Blog Archive

ಇದು ರಾಮ v/s ಅಲ್ಲಾಹು ನಡುವಿನ ಚುನಾವಣೆ; MLA ಸುನೀಲ್ ಹೇಳಿದ್ದೇನು?

Tuesday, January 23rd, 2018
sunil

ಬಂಟ್ವಾಳ: ಇದು ಅಲ್ಲಾಹು ಮತ್ತು ಶ್ರೀರಾಮನ ನಡುವಿನ ಚುನಾವಣೆ. ರಾಮನನ್ನು ಪ್ರೀತಿಸುವ ವ್ಯಕ್ತಿಯನ್ನು ಗೆಲ್ಲಿಸ್ತೀವಾ, ಅಲ್ಲಾನನ್ನು ಪ್ರೀತಿಸುವ ವ್ಯಕ್ತಿಯನ್ನು ಗೆಲ್ಲಿಸ್ತೀವಾ ಎಂಬುದು ತೀರ್ಮಾನವಾಗಬೇಕು…ಇದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರ ವಿವಾದಾತ್ಮಕ ಹೇಳಿಕೆ. ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನಡೆದ ಬಿಜೆಪಿ ಪರಿವರ್ತನಾ ರಾಲಿಯಲ್ಲಿ ಮಾತನಾಡುತ್ತ ಈ ಹೇಳಿಕೆ ನೀಡಿರುವುದಾಗಿ ಖಾಸಗಿ ಮಾಧ್ಯಮಗಳು ವರದಿ ಮಾಡಿವೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರಾಜೇಶ್ ನಾಯಕ್ ರಾಮನಂತೆ, ಕಾಂಗ್ರೆಸ್ ಅಭ್ಯರ್ಥಿ(ರಮಾನಾಥ್ ರೈ)ಅಲ್ಲಾಹು..ಹೀಗಾಗಿ ಕ್ಷೇತ್ರದ ಜನರು […]

ಟಿಪ್ಪು ಜಯಂತಿ ಸರ್ಕಾರದ ವತಿಯಿಂದ ಮಾಡುತ್ತೇವೆ: ಸಿದ್ದರಾಮಯ್ಯ

Monday, October 23rd, 2017
tippu jayanthi

ಮಂಗಳೂರು:  ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಮಾಡಿಯೇ ಮಾಡುತ್ತೇವೆ,  ಬಿಜೆಪಿ ರಾಜಕೀಯ ಕಾರಣದಿಂದ ಟಿಪ್ಪು ಜಯಂತಿ ವಿರೋಧಿಸುತ್ತಿದೆಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ವಿವಿಧ ಯೋಜನೆಗಳ ಉದ್ಘಾಟನೆಗಾಗಿ ಆಗಮಿಸಿದ ಅವರು ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿ, ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿ ಆಚರಿಸಿದ್ದಾರೆ. ಶೋಭಾ ಕೂಡಾ ಅವರಿಗೆ ಸಾಥ್ ನೀಡಿದ್ದರು. ಟೊಪ್ಪಿ ಹಾಕಿ ಖಡ್ಗ ಝಳಪಿಸಿ ಅಂದು ಯಡಿಯೂರಪ್ಪ ಫೋಸ್ ನೀಡಿದ್ದರು ಎಂದು ವ್ಯಂಗ್ಯವಾಡಿದರು. ಸಚಿವ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿ ಪ್ರೋಟೊಕಾಲ್ ಪ್ರಕಾರ […]

ಸೂಲಿಬೆಲೆಯನ್ನು ಸೂ.. ಮಗ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ ರಮಾನಾಥ್ ರೈ – ವಿಡಿಯೋ

Saturday, September 23rd, 2017
Sulibele

ಮಂಗಳೂರು : ಅರಣ್ಯ ಸಚಿವ ರಮಾನಾಥ್ ರೈ ಅಸೈಗೋಳಿಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಯುವ ಬ್ರಿಗೇಡ್ ಸಂಚಾಲಕ ಚಕ್ರವರ್ತಿ ಸೂಲಿಬೆಲೆಯವರನ್ನು ಕೆಟ್ಟ ಶಬ್ಧದಿಂದ ನಿಂದಿಸಿದ್ದಾರೆ. ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ತುಳು ಭಾಷೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದ ಸಚಿವ ರಮಾನಾಥ್ ರೈ, ಯುವ ಬ್ರಿಗೇಡ್ ಸಂಚಾಲಕ ಚಕ್ರವರ್ತಿ ಸೂಲಿಬೆಲೆಯವರನ್ನು ಅವಾಚ್ಯ ಶಬ್ಧಗಳಿಂದ ಟೀಕಿಸಿದ್ದಾರೆ. ನೆಹರೂ ಕುಟುಂಬದ ಬಗ್ಗೆ ಮಾತನಾಡುವ ಚಕ್ರವರ್ತಿ ಸೂಲಿಬೆಲೆ ದೇಶದ್ರೋಹಿ, ಇಂತವರನ್ನು ಜೈಲಿಗೆ ಹಾಕಬೇಕು ಎಂದು ಸೂಲಿಬೆಲೆ […]

ನಾಡಿನ ಸಮಗ್ರ ಅಭಿವೃದ್ಧಿ ಹಾಗೂ ರಕ್ಷಣೆಗಾಗಿ ಕಾಂಗ್ರೆಸ್ಸನ್ನು ಬೆಂಬಲಿಸಿ : ಭಾವನಾ

Friday, May 3rd, 2013
Bhavana

ಬಂಟ್ವಾಳ : ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ್ ರೈ ಪರ ಗುರುವಾರ ಚಿತ್ರನಟಿ ಭಾವನ ಬಂಟ್ವಾಳ ದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ಬಿ.ಸಿ ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದೇ ಕ್ಷೇತ್ರ ಅಭಿವೃದ್ದಿಯಾಗಬೇಕಾದರೆ ಕ್ಷೇತ್ರದ ಜನತೆಯ ಮನಸ್ಸನ್ನು ಅರ್ಥೈಸಿಕೊಂಡವರು ನಾಯಕರಾಗಬೇಕು.  ರಮಾನಾಥ ರೈ ಒಬ್ಬ ಕ್ರಿಯಾಶೀಲ ಹಾಗು ಅನುಭವಿ ರಾಜಕಾರಣಿಯಾಗಿದ್ದು ೫ ಬಾರಿ ಶಾಸಕರಾಗಿ, ಮಂತ್ರಿಗಳೂ ಆಗಿದ್ದು,  ಕ್ಷೇತ್ರದ ಜನರನ್ನು ಅರಿತವರು, ಜನರಿಗೂ ಇವರ ಬಗ್ಗೆ ತಿಳಿದಿದ್ದು ಮತದಾರರ ಆಶಿರ್ವಾದದಿಂದ ಈ ಬಾರಿಯೂ ಅವರು ಗೆಲುವನ್ನು ಸಾಧಿಸುತ್ತಾರೆ […]