ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಧ್ಯಕ್ಷರಾಗಿ ಸದಾಶಿವ ಉಳ್ಳಾಲ ಅಧಿಕಾರ ಸ್ವೀಕಾರ

Friday, March 1st, 2024
sadashiva-ullal

ಮಂಗಳೂರು: ನಾಲ್ಕೂವರೆ ದಶಕಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ಸದಾಶಿವ ಉಳ್ಳಾಲ ಅವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಧ್ಯಕ್ಷರಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡರು. ಸದಾಶಿವ ಉಳ್ಳಾಲ್ ಮಾತನಾಡಿ ‘ಪಕ್ಷ ನೀಡಿರುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವೆ. ಪಕ್ಷಕ್ಕೆ ಯಾವ ಬಗೆಯಲ್ಲೂ ಮುಜುಗರ ಆಗದಂತೆ ಬಡವರಿಗೆ ಸೂರು ನಿರ್ಮಿಸಿಕೊಳ್ಳಲು ಜಾಗ ಸಿಗುವಂತೆ ಮಾಡಲು ಪ್ರಯತ್ನಿಸುವೆ’ ಎಂದು ಹೇಳಿದ್ದಾರೆ. ವಕೀಲರಾಗಿರುವ ಸದಾಶಿವ ಉಳ್ಳಾಲ್ ಅವರು ಉಳ್ಳಾಲ ತಾಲ್ಲೂಕಿನ ಕೊಲ್ಯ ನಿವಾಸಿ. ಗ್ರಾಮ ಪಂಚಾಯಿತಿ ಮತ್ತು ಬೂತ್ ಮಟ್ಟದ ಕಾರ್ಯಕರ್ತರಾಗಿ ರಾಜಕೀಯ ಜೀವನ […]

ಖಾಸಗಿ ಟಿವಿ ಚಾನೆಲ್ ವರದಿಗಾರನ ಮೇಲೆ ವಕೀಲರಿಂದ ಹಲ್ಲೆ

Tuesday, November 23rd, 2021
yadunandan

ಮಂಗಳೂರು : ಖಾಸಗಿ ಟಿವಿ ಚಾನೆಲ್ ಒಂದರ ವರದಿಗಾರನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ವಕೀಲ ಯದುನಂದನ್ ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ಸುಖ್ ಪಾಲ್ ಪೊಳಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರ ಸಂಜೆಯ ವೇಳೆ ಘಟನೆ ನಡೆದಿದ್ದು, ಉರ್ವಾ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಠಾಣೆಯಲ್ಲಿ ಪ್ರತಿದೂರು ಕೂಡ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ. ಮಂಗಳೂರು […]

ಕಚೇರಿಯಲ್ಲಿ ಲೈಂಗಿಕ ಕಿರುಕುಳ, ಆರೋಪಿ ಕೆ.ಎಸ್.ಎನ್. ರಾಜೇಶ್ ಭಟ್ ಗೆ ಲುಕ್ಔಟ್ ನೋಟಿಸ್ ಜಾರಿ

Tuesday, November 9th, 2021
Rajesh Bhat

ಮಂಗಳೂರು :  ಕಾನೂನು ಪದವಿ ವಿದ್ಯಾರ್ಥಿನಿಯೊಬ್ಬರ ಮೇಲೆ ತನ್ನ ಕಚೇರಿಯಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಹೊತ್ತಿರುವ  ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ ಅವರಿಗೆ   ಪೊಲೀಸರು ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ರಾಜೇಶ್ ಭಟ್ ಕಚೇರಿಯಲ್ಲಿ ಇಂಟರ್ನ್ ಶಿಪ್ ಮಾಡಲು ಬಂದಿದ್ದ ವಿದ್ಯಾರ್ಥಿನಿಗೆ ಕಚೇರಿಯಲ್ಲೇ ಲೈಂಗಿಕ ಕಿರುಕುಳ ನೀಡಿದ್ದರು. ಖಾಸಗಿ ಅಂಗಗಳನ್ನು ಮುಟ್ಟಿ ಅಸಭ್ಯವಾಗಿದ ವರ್ತಿಸಿದರು ಎಂದು ಎಂದು ರಾಜೇಶ್ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದರು. ಈ ಪ್ರಕರಣ ಹೊರ ಬರುತ್ತಿದ್ದಂತೆ ರಾಜೇಶ್ ತಲೆಮರೆಸಿಕೊಂಡಿದ್ದಾರೆ. ಲೋಕಾಯುಕ್ತ ಮತ್ತು […]

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಬಾರ್ ಕೌನ್ಸಿಲ್ ನಿಂದ ವಕೀಲ ಅಮಾನತು

Friday, October 22nd, 2021
Rajesh

ಮಂಗಳೂರು :  ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ಅವರನ್ನು ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ (ಕೆಎಸ್‌ಬಿಸಿ) ಸದಸ್ಯತ್ವದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಇಂಟರ್ನ್‌ಶಿಪ್‌ಗೆಂದು ಬಂದಿದ್ದ ವಿದ್ಯಾರ್ಥಿನಿಗೆ  ಲೈಂಗಿಕ ಕಿರುಕುಳ ನೀಡಿರುವುದಾಗಿ  ಮಂಗಳೂರಿನ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ರಾಜೇಶ್ ವಿರುದ್ಧ ಎರಡು ಪ್ರಕರಣಗಳು (78/2021 ಮತ್ತು 79/2021) ದಾಖಲಾಗಿದ್ದು, ತನಿಖೆ ನಡೆದಿದೆ. ಗಂಭೀರ ಆರೋಪ ಹೊತ್ತಿರುವ ನ್ಯಾಯವಾದಿಯನ್ನು ಬಾರ್ ಕೌನ್ಸಿಲ್ ಅಧ್ಯಕ್ಷ ಶ್ರೀನಿವಾಸ ಬಾಬು ನೇತೃತ್ವದ ಸಮಿತಿ ಅಮಾನತುಗೊಳಿಸಿದೆ. ರಾಜೇಶ್ ವಿರುದ್ಧ ಆರೋಪದ ಎಫ್‌ಐಆರ್ […]

ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಟೈಪಿಸ್ಟ್ ಗೆ ಲೈಂಗಿಕ ಕಿರುಕುಳ ನೀಡಿದ ವಕೀಲ, ಪ್ರಕರಣ ದಾಖಲು

Sunday, August 22nd, 2021
office Staff

ಮಂಗಳೂರು: ಕಚೇರಿಯಲ್ಲಿ  ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ವಕೀಲನೋರ್ವನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. ವಿಟ್ಲದ ವಿ.ಹೆಚ್. ಕಾಂಪ್ಲೆಕ್ಸ್ನಲ್ಲಿರುವ ವಕೀಲ ಉಮ್ಮರ್ ಕೆ. ವಿರುದ್ಧ ಲೈಂಗಿಕ ಕಿರುಕುಳ ಆರೋಪದಡಿ ದೂರು ದಾಖಲಾಗಿದೆ. ಕಳೆದ 9 ತಿಂಗಳಿಂದ ಸಂತ್ರಸ್ತ ಯುವತಿ ಉಮ್ಮರ್ ಕೆ. ಕಚೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಆ.16 ರಂದು ಸಂಜೆ ಕಚೇರಿಯಲ್ಲಿ ಯಾರು ಇಲ್ಲದ ವೇಳೆ ಸಂತ್ರಸ್ತೆಗೆ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಲಾಗಿದೆ. ಜೊತೆಗೆ ಈ ವಿಚಾರವನ್ನು […]

ವಕೀಲರಿಗೆ ಆರೋಗ್ಯ ವಿಮೆ, ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಭರವಸೆ

Tuesday, July 20th, 2021
Bommai

ಬೆಂಗಳೂರು: ಕಾನೂನು ಸೇವೆಯಲ್ಲಿ ತೊಡಗಿರುವ ವಕೀಲರಿಗೆ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಸರ್ಕಾರದ ವತಿಯಿಂದ ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು. ಮಂಗಳವಾರ ಬೆಂಗಳೂರು ವಕೀಲರ ಸಂಘ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ ನ್ಯಾಯವಾದಿಗಳಿಗೆ ಏರ್ಪಡಿಸಿದ್ದ ನುಡಿನಮನ ಮತ್ತು ಸಾಂತ್ವನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಲವಾರು ವರ್ಷಗಳ ಹಿಂದೆ ಪ್ಲೇಗ್ ಬಂದು ಜನ ಸತ್ತಿರುವುದನ್ನು ನಾವು ಕೇಳಿದ್ದೇವೆ. ಆದರೆ ನಮ್ಮ ಜೀವಮಾನದ ಅವಧಿಯಲ್ಲಿ […]

ದೇಶ ಪ್ರೇಮವುಳ್ಳ ಹಾಗೂ ನಿಸ್ವಾರ್ಥ ಮನೋಭಾವದ ವಕೀಲರು ಬೇಕು : ನಗರೇಶ್

Sunday, August 24th, 2014
adhivakta

ಮಂಗಳೂರು: ಸಾಮಾಜಿಕ ಬದಲಾವಣೆಗೆ ಕಾನೂನು ಉತ್ತಮ ಸಾಧನವಾಗಿದೆ. ಜನಸಾಮಾನ್ಯರಿಗೂ ಕಾನೂನು ಸೇವೆ ಸುಲಭವಾಗಿ ಸಿಗಬೇಕು ಎನ್ನುವ ಉದ್ದೇಶದಿಂದ ಅಧಿವಕ್ತಾ ಪರಿಷತ್ ಸ್ಥಾಪನೆಯಾಗಿದೆ ಎಂದು ಸಾಲಿಸಿಟರ್ ಜನರಲ್ ಆಫ್ ಇಂಡಿಯಾದ ಸದಸ್ಯ, ಕೇರಳ ಬಾರ್ ಅಸೋಸಿಯೇಶನ್ ಸದಸ್ಯ ನಗರೇಶ್ ಹೇಳಿದರು. ಅವರು ಭಾನುವಾರ ಎಸ್‌ಡಿಎಂ ಉದ್ಯಮಾಡಳಿತ ಕಾಲೇಜಿನ ಸಭಾಂಗಣದಲ್ಲಿ ಅಧಿವಕ್ತಾ ಪರಿಷತ್‌ನ ದ.ಕ.ಜಿಲ್ಲಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಜನ ಸಾಮಾನ್ಯರ ಸೇವೆ ಮಾಡುವ ರಾಜಕೀಯೇತರ ವಕೀಲರ ಸಂಘಟನೆಯೇ ಅಧಿವಕ್ತಾ ಪರಿಷತ್ ಆಗಿದೆ. ದೇಶದಲ್ಲಿ ಸಾವಿರಾರು ವಕೀಲರ ಸಂಘಟನೆಗಳಿದ್ದು, ಕೆಲವು […]