ಬಿಜೆಪಿಯ ವಿಜಯೋತ್ಸವದಲ್ಲಿ ಚೂರಿ ಇರಿತ, 10 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಿಸಿದ ಪೊಲೀಸರು

Monday, June 10th, 2024
ಬಿಜೆಪಿಯ ವಿಜಯೋತ್ಸವದಲ್ಲಿ ಚೂರಿ ಇರಿತ, 10 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಿಸಿದ ಪೊಲೀಸರು

ಮಂಗಳೂರು : ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಬೋಳಿಯಾರ್‌ ಗ್ರಾಮ ಸಮಿತಿಯು ಬೋಳಿಯಾರುದಿಂದ ಧರ್ಮನಗರದವರೆಗೆ ವಿಜಯೋತ್ಸವವನ್ನು ಆಚರಿಸುತ್ತಿರುವ ವೇಳೆ ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಚಾಕುವಿನಿಂದ ಇರಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರ ಬೇಜವಾಬ್ದಾರಿ ವರ್ತನೆಯನ್ನು ಪ್ರಶ್ನಿಸಿ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರು ಭಾನುವಾರ ತಡರಾತ್ರಿ ಕೊಣಾಜೆ ಪೊಲೀಸ್ ಠಾಣೆಗೆ ಘೇರಾವ್ ಹಾಕಿದ್ದಾರೆ. ವಿಜಯೋತ್ಸವ ಮೆರವಣಿಗೆ ವೇಳೆ ಮಸೀದಿ ಬಳಿ ಡಿಜೆ ಮ್ಯೂಸಿಕ್ ನುಡಿಸದಂತೆ ಮೆರವಣಿಗೆಯಲ್ಲಿದ್ದವರಿಗೆ ಗ್ಯಾಂಗ್ ಸೂಚನೆ ನೀಡಿತ್ತು. ಇದರಿಂದ ಮಾತಿನ ಚಕಮಕಿ ನಡೆದಿದೆ […]

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ಧು ಎಬಿವಿಪಿಯಿಂದ ವಿಜಯೋತ್ಸವ ; ಪೊಲೀಸರಿಂದ ವಿರೋಧ

Tuesday, August 6th, 2019
Abvp

ಮಂಗಳೂರು : ಸೋಮವಾರ ಕೇಂದ್ರ ಸರ್ಕಾರ ಐತಿಹಾಸಿಕ ತೀರ್ಮಾನವನ್ನು ತೆಗೆದುಕೊಂಡು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ಧುಗೊಳಿಸಿರುವುದನ್ನು ಮಂಗಳೂರು ಎಬಿವಿಪಿ ಘಟಕವು ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ವಿಜಯೋತ್ಸವವನ್ನಾಗಿ ಆಚರಿಸಿತು. ಈ ಸಂದರ್ಭ ಅಲ್ಲೇ ಇದ್ದ ಪೊಲೀಸರು ವಿಜಯೋತ್ಸವವನ್ನು ತಡೆಯಲು ಮುಂದಾದರು. ಇದನ್ನು ವಿರೋಧಿಸಿದ ಎಬಿವಿಪಿ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.  

ಬಿಜೆಪಿ ಭಿನ್ನಮತ: ವಿಜಯೋತ್ಸವಕ್ಕೂ ಎರಡು ಬಣ

Wednesday, December 20th, 2017
bjp-election

ಮಂಗಳೂರು: ಮುಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಮೂಲ್ಕಿಯ ಅಂಗಾರಗುಡ್ಡೆ ಎಂಬಲ್ಲಿ ಕಳೆದ ಕೆಲ ತಿಂಗಳಿನಿಂದ ಬಿಜೆಪಿಯ ಎರಡು ಬಣಗಳ ನಡುವಿನ ಭಿನ್ನಮತ ಪರಾಕಾಷ್ಠೆಗೇರಿದೆ. ಗುಜರಾತ್-ಹಿಮಾಚಲ ಪ್ರದೇಶ ಚುನಾವಣೆಯ ಗೆಲುವನ್ನೂ ಪ್ರತ್ಯೇಕವಾಗಿ ಆಚರಿಸಿಕೊಂಡಿದ್ದಾರೆ. ಚುನಾವಣೆಯ ಮತ ಎಣಿಕೆ ಮುಗಿಯುವ ಮುನ್ನವೇ ಒಂದು ಬಣ ಕಿಲ್ಪಾಡಿ ಪಂಚಾಯತಿ ಮಾಜಿ ಆಧ್ಯಕ್ಷರ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದ್ದರೆ ಇನ್ನೊಂದು ಬಣ ಅತಿಕಾರಿಬೆಟ್ಟು ಗ್ರಾ.ಪಂ. ಸದಸ್ಯ ಜೀವನ್‌ ಶೆಟ್ಟಿ ನೇತೃತ್ವದಲ್ಲಿ ಅಂಗರಗುಡ್ಡೆಯಲ್ಲಿ ವಿಜಯೋತ್ಸವ ಆಚರಿಸಿ ಬಿಜೆಪಿ ವರಿಷ್ಠರಿಗೆ ಸೆಡ್ಡು ಹೊಡೆದಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆಯೂ […]

ಮಂಗಳೂರು ದಸರಾಕ್ಕೆ ಅದ್ಧೂರಿ ಚಾಲನೆ

Monday, October 3rd, 2016
Mangaluru dasara

ಮಂಗಳೂರು: ಅದ್ಧೂರಿ ಮಂಗಳೂರು ದಸರಾಕ್ಕೆ ಇಂದು ಪೊಲೀಸ್ ಕಮಿಷನರ್ ಚಂದ್ರಶೇಖರ್ ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ದುಷ್ಟ ಸಂಹಾರದ ವಿಜಯೋತ್ಸವವನ್ನು ಆಚರಿಸುವ ದಸರಾ ಹಬ್ಬ ಸಮಾಜಕ್ಕೆ ಸಂದೇಶವನ್ನು ಸಾರಿದೆ. ಜನರು ದುಷ್ಚಟಗಳಿಗೆ ಬಲಿಯಾಗದೆ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕೆಂದು ಸಂದೇಶ ನೀಡಿದರು. ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನದ ಆವರಣದಲ್ಲಿ ನವದುರ್ಗೆಯರನ್ನು ಪ್ರತಿಷ್ಠಾಪಿಸುವ ಮೂಲಕ ಇಂದಿನಿಂದ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ನಗರ ವಿದ್ಯುತ್‌ ದೀಪಗಳಿಂದ ಅಲಂಕಾರಗೊಂಡಿದೆ.

ಡಿ.ವಿ. ಸದಾನಂದ ಗೌಡ ಮುಖ್ಯಮಂತ್ರಿ : ಮಂಗಳೂರಿನಲ್ಲಿ ಕಾರ್ಯಕರ್ತರಿಂದ ವಿಜಯೋತ್ಸವ

Thursday, August 4th, 2011
BJP Victory/ಮಂಗಳೂರಿನಲ್ಲಿ ಕಾರ್ಯಕರ್ತರಿಂದ ವಿಜಯೋತ್ಸವ

ಮಂಗಳೂರು : ಡಿ.ವಿ. ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಂಬ್ರಮವನ್ನು ಕೊಡಿಯಾಲ್‌ಬೈಲ್‌ನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷ ಕಾರ್ಯಕರ್ತರು ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು. ಮುಖ್ಯಮಂತ್ರಿ ಆಯ್ಕೆಯ ಘೋಷಣೆ ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಶೈಲಜಾ ಭಟ್‌, ಶ್ರೀಕರ ಪ್ರಭು ಮೊದಲಾದವರು ಪರಸ್ಪರ ಸಿಹಿ ಹಂಚಿಕೊಂಡರು. ಬಳಿಕ ಕಚೇರಿಂದ ಹೊರಗೆ ಬಂದು ಸುರಿಯುವ ಮಳೆಯನ್ನೂ ಲೆಕ್ಕಿಸದೆ ಪಟಾಕಿ ಸಿಡಿಸಿದರು. ಡಿ.ವಿ. ಸದಾನಂದ ಗೌಡರ ಭಾವಚಿತ್ರವನ್ನು ಹಿಡಿದು ಜೈಕಾರ ಕೂಗಿದರು. […]

ದ.ಕ ಜಿಲ್ಲಾ ಬಿಜೆಪಿ ವತಿಯಿಂದ ಉಪಚುನಾವಣೆಯ ಗೆಲುವಿಗೆ ವಿಜಯೋತ್ಸವ

Friday, May 13th, 2011
ದ.ಕ ಜಿಲ್ಲಾ ಬಿಜೆಪಿ ವಿಜಯೋತ್ಸವ

ಮಂಗಳೂರು: ದ.ಕ ಜಿಲ್ಲಾ ಬಿಜೆಪಿ ಇಂದು ಬೆಳಿಗ್ಗೆ ಚನ್ನಪಟ್ಟಣ, ಜಗಳೂರು, ಬಂಗಾರಪೇಟೆಯಲ್ಲಿ ಬಿ.ಜೆ.ಪಿ ಅಭ್ಯರ್ಥಿಗಳು ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ವಿಜಯೋತ್ಸವ ಆಚರಿಸಿತು. ಜಿಲ್ಲಾ ಬಿಜೆಪಿಯ ನಗರಾಧ್ಯಕ್ಷ ಶ್ರೀಕರ ಪ್ರಭು ಕಾರ್ಯಕರ್ತರಿಗೆ ಹಾಗೂ ಮನಪಾ ಮೇಯರ್ ಪ್ರವೀಣ್ ಅಂಚನ್ರಿಗೆ ಸಿಹಿ ತಿನ್ನಿಸುವ ಮೂಲಕ ವಿಜಯೋತ್ಸವ ಆಚರಿಸಿದರು. ಬಳಿಕ ಕಾರ್ಯಕರ್ತರು ಬಿಜೆಪಿ ಪತಾಕೆಗಳನ್ನು ಹಿಡಿದು ನವಭಾರತ ಸರ್ಕಲ್ ವರೆಗೆ ವಿಜಯೋತ್ಸವ ಜಾಥಾ ನಡೆಸಿದರು. ವಿಜಯೋತ್ಸವದಲ್ಲಿ ಶ್ರೀಕರ ಪ್ರಭು ಮಂಗಳೂರು, ಮೇಯರ್ ಪ್ರವೀಣ್ ಅಂಚನ್, ಫಿಶರೀಶ್ ಫೆಡರೇಶನ್ನಿನ […]