ಕಾಸರಗೋಡಿನಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ ಸರಕಾರಿ ಅಧಿಕಾರಿಗಳು

Friday, January 28th, 2022
Indian-Flag

ಕಾಸರಗೋಡು :  ಮುನ್ಸಿಪಲ್ ಸ್ಟೇಡಿಯಂನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸರಕಾರೀ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು  ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ ಘಟನೆ ನಡೆದಿದೆ. ಜಿಲ್ಲಾ ಮಟ್ಟದ ಧ್ವಜಾರೋಹಣವನ್ನು ಸಚಿವ ಅಹ್ಮದ್ ದೇವರಕೋವ್ ನೆರವೇರಿಸಿದರು. ಕಾಸರಗೋಡು ಮುನ್ಸಿಪಲ್ ಸ್ಟೇಡಿಯಂನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಧ್ವಜವನ್ನು ತಲೆಕೆಳಗಾಗಿ ಹಾರಿಸಿರುವುದು ಸಚಿವರಾಗಲೀ ಅಥವಾ ಇತರ ಅಧಿಕಾರಿಗಳಾಗಲೀ ಗಮನ ಕೊಡಲಿಲ್ಲ. ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಿಸಿದ ನಂತರ ಸಚಿವ ಅಹಮದ್ ದೇವರಕೋವಿಲ್ ವಂದಿಸಿದರು. ಇದಾದ ಬಳಿಕ ಧ್ವಜವನ್ನು ತಲೆಕೆಳಗಾಗಿ ಹಾರಿಸಲಾಗಿದೆ ಎಂದು […]

ರಾಷ್ಟ್ರಧ್ವಜದ ‘ಮಾಸ್ಕ್’ ಮಾರಾಟ ಮಾಡುವ ಅಮೇಝಾನ, ಫ್ಲಿಪ್‌ಕಾರ್ಟ್ ಇತ್ಯಾದಿ ಕಂಪನಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ

Friday, August 14th, 2020
india Mask

ಮಂಗಳೂರು : ‘ಭಾರತೀಯ ರಾಷ್ಟ್ರಧ್ವಜ’ವು ಕೋಟಿಗಟ್ಟಲೆ ಭಾರತೀಯರಿಗೆ ಸ್ವಾಭಿಮಾನದ ವಿಷಯವಾಗಿದೆ; ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಅದನ್ನು ಇತರ ಯಾವುದಕ್ಕೂ ಉಪಯೋಗಿಸುವುದು ಕಾನೂನಿಗನುಸಾರ ದಾಖಲಾರ್ಹ ಹಾಗೂ ಜಾಮೀನುರಹಿತ ಅಪರಾಧವಾಗಿದೆ. ಹೀಗಿದ್ದರೂ, ಇಂತಹ ಸಂವೇದನಾಶೀಲ ವಿಷಯಗಳ ಬಗ್ಗೆ ಗಾಂಭೀರ್ಯತೆಯನ್ನಿಡದೇ ಅಮೇಝಾನ್, ಇಂಡಿಯಾಮಾರ್ಟ್, ಫೇಮಸ್‌ಶಾಪ್, ಮೀಂತ್ರಾ, ಸ್ನ್ಯಾಪಡೀಲ್, ಫ್ಲಿಪ್‌ಕಾರ್ಟ್‌ನಂತಹ ‘ಈ-ಕಾಮರ್ಸ್’ ಜಾಲತಾಣಗಳಲ್ಲಿ ಕೊರೋನಾ ಸೋಂಕನ್ನು ತಡೆಗಟ್ಟಲು ಆಗಸ್ಟ್ 15 ರ ನಿಮಿತ್ತ ಭಾರತೀಯ ರಾಷ್ಟ್ರಧ್ವಜದ ಬಣ್ಣಗಳಿರುವ ‘ಮಾಸ್ಕ್’ ನಿರ್ಮಿಸಿ ಅದನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತಿದೆ. ಅಂತಹವರ ಮೇಲೆ ರಾಷ್ಟ್ರಧ್ವಜದ ಅವಮಾನ ಮಾಡಿದ […]

ಸಿಎಎ ವಿರೋಧಿ ಹೋರಾಟ ದೇಶದ ಸ್ವತಂತ್ರ್ಯ ಕಾಲದ ಚಳುವಳಿಗಳು ನೆನಪಾಗುತ್ತಿವೆ : ಮಾಜಿ ಸ್ಪೀಕರ್ ರಮೇಶ್ ಕುಮಾರ್

Friday, January 31st, 2020
ramesh-kumar

ಉಡುಪಿ : ಪ್ರಸ್ತುತ ದೇಶದಲ್ಲಿ ಎಲ್ಲಿ ನೋಡಿದರೂ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಸ್ವಾತಂತ್ರ್ಯ ಕಾಲದಲ್ಲಿ ಇದನ್ನು ನೋಡುವ ಸೌಭಾಗ್ಯ ನಮಗೆ ಸಿಕ್ಕಿರಲಿಲ್ಲ. ಆದರೆ, ಈಗ ಮೋದಿಯಿಂದಾಗಿ ಸಾಯೋ ಕಾಲಕ್ಕೆ ನಮಗೆ ಇಂತಹ ಅವಕಾಶ ಸಿಕ್ಕಿದೆ. ಇದನ್ನು ನೋಡಿದರೆ ದೇಶದ ಸ್ವತಂತ್ರ್ಯ ಕಾಲದ ಚಳುವಳಿಗಳು ನೆನಪಾಗುತ್ತಿವೆ ಇದಕ್ಕೆ ಪ್ರಧಾನಿ ಮೋದಿಯೇ ಕಾರಣ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಭಿನಂದಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಅವರು, “ನಮಗೆ ಕೇಸರಿ ಬಟ್ಟೆ ಕೇಸರಿ ಧ್ವಜ ನೋಡಿ ನೋಡಿ […]

ರಾಷ್ಟ್ರಧ್ವಜದ ಅವಮಾನ ತಡೆಗಟ್ಟುವ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ಮನವಿ

Saturday, August 4th, 2018
HJS

ಪುತ್ತೂರು : ಉಚ್ಚನ್ಯಾಯಾಲಯದ ಆದೇಶದಂತೆ ರಾಷ್ಟ್ರಧ್ವಜದ ಅವಮಾನವನ್ನು ತಡೆಯಲು ಹಾಗೂ ರಾಜ್ಯ ಸರ್ಕಾರದಿಂದ ಪ್ಲಾಸ್ಟಿಕ್ ಮೇಲಿನ ನಿರ್ಬಂಧದ ನಿರ್ಣಯದ ಕುರಿತು ಕ್ರಮಕೈಗೊಳ್ಳುವ ಕುರಿತು ಪುತ್ತೂರು ಉಪವಿಭಾಗಾಧಿಕಾರಿಯವರ ಕಛೇರಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮನವಿ ನೀಡಲಾಯಿತು. ರಾಷ್ಟ್ರಧ್ವಜವು ರಾಷ್ಟ್ರದ ಗೌರವವಾಗಿದೆ! ಆದರೆ ದುರ್ದೈವದಿಂದ ಹೆಚ್ಚಿನ ಭಾರತೀಯರಿಗೆ ಇದರ ನೆನಪು ಕೇವಲ 15 ಅಗಸ್ಟ್ ಮತ್ತು 26 ಜನವರಿಯಂದು ಮಾತ್ರ ಆಗುತ್ತದೆ. ಈ ದಿನದಂದು ರಾಷ್ಟ್ರಧ್ವಜವನ್ನು ಅತ್ಯಂತ ಗೌರವದಿಂದ ಹಾರಿಸಲಾಗುತ್ತದೆ ! ಆದರೆ ಇದೇ ಕಾಗದದಿಂದ / ಪ್ಲಾಸ್ಟಿಕ್ ನಿಂದ ತಯಾರಿಸಿದ […]

ರಾಜ್ಯ ಧ್ವಜ ಬಳಕೆಗೆ ಅನುಮತಿ ಕೋರಿ ಕೇಂದ್ರಕ್ಕೆ‌ ಪತ್ರ: ಸಿಎಂ ಸಿದ್ದರಾಮಯ್ಯ

Thursday, March 8th, 2018
flag-karnataka

ಬೆಂಗಳೂರು : ಹಳದಿ ಬಿಳಿ ಹಾಗೂ ಕೆಂಪು ಬಣ್ಣವನ್ನು ಒಳಗೊಂಡ ತ್ರಿವರ್ಣ ಧ್ವಜದ ಮಧ್ಯೆ ನೀಲಿ ಬಣ್ಣದಲ್ಲಿ ರಾಜ್ಯ ಲಾಂಛನ ಗಂಡ ಭೇರುಂಡ ಇರುವ ಧ್ವಜವನ್ನು ರಾಜ್ಯ ಧ್ವಜವನ್ನಾಗಿ ಅಧಿಕೃತವಾಗಿ ಬಳಸಲು ಒಪ್ಪಿಗೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿದ್ದ ಸಮಿತಿ ಸಿದ್ಧಪಡಿಸಿರುವ ನಾಡಧ್ವಜದ ವಿನ್ಯಾಸದ ಬಗ್ಗೆ ಚರ್ಚಿಸಲು ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮುಖ್ಯಮಂತ್ರಿಯವರು ರಾಜ್ಯದ ಕನ್ನಡಪರ […]

ರಾಷ್ಟ್ರಧ್ವಜದ ಅವಮಾನವನ್ನು ತಡೆಯಲು ಪ್ಲಾಸ್ಟಿಕ್ ಧ್ವಜದ ಬಳಕೆಯ ಮೇಲೆ ನಿರ್ಬಂಧವನ್ನು ಹೇರುವಂತೆ ಮನವಿ

Wednesday, January 17th, 2018
jagathikarana

ಮಂಗಳೂರು : ಪ್ರಜಾಪ್ರಭುತ್ವ ದಿನದಂದು ರಾಷ್ಟ್ರ ಧ್ವಜಕ್ಕೆ ಆಗುವ ಅಪಮಾನ ತಡೆಗಟ್ಟುವಂತೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದ.ಕ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು. ರಾಷ್ಟ್ರಧ್ವಜವು ದೇಶಭಕ್ತಿಯ ಪ್ರತೀಕವಾಗಿದ್ದು ಸಮಸ್ತ ಭಾರತೀಯರಿಗೆ ಪೂಜನೀಯವಾಗಿದೆ. ಆದರೆ ಇದರ ಬಳಕೆಯ ಮೇಲೆ ನಿಯಂತ್ರಣವಿಲ್ಲ. ಇದರಿಂದ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ಅಥವಾ ಕಾಗದದ ಧ್ವಜಗಳು ರಸ್ತೆಯ ಮೇಲೆ, ಸಣ್ಣ ಅಂಗಡಿಗಳಲ್ಲಿ ಮಾರಾಟಕ್ಕೆ ಕಂಡು ಬರುತ್ತವೆ. ಜನವರಿ 26 ಅಥವಾ ಆಗಸ್ಟ 15 ಕ್ಕೆ ಮುಂಚಿತವಾಗಿ ಮಕ್ಕಳು ಅಥವಾ ಹಿರಿಯರು ಪ್ಲಾಸ್ಟಿಕ್ ಧ್ವಜಗಳನ್ನು ಖರೀದಿಸುತ್ತಾರೆ […]

ಪಡೀಲಿನ ಕಸದ ತೊಟ್ಟಿಯಲ್ಲಿ ರಾಷ್ಟ್ರಧ್ವಜ?

Monday, January 15th, 2018
puttur

  ಪುತ್ತೂರು: ಇಲ್ಲಿನ ಪಡೀಲಿನಲ್ಲಿ ಕಸದ ತೊಟ್ಟಿಯಲ್ಲಿ ರಾಷ್ಟ್ರಧ್ವಜ ಪತ್ತೆಯಾಗಿದ್ದು, ಜನರ ಮನಸ್ಥಿತಿ ಎಲ್ಲಿಗೆ ತಲುಪಿದೆ ಎನ್ನುವುದು ಬಹಿರಂಗವಾದಂತಾಗಿದೆ. ಪುತ್ತೂರು- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಸ್ವಚ್ಛ ಭಾರತ್‌ ತಂಡ ಶುಚಿಗೊಳಿಸುವ ವೇಳೆ ಕೃಷ್ಣಾ ಎಂಬವರಿಗೆ ರಾಷ್ಟ್ರಧ್ವಜ ಸಿಕ್ಕಿದೆ. ಇದನ್ನು ಜೋಪಾನವಾಗಿ ಮನೆಗೆ ತೆಗೆದುಕೊಂಡು ಹೋಗಿ, ತೆಗೆದಿರಿಸಿದ್ದಾರೆ. ರಾಮಕೃಷ್ಣ ಮಿಶನ್‌ ನೇತೃತ್ವದಲ್ಲಿ ನಡೆಯುತ್ತಿರುವ ಸ್ವಚ್ಛ ಭಾರತ್‌ ಕಾರ್ಯಕ್ರಮದಲ್ಲಿ ಪ್ರತಿದಿನ ಬೆಳಗ್ಗೆ ಸ್ವಚ್ಛತ ಕಾರ್ಯಕ್ರಮ ನಡೆಯುತ್ತಿದೆ. ಕೃಷ್ಣಾ ಅವರ ತಂಡ ತ್ಯಾಜ್ಯ ಹೆಕ್ಕುವುದು ಮಾತ್ರವಲ್ಲ, ಇದರ ಜತೆಗೆ ಅರಿವು ಮೂಡಿಸುವ […]

ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್‌ ಶಾ ಆ. 21ರಂದು ಮಂಗಳೂರಿಗೆ

Friday, August 19th, 2016
Nalin-Kumar-Kateel

ಮಂಗಳೂರು: ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್‌ ಶಾ ಆ. 21ರಂದು ಮಂಗಳೂರಿಗೆ ಆಗಮಿಸಲಿದ್ದು, ಉಳ್ಳಾಲದಲ್ಲಿ ಜರಗಲಿರುವ 70ನೇ ಸ್ವಾತಂತ್ರ್ಯಸಂಭ್ರಮ ಹಾಗೂ ಬಲಿದಾನ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಅಮಿತ್‌ ಶಾ ಆ. 21ರಂದು ಉಳ್ಳಾಲಕ್ಕೆ ಭೇಟಿ ನೀಡಿ ಬಲಿದಾನ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಗೋವಾದಿಂದ ಅವರು ಬೆಳಗ್ಗೆ 4.30ಕ್ಕೆ ಮಂಗಳೂರು ಜಂಕ್ಷನ್‌ ರೈಲ್ವೇ ನಿಲ್ದಾಣಕ್ಕೆ ಆಗಮಿಸುವರು. ಬೆಳಗ್ಗೆ 10 ಗಂಟೆಗೆ ನಗರದ ಬಿಜೆಪಿ ಕಚೇರಿಗೆ ಆಗಮಿಸಿ “ಗಿಡ ನೆಡಿ ಪರಿಸರ ಉಳಿಸಿ’ ಕಾರ್ಯಕ್ರಮದ ಅನ್ವಯ ಗಿಡ ನೆಡಲಿದ್ದಾರೆ. 10.20ಕ್ಕೆ ಪಂಪ್‌ವೆಲ್‌ […]