ಪರಿಶೀಲನೆ ಬಳಿಕ ಶಿರಾಡಿಘಾಟ್ ವಾಹನ ಸಂಚಾರ ನಿಷೇಧ ತೀರ್ಮಾನ

Wednesday, January 19th, 2022
Nalin Kumar Kateel

ಮಂಗಳೂರು : ರಸ್ತೆ ಕಾಮಗಾರಿಗಾಗಿ ಶಿರಾಡಿಘಾಟ್ ವಾಹನ ಸಂಚಾರ ನಿಷೇಧ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ  ಪ್ರಾಧಿಕಾರ ಮಾಡಿರುವ ಪ್ರಸ್ತಾವನೆ ಬಗ್ಗೆ ತಕ್ಷಣ ನಿರ್ಣಯ ಕೈಗೊಳ್ಳುವಂತಿಲ್ಲ. ದ.ಕ.ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ತೀರ್ಮಾನ ಕೈಗೊಳ್ಳಬೇಕೆಂದು ಸಂಸದ ನಳಿನ್‌ಕುಮಾರ್ ಕಟೀಲ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿದರೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬಹುದೆಂದು ರಾಷ್ಟ್ರೀಯ ಹೆದ್ದಾರಿ  ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸಲು ಶಿರಾಡಿಘಾಟ್ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಆರು […]

ಮೂಲರಪಟ್ಣ ನೂತನ ಸೇತುವೆ ವಾಹನ ಸಂಚಾರಕ್ಕೆ ಮುಕ್ತ

Friday, November 12th, 2021
mularapatna

ಬಂಟ್ವಾಳ: ಬಂಟ್ವಾಳ ಹಾಗೂ ಮಂಗಳೂರು ತಾಲೂಕುಗಳನ್ನು ಸಂಪರ್ಕಿಸುವ ಮೂಲರಪಟ್ಣ ನೂತನ ಸೇತುವೆಯನ್ನು ಊರಿನ ಹಿರಿಯರು ತೆಂಗಿನಕಾಯಿ ಒಡೆದು ಸಂಚಾರಕ್ಕೆ ಮುಕ್ತಗೊಳಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಸೇತುವೆಯಲ್ಲಿ ಊರಿನ ಪ್ರಮುಖರ ಜತೆ ಸಾಗಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸೇತುವೆ ನಿರ್ಮಾಣ ಸಂಸ್ಥೆ ಕಾವೂರು ಮುಗ್ರೋಡಿ ಕನ್ ಸ್ಟ್ರಕ್ಷನ್ಸ್ ಮಾಲಕ ಸುಧಾಕರ ಶೆಟ್ಟಿ ಮುಗ್ರೋಡಿ, ದಾಮೋದರ್, ಅರಳ ಗ್ರಾ.ಪಂ.ಅಧ್ಯಕ್ಷ ಲಕ್ಷ್ಮೀಧರ ಶೆಟ್ಟಿ, ಉಪಾಧ್ಯಕ್ಷೆ ಪ್ರೇಮಾ, ಮುತ್ತೂರು […]

ಸಿಂಡಿಕೇಟ್ ಸರ್ಕಲ್ ಬಳಿ ಎಂಟು ಅಂತಸ್ತಿನ ಕಟ್ಟಡ ಕುಸಿಯುವ ಭೀತಿಯಲ್ಲಿ

Monday, September 21st, 2020
Manipal Building

ಉಡುಪಿ  : ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿ ಇರುವ ಎಂಟು ಅಂತಸ್ತಿನ ಕಟ್ಟಡದ ತಡೆಗೋಡೆ ಕುಸಿಯುತ್ತಿದ್ದು ಕಟ್ಟಡ ಕುಸಿಯುವ ಹಂತದಲ್ಲಿದೆ. ಎಸಿ, ಪೌರಾಯುಕ್ತ, ತಹಶಿಲ್ದಾರ್, ಜಿ.ಪಂ ಅಧ್ಯಕ್ಷರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ  ಕಟ್ಟಡದ ತಡೆಗೋಡೆ ಕುಸಿದ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಕಟ್ಟದಲ್ಲಿರುವ ಜನರನ್ನು ಸ್ಥಳಾಂತರಿಸುವ ಕೆಲಸ ನೆಡೆಯುತ್ತಿದೆ ಸದ್ಯ ಕಟ್ಟಡದ ತಳಭಾಗದಲ್ಲಿ ಮೂರು ಅಂಗಡಿಗಳಿದ್ದು ಅವುಗಳನ್ನು ಮುಚ್ಚಲಾಗಿದೆ. ಉಡುಪಿಯಿಂದ ಮಣಿಪಾಲಕ್ಕೆ ಬರುವ ವಾಹನ ಸಂಚಾರದ ರಸ್ತೆಯನ್ನು […]

ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿತ, ವಾಹನ ಸಂಚಾರಕ್ಕೆ ಮತ್ತೆ ಅಡ್ಡಿ

Friday, August 7th, 2020
charmadi

ಬೆಳ್ತಂಗಡಿ : ಚಾರ್ಮಾಡಿ ಘಾಟಿಯಲ್ಲಿ ಗುರುವಾರ ರಾತ್ರಿ ಗುಡ್ಡ ಕುಸಿತಗೊಂಡು ಸಂಚಾರಕ್ಕೆ ತೊಡಕಾಗಿದೆ.  ಈಗಾಗಲೇ  ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ಸಂಚಾರ ನಿಷೇಧಗೊಲಿಸಲಾಗಿದೆ. ಅಲೆಖಾನ್ ಸಮೀಪ ಗುಡ್ಡ ಕುಸಿತಗೊಂಡ ಪರಿಣಾಮ ಮುಂಜಾನೆ ವೇಳೆ ವಾಹನ ಸಂಚಾರಕ್ಕೆ ಮತ್ತೆ ಅಡ್ಡಿಯಾಗಿದೆ. ಸದ್ಯ ಸ್ಥಳದಲ್ಲಿ ತೆರವು ಕಾರ್ಯಾಚರಣೆ ಸಾಗುತ್ತಿದ್ದು ಒಂದು ಜಿಸಿಬಿ ನಿಯೋಜಿಸಲಾಗಿದೆ. ಇನ್ನು ಕೊಟ್ಟಿಗೆಹಾರ ಬಳಿಯೂ ಭಾರೀ ಮಳೆಯಿಂದ ಚಾರ್ಮಾಡಿ ಘಾಟ್‍ನ ಮಣ್ಣು ರಸ್ತೆ ಕುಸಿದಿದೆ. ರಸ್ತೆಯ ಮೇಲೆ ಬಂಡೆಗಳು, ಮರಗಳು ಉರುಳಿ ಬೀಳುತ್ತಿದ್ದು, ಸವಾರರು ಎಚ್ಚರಿಕೆಯಾಗಿ ಪ್ರಯಾಣಿಸಬೇಕಾಗಿದೆ ಕಳೆದ ವರ್ಷವೂ […]

ಚಾರ್ಮಾಡಿ ಘಾಟ್ : ರಾತ್ರಿ ವಾಹನ ಸಂಚಾರ ನಿರ್ಬಂಧ

Thursday, July 9th, 2020
charmadi-Ghat

ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಗೆ ಒಳಪಟ್ಟ ರಾಷ್ಟ್ರೀಯ ಹೆದ್ದಾರಿ-73 (ಹಳೆ ರಾ.ಹೆ.234) ಮಂಗಳೂರು-ವಿಲ್ಲುಪುರಂ ರಸ್ತೆಯ ಕಿ.ಮೀ 76 ರಿಂದ 86 ವರೆಗಿನ ಚಾರ್ಮಾಡಿ ಘಾಟ್ ಭಾಗದಲ್ಲಿ ಮಣ್ಣು ಹಸಿಯಾಗಿ ಕುಸಿಯುವ ಸಾಧ್ಯತೆ ಇದ್ದು ರಸ್ತೆಯ ಪಕ್ಕದಲ್ಲಿ ತಡೆಗೋಡೆಗಳು ಇಲ್ಲದೆ, ಮಂಜು ಕವಿದು ಚಾಲಕರಿಗೆ ದಾರಿ ಕಾಣದೆ ಅಪಘಾತಗಳಾಗುವ ಸಾಧ್ಯತೆ ಹೆಚ್ಚಾಗಿರುವ ಕಾರಣದಿಂದ ಚಾರ್ಮಾಡಿ ಘಾಟಿನಲ್ಲಿ ವಾಹನಗಳ ನಿರ್ಬಂಧವು ಅನಿವಾರ್ಯವಾಗಿರುತ್ತದೆ. ಆದುದರಿಂದ ಜುಲೈ 9 ರಿಂದ ಪ್ರತಿ ದಿನ ಸಂಜೆ 7 ಗಂಟೆಯಿಂದ ಸಂಜೆ 7 […]

ಸುಳ್ಯದ ಆದರ್ಶ ಗ್ರಾಮದಲ್ಲಿ ವಾಹನ ಸಂಚಾರಕ್ಕೆ ರಸ್ತೆಗಳೇ ಇಲ್ಲ

Wednesday, September 25th, 2019
Ramanna

ಮಂಗಳೂರು : ಇದೊಂದು ಕುಗ್ರಾಮ ಇಲ್ಲಿ ಜನರಿಗೆ ವಾಹನ ಸಂಚಾರಕ್ಕೆ  ರಸ್ತೆಗಳೇ ಇಲ್ಲ, ಮನೆಯಲ್ಲಿ ಪವರ್ ಇಲ್ಲ, ಇದು ಮೂಲಭೂತ ಸೌಲಭ್ಯಗಳಿಂದ ವಂಚಿತವಾದ ನತದೃಷ್ಟ ಗ್ರಾಮ. ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ರವರ ಆದರ್ಶ ಗ್ರಾಮ ಯೋಜನೆಯ ಗ್ರಾಮದಲ್ಲಿಈ ಪರಿಸ್ಥಿತಿ ಇದೆ. ಸುಮಾರು ಒಂದು ಕಿ.ಮೀ ತನಕ ಮರದ ಖುರ್ಚಿಯಲ್ಲಿ ರೋಗಿಯೊಬ್ಬರನ್ನು ಸಾಗಿಸಿದ ಮನಕಲಕುವ ಘಟನೆ  ಇಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಳ್ಪ ಗ್ರಾಮವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಸಂಸದರ ಆದರ್ಶ […]

ಕುರ್ಕಾಲು-ಮಣಿಪುರ ಸಂಪರ್ಕ ರಸ್ತೆ ಕಾಮಗಾರಿ ಪೂರ್ಣ : ವಾಹನ ಸಂಚಾರ ಮುಕ್ತ

Wednesday, September 11th, 2019
Katapadi

ಕಟಪಾಡಿ : ವಾಹನ ಸಂಚಾರ ನಿಷೇಧಗೊಂಡಿದ್ದ ಕುರ್ಕಾಲು- ಮಣಿಪುರ ಸಂಪರ್ಕ ರಸ್ತೆಯ ಅಪಾಯಕಾರಿ ಪ್ರದೇಶದಲ್ಲಿ ತಾತ್ಕಾಲಿಕ ಕಾಮಗಾರಿ ನಿರ್ವಹಿಸಲಾಗಿದ್ದು, ಸೆ.8ರಿಂದ ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ. ಬೆಳ್ಮಣ್‌, ಶಿರ್ವ, ಶಂಕರಪುರ ಭಾಗದಿಂದ ಮಣಿಪುರ-ದೆಂದೂರುಕಟ್ಟೆ-ಅಲೆವೂರು ಮಣಿಪಾಲಕ್ಕೆ ಸಂಪರ್ಕವನ್ನು ಕಲ್ಪಿಸುವ ಹೆಚ್ಚು ಬಳಕೆಯಲ್ಲಿರುವ ಅತೀ ಶಾರ್ಟ್‌ ಕಟ್ ಆಗಿರುವ ಈ ರಸ್ತೆಯ ನಡುವೆ ಕುಸಿತ ಉಂಟಾಗಿ ಸೃಷ್ಟಿಯಾಗಿದ್ದ ಭಾರೀ ಗಾತ್ರದ ಕಂದಕ ಇದೀಗ ಮುಚ್ಚಲಾಗಿದೆ. ರಸ್ತೆಯನ್ನು ಅಗೆದಾಗ ಬೃಹತ್‌ ಗಾತ್ರದ ಮರದ ಬುಡವೊಂದು ಕಂಡು ಬಂದಿದ್ದು, ಅದರ ಸುತ್ತ ಮಣ್ಣು ಕುಸಿದು […]