ವಿದ್ಯುತ್‌ ತಂತಿ ಸ್ಪರ್ಶಿಸಿ ಗದ್ದೆಯಲ್ಲಿ ಮೇಯುತ್ತಿದ್ದ ನಾಲ್ಕು ಜಾನುವಾರುಗಳ ಸಾವು

Monday, August 8th, 2022
cow-death

ಕುಂದಾಪುರ: ಗದ್ದೆಯಲ್ಲಿ ಮೇಯುತ್ತಿದ್ದ ನಾಲ್ಕು ಜಾನುವಾರುಗಳು ತುಂಡಾಗಿ ಬಿದ್ದ ವಿದ್ಯುತ್‌ ತಂತಿಯನ್ನು ಸ್ಪರ್ಶಿಸಿದ್ದರಿಂದ ಸಾವನ್ನಪ್ಪಿರುವ ಘಟನೆ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹರ್ಕೂರಿನಲ್ಲಿ ನಡೆದಿದೆ. ವಿದ್ಯುತ್‌ ತಂತಿಗಳು ತೀರಾ ಹಳೆಯದಾಗಿದ್ದು, ತುಂಡಾಗಿ ಬಿದ್ದ ಪರಿಣಾಮ ಇದನ್ನು ಸ್ಪರ್ಷಿಸಿದ ಹಸುಗಳು ಸಾವನ್ನಪ್ಪಿದೆ. ಹಳೆಯ ವಿದ್ಯುತ್ ತಂತಿಗಳನ್ನು ಬದಲಾಯಿಸದ ಪರಿಣಾಮವೇ ಹಸುಗಳ ಸಾವಿಗೆ ಕಾರಣ ಎಂದು ಗ್ರಾಮಸ್ಥರು ಮೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಶು ವೈದ್ಯಾಧಿಕಾರಿಗಳು ಹಾಗೂ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಾವಿನಕಾಯಿ ಕೀಳಲು ಮರಹತ್ತಿದ ಯುವಕನಿಗೆ, ವಿದ್ಯುದಾಘಾತ

Friday, June 24th, 2022
Mohammed Eliyas

ಮಂಗಳೂರು : ಯುವಕನೋರ್ವ ಮಾವಿನಕಾಯಿ ಕೀಳಲು ಮರಹತ್ತಿದ ಪರಿಣಾಮ ವಿದ್ಯುತ್ ತಂತಿ ತಗಲಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಜಲಾಲ್ ಬಾಗ್ ನಲ್ಲಿ ಶುಕ್ರವಾರ ಸಂಜೆ ವೇಳೆ ಸಂಭವಿಸಿದೆ. ಮೃತಪಟ್ಟ ವ್ಯಕ್ತಿಯನ್ನು ಮಹಮ್ಮದ್ ಇಲಿಯಾಸ್ (21) ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ವೇಳೆ ಮನೆ ಸಮೀಪದ ಕಂಪೌಂಡಿನಲ್ಲಿರುವ ಮಾವಿನಮರಕ್ಕೆ ಹಣ್ಣು ಕೀಳಲೆಂದು ತೆರಳಿದ ಸಂದರ್ಭ ಘಟನೆ ನಡೆದಿದೆ. ಯುವಕನ ಸಾವಿಗೆ ಮೆಸ್ಕಾಂ ಇಲಾಖೆಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ‌ . ಮಾವಿನ ಮರದ ಮೇಲೆ […]

ರೈಲಿನ ಎಲ್‌ಪಿಜಿ ಟ್ಯಾಂಕ್ ಮೇಲೆ ಹತ್ತಿ ಸೆಲ್ಫಿ ತೆಗೆಯುತ್ತಿದ್ದ ಬಾಲಕನಿಗೆ ವಿದ್ಯುತ್ ಶಾಕ್

Thursday, April 15th, 2021
Selfi

ಮಂಗಳೂರು : ರೈಲಿನ ಎಲ್‌ಪಿಜಿ ಟ್ಯಾಂಕ್ ಮೇಲೆ ಹತ್ತಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ರೈಲ್ವೆ ವಿದ್ಯುತ್‌ ತಂತಿ ತಗುಲಿ ಬಾಲಕನಿಗೆ ಗಂಭೀರ ಸುಟ್ಟ ಗಾಯವಾದ ಘಟನೆ ಏ.14ರ ಬುಧವಾರ ಇಲ್ಲಿನ ಕೆಂಜಾರು ತೋಕೂರು ಬಳಿ ನಿಲ್ಲಿಸಿದ್ದ ನಡೆದಿದೆ. ಜೋಕಟ್ಟೆ ಎಚ್‌ಪಿಸಿಎಲ್‌ ಕಾಲನಿ ನಿವಾಸಿ ಮಹಮ್ಮದ್‌ ದಿಶಾನ್‌(15)ವಿದ್ಯುತ್‌ ಅಘಾತಕ್ಕೊಳಗಾದ ಬಾಲಕ. ಎ.14ರಂದು ಇತರ ಸ್ನೇಹಿತರೊಂದಿಗೆ ರೈಲ್ವೆ ವ್ಯಾಗನ್‌ ಬಳಿ ಆಟವಾಡುತ್ತಿದ್ದಾಗ ದಿಶಾನ್‌ ಸೆಲ್ಫಿ ತೆಗೆಯಲು ಮೇಲೆ ಹೋಗಿದ್ದ ಎನ್ನಲಾಗಿದೆ. ಈ ಸಂದರ್ಭ ವಿದ್ಯುತ್‌ ತಂತಿ ಗಮನಿಸದೆ ಬಾಲಕ ದಿಶಾನ್‌ […]

ಮೈಸೂರು : ವಿದ್ಯುತ್ ತಂತಿಗೆ ಸಿಲುಕಿ ಚಿರತೆ ಸಾವು

Thursday, December 12th, 2019
mysuru

ಮೈಸೂರು : ವಿದ್ಯುತ್ ತಂತಿಗೆ ಸಿಲುಕಿ ಚಿರತೆಯೊಂದು ಸಾವನ್ನಪ್ಪಿದ ಘಟನೆ ಹೆಚ್.ಡಿ.ಕೋಟೆ ತಾಲೂಕು ಜೀರಿಯಾ ಬಳಿ ಬುಧವಾರ ರಾತ್ರಿ ನಡೆದಿದೆ. ಮೈಸೂರು ಜಿಲ್ಲೆ ಹೆಚ್.ಡಿ‌.ಕೋಟೆ ತಾಲೂಕಿನ ಜೀರಿಯಾ ಗ್ರಾಮದಲ್ಲಿ ರೈತರೊಬ್ಬರು ಅಕ್ರಮವಾಗಿ ನೀರಿನ ಪಂಪ್ ಸೆಟ್ ಗೆ ವಿದ್ಯುತ್ ತಂತಿ ಸಂಪರ್ಕ ಕಲ್ಪಿಸಿದ್ದರು ಎನ್ನಲಾಗಿದೆ. ಆಹಾರವನ್ನು ಅರಸಿ ನಾಡಿಗೆ ಬಂದಿರುವ ಚಿರತೆಯೊಂದು ಬಾಯಿಯಲ್ಲಿ ವಿದ್ಯುತ್ ತಂತಿಯನ್ನು ಕಚ್ಚಿಕೊಂಡಿರುವ ಸ್ಥಿತಿಯಲ್ಲಿಯೇ ಜೋತಾಡುತ್ತಾ ಅಸು ನೀಗಿದೆ. ಸುದ್ದಿ ತಿಳಿಯುತಿದ್ದಂತೆಯೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಾಗರಹೊಳೆ‌ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ಅರಣ್ಯ […]

ಮಂಗಳೂರು : ಬಟ್ಟೆ ಒಣ ಹಾಕುತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಮಹಿಳೆ ಸಾವು

Wednesday, December 4th, 2019
ಮಂಗಳೂರು : ಬಟ್ಟೆ ಒಣ ಹಾಕುತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಮಹಿಳೆ ಸಾವು

ಮಂಗಳೂರು : ಬಟ್ಟೆ ಒಣಗಿಸಲು ಹಾಕುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕೊಣಾಜೆ ಸಮೀಪದ ಮಂಜನಾಡಿ ಗ್ರಾಮದ ಅಸೈ ಮದಕ ಬಳಿ ಬುಧವಾರ ಬೆಳಗ್ಗೆ ನಡೆದಿದೆ. ಅಸೈ ಮದಕ ನಿವಾಸಿ ನಾಗೇಶ್ ಎಂಬವರ ಪತ್ನಿ ರೋಹಿಣಿ (30) ಮೃತಪಟ್ಟವರು. ರೋಹಿಣಿ ಬಟ್ಟೆ ಒಗೆದು ಬಳಿಕ ಅದನ್ನು ಒಣಗಿಸಲು ಅಂಗಳದಲ್ಲಿ ಕಟ್ಟಿದ್ದ ಹಗ್ಗಕ್ಕೆ ಹಾಕುತ್ತಿದ್ದಾಗ ಅಂಗಳಕ್ಕೆ ಬಲ್ಬ್ ಹಾಕಲು ಎಳೆದಿದ್ದ ವಿದ್ಯುತ್ ತಂತಿಗೆ ಆಕಸ್ಮಿಕವಾಗಿ ತಗುಲಿತ್ತು ಎನ್ನಲಾಗಿದೆ. ಈ ಸಂದರ್ಭ ಅವರಿಗೆ ವಿದ್ಯುತ್ ಶಾಕ್ […]

ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ-ಮಗಳ ದಾರುಣ ಸಾವು

Tuesday, June 11th, 2019
Barekinade-death

ಬಂಟ್ವಾಳ :  ಬಂಟ್ವಾಳ ತಾಲೂಕಿನ ವಾಮದಪದವು ಬಾರೆಕಿನಾಡೆ ಎಂಬಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ-ಮಗಳ ಸಾವನ್ನಪ್ಪಿದ ದಾರುಣ ಘಟನೆ ಮಂಗಳವಾರ ಸಂಜೆ  ನಡೆದಿದೆ. ಗೋಪಾಲಕೃಷ್ಣ ಶೆಟ್ಟಿ ಹಾಗೂ ಮಗಳು 23ರ ಹರೆಯದ ದಿವ್ಯಶ್ರೀ ಮೃತ ದುರ್ದೈವಿಗಳು. ಇವರು ಮಂಗಳವಾರ ಸಂಜೆ ತಮ್ಮ ಮನೆಯ ತೋಟಕ್ಕೆ ಹುಲ್ಲು ತರಲೆಂದು ತೆರಳಿದ್ದರು. ಈ ವೇಳೆ ಹುಲ್ಲಿನ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಇದನ್ನು ಗಮನಿಸದೇ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹಳೆ ವಿದ್ಯುತ್ ತಂತಿ ಬದಲಿಸದಿರುವುದು ಘಟನೆಗೆ […]

ವಿದ್ಯುತ್ ಲೈನ್​ ಸರಿಪಡಿಸಲು ಹೋಗಿ ಯುವಕ ಸಾವು

Thursday, October 11th, 2018
died

ಮಂಗಳೂರು: ಮನೆಗೆ ವಿದ್ಯುತ್ ಸರಬರಾಜಿನಲ್ಲಿ ಆದ ವ್ಯತ್ಯಯದ ಹಿನ್ನೆಲೆಯಲ್ಲಿ ಅದನ್ನು ಸರಿಪಡಿಸಲು ಯತ್ನಿಸುತ್ತಿದ್ದ ವೇಳೆ ವಿದ್ಯುತ್ ಅಘಾತಕ್ಕೊಳಗಾಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಪುತ್ತೂರು ನಗರ ಠಾಣೆ ವ್ಯಾಪ್ತಿಯಲ್ಲಿನ ಕೆದಿಲ ಗ್ರಾಮದ ಕುಕ್ಕಾಜೆ ಎಂಬಲ್ಲಿ ನಡೆದಿದೆ. ಕುಕ್ಕಾಜೆ ನಿವಾಸಿ ರಾಮ ಬಂಗೇರ ಎಂಬವರ ಪುತ್ರ ದಯಾನಂದ (30) ಮೃತಪಟ್ಟ ಯುವಕ. ಟೈಲ್ಸ್, ಮಾರ್ಬಲ್, ಗ್ರಾನೈಟ್ ಅಳವಡಿಸುವ ಗಾರೆ ಕಾರ್ಮಿಕರಾಗಿದ್ದ ದಯಾನಂದ, ಕುಕ್ಕಾಜೆಯ ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಮಂಗಳವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬಂದಿದ್ದ ಅವರು ಮನೆಯ ವಿದ್ಯುತ್ ಸರಬರಾಜಿನಲ್ಲಿ […]

ಕಬ್ಬಿಣದ ಏಣಿ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವು

Monday, January 30th, 2017
Ujjodi

ಮಂಗಳೂರು: ಕಬ್ಬಿಣದ ಏಣಿ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಮಂಗಳೂರಿನ ನಂತೂರು ಬಳಿಯ ಉಜ್ಜೋಡಿಯಲ್ಲಿ ನಡೆದಿದೆ. ವಲೇರಿಯನ್ ಲೋಬೋ(55), ಎಸ್ಮಿ ಲೋಬೋ(51), ಸಂದೀಪ್ (28) ಮೃತಪಟ್ಟವರು. ಕಬ್ಬಿಣದ ಏಣಿಯಿಟ್ಟು ತೆಂಗಿನ ಮರಕ್ಕೇರಿದ್ದಾಗ ಈ ದುರಂತ ಸಂಭವಿಸಿದೆ. ತೆಂಗಿನಮರದಲ್ಲಿದ್ದ ಕಾಳುಮೆಣಸು ಕೀಳಲು ವಲೇರಿಯನ್ ಲೋಬೋ ಮರ ಹತ್ತಿದ್ದರು. ಈ ವೇಳೆ ಸ್ಟೀಲ್ ಏಣಿ ವಿದ್ಯುತ್ ತಂತಿಗೆ ಬಿದ್ದು ಈ ದುರಂತ ಸಂಭವಿಸಿದೆ. ಲೋಬೋ ರಕ್ಷಣೆಗೆ ಧಾವಿಸಿದ ಇಬ್ಬರು ಕೂಡ ದುರಂತದಲ್ಲಿ ಸಾವಿಗೀಡಾಗಿದ್ದಾರೆ.

ಹೈಟೆನ್ಸನ್ ವಿದ್ಯುತ್ ತಂತಿ ತಗುಲಿ ಮೃತ ಪಟ್ಟ ಮ್ಯಾಕಾನಿಕಲ್ ಇಂಜಿನಿಯಾರ್ ವಿದ್ಯಾರ್ಥಿ

Tuesday, September 17th, 2013
yathesht

ಮಂಗಳೂರು : ಬಜಪೆ ವಿಮಾನ ನಿಲ್ದಾಣದ ಸಮೀಪವಿರುವ ಕೆಂಜಾರಿನ ಕಾಲೇಜಿನ ದ್ವಿತೀಯ ವರ್ಷದ ಮ್ಯಾಕಾನಿಕಲ್ ಇಂಜಿನಿಯಾರ್ ವಿದ್ಯಾರ್ಥಿ ಮುಂಬಾಯಿ ಮೂಲದ ಯಜ್ನೇಶ್ ಶೆಟ್ಟಿ (20) ಹೈಟೆನ್ಸನ್ ವಿದ್ಯುತ್ ತಂತಿ ತಗುಲಿ ಮೃತ ಪಟ್ಟ ಘಟನೆ ಭಾನುವಾರ ರಾತ್ರಿ ಕುದ್ರೊಳಿ ಸಮೀಪ ಸಂಭವಿಸಿದೆ. ಮಲೇರಿಯ ಜ್ವರ ಭಾದೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ನೋಡಲು ತನ್ನ ಸ್ನೇಹಿತನ ಜೊತೆ ಬಾನುವಾರ ರಾತ್ರಿ ನಗರದ ಕುದ್ರೋಳಿ ಸಮೀಪದ ಉಳ್ಳಾಲ ನರ್ಸಿಂಗ್ ಹೋಮ್ ಆಸ್ಪತ್ರೆಗೆ ತೆರಳಿದ ಯಜ್ನೇಶ್ ಶೆಟ್ಟಿ ಆಸ್ಪತ್ರೆ ಕಿಟಕಿ ಸಮೀಪ ತನ್ನ ಕೈಯನ್ನು […]