ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ‌ ಮಾಧ್ಯಮ‌ ವಿಭಾಗದ ವತಿಯಿಂದ ಮನ್ ಕೀ ಬಾತ್, ರಕ್ಷಾ ಬಂಧನ

Sunday, August 29th, 2021
Rajessh Naik

ಬಂಟ್ವಾಳ: ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ಎನ್ನಲು ಹೆಮ್ಮೆ ಪಡುವ ಕಾಲ ಇದಾಗಿದ್ದು, ಇದರ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಪಕ್ಷವನ್ನು ಕಟ್ಟಿ ಬೆಳೆಸಿದವರ ತ್ಯಾಗ ಬಲಿದಾನದ ಶ್ರಮ ಇದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ‌ ಮಾಧ್ಯಮ‌ ವಿಭಾಗದ ವತಿಯಿಂದ ಮನ್ ಕೀ ಬಾತ್, ರಕ್ಷಾ ಬಂಧನ ಹಾಗೂ ಎಸ್.ಸಿ.ಕಾಲೋನಿ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆನಂದ ಪಿಲಿಚಂಡಿಗುಡ್ಡೆ ಯವರ ಮನೆಯಂಗಳದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಅವರು […]

ಮಂಗಳಮುಖಿಯರೊಂದಿಗೆ ರಕ್ಷಾ ಬಂಧನವನ್ನು ಆಚರಿಸಿದ ಶಿಕ್ಷಣ ತಜ್ಞ ಮತ್ತು ಸಮಾಜ ಸೇವಕ  ಡಾ ವಿನಯ್

Sunday, August 22nd, 2021
hubli

ಹುಬ್ಬಳ್ಳಿ : ಪ್ರಖ್ಯಾತ ಶಿಕ್ಷಣ ತಜ್ಞ ಮತ್ತು ಸಮಾಜ ಸುಧಾರಕ ಡಾ.ವಿನಯ್ ಅವರು ಮಂಗಳಮುಖಿಯರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸುವ ಮೂಲಕ ರಕ್ಷಾ ಬಂಧನವನ್ನು ವಿಶೇಷವಾಗಿ ಆಚರಿಸಿಕೊಂಡರು. ಡಾ ವಿನಯ್ ಗೆ ರಾಖಿ ಕಟ್ಟಿದ ಮಂಗಳಮುಖಿಯರು ಅವರ ಈ ವಿಶಿಷ್ಟ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುವದರ ಜೊತೆಗೆ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು. ನಂತರ ಮಾತನಾಡಿದ ಡಾ. ವಿನಯ್, “ರಕ್ಷಾ ಬಂಧನವು ಸಹೋದರ ಮತ್ತು ಸಹೋದರಿಯ ನಡುವಿನ ಸುಂದರ ಸಂಬಂಧವಾಗಿದೆ. ಸಮಾಜದಲ್ಲಿ ಆಗಾಗ್ಗೆ ತಪ್ಪಾಗಿ ಗ್ರಹಿಸಲ್ಪಟ್ಟ ಮಂಗಳಮುಖಿಗಳೊಂದಿಗೆ […]

ಯಾವ ಕಾಲಕ್ಕೂ ಬದಲಾಗದ ಸಂಬಂಧ ಅಣ್ಣ-ತಂಗಿ ಸಂಬಂಧ: ರಕ್ಷಾ ಬಂಧನ

Thursday, August 18th, 2016
Rakshabandhana

ಮಂಗಳೂರು: ಕಾಲ ಕಾಲಕ್ಕೆ ಸಂಬಂಧಗಳು ಬದಲಾಗುತ್ತಾ ಹೋಗುತ್ತವೆ. ಆದರೆ ಎಂದಿಗೂ ಬದಲಾಗದ ಸಂಬಂಧ ಅಣ್ಣ-ತಂಗಿ ಅಥವಾ ಅಕ್ಕ-ತಮ್ಮನ ಸಂಬಂಧ. ಇದು ರಕ್ತ ಸಂಬಂಧದಲ್ಲಿ ಇರಬಹುದು ಅಥವಾ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವುದೇ ಸಂದರ್ಭ ಏರ್ಪಡುವ ಸಂಬಂಧ ಇರಬಹುದು. ಸೋದರ-ಸೋದರಿ ಸಂಬಂಧಗಳು ಸದಾ ಅಜರಾಮರ. ಒಡಹುಟ್ಟಿದವರಲ್ಲದೆ ಹೊರಗಿನವರನ್ನೂ ಕೂಡ ಸಹೋದರರಂತೆ ಭಾವಿಸಿ ನಡೆದುಕೊಳ್ಳಬೇಕೆಂಬ ಸಂದೇಶವನ್ನು ಸಮಾಜಕ್ಕೆ ಸಾರುವ ಹಬ್ಬವೇ ರಾಖಿ ಹಬ್ಬ. ಹಿಂದೆ ಯುದ್ಧಕ್ಕೆ ಹೋಗುವ ತಮ್ಮ ಸಹೋದರ ಮತ್ತು ಊರಿನ ಇತರೆ ಯುವಕರಿಗೆ ಮಹಿಳೆಯರು ರಾಖಿ ಕಟ್ಟಿ ಯುದ್ಧದಲ್ಲಿ […]

ದೇಶದಲ್ಲೆಡೆ ಸಹೋದರ ಭಾಂಧವ್ಯದ ರಕ್ಷಾ ಬಂಧನ ಆಚರಣೆ

Tuesday, August 20th, 2013
raksha-bandhan

ಮಂಗಳೂರು ;  ಅಕ್ಕತಂಗಿಯರು ತಮ್ಮ ನೆಚ್ಚಿನ ಅಣ್ಣ ತಮ್ಮಂದಿರುಗಳ ಕೈಗೆ ರಕ್ಷಾ ಬಂಧನ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಿದರು. ಪ್ರತಿವರ್ಷ ನೂಲು ಹುಣ್ಣಿಮೆಯಂದು ಗಂಡನ ಮನೆಯಲ್ಲಿರುವ ಹೆಣ್ಣುಮಕ್ಕಳು ತವರಿಗೆ ಬಂದು ತಮ್ಮ ಅಣ್ಣ ತಮ್ಮಂದಿರಿಗೆ ರಾಖಿ ಕಟ್ಟುತ್ತಾರೆ. ಬಲಗೈಗೆ ರಾಖಿ ಕಟ್ಟಿ ಆರತಿ ಬೆಳಗುತ್ತಾರೆ. ಹಳ್ಳಿ ಸಂಪ್ರದಾಯದಂತೆ ಒಂದು ಕಟ್ಟಿಗೆಯ ಮಣೆಯ ಮೇಲೆ ಸಹೋದರರನ್ನು ಕುಳ್ಳರಿಸುತ್ತಾರೆ. ನಂತರ ಹಣೆ ತೊಳೆದು ವಿಭೂತಿ, ಕುಂಕುಮದ ತಿಲಕವನ್ನಿಡುತ್ತಾರೆ. ನಮ್ಮನ್ನು ಕಷ್ಟದಲ್ಲಿ ಪೊರೆಯುತ್ತಾ ಬಂದ ಸಹೋದರರು ಬಾಳೆಲ್ಲಾ ನಗುನಗುತಿರಲಿ ಎಂದು […]