ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ನಿಧನ

Monday, October 21st, 2024
jayarama-acharya

ಬಂಟ್ವಾಳ: ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಬೆಂಗಳೂರಿನಲ್ಲಿ ಅ.21ರಂದು ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಬೆಂಗಳೂರಿನಲ್ಲಿ ಯಕ್ಷಗಾನ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಆಗಮಿಸಿದ್ದ ಅವರಿಗೆ ಮುಂಜಾನೆ ನಾಲ್ಕು ಗಂಟೆಗೆ ಹೃದಯಸ್ತಂಭನವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆಗೆ ಸ್ಪಂಧಿಸದೆ ನಿಧನ ಹೊಂದಿದ್ದಾರೆ. 1957, ಅಕ್ಟೋಬರ್ 12ರಂದು ಬಂಟ್ವಾಳ ಗಣಪತಿ ಆಚಾರ್ಯ, ಭವಾನಿ ಅಮ್ಮ ಅವರ ಪುತ್ರರಾಗಿ ಜನಿಸಿದ ಜಯರಾಮ ಆಚಾರ್ಯರು, ಬಂಟ್ವಾಳ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿ, […]

ಇಬ್ಬರು ಕಲಾವಿದರಿಗೆ ‘ಬಳ್ಕೂರು ಯಕ್ಷ ಕುಸುಮ’ ಪುರಸ್ಕಾರ

Monday, February 12th, 2024
yaksha-kusuma

ಮಂಗಳೂರು : ಯಕ್ಷರಂಗವು ನನ್ನ ಬದುಕಿಗೆ ಅಭಿಮಾನಗಳ ಪ್ರೀತಿ ಮತ್ತು ಹೊಸತನದ ಸ್ಪೂರ್ತಿಯನ್ನು ನೀಡಿದೆ ಅದು ಮರೆಯಲಾದ ಅವಿಸ್ಮರಣೀ ಕ್ಷಣಗಳು ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ 96 ವಯಸ್ಸಿನ ಸೂರಿಕುಮೇರು ಕೆ ಗೋವಿಂದ ಭಟ್ ಹೇಳಿದರು. ಅವರು ಬಳ್ಕೂರು ಯಕ್ಷ ಕುಸುಮ ಪ್ರತಿಷ್ಠಾನ ಮತ್ತು ರಂಗಸ್ಥಳ ಮಂಗಳೂರು (ರಿ) ಇವರ ಆಶ್ರಯದಲ್ಲಿ ಶ್ರೀಕ್ಷೇತ್ರ ಕುದ್ರೋಳಿ ಭಗವತೀ ದೇವಸ್ಥಾನದ ‘ಕೂಟಕಳಮ್ ಆಡಿಟೋರಿಯಂ ನಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ‘ಬಳ್ಕೂರು ಯಕ್ಷ ಕುಸುಮ’ ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದರು. […]

ಯಕ್ಷಗಾನ ಕಲಾವಿದ ಬೈಕ್ ಅಪಘಾತದಲ್ಲಿ ಮೃತ್ಯು

Thursday, January 20th, 2022
Vamana Devadiga

ಮೂಡುಬಿದಿರೆ: ಓಮ್ನಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹಿರಿಯಡ್ಕ ಮೇಳದ ಯಕ್ಷಗಾನ ಕಲಾವಿದ ಮೃತಪಟ್ಟಿದ್ದಾರೆ. ಗೋಳಿತ್ಯಾರು ಬೆಳ್ತಂಗಡಿ ತಾಲೂಕು ವೇಣೂರು ಸಮೀಪದ ವಾಮನ ಕುಮಾರ್ ಅವರಿಗೆ 47 ವರ್ಷ ವಯಸ್ಸಾಗಿತ್ತು. ಬಡಗು ತಿಟ್ಟಿನ ಯಕ್ಷಗಾನ ಮೇಳ  (ಹಿರಿಯಡ್ಕ ಮೇಳ)ದಲ್ಲಿ ಹಾಗೂ ಚಿಕ್ಕಮೇಳದಲ್ಲಿ ಯಕ್ಷ ಕಲಾವಿದರಾಗಿದ್ದರು. ಕುಂದಾಪುರದ ಕೊಂಕಿ‌ ಎಂಬಲ್ಲಿ ಯಕ್ಷಗಾನ ಮುಗಿಸಿ ಬೈಕ್ನಲ್ಲಿ ಬರುವಾಗ ಮೂಡುಬಿದಿರೆ ಗಂಟಾಲಕಟ್ಟೆ ಸಮೀಪ  ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.    

‘ಬಣ್ಣದ ಕುಷ್ಟ’ ಖ್ಯಾತಿಯ ಕೃಷ್ಣ ಮಂಜಯ್ಯ ಶೆಟ್ಟಿ ಇನ್ನಿಲ್ಲ

Monday, December 7th, 2020
Krishnaiya Manjayya

ಕಾರವಾರ : ಹಿರಿಯ ಯಕ್ಷಗಾನ ಕಲಾವಿದ ಕೃಷ್ಣ ಮಂಜಯ್ಯ ಶೆಟ್ಟಿ(85) ಜಲವಳ್ಳಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಹಾರಾಡಿ ರಾಮ ಗಾಣಿಗ ಪ್ರಶಸ್ತಿಗೆ ಪಾತ್ರರಾದ ಇವರು ಸುದೀರ್ಘ ಕಾಲ ಕೆರೆಮನೆ ಸೇರಿದಂತೆ ವಿವಿಧ ಮೇಳಗಳಲ್ಲಿ ಯಶಸ್ವಿಯಾಗಿ ಪಾತ್ರ ನಿರ್ವಹಿಸಿದ್ದರು. ರಾಕ್ಷಸ, ದೈತ್ಯ ಹೀಗೆ ಬಣ್ಣದ ವೇಷಗಳಲ್ಲಿ ವಿಜೃಂಭಿಸುತ್ತಿದ್ದ ಇವರು ದಕ್ಷಿಣೋತ್ತರ ಕನ್ನಡ ಜಿಲ್ಲೆಯ ವಿವಿಧ ಮೇಳಗಳಲ್ಲಿ ತಮ್ಮದೆ ಆದ ಛಾಪು ಒತ್ತುವ ಮೂಲಕ ಬಣ್ಣದ ಕುಷ್ಟಎಂದೆ ಜನಜನಿತರಾಗಿದ್ದರು. ಬಣ್ಣದ ವೇಷವಲ್ಲದೆ, ಕಿರಾತ ಮತ್ತಿತರ ಪೋಷಕ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರು. […]

ಬಡ ಕಲಾವಿದನಿಗೆ ಮನೆ ಕಟ್ಟಿಕೊಡಲು ನಿರ್ಧರಿಸಿದ ಭಾಗವತ ಪಟ್ಲ ಸತೀಶ್ ಶೆಟ್ಟಿ

Friday, August 25th, 2017
patla

ಮಂಗಳೂರು: ಕರಾವಳಿಯ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಮಿಂಚಿದ್ದ ಕಲಾವಿದ ಪುರಂದರ ನಿರ್ಗತಿಕರಂತೆ ರಸ್ತೆ ಬದಿ ಡೇರೆ ಯಲ್ಲಿ ಬದುಕುತ್ತಿದ್ದಾರೆ. ಕಲಾವಿದನ ಕಷ್ಟಕ್ಕೆ ಸ್ಪಂದಿಸಿದ ಕಟೀಲು ಮೇಳದ ಭಾಗವತ ಪಟ್ಲ ಸತೀಶ್ ಶೆಟ್ಟಿ ನೆರವಿನ ಹಸ್ತ ಚಾಚಿದ್ದಾರೆ. ಕಟೀಲು ಮೇಳ, ಸುಂಕದ ಕಟ್ಟೆ ಮೇಳ ಮೊದಲಾದ ಹಲವು ಮೇಳಗಳಲ್ಲಿ 24 ವರ್ಷ ತಿರುಗಾಟ ನಡೆಸಿದ ಯಕ್ಷಗಾನ ಕಲಾವಿದ ಪುರಂದರ ಅವರು ರಸ್ತೆ ಬದಿಯಲ್ಲಿ ದಿನ ದೂಡುತ್ತಿದ್ದಾರೆ. ೫೮ ವರ್ಷ ಪ್ರಾಯದ ಪುರಂದರ ಅವರು ಗೆಜ್ಜೆ ಹಾಕಿದ ಕಾಲುಗಳಲ್ಲಿ ನೋವು ಕಾಣಿಸಿಕೊಂಡ […]

ಯಕ್ಷಗಾನ ಕಲಾವಿದರು ನಿವೃತ್ತರಾದ ಬಳಿಕ ಗಂಭೀರವಾಗಿ ಚಿಂತಿಸಬೇಕಿದೆ : ಪಟ್ಲ ಸತೀಶ ಶೆಟ್ಟಿ

Monday, April 18th, 2016
Patla Satish

ಕುಂಬಳೆ: ವೃತ್ತಿ ಕಲಾವಿದರಾಗಿ ದುಡಿಯುತ್ತಿರುವ ಅಸಂಖ್ಯಾತ ಯಕ್ಷಗಾನ ಕಲಾವಿದರು ವೃತ್ತಿಯಿಂದ ನಿವೃತ್ತರಾದ ಬಳಿಕ ಅವರ ಬದುಕಿಗೆ ಏನಿದೆಯೆಂಬುದನ್ನು ಗಂಭೀರವಾಗಿ ಚಿಂತಿಸಬೇಕಿದೆ. ಯಕ್ಷಗಾನ ಕಲಾರಂಗದಲ್ಲಿ ಅಪ್ರತಿಮ ಸಾಧನೆ ಮೆರೆದು ವೈಶಿಷ್ಟ್ಯಪೂರ್ಣ ಕೊಡುಗೆ ನೀಡಿದ ಕಲಾವಿದರಿಗೆ ರಂಗದಿಂದ ಹೊರತುಪಡಿಸಿ ಅಗತ್ಯ ಸ್ಪಂಧನೆಗಳು ಲಭಿಸದಿರುವುದು ದುರಂತ ಎಂದು ಖ್ಯಾತ ಭಾಗವತ,ಯಕ್ಷಧ್ರುವ ಪಟ್ಲ ಪೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಕುಂಬಳೆ ಸಮೀಪದ ಶೇಡಿಕಾವು ಪಾರ್ತಿಸುಬ್ಬ ಯಕ್ಷಗಾನ ಸಂಘದ 20ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಅಪರಾಹ್ನ ಶೇಡಿಕಾವು ಪಾರ್ತಿಸುಬ್ಬ ಸಭಾ […]