ಪೆಟ್ರೋಲ್ ಬಂಕ್ನ ಮ್ಯಾನೇಜರ್ ದರೋಡೆ, ಮಾಜಿ ಉದ್ಯೋಗಿ ಸೇರಿ, ನಾಲ್ವರ ಬಂಧನ
Tuesday, October 5th, 2021ಮಂಗಳೂರು : ಆರ್ಶೀವಾದ್ ಪೆಟ್ರೋಲ್ ಬಂಕ್ನ ಮ್ಯಾನೇಜರ್ ಗೆ ಬ್ಯಾಟ್ನಿಂದ ಹಲ್ಲೆ ನಡೆಸಿ, 4.20 ಲಕ್ಷ ರೂ. ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೆಟ್ರೋಲ್ ಬಂಕ್ನ ಮ್ಯಾನೇಜರ್ ಬೋಜಪ್ಪನವರು ಸೆಪ್ಟೆಂಬರ್ 28 ರಂದು ಹಣ ಕಟ್ಟಲು ಬ್ಯಾಂಕಿಗೆ ಹೋಗುತ್ತಿದ್ದಾಗ ಘಟನೆ ನಡೆದಿತ್ತು. ಬಂಧಿತ ಆರೋಪಿಗಳನ್ನು ಶಕ್ತಿನಗರದ ಶ್ಯಾಮ್ ಶಂಕರ್, ಕುಡುಪು ಮೂಲದ ಅಭಿಷೇಕ್, ಕಾರ್ತಿಕ್ ಮತ್ತು ಸಾಗರ್ ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಆರೋಪಿ ಶ್ಯಾಮ್ ಶಂಕರ್ ಅದೇ ಪೆಟ್ರೋಲ್ […]