ಮಂಗಳೂರು : ಕಾನೂನು ಕೈಗೆತ್ತಿಕೊಳ್ಳುವವರಿಗೆ ಪ್ರವೇಶವಿಲ್ಲ; ಮಾಜಿ ಶಾಸಕ ಮೊಯ್ದಿನ್ ಬಾವಾ ಎಚ್ಚರಿಕೆ

Wednesday, December 25th, 2019
Moihdin-bava

ಮಂಗಳೂರು : ಜನವರಿ 4 ರಂದು ಎನ್ಆರ್ಸಿ ಹಾಗೂ ಸಿಎಎ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಈ ಸಂದರ್ಭದಲ್ಲಿ ಯಾವ ಯುವಕರು ಕಾನೂನು ಕೈಗೆತ್ತಿಕೊಳ್ಳುತ್ತಾರೋ ಅವರಿಗೆ ಈ ಮಣ್ಣಿನಲ್ಲಿರುವ ಹಕ್ಕಿಲ್ಲ ಎಂದು ಮಾಜಿ ಶಾಸಕ ಮೊಯ್ದಿನ್ ಬಾವಾ ಖಡಕ್‌ ಆಗಿ ಸೂಚನೆ ಕೊಟ್ಟರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಈ ಆರು ತಿಂಗಳ ಒಳಗೆ ಮುಸ್ಲಿಮರ ವಿರುದ್ಧ ಅನೇಕ ಕಾನೂನುಗಳು ಜಾರಿಗೊಂಡರೂ ನಾವು ಪ್ರತಿಭಟನೆ ನಡೆಸಲಿಲ್ಲ. ಆದರೆ ಎನ್ಆರ್‌ಸಿ ಹಾಗೂ ಸಿಎಎ ಕಾಯ್ದೆ ವಿರೋಧಿಸಿ ದೇಶಾದ್ಯಂತ ಹೋರಾಟಗಳು […]

ಮೊಯ್ದಿನ್ ಬಾವಾಗೆ ಪ್ರಸಾದ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಯುವಕರ ಗುಂಪಿನ ಮೇಲೆ ದೈವ ಆಕ್ರೋಶ..!

Friday, May 4th, 2018
mohuiddin-bava

ಮಂಗಳೂರು: ಶಾಸಕ‌ ಮೊಯ್ದಿನ್ ಬಾವಾಗೆ ಪ್ರಸಾದ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಯುವಕರ ಗುಂಪಿನ ಮೇಲೆ ದೈವ ಆಕ್ರೋಶಗೊಂಡಿದೆ. ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಯ್ದಿನ್ ಬಾವಾ ಅವರು ಎರಡು ದಿನಗಳ ಹಿಂದೆ ಮಂಗಳೂರಿನ ಮಲ್ಲೂರು ಜಾತ್ರೆಗೆ ಹೋಗಿದ್ದರು. ಈ ವೇಳೆ ಬಾವಾಗೆ ದೈವ ಧೂಮವತಿ ಬಂಟ ಪ್ರಸಾದ ನೀಡಿತ್ತು. ಇದಕ್ಕೆ ಸ್ಥಳೀಯ ಕೆಲವು ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಯುವಕರ ಆಕ್ಷೇಪಕ್ಕೆ ಆಕ್ರೋಶಗೊಂಡ ದೈವ ನನ್ನ ಬಳಿ ಬರುವವರು ಎಲ್ಲರೂ ಒಂದೇ. ನನಗೆ ತಾರತಮ್ಯ ಇಲ್ಲ ಎಂದಿದೆ. […]

ಪಿಲಿಕುಳ: ದೇಶದ ಪ್ರಥಮ 3ಡಿ ಹೈಬ್ರೀಡ್ ತಾರಾಲಯ ಲೋಕಾರ್ಪಣ

Thursday, March 1st, 2018
pilukula

ಮಂಗಳೂರು: ಪಿಲಿಕುಳದ ಡಾ.ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ಭಾರತದ ಪ್ರಥಮ ‘ಸ್ವಾಮಿ ವಿವೇಕಾನಂದ’ ತ್ರಿಡಿ 8ಕೆ ಹೈಬ್ರೀಡ್ ತಾರಾಲಯವನ್ನು ಇಂದು ರಾಜ್ಯದ ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಂ ಲೋಕಾರ್ಪಣೆಗೊಳಿಸಿದರು. ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ನಿರ್ಮಾಣವಾಗಿರುವ ‘ಸ್ವಾಮಿ ವಿವೇಕಾನಂದ ತಾರಾಲಯ’ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಮೇಯರ್ ಕವಿತಾ ಸನಿಲ್ ಹಾಗೂ ಶಾಸಕ ಜೆ.ಆರ್. ಲೋಬೋ ಸೇರಿದಂತೆ ಗಣ್ಯರೊಂದಿಗೆ ‘ನಾವು ನಕ್ಷತ್ರಗಳು’ ಎಂಬ ತ್ರಿಡಿ ಪ್ರದರ್ಶನವನ್ನು ವೀಕ್ಷಿಸಿದ ಬಳಿಕ […]

ಕುಡುಪು ಬ್ರಹ್ಮಕಲಶ ಧಾರ್ಮಿಕ ಸಮಾರಂಭ

Monday, February 19th, 2018
kudupu

ಮಂಗಳೂರು: ಕುಡುಪು ಶ್ರೀಅನಂತ ಪದ್ಮನಾಭ ದೇವಸ್ಥಾನ ನಾಗರಾಧನೆಯ ಪ್ರಸಿದ್ಧ ಕ್ಷೇತ್ರವಾಗಿದ್ದು, ಬಹಳ ವರ್ಷಗಳ ಬಳಿಕ ಜೀರ್ಣೋದ್ಧಾರ ಕಾಣುತ್ತಿದೆ. ಸಮಗ್ರ ಭೂಮಿಯಲ್ಲಿ ನಾಗ ದೇವರ ಸ್ಥಾನ ಇದೆ. ಪ್ರಸಕ್ತ ನಾಗನಿಗೆ ನಿರ್ದಿಷ್ಟ ಸ್ಥಾನ ಕಲ್ಪಿಸಲಾಗಿದೆ. ನಾಗದೇವರ ಸಾನಿಧ್ಯವಿರುವ ದೇವಸ್ಥಾನಗಳಲ್ಲಿ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಕೂಡಾ ಒಂದು ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು. ಅವರು ಕುಡುಪು ಅನಂತ ಪದ್ಮನಾಭ ದೇವಸ್ಥಾನದ ಅನಂತ ಪದ್ಮನಾಭ ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ […]

ಎಂಪಿಎಲ್‌: ಕ್ರಿಕೆಟ್ ತಂಡದ ಮಾಲೀಕರಾದ ಐವನ್ ಡಿಸೋಜಾ

Friday, February 16th, 2018
ivan-desouza

ಮಂಗಳೂರು: ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಈಗ ಕ್ರಿಕೆಟ್ ತಂಡದ ಮಾಲೀಕರಾಗಿದ್ದಾರೆ. ಐವನ್ ಅವರು ಮಂಗಳೂರು ಪ್ರೀಮಿಯರ್ ಲೀಗ್ (ಎಂಪಿಎಲ್) ಸೀಸನ್-4ರ ಮೆಸ್ಟ್ರೋ ಟೈಟಾನ್ಸ್ ಕ್ರಿಕೆಟ್ ತಂಡದ ಮಾಲೀಕರಾಗಿದ್ದಾರೆ. ಈ ತಂಡಕ್ಕೆ ಫೆ.17ರಂದು ಫಿಜಾಫೋರಂ ಮಾಲ್‌ನಲ್ಲಿ ಆಟಗಾರರ ಆಯ್ಕೆ ನಡೆಯಲಿದೆ. ತಂಡಕ್ಕೆ ಕಾನೂಟ್ ಫರ್ನಾಂಡಿಸ್ ಸಹ ಮಾಲೀಕರಾಗಿದ್ದು, ಅಲ್ಫೋನ್ಸ್ ಫರ್ನಾಂಡಿಸ್ ಪಾಲುದಾರರಾಗಿದ್ದಾರೆ. ಮಂಗಳೂರು, ಕೊಡಗು, ಉಡುಪಿ ಜಿಲ್ಲೆಗಳನ್ನು ಒಳಗೊಂಡಂತೆ ಮಂಗಳೂರು ಪ್ರೀಮಿಯರ್ ಲೀಗ್(ಎಂಪಿಎಲ್-ಸೀಸನ್ 1,2,3) ಟಿ-20 ಕ್ರಿಕೆಟ್ ಪಂದ್ಯಗಳನ್ನು ನಡೆಸುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ […]

ದೀಪಕ್ ರಾವ್ ಹತ್ಯೆ ಹಿಂದೆ ಬಿಜೆಪಿ ಕೈವಾಡ: ಶಾಸಕ ಮೊಯ್ದಿನ್ ಬಾವಾ ಆರೋಪ

Friday, January 5th, 2018
MLA-Bava

ಮಂಗಳೂರು: ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಹತ್ಯೆಯ ಹಿಂದೆ ಬಿಜೆಪಿಯ ರಾಜಕೀಯ ಉದ್ದೇಶವಿದೆ ಎಂದು ಮಂಗಳೂರು ಉತ್ತರ ಶಾಸಕ ಮೊಯ್ದಿನ್ ಬಾವಾ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕುರಿತು ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಯನ್ನು ಕೋರಲಾಗಿದೆ ಎಂದು ಹೇಳಿದರು. ದೀಪಕ್ ರಾವ್ ಹತ್ಯೆ ಆರೋಪಿಗಳಾದ ಪಿಂಕಿ ನವಾಜ್‍ನ ಸಹೋದರ ಲಾದನ್ ಇಸ್ಮಾಯಿಲ್ ಹಾಗೂ ಆತನ ಅಕ್ಕನ ಗಂಡ (ಬಾವ) ಕಾಪುವಿನಲ್ಲಿ ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹತ್ಯೆಯ ಹಿಂದೆ ಇರಬಹುದಾದ ಬಿಜೆಪಿಯ […]

ಸ್ವತಃ ತಾವೇ ಕೇಸರಿ ಶಾಲು ಹಾಕಿಕೊಂಡು ಕೈಕಂಬ ಮತ್ತು ಗುರುಪುರದ ಶ್ರೀಕೃಷ್ಣಾಷ್ಟಮಿಯಲ್ಲಿ ಮೊಯ್ದಿನ್ ಬಾವಾ

Saturday, September 16th, 2017
Moideen Bava

ಮಂಗಳೂರು : ಉತ್ತರ ಕ್ಷೇತ್ರದ ಶಾಸಕ ಮೊಯ್ದಿನ್ ಬಾವಾ ಕೇಸರಿ ಶಾಲು ಹೊದ್ದುಕೊಂಡು ಶ್ರೀಕೃಷ್ಣಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕೇಸರಿ ಶಾಲು ಹೊದ್ದುಕೊಂಡು ಶ್ರೀಕೃಷ್ಣಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೊಯ್ದಿನ್ ಬಾವಾ ಸ್ವತಃ  ತಾವೇ ಕೇಸರಿ ಶಾಲು ಹಾಕಿಕೊಂಡು ಕೈಕಂಬ ಮತ್ತು ಗುರುಪುರದ ಶ್ರೀಕೃಷ್ಣಾಷ್ಟಮಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು . ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮೂಲಭೂತವಾದಿಗಳು ಇದಕ್ಕೆ ಅಪಸ್ವರ ಎತ್ತಿದ್ದಾರೆ. ಜನರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ ಶಾಸಕ ಬಾವಾ ಸುದ್ದಿಯಾಗುತ್ತಿದ್ದರು. ಆದ್ರೆ ಇದೀಗ ಶ್ರೀಕೃಷ್ಣಾಷ್ಟಮಿಯಲ್ಲಿ ಭಾಗಿಯಾಗಿ ಸುದ್ದಿಯಾಗಿದ್ದಾರೆ.   […]