ಭಾರತದ ಸನಾತನ ಪರಂಪರೆಯನ್ನು ಇಡೀ ವಿಶ್ವವೇ ಗೌರವಿಸುವ ದಿನವೇ ಅಂತಾರಾಷ್ಟ್ರೀಯ ಯೋಗ ದಿನ : ವೇದವ್ಯಾಸ ಕಾಮತ್

Friday, June 21st, 2024
yoga-day

ಮಂಗಳೂರು : ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪಿವಿಎಸ್ ಸರ್ಕಲ್ ಬಳಿಯ ವೈಶ್ಯ ಎಜುಕೇಶನ್ ಸೊಸೈಟಿ ಸಭಾಂಗಣದಲ್ಲಿ ನಡೆದ ಯೋಗಾಭ್ಯಾಸದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ಭಾಗವಹಿಸಿದರು. ಈ ವೇಳೆ ಮಾತನಾಡಿದ ಶಾಸಕರು, ಭಾರತದ ಸನಾತನ ಪರಂಪರೆಯನ್ನು ಇಡೀ ವಿಶ್ವವೇ ಗೌರವಿಸುವ ದಿನವೇ ಅಂತಾರಾಷ್ಟ್ರೀಯ ಯೋಗ ದಿನ. ಮನುಷ್ಯನ ದೇಹದ ಸಮತೋಲನಕ್ಕಾಗಿ ಯೋಗದ ಕೊಡುಗೆ ಅನನ್ಯವಾಗಿದ್ದು ದೇಹದ ಜೊತೆಗೆ ಮನಸ್ಸಿಗೂ ಅತ್ಯಂತ ಪರಿಣಾಮಕಾರಿಯಾಗಿದೆ. ಇಂತಹ ಯೋಗಾಭ್ಯಾಸವು […]

ಯೋಗ ದಿನಾಚರಣೆಯ ಪೂರ್ವಭಾವಿ ತರಬೇತಿ ಶಿಬಿರ ಆರಂಭ

Tuesday, June 4th, 2024
ಯೋಗ ದಿನಾಚರಣೆಯ ಪೂರ್ವಭಾವಿ ತರಬೇತಿ ಶಿಬಿರ ಆರಂಭ

ಮಂಗಳೂರು : ನಗರದ ಮಂಗಳಾದೇವಿ ಸಮೀಪದಲ್ಲಿರುವ ಶ್ರೀ ರಾಮಕೃಷ್ಣ ಮಠದಲ್ಲಿ ನಡೆಯುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿ ಯೋಗ ತರಬೇತಿ ಶಿಬಿರ ಉದ್ಘಾಟನೆಗೊಂಡಿತು. ಬಳಿಕ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಆಶೀರ್ವಚನದಲ್ಲಿ ದೈಹಿಕ ಹಾಗೂ ಮಾನಸಿಕ ಚಿಕಿತ್ಸೆಯು ಯೋಗದ ಬಹುಮುಖ್ಯ ಸಾಧನೆಗಳಲ್ಲಿ ಒಂದು. ವಾಸ್ತವಿಕ ದೃಷ್ಟಿಯಿಂದ ನೋಡಿದಾಗ ದೇಹ ಮನಸ್ಸು ಹಾಗೂ ಭಾವನೆಗಳ ನಡುವೆ ಸಮತೋಲನ ಅಥವಾ ಸಾಮರಸ್ಯ ಸಾಧಿಸುವುದಕ್ಕೆ ಯೋಗವು ಒಂದು ಸಾಧನ. ಇದನ್ನು ಕ್ರಿಯೆಗಳು, ಆಸನ, ಪ್ರಾಣಾಯಾಮ, ಮುದ್ರಾ ಹಾಗೂ ಧ್ಯಾನಗಳ ಮೂಲಕ ಸಾಧಿಸಲಾಗುತ್ತದೆ ಎಂದು […]