ಮೊಬೈಲ್‌ ಕದಿಯುವ ಯತ್ನದಲ್ಲಿದ್ದ ಯುವಕರ ತಂಡವನ್ನು ಬೆನ್ನಟ್ಟಿ ಹಿಡಿದ ಪೊಲೀಸ್

Thursday, January 13th, 2022
Varun-Alva

ಮಂಗಳೂರು:  ಮೊಬೈಲ್‌ ಕದಿಯುವ ಯತ್ನದಲ್ಲಿದ್ದ ಯುವಕರ ತಂಡವನ್ನು ಸ್ಥಳೀಯರು ಹಾಗೂ ಮಂಗಳೂರು ಪೊಲೀಸ್‌ ಕಮಿಷನರ್‌ ಅವರ ಕಚೇರಿ ಸಿಬ್ಬಂದಿ ಸೇರಿ ಅಟ್ಟಿಸಿ ಹಿಡಿದಿದ್ದಾರೆ. ಆರೋಪಿಗಳಾದ ಅತ್ತಾವರ ಬಾಬುಗುಡ್ಡೆಯ ಶಮಂತ್‌(20), ನೀರುಮಾರ್ಗ ಪಾಲ್ದನೆಯ ಹರೀಶ್‌ ಪೂಜಾರಿ(32) ಎಂಬವರನ್ನು ಬಂಧಿಸಲಾಗಿದೆ. ಬಿಹಾರ ಮೂಲದ ವ್ಯಕ್ತಿಯೊಬ್ಬನಿಂದ ಮೊಬೈಲ್ ಕದ್ದ ಆರೋಪಿ ಶಮಂತ್‌ ಎಂಬಾತ ಓಡಿ ತಪ್ಪಿಸಿಕೊಳ್ಳುತ್ತಿರುವಾಗ ಕಮಿಷನರ್‌ ಅವರ ಕಚೇರಿ ಸಿಬ್ಬಂದಿ ವರುಣ್‌ ಆಳ್ವ ಎಂಬವರು ಅಟ್ಟಿಸಿಕೊಂಡು ಹೋಗಿ ಹಿಡಿದು ನೆಲಕ್ಕೆ ಒತ್ತಿ ಆತನನ್ನು ಅರೆಸ್ಟ್‌ ಮಾಡುವ ವಿಡಿಯೋ ವೈರಲ್‌ ಆಗಿದೆ. […]

ಕೊರಗ ಸಮುದಾಯದ ಮೆಹಂದಿಯಲ್ಲಿ ಡಿ.ಜೆ ವಿವಾದ, ಮಂಜುನಾಥ್ ಭಂಡಾರಿ ಭೇಟಿ

Friday, December 31st, 2021
Manjunath Bhandary

ಉಡುಪಿ : ಕುಂದಾಪುರ ತಾಲೂಕಿನ ಕೋಟ ಎನ್ನುವ ಗ್ರಾಮದಲ್ಲಿ ಕೊರಗ(ಪರಿಶಿಷ್ಟ ಪಂಗಡ) ಸಮುದಾಯಕ್ಕೆ ಸೇರಿದ ರಾಜೇಶ್ ಎನ್ನುವ ಯುವಕನ ಮದುವೆ (ಮೆಹಂದಿ) ಸಂಭ್ರಮದಲ್ಲಿ ಡಿ.ಜೆ ಹಾಕಿದ್ದರು ಎನ್ನುವ ಕಾರಣಕ್ಕೆ ನಡೆದ ಕೃತ್ಯ ಖಂಡನೀಯ . ಈ ಘಟನೆಯಿಂದ ನೊಂದ ಕೊರಗ ಪರಿವಾರದ ಮನೆಗೆ ವಿಧಾನ ಪರಿಷತ್ತಿ ಗೆ ನೂತನ ಸದಸ್ಯರಾಗಿ ಆಯ್ಕೆಯಾದ  ಮಂಜುನಾಥ್ ಭಂಡಾರಿಯವರು ಭೇಟಿ ನೀಡಿ ಸಾಂತ್ವಾನದ ಮಾತುಗಳನ್ನಾಡಿ ಘಟನೆಯಿಂದ ನೊಂದ ಪರಿವಾರಕ್ಕೆ ನ್ಯಾಯ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು. ನಂತರ ಉಡುಪಿ ಜಿಲ್ಲಾ ಪೋಲಿಸ್ […]

ಕುಶಾಲನಗರ ಮೈಸೂರು ರಸ್ತೆಯಲ್ಲಿ ಸರಣಿ ಅಪಘಾತ

Friday, November 8th, 2019
ಕುಶಾಲನಗರ ಮೈಸೂರು ರಸ್ತೆಯಲ್ಲಿ ಸರಣಿ ಅಪಘಾತ

ಮಡಿಕೇರಿ : ಕುಶಾಲನಗರ ಮೈಸೂರು ರಸ್ತೆಯ ಪಟ್ಟಣ ವ್ಯಾಪ್ತಿಯಲ್ಲಿ ಸರಣಿ ವಾಹನ ಅಪಘಾತ ನಡೆದು ಕಾರು ನಜ್ಜುಗುಜ್ಜಾದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಕುಶಾಲನಗರ ತಾವರೆಕೆರೆ ಬಳಿ ಮಡಿಕೇರಿಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರ್‌ಗೆ ಹಿಂದಿನಿಂದ ಲಾರಿಯೊಂದು ಡಿಕ್ಕಿಯಾದ ಕಾರಣ ಕಾರು ಮುಂದೆ ಚಲಿಸುತ್ತಿದ್ದ ಸಾರಿಗೆ ಬಸ್‌ಗೆ ಅಪ್ಪಳಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ದಂಪತಿಗಳು ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ. ಮಡಿಕೇರಿ ಉದ್ಯಮಿ ರಾಜೇಶ್ ಎಂಬವರು ಪತ್ನಿಯೊಂದಿಗೆ ಮೈಸೂರಿಗೆ ತೆರಳುತ್ತಿದ್ದ ಸಂದರ್ಭ ಘಟನೆ ನಡೆದಿದ್ದು ನಿಧಾನವಾಗಿ ಚಲಿಸುತ್ತಿದ್ದ ಕಾರಿಗೆ […]

ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ಪತ್ರಕರ್ತರ ಒಕ್ಕೂಟವು ಡಿಸಿ ಅವರನ್ನು ಶ್ಲಾಘಿಸುತ್ತದೆ

Saturday, August 17th, 2019
DK

ಮಂಗಳೂರು : ಡಿಕೆ ಜಿಲ್ಲಾ ಪತ್ರಕರ್ತರ ಒಕ್ಕೂಟದ ನಿಯೋಗವು ಆಗಸ್ಟ್ 16, ರಂದು ಶುಕ್ರವಾರ ಉಪ ಆಯುಕ್ತ ಶಶಿಕಾಂತ್ ಸೆಂಥಿಲ್ ಅವರನ್ನು ಭೇಟಿ ಮಾಡಿ ಜಿಲ್ಲೆಯಾದ್ಯಂತ ಇತ್ತೀಚಿನ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು. ಪ್ರವಾಹ ಪೀಡಿತ ಜನರ ಕುಂದುಕೊರತೆಗಳಿಗೆ ಸಮಯೋಚಿತವಾಗಿ ಸ್ಪಂದಿಸುವಲ್ಲಿ ಜಿಲ್ಲಾಧಿಕಾರಿ ಕೈಗೊಂಡ ಪ್ರಯತ್ನವನ್ನು ಯೂನಿಯನ್ ಶ್ಲಾಘಿಸಿದೆ. ಈ ಸಂದರ್ಭದಲ್ಲಿ, ಟಿವಿ 9 ವಿಡಿಯೋ ಪತ್ರಕರ್ತ ರಾಜೇಶ್ ಅವರ ಕುಟುಂಬಕ್ಕೆ ಪ್ರವಾಹದಿಂದ ಹಾನಿಯಾಗಿದೆ ಮತ್ತು ವಾಸಿಸಲು ಅನರ್ಹವಾಗಿದೆ ಎಂದು 5 ಲಕ್ಷ ರೂ.ಗಳ […]

ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪ ಸಾಬೀತು..ಇಂದು ಶಿಕ್ಷೆ ಪ್ರಮಾಣ ಪ್ರಕಟ

Saturday, December 15th, 2018
atttempt

ಮಂಗಳೂರು: ನಾಲ್ಕು ವರ್ಷದ ಬಾಲಕಿ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯ ಮೇಲಿನ‌ ಆರೋಪ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೊಕ್ಸೋ ವಿಶೇಷ ನ್ಯಾಯಾಲಯದಲ್ಲಿ ಶುಕ್ರವಾರ ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣ ಶನಿವಾರ ಪ್ರಕಟವಾಗಲಿದೆ. ಕಂಕನಾಡಿ ನಿವಾಸಿ ಚಂದ್ರಶೇಖರ್ ಅಲಿಯಾಸ್ ರಾಜೇಶ್ (49) ಅಪರಾಧಿ. ಪೈಂಟಿಂಗ್ ಕೆಲಸ ಮಾಡುತ್ತಿದ್ದ ಈತನಿಗೆ ವಿವಾಹವಾಗಿ ಮಕ್ಕಳೂ ಇವೆ. ಈ ಹಿಂದೆ ಅಸೈಗೋಳಿ ಸಮೀಪದ ಗ್ರಾಮವೊಂದರಲ್ಲಿ ಈತ ವಾಸವಾಗಿದ್ದ ಸಂದರ್ಭ ಸಂತ್ರಸ್ತ ಬಾಲಕಿಯ ಮನೆಯವವರು ಪಕ್ಕದ ಮನೆಯಲ್ಲಿದ್ದರು. […]

ಸರಗಳ್ಳರ ಬಂಧನ: 3.50 ಲಕ್ಷ ರೂ. ಚಿನ್ನಾಭರಣ, ಆ್ಯಕ್ಟಿವಾ ವಶಕ್ಕೆ

Tuesday, December 11th, 2018
police

ಮಂಗಳೂರು: ಮಹಿಳೆಯರ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಗರ ರೌಡಿನಿಗ್ರಹ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಜೆಪ್ಪು ಬಪ್ಪಾಲದ ಹರೀಶ್ ಎಸ್. ನಾಥ್(45), ಬಜಾಲ್ನ ರಾಜೇಶ್(45) ಬಂಧಿತ ಆರೋಪಿಗಳು. ಬಂಧಿತರಿಂದ 3,64,000 ರೂ. ಮೌಲ್ಯದ 126.960 ಗ್ರಾಂ ಚಿನ್ನಾಭರಣ ಸಹಿತ ಒಂದು ಆ್ಯಕ್ಟಿವಾ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಆ್ಯಕ್ಟಿವಾ ಸ್ಕೂಟರ್ನಲ್ಲಿ‌ ಬಂದು ನಡೆದುಕೊಂಡು ಹೋಗುತ್ತಿರುವ ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರಗಳನ್ನು ಸುಲಿಗೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. […]

ದ್ವಿಚಕ್ರ ವಾಹನ, ಬಂಗಾರ ಕಳವು: ಆರೋಪಿ ಸೆರೆ

Saturday, March 3rd, 2018
vehicle

ಮಂಗಳೂರು: ಹಲವು ದ್ವಿಚಕ್ರ ವಾಹನ ಮತ್ತು ಬಂಗಾರ ಕಳವು ಪ್ರಕರಣದ ಆರೋಪಿ ಕಾರ್ಕಳ ತಾಲೂಕಿನ ಇನ್ನಾದ ನಿವಾಸಿ ಪ್ರದೀಪ್ ಮೊಯಿಲಿಯನ್ನು ಮೂಡುಬಿದಿರೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಅಪರಾಧ ವಿಭಾಗದ ಎಸ್‌ಐ ಶಂಕರ್ ನಾಯರಿ, ಸಿಬ್ಬಂದಿಗಳಾದ ರಾಜೇಶ್ ಮತ್ತು ಮಾಧವ ಸ್ವರಾಜ್ಯ ಮೈದಾನ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ತನ್ನ ಬಗ್ಗೆ ಪೊಲೀಸರಿಗೆ ಅಸಮರ್ಪಕ ಉತ್ತರ ನೀಡಿದ್ದನೆನ್ನಲಾಗಿದೆ. ಅನುಮಾನಗೊಂಡ ಪೊಲೀಸರು ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆ ನಡೆಸಿದಾಗ ಈತ […]

ಮಾ.3: ಅಂಕೋಲ, ಕುಶಾಲನಗರದಿಂದ ಜನ ಸುರಕ್ಷಾ ಯಾತ್ರೆ -ಮಂಗಳೂರು ಚಲೋ

Thursday, March 1st, 2018
ankola

ಮಂಗಳೂರು: ಬಿಜೆಪಿ ಕರ್ನಾಟಕದಿಂದ ಮಾರ್ಚ್ 3ರಿಂದ 6ರವರೆಗೆ ಏಕಕಾಲದಲ್ಲಿ ಅಂಕೋಲ ಮತ್ತು ಕುಶಾಲನಗರದಿಂದ ಜನ ಸುರಕ್ಷಾ ‘ ಮಂಗಳೂರು ಚಲೋ ’ ಹೆಸರಿನ ಪಾದಯಾತ್ರೆ ಆರಂಭಗೊಳ್ಳಲಿದೆ. ಮಾರ್ಚ್ 6ರಂದು ನಗರದ ನೆಹರು ಮೈದಾನದಲ್ಲಿ ಸಮಾವೇಶ ನಡೆಯಲಿದೆ ಸಮಾವೇಶದಲ್ಲಿ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ , ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ರಾಜ್ಯ ಸರಕಾರದ ತುಷ್ಟೀಕರಣ ನೀತಿಯನ್ನು ವಿರೋಧಿಸಿ, ಹಿಂದೂ […]

ಅಂತ್ಯಕ್ರಿಯೆಯ ಸಾಮಗ್ರಿ ಜತೆ ಸ್ಮಶಾನಕ್ಕೆ ಬಂದು ಅತ್ತೆಗೆ ಫೋನ್‌… ಮುಂದೇನಾಯ್ತು!?

Tuesday, February 6th, 2018
Rajesha

ಮಂಗಳೂರು: ವ್ಯಕ್ತಿವೋರ್ವ ಸ್ಮಶಾನದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಿ.ಸಿ. ರೋಡಿನ ಕೈಕುಂಜೆಯಲ್ಲಿ ನಡೆದಿದೆ. ಬಿ.ಸಿ. ರೋಡಿನ ರಾಜೇಶ್ (35) ಆತ್ಮಹತ್ಯೆ ಮಾಡಿಕೊಂಡವ. ಅಂತ್ಯಕ್ರಿಯೆಗೆ ಬೇಕಾದ ಸಾಮಗ್ರಿಗಳಾದ ಮಡಿಕೆ, ಬಿಳಿ ಬಟ್ಟೆ, ಊದುಬತ್ತಿ ಮೊದಲಾದುವುಗಳನ್ನು ತಾನೇ ರುದ್ರಭೂಮಿಗೆ ತಂದಿಟ್ಟಿದ್ದಾನೆ. ಬಳಿಕ ಅತ್ತೆಗೆ ಕರೆಮಾಡಿ ರುದ್ರಭೂಮಿಯ ಮೇಲ್ಛಾವಣೆಯಲ್ಲಿರುವ ಕಬ್ಬಿಣದ ಸರಳಿಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಶರಣಾಗುವುದಾಗಿ ತನ್ನ ಅತ್ತೆಗೆ ಫೋನ್‌ ಮಾಡಿದ್ದ ಎಂದು ತಿಳಿದುಬಂದಿದೆ. ಈತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. […]