ವಿಧವೆಯನ್ನು ಮದುವೆಯಾಗುತ್ತೇನೆಂದು ನಂಬಿಸಿ ಚಿನ್ನದ ಸರ ದೋಚಿದ ವ್ಯಕ್ತಿ
Friday, November 22nd, 2019ಮೈಸೂರು : ವಿಧವೆಯೋರ್ವರಿಗೆ ಶಾದಿ ಡಾಟ್ ಕಾಮ್ ಮೂಲಕ ಪರಿಚಯವಾದ ವ್ಯಕ್ತಿಯೋರ್ವ ವಿವಾಹವಾಗುವುದಾಗಿ ನಂಬಿಸಿ ಮಹಿಳೆಯ ಬಳಿ ಇದ್ದ 80ಸಾವಿರ ರೂ.ಮೌಲ್ಯದ ಮಾಂಗಲ್ಯ ಸರವನ್ನು ದೋಚಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಪತಿಯನ್ನು ಕಳೆದುಕೊಂಡ ಮಹಿಳೆಯೋರ್ವರು ಮರು ಮದುವೆಯಾಗಲು ಇಚ್ಛಿಸಿದ್ದು, ಅಂತರ್ಜಾಲದ ಶಾದಿ ಡಾಟ್ ಕಾಮ್ ಮೂಲಕ ವರಾನ್ವೇಷಣೆಗಾಗಿ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಇದನ್ನು ವೀಕ್ಷಿಸಿದ ವಿನೀತ್ ರಾಜ್ ಎಂಬಾತ ಮಹಿಳೆಯನ್ನು ಮೊಬೈಲ್ ಮೂಲಕ ಪರಿಚಯ ಮಾಡಿಕೊಂಡು ತಾನು ಚೆನ್ನೈ ನಗರದಲ್ಲಿ ವ್ಯಾಪಾರ ಮಾಡುತ್ತಿದ್ದು ನನ್ನ ಹೆಂಡತಿ ತೀರಿ ಹೋಗಿ […]