕೇವಲ ಪ್ರಚಾರಕ್ಕಾಗಿ ಹುಟ್ಟುಹಬ್ಬದ ದಿನದಂದು ತಮ್ಮ ಭಾವಚಿತ್ರಗಳನ್ನೊಳಗೊಂಡ ಪುಸ್ತಕಗಳನ್ನು ತಮ್ಮ ಕ್ಷೇತ್ರದ ಮಕ್ಕಳಿಗೆ ವಿತರಿಸಿದ್ದಾರೆ ಎಂದು ಪ್ರತಿಪಕ್ಷಗಳು ಮಾಡಿದ ಪ್ರತಿಭಟನೆಗೆ ಉತ್ತರವಾಗಿ ಬಿಜೆಪಿ ನಾಯಕರೂ ಇದರಿಂದ ಹೊರತಾಗಿಲ್ಲ ಎಂದು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಭಾ ಕುಳಾಯಿ, ಬಿಜೆಪಿ ನಾಯಕರಾದ ಹೆಬ್ಬಾಳದ ಶಾಸಕ ನಾರಾಯಣ ಸ್ವಾಮಿ ತಮ್ಮ ಭಾವಚಿತ್ರವಿರುವ ಪುಸ್ತಕಗಳನ್ನು ವಿತರಿಸಿದ್ದಾರೆ. ಇದಕ್ಕೆ ಬಿಜೆಪಿಗರು ಏನಂತಾರೆ ಎಂದು ಪ್ರಶ್ನಿಸಿದ್ದಾರೆ. ಹೆಬ್ಬಾಳದ ಶಾಸಕ ನಾರಾಯಣ ಸ್ವಾಮಿಯವರು […]