ಬಾಲ ಯಕ್ಷಕೂಟ ದಶಮ ಸಂಭ್ರಮಕ್ಕೆ ಚಾಲನೆ ನೀಡಿದ ಮೋಹನ ಆಳ್ವ

Wednesday, December 12th, 2018
Bala yaksha

ಮಂಗಳೂರು: ರಾಜ ಮಹಾರಾಜರು ಕಲೆಗಳನ್ನು ಪೋಷಿಸುತ್ತಿದ್ದರು. ಈಗ ಕೇಂದ್ರ, ರಾಜ್ಯ ಸರಕಾರಗಳು ಪೋಷಿಸುವ ಕೆಲಸ ಮಾಡಬೇಕಿತ್ತು. ಆದರೆ ಆ ರೀತಿಯ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು. ಕದ್ರಿ ರಾಜಾಂಗಣದಲ್ಲಿ ಬುಧವಾರ ಬಾಲ ಯಕ್ಷಕೂಟವು ದಶ ವರ್ಷದ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸರಕಾರ ಆಯೋಜಿಸುವ ಎನ್ ಸಿಸಿ, ಎನ್ ಎಸ್ಸೆಎಸ್, ಪ್ರತಿಭಾ ಕಾರಂಜಿಗಳಲ್ಲಿ, ಯುವಜನೋತ್ಸವಗಳಲ್ಲಿನ ಅವ್ಯವಸ್ಥೆ ಇದನ್ನು ಪ್ರತಿಫಲಿಸುತ್ತಿದೆ. ಎಂದರು. ವೈವಿಧ್ಯಮಯ ಜಾನಪದ ಕಲೆಗಳ ಭಾರತದಲ್ಲಿ […]

ಆಳ್ವಾಸ್ ವಿದ್ಯಾರ್ಥಿಸಿರಿ 2018

Tuesday, October 2nd, 2018
alwas

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ‘ಆಳ್ವಾಸ್ ವಿದ್ಯಾರ್ಥಿಸಿರಿ 2018’ ವಿದ್ಯಾರ್ಥಿ ಸಾಹಿತ್ಯ – ಸಂಸ್ಕøತಿ ಸಮ್ಮೇಳನದ ಅಧ್ಯಕ್ಷರಾಗಿ ಕಾಸರಗೋಡಿನ ಚಿನ್ಮಯ ಪ್ರೌಢಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ ಟಿ ರೈ ಪೆರ್ಲ ಆಯ್ಕೆಯಾಗಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷರಾಗಿ ಉಜಿರೆ ಎಸ್‍ಡಿಎಂ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಭಾರ್ಗವಿ ಶಬರಾಯ ಆಯ್ಕೆಯಾಗಿದ್ದಾರೆ. ಸಂವಾದ ಗೋಷ್ಠಿಯ ಅಧ್ಯಕ್ಷತೆಗೆ ಉಜಿರೆ ಎಸ್‍ಡಿಎಂ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಾಮ್ ಪ್ರಸಾದ್ ಹಾಗೂ ಸಮಾರೋಪ ಭಾಷಣಕ್ಕೆ ಆಳ್ವಾಸ್ ಆಂಗ್ಲ ಮಾಧ್ಯಮ […]

ಆ. 10ರಂದು ‘ಆಳ್ವರೊಂದಿಗೆ ನಾವು’ ಕಾರ್ಯಕ್ರಮ

Tuesday, August 8th, 2017
Alvas

ಮಂಗಳೂರು : ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಎಂ. ಮೋಹನ ಆಳ್ವ ಅವರ ವಿರುದ್ಧ ಟೀಕೆಗಳನ್ನು ಮಾಡುವುದು ಸರಿಯಲ್ಲ ಎಂದು ಸಂಸ್ಕಾರ ಭಾರತಿಯ ಅಧ್ಯಕ್ಷರಾದ ಪುರಷೋತ್ತಮ ಭಂಡಾರಿ ಹೇಳಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಂಡಾರಿ, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದ ಕಾವ್ಯಾ ಸಾವಿನ ಕುರಿತು ತನಿಖೆ ನಡೆಯುತ್ತಿದೆ. ದೃಶ್ಯಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಡಾ. ಮೋಹನ ಆಳ್ವರ ತೇಜೋವಧೆ ಮಾಡುವ ಹೇಳಿಕೆಗಳನ್ನು ನೀಡಲಾಗುತ್ತಿದೆ. ಅವರು ತನಿಖೆಗೆ ಸಂಪೂರ್ಣ ಸಹಕಾರ ಮಾಡುವುದಾಗಿ ಹೇಳಿದ ಬಳಿಕವೂ ಇಂತಹ ಟೀಕೆಗಳು ವ್ಯಕ್ತವಾಗುತ್ತಿರುವುದರಿಂದ ಅವರು ಘಾಸಿಗೊಂಡಿದ್ದಾರೆ. […]

ನೀಟ್: ಆಳ್ವಾಸ್ ಕಾಲೇಜಿನಿಂದ ಅತ್ಯುತ್ತಮ ಸಾಧನೆ  ಶೇ.93.70 ಫಲಿತಾಂಶ

Monday, July 3rd, 2017
Mohan Alva

ಮೂಡುಬಿದಿರೆ: ರಾಷ್ಟ್ರೀಯ ಮಟ್ಟದಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನಿಂದ 3241 ಮಂದಿ ಪರೀಕ್ಷೆ ಬರೆದಿದ್ದು, 3037 ಮಂದಿ ತೇರ್ಗಡೆಯಾಗಿ ಶೇ.93.70 ಫಲಿತಾಂಶ ಲಭಿಸಿದೆ. ರಾಜ್ಯಮಟ್ಟದ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಪ್ರವೇಶಾತಿ ಸೀಟು ಹಂಚಿಕೆಯಲ್ಲಿ ಸಾಮಾನ್ಯವರ್ಗ, ಎಸ್‍ಸಿ, ಎಸ್‍ಟಿ, ಒಬಿಸಿ, ಹೈದರಾಬಾದ್ ಕರ್ನಾಟಕ ಹಾಗೂ ಕನ್ನಡ ಮಾಧ್ಯಮ ಕೋಟಾದಡಿಯಲ್ಲಿ ಆಳ್ವಾಸ್‍ನ 500 ಮಂದಿ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುವುದು ಖಚಿತವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿ ತಿಳಿಸಿದ್ದಾರೆ. ನೀಟ್ […]

ಸಂಸ್ಕೃತಿ ಅಗಾಧವಾಗಿ ಬೆಳೆದಾಗ ಧ್ವೇಷ ದೂರವಾಗುತ್ತದೆ: ಚಾರುಕೀರ್ತಿ ಪಂಡಿತಾಚರ್ಯವರ್ಯ ಸ್ವಾಮೀಜಿ

Friday, November 11th, 2016
alvas-chitrasiri

ಮಂಗಳೂರು: ಒಬ್ಬ ಚಿತ್ರ ಕಲಾವಿದ ಬಣ್ಣ ಮತ್ತು ರೇಖೆಗಳ ಮೂಲಕ ಜೀವನದ ವಿವಿಧ ಮಜಲುಗಳನ್ನು ಬಿಂಬಿಸುವ ಶಕ್ತಿಯನ್ನು ಹೊಂದಿದ್ದಾನೆ. ಕಲೆಯ ಬೆಳಕು ನಮ್ಮ ಮನಸ್ಸನ್ನು ಅರಳಿಸುವಂತಾಗಬೇಕು. ಧರ್ಮ, ನಂಬಿಕೆಗಳಿರುವ ಕಲಾವಿದ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾನೆ. ಏಕತೆಯನ್ನು ಮೂಡಿಸುವಂತಹ ಕೆಲಸವಾದಾಗ ರಾಷ್ಟ್ರ ಸಮೃದ್ಧವಾಗಿ ಬೆಳೆಯುತ್ತದೆ. ಸಂಸ್ಕೃತಿ ಅಗಾಧವಾಗಿ ಬೆಳೆದಾಗ ಧ್ವೇಷ ದೂರವಾಗುತ್ತದೆ ಎಂದು ಮೂಡುಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚರ್ಯವರ್ಯ ಸ್ವಾಮೀಜಿ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪುತ್ತಿಗೆಪದವು ಆಳ್ವಾಸ್ ಪ್ರೌಢಶಾಲಾ ಆವರಣದಲ್ಲಿ ಮೂರು ದಿನಗಳು ನಡೆಯಲಿರುವ […]

ಫಿಬಾ ಏಷ್ಯನ್ ಜೂನಿಯರ್ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಶಿಪ್‌‌ಗೆ ಬಾಂಧವ್ಯ ಹೆಚ್. ಎಂ. ನಾಯಕಿಯಾಗಿ ಆಯ್ಕೆ

Thursday, November 3rd, 2016
Bhandavya

ಮಂಗಳೂರು: ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನವೆಂಬರ್ 11ರಿಂದ ಆರಂಭವಾಗಲಿರುವ 23ನೇ ಫಿಬಾ ಏಷ್ಯನ್ ಜೂನಿಯರ್ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಶಿಪ್‌‌ಗೆ ಆಯ್ಕೆಯಾಗಿರುವ ಭಾರತದ ತಂಡಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಾಂಧವ್ಯ ಹೆಚ್. ಎಂ. ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 2013ರಲ್ಲಿ ಕೊಲಂಬೊದಲ್ಲಿ ಜರುಗಿದ ಏಷಿಯನ್ ಯೂತ್ ಬಾಸ್ಕೆಟ್‌ಬಾಲ್‌ 2014ರಲ್ಲಿ ಜೋರ್ಡನ್‌ನಲ್ಲಿ ನಡೆದ ಜೂನಿಯರ್ ಏಷ್ಯನ್ ಬಾಸ್ಕೆಟ್‌ಬಾಲ್‌ ಹಾಗೂ 2015ರಲ್ಲಿ ಚೀನಾದಲ್ಲಿ ಜರುಗಿದ ಸೀನಿಯರ್ ಏಷ್ಯನ್ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ ಶಿಪ್‌ನಲ್ಲಿ ಬಾಂಧವ್ಯ ಹೆಚ್. ಎಂ. ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. ಪ್ರಸ್ತುತ ಆಳ್ವಾಸ್ ಕಾಲೇಜಿನ ಪ್ರಥಮ ಬಿ.ಕಾಂ […]

ಆಳ್ವಾಸ್‍ನುಡಿಸಿರಿ -2016′ ರ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಬಿ.ಎನ್. ಸುಮಿತ್ರಾಬಾಯಿ ಆಯ್ಕೆ

Thursday, September 29th, 2016
alwas-nudisiri

ಮಂಗಳೂರು :ಈ ಬಾರಿ ‘ಕರ್ನಾಟಕ ನಾಳೆಗಳ ನಿರ್ಮಾಣ’ ಎಂಬ ಪರಿಕಲ್ಪನೆಯಲ್ಲಿ ಮೂರು ದಿನಗಳ ಕಾಲ ಜರಗುವ `ಆಳ್ವಾಸ್‍ನುಡಿಸಿರಿ -2016′ ರ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿವೃತ್ತ ಸಂಸ್ಕೃತ ಭಾಷಾ ಪ್ರಾಧ್ಯಾಪಕಿಯಾಗಿರುವ ವಿಮರ್ಶಕಿ ಡಾ. ಬಿ.ಎನ್. ಸುಮಿತ್ರಾಬಾಯಿ ಆಯ್ಕೆಯಾಗಿದ್ದು, ಸಾಹಿತಿ ಡಾ. ಜಯಂತ ಗೌರೀಶ ಕಾಯ್ಕಿಣಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಈ ಕುರಿತು ತಿಳಿಸಿದ್ದಾರೆ. ನಿರಂತರ ಆಳ್ವಾಸ್ ನುಡಿಸಿರಿ ಕನ್ನಡ ನಾಡು-ನುಡಿ-ಸಂಸ್ಕೃತಿಯನ್ನು ಆಯೋಜಿಸಿಕೊಂಡು ಬರುತ್ತಿದ್ದು 13ನೇ ವರ್ಷಕ್ಕೆ […]

ಡಿ. 24- 27: “ಆಳ್ವಾಸ್‌ ವಿರಾಸತ್‌”

Tuesday, December 22nd, 2015
Alvas Virasat

ಮಂಗಳೂರು: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ “ಆಳ್ವಾಸ್‌ ವಿರಾಸತ್‌’ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಡಿ. 24ರಿಂದ 27ರ ವರೆಗೆ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ತಿಳಿಸಿದ್ದಾರೆ. ಆಳ್ವಾಸ್‌ ಆವರಣ ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ವನಜಾಕ್ಷಿ ಕೆ. ಶ್ರೀಪತಿ ಭಟ್‌ ವೇದಿಕೆ ವಿರಾಸತ್‌ ಕಾರ್ಯಕ್ರಮಗಳಿಗೆ ಸಿದ್ಧಗೊಂಡಿದೆ. 35,000 ಮಂದಿ ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ಬಯಲುರಂಗ ಮಂದಿರ ಇದಾಗಿದೆ. 24ರಂದು ಸಂಜೆ 5.15ರಿಂದ 5.30ರ ತನಕ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಅತಿಥಿಗಳನ್ನು ವೇದಿಕೆಗೆ ಕರೆತರಲಾಗುತ್ತದೆ. 5.30ರಿಂದ ಸಭಾ […]

ಆಳ್ವಾಸ್ ನುಡಿಸಿರಿ – 2014- ನವೆಂಬರ್ 14, 15 ಮತ್ತು 16

Wednesday, October 8th, 2014
Mohan Alva

ಮಂಗಳೂರು : ಮೂಡುಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ವು ನಡೆಸಿಕೊಂಡು ಬರುತ್ತಿರುವ ನಾಡು-ನುಡಿ-ಸಂಸ್ಕೃತಿಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಆಳ್ವಾಸ್ ನುಡಿಸಿರಿ. ಕಳೆದ ಹನ್ನೊಂದು ವರ್ಷಗಳಿಂದ ನಿರಂತರವಾಗಿ ಸಂಘಟಿಸಿಕೊಂಡು ಬರುವ ಮೂಲಕ ನಾಡಿನಾದ್ಯಂತ ನಾಡು-ನುಡಿಯ ಎಚ್ಚರವನ್ನೂ, ಸಂಸ್ಕೃತಿಯ ಪ್ರೀತಿ, ಗೌರವಗಳನ್ನೂ ವೃದ್ಧಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷವಂತೂ ಆಳ್ವಾಸ್ ನುಡಿಸಿರಿಗೆ ದಶಮಾನೋತ್ಸವದ ಸಂಭ್ರಮ. ಈ ಸಂಭ್ರಮವನ್ನು ‘ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ 2013’ ರೆಂದು ಆಚರಿಸಿ ಕನ್ನಡದ ಖ್ಯಾತಿಯನ್ನು ಜಗದಗಲಕ್ಕೆ ಪಸರಿಸುವ ಕಾರ್ಯವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ […]