ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಸ್ಪೆಕ್ಟಾ-16 ವಾಸ್ತುಶಿಲ್ಪ ವಿದ್ಯಾರ್ಥಿಗಳ ವಸ್ತು ಪ್ರದರ್ಶನ

Friday, August 5th, 2016
Nitte-university

ಉಳ್ಳಾಲ: ಆರ್ಕಿಟೆಕ್ಟ್ ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಕೌಶಲ ಹೆಚ್ಚಿಸಲು ಸ್ಪೆಕ್ಟಾ-16 ರಂತಹ ಕಾರ್ಯಕ್ರಮ ಪೂರಕವಾಗಿದ್ದು, ಮುಂದಿನ ದಿನಗಳಲ್ಲಿ ಪರಿಸರಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಆಡಳಿತ ವಿಭಾಗದ ಉಪಕುಲಾಧಿಪತಿ ವಿಶಾಲ್‌ ಹೆಗ್ಡೆ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆ ಪಾನೀರು ಕ್ಯಾಂಪಸ್ಸಿನಲ್ಲಿರುವ ನಿಟ್ಟೆ ಇನ್‌ಸ್ಟಿಟ್ಯೂಟ್‌ ಆಫ್‌ ಆರ್ಕಿಟೆಕ್ಚರ್‌ ಆಯೋಜಿಸಿದ್ದ ಸ್ಪೆಕ್ಟಾ-16 ವಾಸ್ತುಶಿಲ್ಪ ವಿದ್ಯಾರ್ಥಿಗಳ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಾಸ್ತುಶಿಲ್ಪಿಗಳಿಗೆ ವಿಶ್ವಾದ್ಯಂತ ವಿಫುಲ ಅವಕಾಶವಿದೆ. ತಮ್ಮ ಶೈಕ್ಷಣಿಕ ಜೀವನದಲ್ಲಿ ಹೊಸ ಚಿಂತನೆಗಳೊಂದಿಗೆ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ […]

ತಡೆಗೋಡೆ ಒಡೆದು ನೀರು ನುಗ್ಗಿ ನೂರು ಎಕರೆ ಕೃಷಿ ಭೂಮಿ ನಾಶ

Monday, February 29th, 2016
wall collapse

ಉಪ್ಪಳ : ತಡೆಗೋಡೆ ಒಡೆದು ಕೃಷಿ ಸ್ಥಳಕ್ಕೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಪೈವಳಿಕೆ ಪಂಚಾಯತಿನ ಕುಡಾಲ್‌ಮೇರ್ಕಳದಲ್ಲಿ ನೂರು ಎಕರೆ ಕೃಷಿ ಸ್ಥಳ ನಾಶವಾಗಿದೆ. ದಶಕದ ಹಿಂದೆ ಕಿರು ನೀರಾವರಿ ಯೋಜನೆಯಂಗವಾಗಿ ನಿರ್ಮಿಸಿದ ತಡೆಗೋಡೆ ಒಡೆದು ನಾಲ್ಕು ವರ್ಷಗಳಾದರೂ ಅದನ್ನು ಪುನರ್ ನಿರ್ಮಿಸುವ ಬಗ್ಗೆ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಸ್ಥಳೀಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೃಷಿಕರ, ಖಾಸಗಿ ವ್ಯಕ್ತಿಗಳ ಒಡೆತನದಲ್ಲಿರುವ ಗದ್ದೆಗಳಲ್ಲಿ ನಡೆಯುತ್ತಿದ್ದ ಪರಂಪರಾಗತ ಕೃಷಿಗೆ ತಡೆಯುಂಟಾಗಿದೆ. ತಡೆಗೋಡೆ ಒಡೆದ ಪರಿಣಾಮವಾಗಿ ತೋಡಿನ ಗತಿ […]