ಕೆತ್ತಿಕ್ಕಲ್‌ನಲ್ಲಿ ಭೂಕುಸಿತದ ಭೀತಿ ಇರುವ ಪ್ರದೇಶಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ

Sunday, August 4th, 2024
Brijesh Chowta

ಮಂಗಳೂರು : ವಾಮಂಜೂರು ಬಳಿಯ ಕೆತ್ತಿಕ್ಕಲ್‌ನಲ್ಲಿ ಭೂಕುಸಿತದ ಭೀತಿಗೊಳಗಾದ ಪ್ರದೇಶಕ್ಕೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆತ್ತಿಕಲ್ ಗುಡ್ಡದ ಮೇಲೆ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ನಿರ್ಮಿಸುತ್ತಿರುವ ವೆಟ್ ವೆಲ್‌ಗೆ ಭೇಟಿ ನೀಡಿದ ಬಳಿಕ ರಾ.ಹೆ ಬಳಿಯಿರುವ ಕೆತ್ತಿಕಲ್ ಗುಡ್ಡ ಕುಸಿತ ಸಂಭವಿಸಿದ ಪ್ರದೇಶಕ್ಕೆ ಭೇಟಿ ನೀಡಿ ಜಾಗದ ಪರೀಶೀಲನೆ ನಡೆಸಿದ ಸಂಸದರು ಅಲ್ಲಿನ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಮಾಹಿತಿ ಪಡೆದರು. ಮುಂಬರುವ […]

ಅನ್ಯಧರ್ಮದ ಯುವಕ ಮತ್ತು ಯುವತಿ ಮೇಲೆ ಬಸ್‌ನಲ್ಲಿ ಹಲ್ಲೆ, ನಾಲ್ವರ ಬಂಧನ

Saturday, December 11th, 2021
Bus Love

ಮಂಗಳೂರು : ನಗರದ ಸರ್ವೀಸ್ ಬಸ್ ನಿಲ್ದಾಣದಲ್ಲಿ ಶುಕ್ರವಾರ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಗೆ ಅವಾಚ್ಯವಾಗಿ ಬೈದು ಕೈಯಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರನ್ನು ಪ್ರಕಾಶ್, ರಾಘವೇಂದ್ರ, ರಂಜಿತ್, ಪವನ್ ಎಂದು ಗುರುತಿಸಲಾಗಿದೆ. ಅನ್ಯಧರ್ಮದ ಯುವಕ ಮತ್ತು ಯುವತಿ ಬಸ್‌ನಲ್ಲಿ ಕುಳಿತುಕೊಂಡಿದ್ದ ಸಂದರ್ಭದಲ್ಲಿ 5-6 ಮಂದಿ ಐಡಿ ಪ್ರೂಫ್ ಕೇಳಿ ಅವರ ಮನೆಯವರ ಬಗ್ಗೆ ವಿಚಾರಿಸಿ ಅವಾಚ್ಯ ಶಬ್ಧಗಳಿಂದ ಬೈದು ಕೈಗಳಿಂದ ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೆ ಯುವತಿಯ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ವರ್ತಿಸಿದ್ದ […]

ಶಾಂಭವಿ ನದಿಯಲ್ಲಿ ಮುಳುಗಿ ಓರ್ವ ಯುವತಿ ಸಮೇತ ನಾಲ್ವರ ದುರ್ಮರಣ

Tuesday, November 24th, 2020
shambhavi river

ಮೂಡುಬಿದಿರೆ: ಮದುವೆ ಸಮಾರಂಭಕ್ಕೆ ಬಂದಿದ್ದ ಮೂವರು ಯುವಕರು ಹಾಗೂ ಯುವತಿ ಕಡಂದಲೆಯ ತುಲೆಮುಗೇರ್ ಎಂಬಲ್ಲಿ ಶಾಂಭವಿ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಂಗಳವಾರ ವರದಿಯಾಗಿದೆ. ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ  ಕಡಂದಲೆ ಶ್ರೀಧರ ಆಚಾರ್ಯ ಅವರ ಮನೆಗೆ ಮದುವೆ ಸಮಾರಂಭಕ್ಕೆ ಬಂದಿದ್ದ ಮೂವರು ಯುವಕರು ಹಾಗೂ ಯುವತಿ ಶಾಂಭವಿ ನದಿಯ ತುಲೆಮುಗೇರ್ ಎಂಬಲ್ಲಿ ನದಿಯಲ್ಲಿ ಈಜಲು ಹೋದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ವಾಮಂಜೂರು ಮೂಡುಶೆಡ್ಡೆಯ ನಿಖಿಲ್ (18) ಹಾಗೂ ಅರ್ಶಿತಾ( 20), ವೇಣೂರಿನ ಸುಬಾಸ್(19), ಬಜ್ಪೆ ಪೆರಾರದ ರವಿ […]

ವಾಮಂಜೂರು ಗ್ರಾಮಾಂತರ ಠಾಣಾ ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್

Tuesday, June 30th, 2020
police corona virus

ಮಂಗಳೂರು : ಮಂಗಳೂರು ಹೊರವಲಯದ ವಾಮಂಜೂರು ಗ್ರಾಮಾಂತರ ಠಾಣಾ ಸಿಬ್ಬಂದಿ ಯೋರ್ವರಿಗೆ ಕೋವಿಡ್-19 ಪಾಸಿಟಿವ್ ಮಂಗಳವಾರ  ವರದಿಯಾಗಿದೆ. ಇವರು ಈ ಹಿಂದೆ ಉಳ್ಳಾಲ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಉಳ್ಳಾಲ ಠಾಣೆಯಲ್ಲಿ ಕರ್ತವ್ಯ ವೇಳೆ ಆರೋಪಿಯೊಬ್ಬನಿಗೆ ಕೋವಿಡ್-19 ಸೋಂಕು ತಗುಲಿತ್ತು. ನಂತರ ಉಳ್ಳಾಲ ಠಾಣೆಯ ಎಸ್ಐ ಸೇರಿದಂತೆ ಹತ್ತು ಮಂದಿಗೆ ಸೋಂಕು ತಾಗಿತ್ತು. ಈತನ ಸಂಪರ್ಕದಿಂದಲೇ ಈ ಸಿಬ್ಬಂದಿಗೂ ಸೋಂಕು ತಾಗಿರುವ ಶಂಕೆ ವ್ಯಕ್ತವಾಗಿದೆ. ಇವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಮಂಗಳೂರು ಕೇಂದ್ರ […]

ಮಹಿಳೆಯ ಬ್ಯಾಗ್ ಕಳ್ಳತನ ಪ್ರಕರಣ: ಆರೋಪಿ ಪೊಲೀಸರ ವಶಕ್ಕೆ

Tuesday, September 18th, 2018
arrested

ಮಂಗಳೂರು: ನಗರದ ಕುಲಶೇಖರ ನಿಡ್ಡೇಲ್ ಮೈದಾ ಫಾಕ್ಟರಿಯ ಬಳಿ ಸಂಜೆ ವೇಳೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಬ್ಯಾಗನ್ನು ಸುಲಿಗೆ ಮಾಡಿದ್ದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ವಾಮಂಜೂರು ಮಸೀದಿ ಕಂಪೌಂಡ್ ನಿವಾಸಿ ಆರೀಫ್ (24) ಬಂಧಿತ ಆರೋಪಿ. ಬಂಧಿತನಿಂದ ನಂಬರ್ ಇಲ್ಲದ ಹೋಂಡಾ ಆಕ್ಟಿವಾ, ಕೃತ್ಯ ನಡೆಸಲು ಉಪಯೋಗಿಸಿದ ಎರಡು ಹೆಲ್ಮೆಟ್, ಸುಲಿಗೆ ಮಾಡಿದ ಬ್ಯಾಗ್ಗಳಲ್ಲಿದ್ದ ಎಂಟು ವಿವಿಧ ಕಂಪನಿಗಳ ಮೊಬೈಲ್ ಫೋನ್ ಹಾಗೂ ಎಟಿಎಂ ಕಳವು ಯತ್ನಕ್ಕೆ ಉಪಯೋಗಿಸಿದ ರಾಡ್ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆರೋಪಿ […]

ವಾಮಂಜೂರು ಪ್ರವೀಣನಿಗೆ `ಗಲ್ಲು ಶಿಕ್ಷೆ’ ಆದೀತೇ?

Tuesday, February 26th, 2013
Praven vaamanjur

ಮಂಗಳೂರು : ಪ್ರಣವ್ ಮುಖರ್ಜಿ ರಾಷ್ಟ್ರಪತಿ ಆದ ಬಳಿಕ ಇಬ್ಬರಿಗೆ ಗಲ್ಲು ಶಿಕ್ಷೆ ಜಾರಿಯಾಗಿದೆ. ಇದೀಗ ವೀರಪ್ಪನ್ ನ ನಾಲ್ವರು ಸಹಚರರು ಗಲ್ಲು ಶಿಕ್ಷೆ ಕ್ಷಣಗಣನೆ ಎದುರಿಸುತ್ತಿದ್ದಾರೆ. ಇವೆಲ್ಲದರ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದ ವಾಮಂಜೂರು ಪ್ರವೀಣನಿಗೆ `ಗಲ್ಲು ಶಿಕ್ಷೆ’ ಆದೀತೇ? ಅಥವಾ ಪಾರಾದನೆ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಉಪ್ಪಿನಂಗಡಿ ಮೂಲದ ಪ್ರವೀಣನು ವಾಮಂಜೂರಿನ ತನ್ನ ಸೋದರತ್ತೆ (ತಂದೆಯ ತಂಗಿ) ಅಪ್ಪಿ ಶೇರಿಗಾರ್ತಿ ಯ ಮನೆಯಲ್ಲೇ ದರ್ಜಿ ಕೆಲಸ ಮಾಡಿಕೊಂಡಿದ್ದ. […]

ಮರದ ಕೊಂಬೆಗಳ ನಡುವೆ ಸಿಲುಕಿ ವ್ಯಕ್ತಿಯ ಸಾವು

Saturday, October 20th, 2012
Youth dies

ಮಂಗಳೂರು: ವಾಮಂಜೂರು ಬಳಿಯ ತಾರಿಗುಡ್ಡೆ ಬೊಂಡೆಂತಿಲ ಎಂಬಲ್ಲಿ ಮರ ಕಡಿಯುತ್ತಿರುವಾಗ ಮರದ ಕೊಂಬೆಗಳ ನಡುವೆ ಸಿಲುಕಿ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಸಂಭವಿಸಿದೆ. ಮಂಜೊಟ್ಟಿ ಹೌಸ್ ನಿವಾಸಿ ಅಬೂಬಕ್ಕರ್ ಅವರ ಮಗ ಆರಿಸ್ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಆರಿಸ್ ಹಾಗೂ ಇತರರು ಮರಕಡಿಯಲು ತೆರಳಿದ್ದು, ಆರಿಸ್ ದೊಡ್ಡದಾದ ಮರದ ಕೊಂಬೆಯನ್ನು ಕತ್ತರಿಸುವಾಗ ಕೊಂಬೆಯು ಆರಿಸ್ ಇದ್ದ ಕಡೆಗೆ ವಾಲಿದ್ದರಿಂದ ಆರಿಸ್ ಹಿಂದಿನ ಮರ ಹಾಗು ಕೊಂಬೆಯ ನಡುವೆ ಸಿಲುಕಿ ಸ್ಠಳದಲ್ಲೆ ಮೃತಪಟ್ಟಿದ್ದಾನೆ. ಉಳಿದಂತೆ ಇತರರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. […]