ವಾಟಾಳ್ ನಾಗರಾಜ್ ಪತ್ನಿ ಜ್ಞಾನಾಂಬಿಕೆ ನಿಧನ

Wednesday, August 5th, 2020
jnanabike

ಬೆಂಗಳೂರು : ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರ ಪತ್ನಿ ಜ್ಞಾನಾಂಬಿಕೆ (60) ಮಂಗಳವಾರ ನಿಧನ ಹೊಂದಿದ್ದಾರೆ. ಕಿಡ್ನಿ ವೈಫಲ್ಯದಿಂದ ಅವರು ಮಂಗಳವಾರ ಸಂಜೆ 7:30ಕ್ಕೆ ಶೇಷಾದ್ರಿ ಪುರಂನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ವಾಟಾಳ್ ನಾಗರಾಜ್ ರವರ ಸ್ವಗೃಹ ಡಾಲರ್ಸ್ ಕಾಲನಿಯ ನಿವಾಸಕ್ಕೆ ಕೊಂಡೊಯ್ಯಲಾಗುವುದು. ಬುಧವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ಹೊರಟು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸ್ವಗ್ರಾಮದಲ್ಲಿ ವಿಧಿ ವಿಧಾನ ನೆರವೇರಿಸಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅವರ ಕುಟುಂಬಸ್ಥರು ಮಾಹಿತಿ […]

ನೆರೆ ಪರಿಹಾರಕ್ಕೆ ಆಗ್ರಹಿಸಿ : ವಾಟಾಳ್ ನಾಗರಾಜ್ ಪ್ರತಿಭಟನೆ

Wednesday, August 28th, 2019
vatal-nagraj

ರಾಮನಗರ : ನೆರೆ ಹಾವಳಿಗೆ ತತ್ತರಿಸಿರುವ ಜನರ ನೋವಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ರಾಮನಗರದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ರಾಮನಗರದ ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. “ರಾಜ್ಯದಲ್ಲಿ ನೆರೆ ಬಂದು ಹಲವರು ಸಾವನ್ನಪ್ಪಿದ್ದಾರೆ. ಆದರೂ ಪ್ರಧಾನಿಗಳು ರಾಜ್ಯಕ್ಕೆ ಭೇಟಿ ನೀಡಿಲ್ಲ. ರಾಜ್ಯ ಸರ್ಕಾರ ನೆರೆಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಟ್ಟಿಲ್ಲ. ಮೂವರು […]

ಒಂದು ವಾರದೊಳಗೆ ರಜನಿ ಚಿತ್ರ ತಗೆಯಬೇಕು: ವಾಟಾಳ್ ನಾಗರಾಜ್ ಆಕ್ರೋಶ

Thursday, November 29th, 2018
vatal-nagraj

ಬೆಂಗಳೂರು: ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳಲ್ಲಿ ಮೊದಲನೇ ಆದ್ಯತೆ ಕೊಡಬೇಕು. ಪರಭಾಷೆ ಚಿತ್ರಗಳನ್ನ ತಿರಸ್ಕರಿಸಬೇಕು. ಪರಭಾಷೆ ಚಿತ್ರಗಳು ಕರ್ನಾಟಕದಲ್ಲಿ ಕೊಳ್ಳೆ ಹೊಡೆಯುತ್ತಿದ್ದು, ಕನ್ನಡ ಚಿತ್ರಗಳು ಮೂಲೆ ಗುಂಪಾಗಿವೆ ಅಂತ ವಾಟಾಳ್ ನಾಗರಾಜ್ ಆಕ್ರೋಶ ಹೊರ ಹಾಕಿದರು. ಪರಭಾಷಾ ಚಿತ್ರಗಳ ನೀತಿಯನ್ನು ವಿರೋಧಿಸಿ ಇಂದು ವಾಟಾಳ್ ನಾಗರಾಜ್ ಲಾಲ್ಬಾಗ್ ಹತ್ತಿರವಿರುವ ಊರ್ವಶಿ ಚಿತ್ರಮಂದಿರ ಮುಂದೆ ರಜನಿಕಾಂತ್ ನಟಿಸಿರುವ ತಮಿಳು ಚಿತ್ರ 2.0 ಪರಭಾಷಾ ಚಿತ್ರವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತಾನಾಡಿದ ವಾಟಳ್ ನಾಗರಾಜ್, ಕನ್ನಡ ಚಿತ್ರಗಳಿಗೆ ಮಾನ್ಯತೆ […]

ನಟ ರಜನಿಕಾಂತ್‌ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ: ವಾಟಾಳ್ ನಾಗರಾಜ್

Saturday, May 26th, 2018
vatal-nagaraj

ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಧಿಕಾರ ರಚನೆಯಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತದೆ. ಇದರ ಪರವಾಗಿ ದನಿ ಎತ್ತಿದ ನಟ ರಜನೀಕಾಂತ್ ಅವರ ಚಲನಚಿತ್ರಗಳನ್ನು ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಪ್ರದರ್ಶನಕ್ಕೆ ಅವಕಾಶ ಕೊಡಬಾರದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯದಲ್ಲೇ ಅವರ ಚಿತ್ರವೊಂದು ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿದ್ದು, ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು. ಅತ್ಯಂತ ಹಿಂದುಳಿದಿರುವ ಹೈದರಾಬಾದ್-ಕರ್ನಾಟಕ ಭಾಗಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ರಾಜಕೀಯ ಪ್ರಾತಿನಿಧ್ಯ […]

ಕರ್ನಾಟಕ ಬಂದ್ : ದಕ್ಷಿಣ ಕನ್ನಡದಲ್ಲಿ ಬಂದ್‌ಗೆ ಬೆಂಬಲವಿಲ್ಲ

Thursday, January 25th, 2018
mangaluru

ಮಂಗಳೂರು: ಕನ್ನಡ ಒಕ್ಕೂಟ ಕರೆ ನೀಡಿರುವ ಜ.25ರ ಕರ್ನಾಟಕ ಬಂದ್‌ಗೆ ಮಂಗಳೂರಿನಲ್ಲಿ ಬೆಂಬಲ ಸಿಕ್ಕಿಲ್ಲ. ಮಂಗಳೂರಿನ ಸಾಮಾನ್ಯ ಜನರು ಬಂದ್ ಕರೆಗೆ ನೋ ಎಂದಿದ್ದಾರೆ.ಗುರುವಾರದ ಕರ್ನಾಟಕ ಬಂದ್‌ಗೆ ಮಂಗಳೂರಿನ ಯಾವೊಂದು ಸಂಘಟನೆ ಬೆಂಬಲ ಘೋಷಿಸಿಲ್ಲ. ಆದರೆ, ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದ ಮಂಗಳೂರು ಶಾಖೆಯ ಕಾರ್ಯಕರ್ತರು ರೈಲು ತಡೆದು ಸಾಂಕೇತಿಕ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ಬಂದ್ ಕರೆಗೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಯಾವೊಂದು ಸಂಘಟನೆಗಳು ಬೆಂಬಲ ಕೊಟ್ಟಿಲ್ಲ. ಆದ್ದರಿಂದ, ಬಂದ್ ಬಿಸಿ […]